ಗದ್ಯ ಪಾಠ: ಎದೆಗೆ ಬಿದ್ದ ಅಕ್ಷರ

ಒಂದು ಅಂಕದ ಪ್ರಶ್ನೆಗಳು

ಉತ್ತರ: ಮನೆ ಮಂಚಮ್ಮನ ಕಥೆ ಹೇಳಿದ ಕವಿ ಸಿದ್ದಲಿಂಗಯ್ಯನವರು.

ಉತ್ತರ: ಭೂಮಿಗೆ ಬಿದ್ದ ಬೀಜ; ಎದೆಗೆ ಬಿದ್ದ ಅಕ್ಷರ; ಇವು ಇಂದಲ್ಲ ನಾಳೆ ಫಲ ಕೊಡುವವು.

ಉತ್ತರ: ಪ್ರಸಿದ್ದ ಮನೋವೈದ್ಯರಾಗಿದ್ದ ಡಾ. ಅಶೋಕ ಪೈ ಅವರು ಶಿವಮೊಗ್ಗದವರು.

ಉತ್ತರ: ರಷ್ಯಾದ ಮಹಾಕವಿ ಟಾಲಸ್ಟಾಯ್ ಬರೆದ ಮೇರು ಕೃತಿ ‘ಯುದ್ದ ಮತ್ತು ಶಾಂತಿ’.

ಉತ್ತರ: ‘ಮಹಾಭಾರತ’ ಗೃಂಥವನ್ನು ಬರೆದವರು ವೇದವ್ಯಾಸರು.

ಎರಡು ಅಂಕದ ಪ್ರಶ್ನೆಗಳು

ಉತ್ತರ : ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ತನ್ನಷ್ಟಕ್ಕೆ ತಾನಿರುವ ಕೇವಲ ತಿಳುವಳಿಕೆ. ಜ್ಞಾನ ಮಾತ್ರವಲ್ಲ. ಅದು ಕ್ರಿಯೆಯ ಅನುಭವದಿಂದ ಒಡಮೂಡುವಂತದ್ದು. ಅದು ಕೇಳಿ ತಿಳಿಯುವುದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳುವಳಿಕೆಯೆ ಹೊರತು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ, ಅದೇ ಅರಿವು.

ಉತ್ತರ : ಪ್ರಸಿದ್ದ ಮನೋವೈದ್ಯ ಡಾ. ಅಶೋಕ ಪೈ ಅವರು ನಡೆಸಿದ ಸಂಶೋಧನಾ ಸತ್ಯವೆಂದರೆ - ಒಂದು ಕೊಠಡಿಯಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದವರು ಅನುಭವಿಸುವ ದುಃಖ ಅಥವಾ ಸಂತೋಷದ ಭಾವನೆಗಳು ಪಕ್ಕದ ಕೊಠಡಿಯಲ್ಲಿ ಟೆಲಿವಿಷನ್ ನೋಡುತ್ತಿದ್ದವರ ಮನಸ್ಸಿನ ಮೇಲೂ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರುತ್ತದೆ. ಅಂದರೆ ‘ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಯಾವುದೇ ಒಂದು ಜೀವಿಗೆ ಆಗುವ ದುಃಖದುಮ್ಮಾನ, ಸಂತೋಷ ಪರಿಸರದಲ್ಲಿ ಉಸಿರಾಡುವ ಇತರ ಜೀವಿಗಳಲ್ಲೂ ಕಂಪನ ಅನುಭವ ಉಂಟುಮಾಡುತ್ತದೆ.’

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ: ಈ ಮೇಲಿನ ವಾಕ್ಯವನ್ನು ದೇವನೂರು ಮಹಾವೇವರು ಬರೆದ ‘ಎದೆಗೆ ಬಿದ್ದ ಅಕ್ಷರ’ ಎನ್ನುವ ವೈಚಾರಿಕ ಬಿಡಿ ಲೇಖನಗಳಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಕವಿ ಸಿದ್ದಲಿಂಗಯ್ಯನವರು ಒಮ್ಮೆ ಲೇಖಕರಾದ ದೇವನೂರವರಿಗೆ ಹೇಳಿದ ಕಥೆಯಲ್ಲಿ ಜನರು ಗ್ರಾಮದೇವತೆಗೆ ಗುಡಿಕಟ್ಟುತ್ತಿರುವಾಗ ಇದ್ದಕ್ಕಿದ್ದಂತೆ ಅವರಲ್ಲಿ ಒಬ್ಬನ ಮೇಲೆ ಆವಾಹಿಸಿಕೊಂಡು ಅವರು ಮಾಡುತ್ತಿರುವ ಕಾರ್ಯದ ಕುರಿತು ವಿಚಾರಿಸುತ್ತಾಳೆ.ಆಗ ಜನರು “ತಾಯಿ ನಿನಗಾಗಿ ಒಂದು ಗುಡಿಮನೆ ಕಟ್ಟುತ್ತಿರುವುದಾಗಿ ಹೇಳಿದಾಗ ಗ್ರಾಮದೇವತೆ ಈ ಮೇಲಿನಂತೆ ಹೇಳಿ “ನಿಮಗೆಲ್ಲ ಮನೆಯಾಗೋವರೆಗೂ ನನಗೂ ಮನೆ ಬೇಡ” ಎಂದು ಹೇಳುತ್ತಾಳೆ.
ಸ್ವಾರಸ್ಯ: ಬದುಕಲು ನೆಲೆ ಇಲ್ಲದ ಅದೆಷ್ಟೋ ಬಡವರು ನೆರಳಿಲ್ಲದೆ ಕಷ್ಟ ಪಡುತ್ತಿರುವಾಗ ಕಣ್ಣಿಗೆ ಕಾಣದ ದೇವತೆಗೆ ಮನೆ ಕಟ್ಟುತ್ತಿರುವುದು ಎಷ್ಟು ಸರಿ? ಇದನ್ನು ನೋಡಿದ ಗ್ರಾಮ ದೇವತೆಯೇ ಪ್ರತ್ಯಕ್ಷಳಾಗಿ ಸಮಾಜದಲ್ಲಿ ನೆಲೆಯಿಲ್ಲದವರಿಗೆ ನೆಲೆ ಒದಗಿಸಬೇಕಾದ ಅನಿವಾರ್ಯತೆಯ ಮಾನವೀಯ ಮೌಲ್ಯವನ್ನು ಸಾರುವ ಸ್ವಾರಸ್ಯ ವ್ಯಕ್ತವಾಗಿದೆ.

