ಪದ್ಯ ಪಾಠ: ಛಲಮನೆ ಮೆರೆವೆಂ

ಕವಿ ಕೃತಿ ಪರಿಚಯ:

ರನ್ನನು ಸುಮಾರು ಕ್ರಿ.ಶ. 949 ರಲ್ಲಿ ಬಾಗಲಕೋಟೆ ಜಿಲ್ಲೆಯ ಮುದವೊಳಲು (ಈಗಿನ ಮುಧೋಳ) ಗ್ರಾಮದಲ್ಲಿ ಜನಿಸಿದನು. ಇವನು ‘ಸಾಹಸ ಭೀಮ ವಿಜಯಂ’, ‘ಅಜಿತ ತೀರ್ಥಂಕರ ಪುರಾಣ ತಿಲಕಂ’, ‘ಚಕ್ರೇಶ್ವರ ಚರಿತಂ’ ಎಂಬ ಕಾವ್ಯಗಳನ್ನು ಬರೆದಿದ್ದಾನೆ. ರತ್ನತ್ರಯರಲ್ಲಿ ಒಬ್ಬನಾದ ಇವನಿಗೆ ತೈಲಪನು ‘ಕವಿ ಚಕ್ರವರ್ತಿ’ ಎಂಬ ಬಿರುದನ್ನು ನೀಡಿರುತ್ತಾನೆ.

ಮಾದರಿ ಪ್ರಶ್ನೋತ್ತರಗಳು

ಒಂದು ಅಂಕದ ಪ್ರಶ್ನೆಗಳು

ಉತ್ತರ: ದಿನಪಸುತ ಎಂದರೆ ಕರ್ಣ.

ಉತ್ತರ: ಬೀಮಾರ್ಜುನರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನನು ಹೇಳುತ್ತಾನೆ.

ಉತ್ತರ: ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವನು ದುರ್ಯೋಧನ.

ಉತ್ತರ: ಅಂತಕಾತ್ಮಜ ಎಂದರೆ ಯುಧಿಷ್ಟಿರ.

ಉತ್ತರ: ದುರ್ಯೋಧನ ಭೀಷ್ಮರ ಸಲಹೆಯನ್ನು ಪಡೆಯಲು ಬರುತ್ತಾನೆ.

ಎರಡು ಅಂಕದ ಪ್ರಶ್ನೆಗಳು

ಉತ್ತರ: ಸಂಧಿ ಮಾಡಿಕೊಳ್ಳಬೇಕೆಂಬ ಭೀಷ್ಮರ ಸಲಹೆಯನ್ನು ತಿರಸ್ಕರಿಸಿದ ದುರ್ಯೋಧನನು ನಿಮ್ಮನ್ನು ನಮಸ್ಕರಿಸಲು ಬಂದನೇ ಹೊರತು ಸಂಧಿ ಸಂಧಿ ಮಾಡಿಕೊಳ್ಳಲು ಅಲ್ಲ. ನಾನೇನು ಭೂಮಿಗಾಗಿ ಹೋರಾಡುವೆನೆಂದು ಭಾವಿಸಿದಿರಾ? ಛಲಕ್ಕಾಗಿ ಹೋರಾಡುವೆನು ಕರ್ಣನನ್ನು ಕೊಂದ ಭೂಮಿಯೊಡನೆ ಮತ್ತೆ ಬಾಳುವುದುಂಟೇ ಎನ್ನುತ್ತಾನೆ.

ಉತ್ತರ: ತನ್ನ ಪ್ರೀತಿಯ ಸಹೋದರ ಮತ್ತು ಸ್ನೇಹಿತ ಕರ್ಣನನ್ನು ಕಳೆದುಕೊಂಡ ದುರ್ಯೋಧನನಿಗೆ ಆ ಭೂಮಿ ಹಾಳು ಭೂಮಿ. ಕರ್ಣನನ್ನು ಕೊಂದ ಭೂಮಿಯೊಡನೆ ಮತ್ತೆ ತಾನು ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋಧನ ಹೇಳಿದ್ದಾನೆ.

