SSLC Kannada: ಪದ್ಯ: ವೀರಲವ | ಪೂರ್ಣ ಪ್ರಶ್ನೋತ್ತರಗಳು

SSLC ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗಾಗಿ ಲಕ್ಷ್ಮೀಶ ಕವಿಯ 'ವೀರಲವ' ಪದ್ಯದ ಪೂರ್ಣ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

SSLC Kannada: ಪದ್ಯ ​ಪಾಠ: ವೀರಲವ | ಮಾದರಿ ಪ್ರಶ್ನೋತ್ತರಗಳು

ಪದ್ಯ: ವೀರಲವ

ಕೃತಿಕಾರರು: ಲಕ್ಷ್ಮೀಶ

ಕವಿ ಕೃತಿ ಪರಿಚಯ:

ಕವಿ ಲಕ್ಷ್ಮೀಶ ಕ್ರಿ.ಶ 1550 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನಲ್ಲಿ ಜನಿಸಿದನು. ಈತನಿಗೆ ಲಕ್ಷ್ಮೀರಮಣ, ಲಕ್ಷ್ಮೀಪತಿ ಎಂಬ ಹೆಸರುಗಳೂ ಇವೆ. ಇವರು ಪ್ರಸಿದ್ಧ ಕಾವ್ಯ “ಜೈಮಿನಿ ಭಾರತ”ವನ್ನು ಬರೆದಿದ್ದಾರೆ. ಇವರಿಗೆ 'ಉಪಮಾಲೋಲ', 'ಕರ್ಣಾಟ ಕವಿ ಚೂತವನ ಚೈತ್ರ' ಎಂಬ ಬಿರುದುಗಳಿವೆ.

ಪದಗಳ ಅರ್ಥ

ಪದ ಅರ್ಥ
ಅಂಜಿಹೆದರಿ
ಅಬ್ದಿಪವರುಣ (ಸಮುದ್ರದೊಡೆಯ)
ಉಪವನಉದ್ಯಾನವನ
ಕದಳಿಬಾಳೆ
ತುರಂಗ / ವಾಜಿಕುದುರೆ
ನೆತ್ತಿಹಣೆ
ಉರ್ವಿಭೂಮಿ
ಮುಳಿಕೋಪ

ಅ) ಒಂದು ವಾಕ್ಯದಲ್ಲಿ ಉತ್ತರಿಸಿ

ಉತ್ತರ: ‘ಜೈಮಿನಿ ಭಾರತ’ ಕಾವ್ಯವನ್ನು ಬರೆದ ಕವಿ ಲಕ್ಷ್ಮೀಶ.

ಉತ್ತರ: ಯಜ್ಞಾಶ್ವವನ್ನು ಕಟ್ಟಿದವರು ಲವ.

ಉತ್ತರ: ಕುದುರೆಯನ್ನು ಲವನು ತನ್ನ ಉತ್ತರೀಯದಿಂದ (ಹೆಗಲ ಮೇಲಿನ ವಸ್ತ್ರ) ಕಟ್ಟಿದನು.

ಉತ್ತರ: ಲವನು ಯಜ್ಞದ ಕುದುರೆಯನ್ನು ಕಟ್ಟಿ ಹಾಕಿದ್ದರಿಂದ ಅರಸರು ಬಂದು ನಮ್ಮನ್ನು ಬಡಿಯಬಹುದು ಎಂದು ಮುನಿಸುತರು ಹೆದರಿದರು.

ಉತ್ತರ: ವಾಲ್ಮೀಕಿ ಋಷಿಗಳು ವರುಣ ದೇವನ (ಅಬ್ದಿಪನ) ಲೋಕಕ್ಕೆ ಹೋಗಿದ್ದರು.

ಆ) ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ

ಉತ್ತರ: ಶ್ರೀರಾಮನ ಅಶ್ವಮೇಧ ಯಜ್ಞದ ಕುದುರೆಯು ಭೂಮಿಯ ಮೇಲೆ ಸಂಚರಿಸುತ್ತಾ, ವಾಲ್ಮೀಕಿ ಆಶ್ರಮದ ಉದ್ಯಾನವನದ ಹಸಿರನ್ನು ಬಯಸಿ ಒಳಗೆ ಪ್ರವೇಶಿಸಿತು. ಭುಜಬಲವುಳ್ಳ ಇತರ ದೊರೆಗಳೆಲ್ಲರೂ ಶ್ರೀರಾಮನ ಆಜ್ಞೆಗೆ ಹೆದರಿ ಕುದುರೆಗೆ ನಮಸ್ಕರಿಸಿ ಅದನ್ನು ಬಿಟ್ಟು ಕಳುಹಿಸಿದ್ದರು.