ಉತ್ತರ :
ದೇವನೂರು ಮಹಾದೇವನವರು ಕ್ರಿ. ಶ. 1948 ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನಲ್ಲಿ ಜನಿಸಿದರು. ಮೈಸೂರಿನ ಭಾರತೀಯ ಭಾಷಾಸಂಸ್ಥಾನದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ದಲಿತ ಹಾಗೂ ಬಂಡಾಯ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ.
ಇವರ ಕೃತಿಗಳು: ದ್ಯಾವನೂರು, ಒಡಲಾಳ, ಗಾಂಧಿ ಮತ್ತು ಮಾವೋ, ನೋಡು ಮತ್ತು ಕೇಡು, ಎದೆಗೆ ಬಿದ್ದ ಅಕ್ಷರ ಮುಂಥಾದ ಕೃತಿಗಳನ್ನು ಬರೆದಿದ್ದಾರೆ. ಇವರ ಕುಸುಮ ಬಾಲೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ಥಿ, ಒಡಲಾಳ ಕೃತಿಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ಥಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ.

ಉತ್ತರ : ಕವಿ ಸಿದ್ದಲಿಂಗಯ್ಯನವರು ಒಮ್ಮೆ ಲೇಖಕರಾದ ದೇವನೂರವರಿಗೆ ಹೇಳಿದ ಕಥೆಯಲ್ಲಿ ‘ಮನೆಮಂಚಮ್ಮ’ ಎಂಬ ಗ್ರಾಮದೇವತೆಯ ಒಳಗಿಂದ ‘ನನ್ನ ದೇವರು’ ಒಡಮೂಡಿದ ಪ್ರಸಂಗ ಅರ್ಥಪೂರ್ಣವಾಗಿದೆ. ಜನರು ಗ್ರಾಮದೇವತೆಗೆ ಗುಡಿ ಕಟ್ಟುತ್ತಿರುವಾಗ ಚಾವಣಿ ಹಂತ ತಲುಪಿದಾಗ ಇದ್ದಕ್ಕಿದ್ದಂತೆ ಅವರಲ್ಲಿ ಒಬ್ಬನ ಮೇಲೆ ಆವಾಹಿಸಿಕೊಂಡು “ನಿಲ್ಲಿಸಿ ನನ್ನ ಮಕ್ಕಳಾ” ಎಂದಾಗ ಜನ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು, “ಏನ್ರಯ್ಯಾ ಏನ್ ಮಾಡ್ತಿದ್ದೀರಿ?” ಎಂದು ಅವರನ್ನು ಪ್ರಶ್ನಿಸುತ್ತಾಳೆ. ಅದಕ್ಕೆ ಅವರು “ನಿನಗೊಂದು ಗುಡಿಮನೆ ಕಡ್ತಾ ಇದ್ದೀವಿ ತಾಯಿ” ಎಂದರು. ಅದಕ್ಕೆ ಮಂಚಮ್ಮ “ಓಹೋ ನನಗೇ ಗುಡಿಮನೆ ಕಟ್ತಾ ಇದ್ದಿರಾ ? ಹಾಗಾದರೆ ನಿಮಗೆಲ್ಲಾ ಮನೆ ಇದೆಯಾ ? ಎಂದು ಪ್ರಶ್ನಿಸಿದಾಗ ಅದರಲ್ಲೊಬ್ವ “ನನಗಿಲ್ಲ ತಾಯಿ” ಎಂದನು. ಅದಕ್ಕೆ ಮಂಚಮ್ಮ ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೂ ನನಗೂ ಮನೆ ಬೇಡ” ಎಂದಳು. ಹೀಗೆ ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆ ಮಂಚಮ್ಮ ಇಂದಿಗೂ ಪೂಜಿತಳಾಗುತ್ತಿದ್ದಾಳೆ.