ಗದ್ಯ ಪಾಠ: ವೃಕ್ಷ ಸಾಕ್ಷಿ

ಲೇಖಕರ ಪರಿಚಯ:

ಇವನು ಕ್ರಿ.ಶ. 1031ರಲ್ಲಿ ಕಿಸುಕಾಡು ನಾಡಿನ ಸಯ್ಯಡಿಯಲ್ಲಿ ಜನಿಸಿದನು. ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ ದಂಡನಾಯಕನೂ ಸಂಧಿ ವಿಗ್ರಹಿಯೂ ಆಗಿದ್ದನು. ಇವರೇ ‘ಕರ್ನಾಟಕ ಪಂಚತಂತ್ರ’ ಎಂಬ ಚಂಪೂಕಾವ್ಯದ ಕರ್ತೃ. ಪಂಚತಂತ್ರದಲ್ಲಿ ಭೇದ, ಪರೀಕ್ಷಾ, ವಿಶ್ವಾಸ, ವಂಚನಾ ಮತ್ತು ಮಿತ್ರಕಾರ್ಯ ಎಂಬ ಐದು ತಂತ್ರಗಳನ್ನಾಧರಿಸಿದ 48 ಉಪಕತೆಗಳಿವೆ. ಕಾವ್ಯವು 457 ಪದ್ಯಗಳಿಂದಲೂ 230 ಶ್ಲೋಕಗಳಿಂದಲೂ ಕೂಡಿದೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ, ಗುಂಡ್ಮಿಚಂದ್ರಶೇಖರ ಐತಾಳರು ಸಂಪಾದಿಸಿರುವ ದುರ್ಗಸಿಂಹ ಕವಿಯ ಕರ್ಣಾಟಕ ಪಂಚತಂತ್ರಂ ಎಂಬ ಕೃತಿಯಿಂದ ಈ ಪಾಠವನ್ನು ಆರಿಸಿಲಾಗಿದೆ.

ಮಾದರಿ ಪ್ರಶ್ನೋತ್ತರಗಳು

ಒಂದು ಅಂಕದ ಪ್ರಶ್ನೆಗಳು

ಉತ್ತರ: ವೃಕ್ಷಸಾಕ್ಷಿ ಕತೆಯನ್ನು ಕರ್ನಾಟಕ ಪಂಚತಂತ್ರ ಎಂಬ ಕೃತಿಯಿಂದ ಆರಿಸಲಾಗಿದೆ.

ಉತ್ತರ: ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಕಳ್ಳತನದ ಆರೋಪವನ್ನು ಹೊರಿಸಿದನು.

ಉತ್ತರ: ವಟ ವೃಕ್ಷವು (ಆಲದ ಮರ) ಸಾಕ್ಷಿ ಹೇಳುತ್ತದೆ ಎಂಬ ವಿಷಯವನ್ನು ಕೇಳಿದ ಧರ್ಮಾಧಿಕರಣರು ವಿಸ್ಮಯ ಹೊಂದಿದರು.

ಉತ್ತರ: ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ದೇವರ ಪೂಜೆ, ಗುರುಗಳ ಪೂಜೆ, ಬ್ರಾಹ್ಮಣರ ಪೂಜೆ ಮಾಡುತ್ತ ಕಳೆದನು.

ಉತ್ತರ: ಹೊನ್ನನ್ನು ಕದ್ದವರಾರು ಎಂಬುದನ್ನು ತಿಳಿಯಲು ಧರ್ಮಾಧಿಕರಣರು ವಟವೃಕ್ಷದ ಸಮೀಪ ಬಂದರು.

ಎರಡು ಅಂಕದ ಪ್ರಶ್ನೆಗಳು

ಉತ್ತರ: ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಗಳಿಬ್ಬರೂ ವ್ಯಾಪಾರಕ್ಕೆ ಹೋಗಿ ಸಾಕಷ್ಟ ಹಣ ಸಂಪತ್ತು ಸಂಪಾದಿಸಿಕೊಂಡು ತಮ್ಮ ಜನ್ಮಭೂಮಿಗೆ ಮರಳಿ ಹೊರ ಉದ್ಯಾನವನದಲ್ಲಿದರು. ಅದನ್ನು ಇಬ್ಬರೂ ಸಮ ಪಾಲು ಮಾಡಿಕೊಳ್ಳೋಣ ಎಂದು ಧರ್ಮಬುದ್ಧಿಯು ಹೇಳಿದಾಗ ಪಾಪ ಬುದ್ಧಿಯಿಂದ ಕೂಡಿದವನಾದ ದುಷ್ಟಬುದ್ಧಿಯು ನಾವು ಇಷ್ಟು ಹೊನ್ನನ್ನು ಮನೆಯಲ್ಲಿಟ್ಟು ಸ್ವೇಚ್ಛೇಯಿಂದ ಬಾಳಲು ಸಾಧ್ಯವಿಲ್ಲ. ಮತ್ತೆ ವ್ಯಾಪಾರಕ್ಕೆ ಬೇರೆ ಊರಿಗೆ ಹೋಗಬೇಕಾದ್ದರಿಂದ ನಮ್ಮಿಬ್ಬರಿಗೂ ವೆಚ್ಚ ಮಾಡಲು ಎಷ್ಟು ಹೊನ್ನು ಬೇಕೋ ಅಷ್ಟು ಹೊನ್ನನ್ನು ತೆಗೆದುಕೊಂಡು ಉಳಿದದ್ದನ್ನು ಇಲ್ಲಿಯೇ ಇಡೋಣ ಎಂದು ಸಲಹೆ ನೀಡಿದನು.

