ಪದ್ಯ ಪಾಠ: ಹಸುರು

ಕವಿ ಕೃತಿ ಪರಿಚಯ

ಕುವೆಂಪು ಕಾವ್ಯ ನಾಮದಿಂದ ಪ್ರಸಿದ್ಧ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಕ್ರಿ. ಶ. 1904 ಡಿಸೆಂಬರ್ 29 ರಂದು ಕುಪ್ಪಳ್ಳಿಯಲ್ಲಿ ಜನಿಸಿದರು. ಇವರು ಶ್ರೀರಾಮಾಯಣ ದರ್ಶನಂ, ಪಕ್ಷಿಕಾಶಿ, ಕೊಳಲು, ಪಾಂಚಜನ್ಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಬಂದಿವೆ.

ಮಾದರಿ ಪ್ರಶ್ನೋತ್ತರಗಳು

ಒಂದು ಅಂಕದ ಪ್ರಶ್ನೆಗಳು

ಉತ್ತರ: ಕವಿಯು ನೋಡಿದ ಅಡಕೆಯ ತೋಟ ಶಾಲಿವನದ ಬನದ ಅಂಚಿನಲ್ಲಿದೆ.

ಉತ್ತರ: ಹಸುರು ಪದ್ಯ ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪಗಟ್ಟಿದ ಹಚ್ಚ ಹಸಿರನ್ನು ಕಂಡು ಪ್ರೇರಿತವಾದ ಕವನವಾಗಿದೆ.

ಉತ್ತರ: ಹಸುರು ಪದ್ಯದ ಆಕರ ಕವನಸಂಕಲನ ಪಕ್ಷಿಕಾಶಿ.

ಉತ್ತರ: ರಸಪಾನ ಸ್ನಾನದಿಂದ ಕವಿಯ ಆತ್ಮವು ಹಸಿರಾಯಿತು.

ಉತ್ತರ: ಹುಲ್ಲಿನ ಮಕಮಲ್ಲು ಹೊಸಪಚ್ಚೆಯ ಜಮಖಾನದ ಹಾಗೆ ಕಾಣುತ್ತಿದೆ.

ಎರಡು ಅಂಕದ ಪ್ರಶ್ನೆಗಳು

ಉತ್ತರ : ಭೂಮಿಯ ಮೇಲೆ ಎತ್ತ ನೋಡಿದರು ಹಸಿರೇ ಕಂಗೊಳಿಸತ್ತಿದೆ. ಅತ್ತ ಇತ್ತ ಎಲ್ಲೆಲ್ಲಿಯೂ ಹಸಿರೇ ಆವೃತವಾಗಿದೆ. ಶರಧಿಯು ಹಸಿರಿನಿಂದ ಭೋರ್ಗರೆಯತ್ತಿದೆ. ಕವಿಯ ಸಂಪೂರ್ಣ ದೇಹವು ಹಸಿರಿನಿಂದ ಕೂಡಿದ್ದು ಕವಿಯ ಆತ್ಮದೊಂದಿಗೆ ಪರಸ್ಪರ ಲೀನವಾಗಿದೆ ಎಂದು ಕವಿ ಹೇಳಿದ್ದಾರೆ.

ಉತ್ತರ : ಹಸುರಾದ ಬೆಟ್ಟ, ಗದ್ದೆಯ ಬಯಲು, ಆಗಸ, ಮುಗಿಲು, ಕಣಿವೆ ಮೊದಲಾದವು ಕಣ್ಣಿಗೆ ಕಟ್ಟುವಂತೆ ಹಸುರಾಗಿದೆ. ಹೊಸಹೂವಿನ ಕಂಪು ಮೂಗಿಗೆ ಸುವಾಸನೆಯ ಅನುಭವ ನೀಡಿದರೆ, ತಂಪಾದ ಗಾಳಿ ಚರ್ಮಕ್ಕೆ ಸುಖ ನೀಡುತ್ತಿದೆ. ಹಕ್ಕಿಯ ಕೊರಳಿನ ಇಂಪು ಕಿವಿಗೆ ಆನಂದವನ್ನು ನೀಡುತ್ತಿದೆ. ಹೀಗೆ ಹಸುರು ಸಕಲೇಂದ್ರಿಯಗಳನ್ನು ವ್ಯಾಪಿಸಿದೆ ಎಂದು ಕವಿ ವರ್ಣಿಸಿದ್ದಾರೆ.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ:
ಆಯ್ಕೆ: ಈವಾಕ್ಯವನ್ನು ಕುವೆಂಪುರವರ ಪಕ್ಷಿಕಾಶಿ ಕವನ ಸಂಕಲನದ ಹಸುರು ಪದ್ಯದಿಂದ ಆಯ್ದುಕೊಳ್ಳಲಾಗಿದೆ. ಸಂದರ್ಭ: ಈ ಮಾತನ್ನು ಕವಿ ಓದುಗರಿಗೆ ಹೇಳಿದ್ದಾರೆ.

