ಪದ್ಯ ಪಾಠ: ಕೌರವೇಂದ್ರನ ಕೊಂದೆ ನೀನು

ಕವಿ ಕೃತಿ ಪರಿಚಯ:

• ಕುಮಾರವ್ಯಾಸ ಎಂದು ಪ್ರಸಿದ್ಧರಾಗಿರುವ ಗದುಗಿನ ನಾರಣಪ್ಪರು ಕ್ರಿ.ಶ.ಸುಮಾರು 1430 ರಲ್ಲಿ ಗದಗ ಪ್ರಾಂತ್ಯದ ಕೋಳಿವಾಡದಲ್ಲಿ ಜನಿಸಿದರು.
• ಇವರು ಕರ್ನಾಟ ಭಾರತ ಕಥಾ ಮಂಜರಿ ಮತ್ತು ಐರಾವತ ಎಂಬ ಕೃತಿಗಳನ್ನು ರಚಿಸಿದ್ದಾರೆ.
• ಇವರು ತನ್ನ ಕೃತಿಯಲ್ಲಿ ರೂಪಕಾಲಂಕಾರವನ್ನು ಹೆಚ್ಚಾಗಿ ಬಳಸಿದ್ದರಿಂದ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದಾರೆ.
• ಕರ್ನಾಟ ಭಾರತ ಕಥಾ ಮಂಜರಿ ಕೃತಿಯನ್ನು ಕನ್ನಡಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ.

ಮಾದರಿ ಪ್ರಶ್ನೋತ್ತರಗಳು

ಒಂದು ಅಂಕದ ಪ್ರಶ್ನೆಗಳು

ಉತ್ತರ: ಅಶ್ವಿನೀ ದೇವತೆಗಳ ವರಬಲದಿಂದ ಜನಿಸಿದವರು ನಕುಲ ಮತ್ತು ಸಹದೇವ.

ಉತ್ತರ: ಕುಮಾರವ್ಯಾಸನಿಗೆ ಇರುವ ಬಿರುದು ರೂಪಕ ಸಾಮ್ರಾಜ್ಯ ಚಕ್ರವರ್ತಿ.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ:
ಸಂದರ್ಭ: ಕೃಷ್ಣನು ಪಾಂಡವ ಕೌರವರ ನಡುವೆ ಸಂಧಿ ಮಾಡಲು ಹೋಗಿ, ವಿಫಲನಾಗಿ ಹಿಂದಿರುಗುವಾಗ ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು, ಮೈದುನತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಕರ್ಣನು ಕೃಷ್ಣನಿಗೆ ಹೇಳುತ್ತಾನೆ.

ಸ್ವಾರಸ್ಯ: ಕರ್ಣನು ಮುಂದೆ ನಡೆಯುವ ಮಹಾಭಾರತ ಕುರುಕ್ಷೇತ್ರ ಯುದ್ಧದ ಭೀಕರತೆಯನ್ನು ಈ ಮಾತಿನಲ್ಲಿ ಬಹು ಸ್ವಾರಸ್ಯಪೂರ್ಣವಾಗಿ ಹೇಳುತ್ತಾನೆ.

ಉತ್ತರ: ಕೃಷ್ಣನು ಕರ್ಣನಿಗೆ ಆಮಿಷಗಳನ್ನು ಒಡ್ಡಿದಾಗ ಕೊರಳ ಸೇರೆ ಹಿಗ್ಗಿದವು, ಕಂಬನಿಯು ರಭಸದಿಂದ ಮುಂದೆ ಬಂದು, ಅಧಿಕವಾಗಿ ಕರ್ಣನು ದು:ಖಗೊಂಡು ಮನದೊಳಗೆ “ಅಯ್ಯೋ, ದುರ್ಯೋಧನನಿಗೆ ಕೇಡಾದುದು” ಎಂದನು. ತನ್ನ ಜನ್ಮ ರಹಸ್ಯ ತಿಳಿದಾಗ ಅವನಿಗೆ ಸಂತೋಷವಾಗುವುದಕ್ಕೆ ಬದಲಾಗಿ ದುಃಖ ಉಂಟಾಯಿತು. ಅವನಿಗೆ ತಾನು ಏನು ಮಾಡಬೇಕೆಂಬುದು ತಿಳಿಯದಾಯಿತು.ಆಗ ತನ್ನ ಮನಸ್ಸಿನಲ್ಲಿ ಚಿಂತಿಸುತ್ತಾ ‘ಹರಿಯ ಹಗೆತನವು ಹೊಗೆ ತೋರದೆ ಸುಟ್ಟುಹಾಕುವುದಲ್ಲದೆ; ಸುಮ್ಮನೆ ಹೋಗುವುದೇ? ಕೃಷ್ಣನು “ನನ್ನ ವಂಶದ ರಹಸ್ಯವನ್ನು ತಿಳಿಸಿ ನನ್ನನ್ನು ಕೊಂದನು” ಎಂದು ಮನದಲ್ಲಿ ನೊಂದುಕೊಂಡನು. “ಮರುಳು ಮಾಧವ, ನಾನು ರಾಜ್ಯದ ಸಿರಿಸಂಪತ್ತಿಗೆ ಸೋಲುವವನಲ್ಲ, ಪಾಂಡವರು ಕೌರವರು ಸೇವೆಯನ್ನು ಮಾಡುವುದು ನನಗೆ ಇಷ್ಟವಿಲ್ಲ. ಆದರೆ ನನ್ನನ್ನು ಕಾಪಾಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುವ ಆವೇಶದಲ್ಲಿ ಇದ್ದೆನು. ಆದರೆ ನೀನು ನನ್ನ ಜನ್ಮ ರಹಸ್ಯವನ್ನು ತಿಳಿಸಿ ದುರ್ಯೋಧನನ ಕೊಂದೆ” ಎಂದು ಪರಿತಪಿಸುತ್ತಾ “ನಾನು ಕೌರವನ ಉಪಕಾರದ ಋಣ ತೀರಿಸುವಂತೆ ಹೋರಾಡಿ, ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರ ಯೋಧರನ್ನು ಕೊಂದು, ನನ್ನ ಒಡೆಯನಿಗಾಗಿ ಪ್ರಾಣವನ್ನು ಬಿಡುವೆನು. ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೆನು” ಎಂದನು.