ಉತ್ತರ: ಹೊನ್ನು ಹೇಗೆ ನಾಪತ್ತೆಯಾಯಿತು ಎಂಬುದನ್ನು ಅಲ್ಲಿದ್ದ ವಟವೃಕ್ಷವೊಂದೇ ಹೇಳಲು ಸಾಧ್ಯವೆಂದು ಧರ್ಮಾಧಿಕರಣರು ವೃಕ್ಷ ಸಾಕ್ಷಿಯನ್ನು ಕೇಳುವಂತೆ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದ ದುಷ್ಟಬುದ್ಧಿಯು ತನ್ನ ಮನೆಗೆ ಬಂದು ತನ್ನ ತಂದೆಯ ಕೈಯನ್ನು ಹಿಡಿದು ಯಾರೂ ಇಲ್ಲದಂತಹ ಸ್ಥಳಕ್ಕೆ ಕರೆತಂದು ನಡೆದ ವೃತ್ತಾಂತವೆಲ್ಲವನ್ನು ವಿವರಿಸಿ ಹೇಳಿ ನಿಮ್ಮ ಒಂದು ಮಾತಿನಿಂದ ನಮ್ಮ ಕಷ್ಟಗಳೆಲವೂ ದೂರವಾಗಿ ಹಲವು ಕಾಲದವರೆಗೆ ಹಸಿಯದೆ ಉಂಡು ಬಾಳುವಷ್ಟು ಹಣವು ಬರುವದು. ನೀವು ಆ ಮರದ ಪೊಟರೆಯಲ್ಲಿ ಅಡಗಿದ್ದು ಧರ್ಮಬುದ್ಧಿಯೇ ಹೊನ್ನನ್ನು ಎಲ್ಲವನ್ನು ತೆಗೆದುಕೊಂಡನು ಎಂದು ನುಡಿಯಿರಿ ಎಂದನು.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ:
ಆಯ್ಕೆ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಗುಂಡ್ಮಿ ಚಂದ್ರಶೇಖರ ಐತಾಳರು ಸಂಪಾದಿಸಿರುವ ‘ಕರ್ನಾಟಕ ಪಂಚತಂತಂರ ‘ಎಂಬ ಕೃತಿಯಿಂದ ಆರಿಸಿಕೊಂಡ ‘ವೃಕ್ಷಸಾಕ್ಷಿ’ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಧರ್ಮಬುದ್ಧಿಯು ಧರ್ಮಾಧಿಕರಣರಿಗೆ ಹೇಳಿದನು.