ಉತ್ತರ: ನನ್ನ ಆತ್ಮೀಯ ಗೆಳೆಯನ ಕರ್ಣನನ್ನು ಮತ್ತು ನನ್ನ ಪ್ರೀತಿಯ ತಮ್ಮಂದಿರನ್ನು ಕೊಂದ ಭೀಮಾರ್ಜುನರು ಜೀವಂತವಾಗಿರುವವರೆಗೆ ಹಾಗೂ ನನ್ನ ದೇಹದಲ್ಲಿ ಪ್ರಾಣ ಇರುವ ವರೆಗೆ ನಾನು ಸಂಧಿಗೆ ಒಪ್ಪಲಾರೆ. ಅವರಿಬ್ಬರನ್ನು ಕೊಂದ ಬಳಿಕ ಧರ್ಮರಾಜನೊಡನೆ ಸಂಧಿ ಮಾಡಿಕೊಳ್ಳುವೆನು. ನನ್ನ ಒಡಲ ಉರಿ ಆರಿದ ಬಳಿಕ ಸಂಧಿ ಬೇಡವೆನ್ನುವೆನೆ ಎಂದು ದುರ್ಯೋಧನ ಅಭಿಪ್ರಾಯಪಡುತ್ತಾನೆ.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ:
ಆಯ್ಕೆ: ಈ ಮೇಲಿನ ವಾಕ್ಯವನ್ನು ರನ್ನನ ‘ಸಾಹಸಭಿಮ ವಿಜಯ’ ದಿಂದ ಆಯ್ದ ‘ಛಲಮನೆ ಮೆರೆವೆಂ’ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರನ್ನು ತಂದೆತಾಯಿಯರ ಸಲಹೆಯಂತೆ ದುರ್ಯೋಧನನು ಸಂಧಿಸಿದಾಗ ಅವರು ಪಾಂಡವರೊಡನೆ ಸಂಧಿ ಮಾಡಿಕೊ; ಪಾಂಡವರನ್ನು ನಾನು ಒಪ್ಪಿಸುತ್ತೇನೆ ಎಂದು ಸಲಹೆ ನೀಡುತ್ತಾರೆ. ಆಗ ದುರ್ಯೋಧನನು ನಿಮಗೆ ನಮಸ್ಕಾರ ಮಾಡಿ ಹೋಗಬೇಕೆಂದು ಬಂದೆನಲ್ಲದೆ ಸಂಧಿಮಾಡಿಕೊಳ್ಳಲು ಬಂದೆನೇ? ಯುದ್ದದಲ್ಲಿ ಇನ್ನು ನನ್ನ ಕಾರ್ಯವೇನೆಂಬುದನ್ನು ಹೇಳಿ ಎಂದು ಹೇಳುವೆನು.

ಸ್ವಾರಸ್ಯ: ಯದ್ಧದ ಕುರಿತ ದುರ್ಯೋಧನನ ಉತ್ಸಾಹ, ಛಲದ ಗುಣ ಇಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.

ಉತ್ತರ: ರನ್ನನ ಸಾಹಸಭೀಮ ವಿಜಯಂ ಕೃತಿಯಲ್ಲಿ ಮಹಾಭಾರತದ ಕಥೆ ಮತ್ತು ಯುದ್ಧದ ಪರಿಣಾಮ ಉತ್ತಮವಾಗಿ ಅಭಿವ್ಯಕ್ತಗೊಂಡಿದೆ. ದುರ್ಯೋಧನನು ತಂದೆ-ತಾಯಿಯರ ಅಪೇಕ್ಷೆಯಂತೆ ರಣರಂಗದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರ ಸಲಹೆಯನ್ನು ಪಡೆಯಲು ಬರುತ್ತಾನೆ. ಭೀಷ್ಮರು ದುರ್ಯೋಧನನಿಗೆ ಯುದ್ಧವನ್ನು ನಿಲ್ಲಿಸಿ ಪಾಂಡವರೊಡನೆ ಸಂಧಿ ಮಾಡಿಕೊ ಪಾಂಡವರನ್ನು ನಾನು ಒಪ್ಪಿಸುತ್ತಾನೆ, ಅವರು ನನ್ನ ಮಾತನ್ನು ಮೀರುವುದಿಲ್ಲ ಎನ್ನುತ್ತಾರೆ. ಆದರೆ ಅದಕ್ಕೊಪ್ಪದ ದುರ್ಯೋಧನನು ತಾನು ಯುದ್ಧ ಮಾಡುವುದಾಗಿ ತಿಳಿಸುತ್ತಾನೆ. ಯುದ್ಧ ಮಾಡಿಯೇ ತೀರಬೇಕೆಂಬ ಅವನ ಛಲದ ಗುಣ ಅವನ ಸ್ವಭಾವಕ್ಕೆ ತಕ್ಕನಾಗಿ ವ್ಯಕ್ತಗೊಂಡಿದೆ.
( ಈ ಪದ್ಯದ ಯಾವುದೇ ಚರಣ ಇದ್ದರೂ ಇದನ್ನು ಸಾರಾಂಶದ ಮೊದಲು ಬರೆದು ನಂತರ ಆ ಚರಣದ ಆರ್ಥವನ್ನು ಬರೆಯುವುದು)
ತನ್ನ ಪ್ರೀತಿಯ ಸಹೋದರ ಮತ್ತು ಸ್ನೇಹಿತ ಕರ್ಣನನ್ನು ಕಳೆದುಕೊಂಡ ದುರ್ಯೋಧನನಿಗೆ ಆ ಭೂಮಿ ಹಾಳು ಭೂಮಿ. ಕರ್ಣನನ್ನು ಕೊಂದ ಭೂಮಿಯೊಡನೆ ಮತ್ತೆ ತಾನು ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋಧನ ಹೇಳಿದ್ದಾನೆ. ನಾನು ನೆಲಕ್ಕಾಗಿ ಯುದ್ಧ ಮಾಡುವುದಾಗಿ ಭಾವಿಸಿದಿರಾ? ನಾನು ಛಲಕ್ಕಾಗಿ ಹೋರಾಡುತ್ತಿದ್ದೇನೆ.

ಉತ್ತರ:
ನೆಲಕಿರಿವೆನೆಂದು ಬಗೆದಿರೆ|
ಚಲಕಿರಿವೆಂ ಪಾಂಡುಸುತರೊಳೀನೆಲನಿದು ಪಾ||
ಳ್ನೆಲನೆನಗೆ ದಿನಪಸುತನಂ|
ಕೊಲಿಸಿದ ನೆಲನೊಡನೆ ಮತ್ತೆ ಪುದುವಾಳ್ದಿಪನೇ||