ಉತ್ತರ: ಕೃಷ್ಣನು ಕರ್ಣನ ಜನ್ಮ ರಹಸ್ಯವನ್ನು ತಿಳಿಸುತ್ತಾ ಆತನನ್ನು ಸಕಲ ಸಾಮ್ರಾಜ್ಯಕ್ಕೆ ಚಕ್ರವರ್ತಿಯನ್ನಾಗಿ ಮಾಡುವುದಾಗಿ ತಿಳಿಸುತ್ತಾನೆ. ಸೂರ್ಯನ ಅನುಗ್ರಹದಿಂದ ಜನಿಸಿದ ಕರ್ಣನನ್ನು ಮಗುವಾಗಿದ್ದಾಗ ಕುಂತಿಯು ನೀರಿನಲ್ಲಿ ತೇಲಿಬಿಟ್ಟದ್ದರಿಂದ ಅಂಬಿಗನ ಮನೆಯಲ್ಲಿ ಮಾತೃವಾತ್ಸಲ್ಯದಿಂದ ವಂಚಿತನಾಗಿ ಸೂತಪುತ್ರನಾಗಿ ಬೆಳೆಯಬೇಕಾಯಿತು. ಸೂತಪುತ್ರನೆಂದು ಸಮಾಜದಲ್ಲಿ ಆತನ ಶಕ್ತಿ ಸಾಮಥ್ರ್ಯಕ್ಕೆ ಸೂಕ್ತವಾದ ಸ್ಥಾನಮಾನ ದೊರೆಯಲಿಲ್ಲ. ಅಂತಹ ಸಂದರ್ಭದಲ್ಲಿ ದುರ್ಯೋಧನ ಕರ್ಣನನ್ನು ಗೆಳೆಯನಾಗಿ ಸ್ವೀಕರಿಸಿ ಅಂಗರಾಜ್ಯದ ಅಧಿಪತಿಯನ್ನಾಗಿಸುತ್ತಾನೆ. ಆತನಿಗೆ ಒಂದು ಸ್ಥಾನ, ಗೌರವಗಳನ್ನು ದೊರಕಿಸಿಕೊಡುತ್ತಾನೆ. ಈ ಕಾರಣಗಳಿಂದ ಕರ್ಣನು ದುರ್ಯೋಧನನೇ ತನಗೆ ಒಡೆಯ, ಆತನ ಹಗೆಗಳು ನನಗೂ ಹಗೆಗಳೇ, ಆತನ ಅಭಿಮಾನ ನನ್ನ ಅಭಿಮಾನ, ದುರ್ಯೋಧನನ ಹಾದಿಯನ್ನೇ ಅನುಸರಿಸುತ್ತೇನೆ. ‘ಯುದ್ಧದಲ್ಲಿ ನಿಜ ಪರಾಕ್ರಮದ ಶ್ರೇಷ್ಠತೆಯನ್ನು ತೋರಿಸುತ್ತೇನೆ’ ಎನ್ನುವುದು ಕರ್ಣನ ಜಾಯಮಾನಕ್ಕೆ ಸರಿಯಾಗಿಯೇ ಇದೆ. ಕೌರವನು ತನಗೆ ಮಾಡಿದ ಉಪಕಾರವನ್ನು ಯುದ್ಧರಂಗದಲ್ಲಿ ತೀರಿಸುತ್ತೇನೆ. ತಮ್ಮಂದಿರನ್ನು ನೋಯಿಸದೆ, ಸೈನ್ಯಬಲವನ್ನು ಮಾರಿಗೆ ಜೌತಣವನ್ನಾಗಿ ನೀಡಿ, ಅನ್ನದಾತನ ಋಣವನ್ನು ಮುಗಿಸಿ, ಶರೀರವನ್ನು ತ್ಯಜಿಸುತ್ತೇನೆ’ ಎಂಬ ಕರ್ಣನ ಮಾತು ಆತನ ಸ್ವಾಮಿ ಭಕ್ತಿಗೆ ಸಾಕ್ಷಿಯಾಗಿದೆ. ‘ಸ್ಥಾನ ಗೌರವ ಹಾಗೂ ಕೀರ್ತಿ ದೊರಕಿಸಿ ಕೊಟ್ಟ ಒಡೆಯನಿಗೆ ತನ್ನ ಪ್ರಾಣವನ್ನು ಸಮರ್ಪಿಸುವುದು ಧರ್ಮವೇ ಆಗಿದೆ’ ಎಂಬ ಕರ್ಣನ ನಿರ್ಧಾರ ಸರಿಯಾಗಿದೆ.