ಸಂದರ್ಭ: ನ್ಯಾಯವನ್ನು ತೀರ್ಮಾನಿಸಲು ವೃಕ್ಷದ ಸಾಕ್ಷಿ ಕೇಳಲು ತೀರ್ಮಾನಿಸಿದಾಗ ದುಷ್ಟಬುದ್ಧಿಯು ತನ್ನ ತಂದೆಯನ್ನು ಮರದ ಪೊಟರೆಯಲ್ಲಿ ಅಡಗಿಸಿಟ್ಟು ಧರ್ಮಾಧಿಕರಣರು ಪ್ರಶ್ನಿಸಿದಾಗ ಧರ್ಮಬುದ್ಧಿಯೇ ಕದ್ದನೆಂದು ತಂದೆಯಿಂದ ಹೇಳಿಸುವನು.ಆದರೆ ವೃಕ್ಷವು ಸತ್ಯವನ್ನೇಕೆ ನುಡಿಯಲಾರದು ಎಂದು ಅನುಮಾನಗೊಂಡ ಧರ್ಮಬುದ್ಧಿಯು ಮರವನ್ನೊಮ್ಮೆ ಸುತ್ತು ಹಾಕಿದಾಗ ಪೊಟರೆಯ ಬಳಿ ಮನುಷ್ಯರ ಕುರುಹನ್ನು ಅರಿತು ಇದರ ಮರ್ಮವನ್ನು ತಿಳಿಯಬೇಕೆಂದು ಧರ್ಮಾಧಿಕರಣರ ಬಳಿ ಈ ಮೇಲಿನಂತೆ ನುಡಿಯುವನು. ವ್ಯಾಪಾರಿ ಬುದ್ಧಿಯಿಂದ ಹೀಗೆ ಮಾಡಿರುವೆನು. ಪೊಟರೆಯಲ್ಲಿ ಅಡಗಿಸಿಟ್ಟ ಹೊನ್ನನ್ನು ಪಡೆಯಲು ಬಂದಾಗ ಅದನ್ನು ಹಾವು ಸುತ್ತಿಕೊಂಡು ಮಲಗಿತ್ತು. ಈಗ ಹೊಗೆ ಹಾಕಿಸಿ ಹಾವನ್ನು ಓಡಿಸುವೆನು ಮತ್ತು ಅಡಗಿಸಿಟ್ಟ ಹೊನ್ನನ್ನು ಮರಳಿ ಪಡೆಯಬಹುದು ಎಂದು ಪೊಟರೆಗೆ ಬೆಂಕಿ ಹಾಕಿಸಿ ಅಡಗಿ ಕುಳಿತ ದುಷ್ಟಬುದ್ಧಿಯ ತಂದೆ ಹೊರಗೆ ಬರುವಂತೆ ಮಾಡಿ ನಿಜ ಸಂಗತಿಯನ್ನು ಬಯಲು ಮಾಡುವನು.

ಸ್ವಾರಸ್ಯ: ವ್ಯಾಪಾರ ವೃತ್ತಿಯಲ್ಲಿ ಕೆಲವೊಮ್ಮೆ ಲಾಭಕ್ಕಾಗಿ ಸುಳ್ಳನ್ನು ಹೇಳುವದು ಅನಿವಾರ್ಯ ಅದರಂತೆ ತಾನೂ ಧರ್ಮಬುದ್ದಿ ವ್ಯಾಪಾರಿಯಾಗಿದ್ದರಿಂದ ಅಧರ್ಮ ಬುದ್ಧಿಯಾದೆನೆಂದು ಹೇಳುವುದು ಈ ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.

