ಗದ್ಯ ಪಾಠ: ವ್ಯಾಘ್ರಗೀತೆ

ಒಂದು ಅಂಕದ ಪ್ರಶ್ನೆಗಳು

ಉತ್ತರ: ಗೋವಿನ ಹಾಡು ಎಂಬ ಜನಪ್ರಿಯ ಜನಪದ ಕಥನ ಕಾವ್ಯದಲ್ಲಿ ಬರುವ ಗೋವಿನ ಹೆಸರು ಪುಣ್ಯಕೋಟಿ.

ಉತ್ತರ: ಶಾನುಭೋಗರ ಬ್ರಹ್ಮಾಸ್ತ್ರ ಖಿರ್ದಿ ಪುಸ್ತಕ.

ಉತ್ತರ: ಹಸಿದು ಮಲಗಿದ್ದ ಹುಲಿಯು ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೊ? ಎಂದು ಯೋಚಿಸಿತು.

ಉತ್ತರ: ಶಾನುಭೋಗರ ದುಂಡು ದುಂಡಾದ ಶರೀರವನ್ನು ನೋಡಿ ಹುಲಿಗೆ ಪರಮಾನಂದವಾಯಿತು.

ಉತ್ತರ: ಕುಂಬಾರನು ಮಡಕೆ ಮಾಡಲು ಬಳಸುವ ಸಾಧನ ಕುಲಾಲಚಕ್ರ.

ಎರಡು ಅಂಕದ ಪ್ರಶ್ನೆಗಳು

ಉತ್ತರ : ಶಾನುಭೋಗರು ತಮ್ಮ ಹಳ್ಳಿಯನ್ನು ತಲುಪಬೇಕಾದರೆ ಮದಲಿಂಗನ ಕಣಿವೆಯನ್ನುದಾಟಿ ಹೋಗಬೇಕಾಗಿತ್ತು. ಕಾಡು ದಾರಿ, ಬೆಳದಿಂಗಳ ದಿನ. ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು ಎಂದು ಯೋಚಿಸಿದರು.

ಉತ್ತರ : ಅವು ಭರತ ಖಂಡದ ಹುಲಿಗಳು. ಯಾವ ಶತ್ರುಗಳನ್ನಾದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲವೆಂದು ತಿಳಿದು ಅವು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ:
ಆಯ್ಕೆ: ಈ ವಾಕ್ಯವನ್ನು ಎ.ಎನ್.ಮೂರ್ತಿರಾವರವರ ‘ಸಮಗ್ರ ಲಲಿತ ಪ್ರಬಂಧಗಳು' ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ ಗದ್ಯದಿಂದ ಆಯ್ದುಕೊಳ್ಳಲಾಗಿದೆ.

ಸಂದರ್ಭ: ಹುಲಿಯಿಂದ ತಪ್ಪಿಸಿಕೊಳ್ಳಲು ಕುಲಾಲಚಕ್ರದಂತೆ ತಿರುಗಿ, ತಿರುಗಿ ಶಾನುಭೋಗರಿಗೆ ಆಯಾಸವಾಗಿತ್ತು. ಮಡಿಯಬೇಕಾದರೆ ಮಾಡಿಯೇ ಮಡಿಯಬೇಕೆಂದು ಶಾನುಭೋಗರು ಆ ಪುಸ್ತಕವನ್ನು ಅದರೆಡೆ ಎಸೆಯುತ್ತಾ ಒಂದೇ ಉಸಿರಿನಲ್ಲಿ ಕೈಯಲ್ಲಿದ್ದ ಅವರ ಬ್ರಹ್ಮಾಸ್ತ್ರವಾದ ಖಿರ್ದಿ ಪುಸ್ತಕವನ್ನು ಹುಲಿಯೆಡೆಗೆ ಎಸೆಯುತ್ತಾ ಅದರ ಗಮನವನ್ನು ಬೇರೆಡೆಗೆ ಸೆಳೆದು ಮರವೇರಿ ಬಿಡಬಹುದೆಂದು ತಿಳಿದು ಮರದ ಕಡೆಗೆ ಧಾವಿಸುವ ಸಂದರ್ಭದಲ್ಲಿ ಶಾನುಭೋಗರು ಈ ಮೇಲಿನಂತೆ ದೇವರಲ್ಲಿ ಪ್ರಾರ್ಥಿಸಿಕೊಳ್ಳುವ ಸಂದರ್ಭದಲ್ಲಿ ಬಂದಂತಹ ವಾಕ್ಯವಾಗಿದೆ.