ವಿವರಣೆ: ಕಾಡಿನ ಒಡಲೆಲ್ಲ ಹಸುರಾಗಿದೆ. ಎಲ್ಲೆಲ್ಲಿಯೂ ಹುಲ್ಲಿನ ಹಾಸಿಗೆಯು ಕಾಣುತ್ತಿದೆ. ಹಸುರು ಹುಲ್ಲು ನಯವಾದ ರೇಷ್ಮೆಯ ವಸ್ತ್ರದಂತೆ ಹರಡಿ ಹಸುರು ಜಮಖಾನವನ್ನು ಭೂಮಿಗೆ ಹೊದಿಸಿದಂತೆ ಕಾಣುತ್ತಿದೆ. ಹಸುರು ಬಣ್ಣವನ್ನು ಬಿಟ್ಟರೆ ಬೇರೆ ಬಣ್ಣವನ್ನು ಕಾಣಲು ಸಾಧ್ಯವಿಲ್ಲವೆಂದು ಕವಿ ಹೇಳಿದ್ದಾರೆ.

ಸ್ವಾರಸ್ಯ: ಕವಿಯ ಕಲ್ಪನೆಯಂತೆ ಸಸ್ಯಶಾಮಲೆಯ ಹಸಿರು ಬಿಟ್ಟರೆ ಉಳಿದ ಬಣ್ಣಗಳ ಗೋಚರಕ್ಕೆ ಅವಕಾಶವೇ ಇಲ್ಲವೆಂಬಂತೆ ಹಸಿರು ಆವರಿಸಿದೆ.

ಉತ್ತರ :
ಆಯ್ಕೆ: ಈವಾಕ್ಯವನ್ನು ಕುವೆಂಪುರವರ ಪಕ್ಷಿಕಾಶಿ ಕವನ ಸಂಕಲನದ ಹಸುರು ಪದ್ಯದಿಂದ ಆಯ್ದುಕೊಳ್ಳಲಾಗಿದೆ.

ಸಂದರ್ಭ: ಈ ಮಾತನ್ನು ಕವಿ ಓದುಗರಿಗೆ ಹೇಳಿದ್ದಾರೆ.

ವಿವರಣೆ: ಮಲೆನಾಡಿನ ಪ್ರಕೃತಿ ವೈಭವದಲ್ಲಿ ಹಸುರೇ ಪ್ರಧಾನ. ಎಲ್ಲಿ ನೋಡಿದರು ಸಸ್ಯಶಾಮಲೆಯು ಹಸಿರಿನಿಂದ ಕಂಗೊಳಿಸುತ್ತಿದ್ದಾಳೆ. ಎಲ್ಲೆಡೆ ಹಸುರಿನ ದೃಶ್ಯ ಕಾಣಿಸುತ್ತಿದೆ.

ಸ್ವಾರಸ್ಯ: ಪ್ರಕೃತಿಯಲ್ಲಿ ಎಲ್ಲಿ ನೋಡಿದರೂ ಹಸುರೇ ಕಂಡುಬಂದಿದೆ.

ಉತ್ತರ :
ಆಯ್ಕೆ: ಈ ಪದ್ಯದ ಸಾಲುಗಳನ್ನು ಕುವೆಂಪುರವರ ಪಕ್ಷಿಕಾಶಿ ಕವನ ಸಂಕಲನದ ಹಸುರು ಪದ್ಯದಿಂದ ಆರಿಸಲಾಗಿದೆ.

ಭಾವಾರ್ಥ: ಆಶ್ವೀಜ ಮಾಸದ ಭತ್ತದ ಗದ್ದೆಗಳು ಗಿಳಿಯ ದೇಹದ ಹಸುರು ಬಣ್ಣದಿಂದ ಕೂಡಿದೆ. ಅದರ ಅಕ್ಕ ಪಕ್ಕ ಬನದ ಅಂಚಿನಲ್ಲಿ ಕೊನೆಯನ್ನು ಹೊತ್ತ ಅಡಕೆಯ ತೋಟಗಳು ಹಸಿರಿನಿಂದ ಸಮೃದ್ಧವಾಗಿವೆ. ಎಲ್ಲೆಲ್ಲಿಯೂ ಹಸುರಿನಿಂದ ಕಂಗೋಳಿಸುವುದರಿಂದ ಪ್ರಕೃತಿಯನ್ನು ನೋಡಲು ಸಂತಸವಾಗುತ್ತದೆ.

ಮೌಲ್ಯ: ಕವಿಗೆ ಕವಿಶೈಲದಲ್ಲಿ ಉಂಟಾದ ಪ್ರಕೃತಿಯ ಸೌಂದರ್ಯಾನುಭವವು ಕವಿಯನ್ನು ಹಸಿರಿನಲ್ಲಿಯೇ ತಲ್ಲೀನನನ್ನಾಗಿ ಮಾಡಿದೆ.