ಉತ್ತರ: ಅತಿ ಕುಟಿಲಮನಸ್ಸನ್ನುಳ್ಳ ದುಷ್ಟಬುದ್ಧಿಯು ಧರ್ಮಬುದ್ಧಿ ಮತ್ತು ತಾನು ಇಬ್ಬರೂ ಸೇರಿ ಸಂಪಾದಿಸಿದ ಸಂಪತ್ತನ್ನು ಮನೆಗೆ ತೆಗೆದುಕೊಂಡು ಹೋಗಲು ಬಿಡದೆ ಅದನ್ನು ಮರದ ಕೆಳಗೆ ಹೂತಿಡಲು ಧರ್ಮಬುದ್ಧಿಯನ್ನು ಒಪ್ಪಿಸುವಲ್ಲಿ ಯಶಸಸ್ವಿಯಾಗುತ್ತಾನೆ. ಧರ್ಮಬುದ್ಧಿಗೆ ಗೊತ್ತಾಗದ ಹಾಗೆ ಹೂತಿಟ್ಟಿದ್ದ ಹೊನ್ನನ್ನು ತಾನೇ ತೆಗೆದು ಅದರ ಕಳುವಿನ ಆರೋಪವನ್ನು ಧರ್ಮಬುದ್ಧಿಯ ಮೇಲೆ ಹೊರಿಸುತ್ತಾನೆ ಕೊನೆಗೆ ಇಬ್ಬರೂ ಧರ್ಮಾಧಿಕರಣರಲ್ಲಿಗೆ ಬಂದು ಜಗಳ (ವ್ಯಾಜ್ಯ) ತೀರ್ಮಾನಿಸುವಂತೆ ಕೇಳಿಕೊಳ್ಳುತ್ತಾರೆ. ನಡೆದುದೆಲ್ಲವನ್ನು ವಿವರಿಸಿ ಧರ್ಮಬುದ್ಧಿಯೇ ಹೊನ್ನನ್ನು ಕದ್ದಿದ್ದಾನೆಂದು ಹೇಳುವ ದುಷ್ಟಬುದ್ಧಿಯು ಅದಕ್ಕೆ ಅಲ್ಲಿಯೆ ಇದ್ದ ಮರವೇ ಸಾಕ್ಷಿ ಎನ್ನುವನು. ಮರುದಿನ ಮರದ ಬಳಿ ಸಾಕ್ಷಿ ಕೇಳಲು ಹೋಗುವುದೆಂದು ತೀರ್ಮಾನವಾದಾಗ ಮನೆಗೆ ಬಂದ ದುಷ್ಟಬುದ್ಧಿಯು ತನ್ನ ತಂದೆಯ ಬಳಿ ಮರದ ಪೊಠರೆಯಲ್ಲಿ ಅವಿತು ಸಾಕ್ಷಿ ನುಡಿಯುವಂತೆ ಒತ್ತಾಯಿಸುತ್ತಾನೆ. ಒಲ್ಲದ ಮನಸ್ಸಿನಿಂದ ಅವನ ತಂದೆಯು ಮಗನ ಮೇಲಿನ ವ್ಯಾಮೋಹಕ್ಕೆ ಕಟ್ಟು ಬಿದ್ದು ಮರುದಿನ ಎಲ್ಲರೂ ಬರುವುದಕ್ಕೆ ಮುಂಚೆಯೇ ಮರದ ಪೊಠರೆಯೊಳಗೆ ಅವಿತು ಕುಳಿತುಕೊಳ್ಳುವನು. ಧರ್ಮಾಧಿಕರಣರು ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯರನ್ನು ನಿಲ್ಲಿಸಿ ವೃಕ್ಷದ ಸಾಕ್ಷಿ ಕೇಳಿದಾಗ ಪೊಠರೆಯಲ್ಲಿ ಅವಿತಿದ್ದ ದುಷ್ಟಬುದ್ಧಿಯ ತಂದೆಯು ಧರ್ಮಬುದ್ಧಿಯೇ ಹೊನ್ನನ್ನು ಕದ್ದಿರುವನೆಂದಾಗ ಮರವು ಸಾಕ್ಷಿ ನುಡಿಯುವುದೇ ಆದಲ್ಲಿ ಅದು ಸತ್ಯವನ್ನು ಹೇಳದೆ ಏಕೆ ಸುಳ್ಳು ನುಡಿಯುವುದು ಎಂದು ಆಲೋಚಿಸಿದ ಧರ್ಮಬುದ್ಧಿಯು ಮರವನ್ನು ಪ್ರದಕ್ಷಿಣೆ ಹಾಕಿದಾಗ ಅಲ್ಲಿ ಮನುಷ್ಯ ಸಂಚಾರದ ಕುರುಹು ದೊರೆಯುತ್ತದೆ. ಆಗ ಧರ್ಮಬುದ್ಧಿಯು ಉಪಾಯವಾಗಿ ಎಲ್ಲ ವ್ಯಾಪಾರಿಗಳಿಗಿರುವಂತೆ ತನಗೂ ಕೂಡ ಹಣದ ಮೋಹವಿದ್ದುದ್ದಾಗಿ ಹೂತಿಟ್ಟ ಹಣವನ್ನು ತೆಗೆಯಲು ಬಂದು ಅದನ್ನು ಮನೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಬೆಳಗಾಗಿದ್ದರಿಂದ ಪೊಠರೆಯಲ್ಲಿ ಅಡಗಿಸಿಟ್ಟಿದ್ದಾಗಿಯೂ ಮರುದಿನ ತೆಗೆದುಕೊಂಡು ಹೋಗಲು ಬಂದಾಗ ಅಲ್ಲಿ ದೊಡ್ಡದಾದ ಹಾವು ಇತ್ತೆಂದು ಅದನ್ನು ಅಲ್ಲಿ ಹಾಗೆಯೇ ಅಲ್ಲಿಯೇ ಬಿಟ್ಟು ಹೊಗಿದ್ದಾಗಿ ತಿಳಿಸಿ ಕಟ್ಟಿಗೆಗಳನ್ನು ತರಿಸಿ ಪೊಠರೆಗೆ ಹೊಗೆ ಹಾಕಿಸಿ ಹಾವನ್ನು ಒಡಿಸಿ ಅಡಗಿಸಿಟ್ಟ ಹೊನ್ನನ್ನು ಮರಳಿಸುವಂತೆ ಮಾಡಿದಾಗ ಪೊಠರೆಯಲ್ಲಿ ಅಡಗಿ ಕುಳಿತಿದ್ದ ದುಷ್ಟಬುದ್ಧಿಯ ತಂದೆ ಬೆಂಕಿಗೆ ಆಹುತಿಯಾಗುತ್ತಾನೆ. ಹೀಗೆ ಅತಿ ಆಸೆಗೆ ದುಷ್ಟಬುದ್ಧಿಯು ತಾನು ಬೀಸಿದ ಬಲೆಯಲ್ಲಿ ತಾನೇ ಸಿಕ್ಕು ಹೊನ್ನಿನ ಜೊತೆ ತನ್ನ ತಂದೆಯನ್ನು ಕಳೆದುಕೊಳ್ಳುತ್ತಾನೆ.