ಸ್ವಾರಸ್ಯ: ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿನಂತೆ ಅಪಾಯ ಬಂದಾಗ ಉಪಾಯ ಹುಡುಕುವ ಶಾನುಭೋಗರ ಗುಣವು ಈ ವಾಕ್ಯದಲ್ಲಿ ಸ್ವಾರಸ್ಯಕರವಾಗಿ ಅಭಿವ್ಯಕ್ತಗೊಂಡಿದೆ.

ಉತ್ತರ : ಕನ್ನಡದ ಪ್ರಸಿದ ಪ್ರಬಂಧಕಾರರೆಂದೇ ಗುರುತಿಸಿಕೊಂಡ ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾವರವರು ಕ್ರಿ.ಶ. 1900 ರಲ್ಲಿ ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳಿನಲ್ಲಿ ಜನಿಸಿದರು. ಇವರು ಹಗಲುಕನಸುಗಳು, ಅಲೆಯುವಮನ, ಅಪರವಯಸ್ಕನ ಅಮೇರಿಕಾಯಾತ್ರೆ, ಮಿನುಗು-ಮಿಂಚು, ಚಿತ್ರಗಳು-ಪತ್ರಗಳು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್. ಪದವಿ ದೊರಕಿದೆ. ಇವರು ಕೈವಾರದಲ್ಲಿ ಸಮಾವೇಶಗೊಂಡ 56ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಉತ್ತರ : ಶಾಖಾಹಾರವನ್ನು ತಿಂದು ಬದುಕಬಹುದಾದ ಮಾನವನೆ ಮಾಂಸವನ್ನು ತಿನ್ನಬಹುದಾದರೆ ತನ್ನ ಆಹಾರಕ್ಕಾಗಿ ಹುಲಿಯು ಪ್ರಾಣಿಗಳನ್ನು ಕೊಂದು ತಿನ್ನುವುದರಲ್ಲಿ ತಪ್ಪಿಲ್ಲ. ಆದರೆ ಹಾಗೆ ಕೊಲ್ಲುವಾಗ ಯಾವುದೋ ಒಂದು ಧರ್ಮವನ್ನು ಅನುಸರಿಸಿ ಕೊಲ್ಲುವುದೋ ಅಥವಾ ಧರ್ಮಾಧರ್ಮಗಳ ಲೆಕ್ಕವಿಡದೆ ಸ್ವಚಂದದಿಂದ ವರ್ತಿಸುತ್ತದೆಯೋ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಇತರ ದೇಶಗಳಲ್ಲಿ ಇರುವ ಹುಲಿಗಳ ವಿಷಯ ಗೊತ್ತಿಲ್ಲ. ಆದರೆ ಯಾವ ನಾಡಿನಲ್ಲಿ ಶ್ರೀರಾಮನಂಥ ದೊರೆಗಳು ಆಳಿದರೊ ಭಗವದ್ಘಿತೆಯಂಥ ಗ್ರಂಥ ಉದ್ಭವಿಸಿತೊ ಅಂಥಹ ಭರತಭೂಮಿಯಲ್ಲಿ ಹುಲಿಗಳು ಅಧರ್ಮಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಏಕೆಂದರೆ ಶತ್ರುಗಳಾದರೂ ಸರಿಯೆ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ. ಭಗವದ್ಗೀತೆಯ "ಸ್ವಧರ್ಮೆ ನಿಧನಂ ಶ್ರೆಯಃ" ಎಂಬ ಮಾತಿನಂತೆ ಹುಲಿಗಳು ಧರ್ಮಪರತೆಯಿಂದ ಬೇಟೆಯಾಡುತ್ತದೆ. ಅದರಲ್ಲೂ ಸತ್ಯವ್ರತೆಯಾದ ಪುಣ್ಯಕೋಟಿಯನ್ನು ತಿನ್ನದೆ ತನ್ನ ಪ್ರಾಣವನ್ನೆ ಪರಿತ್ಯಾಗ ಮಾಡಿದ ಹುಲಿಯ ಮೊಮ್ಮಗನಲ್ಲವೇ ತಾನು’ ಎಂಬ ಹಲವಾರು ಮಾತುಗಳು ಹುಲಿಯ ಬೇಟೆಯಾಡುವಿಕೆಯ ಧರ್ಮ್ಮಶ್ರದ್ದೆಯನ್ನು ಮೂರ್ತಿರಾಯರು ವಿವರಿಸಿದ್ದಾರೆ.