ಉತ್ತರ: ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ “ಭೂಮಂಡಲದಲ್ಲಿ ಕೌಸಲ್ಯೆ ಪಡೆದ ಕುಮಾರ ಶ್ರೀರಾಮನೊಬ್ಬನೇ ವೀರನು. ಆತನ ಯಜ್ಞದ ಕುದುರೆ ಇದು. ಇದನ್ನು ನಿರ್ವಹಿಸಲು ಸಮರ್ಥರಾದವರು ಯಾರಾದರೂ ಇದ್ದರೆ ತಡೆಯಲಿ” ಎಂದು ಬರೆಯಲಾಗಿತ್ತು.

ಉತ್ತರ: ಲವನು ಕುದುರೆಯನ್ನು ಕಟ್ಟಿದಾಗ ಮುನಿಸುತರು ಹೆದರಿ, "ಈ ಕುದುರೆಯನ್ನು ಕಟ್ಟಬೇಡ, ಅರಸರು ಬಂದು ನಮ್ಮನ್ನು ಶಿಕ್ಷಿಸುತ್ತಾರೆ, ಕೂಡಲೇ ಅದನ್ನು ಬಿಟ್ಟುಬಿಡು" ಎಂದು ಲವನಿಗೆ ಹೇಳಿದರು. ಅದಕ್ಕೆ ಲವನು ಅಂಜದೆ, ಈ ಕುದುರೆಯು ನಮ್ಮ ತೋಟವನ್ನು ಹಾಳುಮಾಡುತ್ತಿದೆ ಮತ್ತು ಇದರ ಮೇಲಿರುವ ಅಹಂಕಾರದ ಬರಹವನ್ನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದು ಉತ್ತರಿಸಿದನು.

ಇ) ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ

ಉತ್ತರ: ಶ್ರೀರಾಮನ ಯಜ್ಞದ ಕುದುರೆಯು ವಾಲ್ಮೀಕಿ ಋಷಿಗಳ ಹೂತೋಟವನ್ನು ತುಳಿದು ಹಾಳುಮಾಡುತ್ತಿತ್ತು. ಅದರ ಹಣೆಯ ಮೇಲಿದ್ದ ಪಟ್ಟಿಯಲ್ಲಿ ಶ್ರೀರಾಮನೊಬ್ಬನೇ ವೀರನೆಂಬ ಅಹಂಕಾರದ ಬರಹವಿತ್ತು. ಈ ಬರಹವನ್ನು ಓದಿದ ಲವನಿಗೆ ತನ್ನ ತಾಯಿಯ ಮತ್ತು ಸ್ವತಃ ತನ್ನ ವೀರತ್ವಕ್ಕೆ ಸವಾಲು ಹಾಕಿದಂತೆ ಅನ್ನಿಸಿತು. ಈ ಅಹಂಕಾರವನ್ನು ಅಡಗಿಸದಿದ್ದರೆ ತನ್ನ ಭುಜಬಲಕ್ಕೆ ಬೆಲೆ ಇಲ್ಲವೆಂದು ಮತ್ತು ತನ್ನ ತಾಯಿಯನ್ನು ಜನರು ಬಂಜೆ ಎಂದು ಕರೆಯಬಹುದು ಎಂದು ಭಾವಿಸಿದ ಲವನು ಕುದುರೆಯನ್ನು ಹಿಡಿದು ಬಾಳೆಯ ಗಿಡಕ್ಕೆ ಕಟ್ಟಿದನು.

ಉತ್ತರ: ಹೌದು, ಲವನ ನಡೆವಳಿಕೆಯು ಮೆಚ್ಚುಗೆಯಾಗುತ್ತದೆ. ಏಕೆಂದರೆ ಆತ ಚಿಕ್ಕವನಾಗಿದ್ದರೂ ಅಪ್ರತಿಮ ವೀರನಾಗಿದ್ದಾನೆ. ಅನ್ಯಾಯದ ಅಥವಾ ಅಹಂಕಾರದ ಬರಹವನ್ನು ಕಂಡಾಗ ಅದನ್ನು ಪ್ರತಿಭಟಿಸುವ ಧೈರ್ಯ ಅವನಲ್ಲಿದೆ. ತನ್ನ ತಾಯಿಯ ಗೌರವಕ್ಕಾಗಿ ಮತ್ತು ತನ್ನ ಶೌರ್ಯದ ಪ್ರದರ್ಶನಕ್ಕಾಗಿ ಬಲಿಷ್ಠ ಸೈನ್ಯವನ್ನು ಎದುರಿಸಲು ಸಿದ್ಧನಾಗುವುದು ಅವನ ಕ್ಷಾತ್ರತೇಜಸ್ಸನ್ನು ಎತ್ತಿ ತೋರಿಸುತ್ತದೆ. ತೋಟದ ರಕ್ಷಣೆಯ ಹೊಣೆ ಹೊತ್ತ ಆತ ಕರ್ತವ್ಯನಿಷ್ಠನಾಗಿ ಕುದುರೆಯನ್ನು ತಡೆದು ನಿಲ್ಲಿಸಿದ್ದು ಅವನ ದೃಢತೆಯನ್ನು ತೋರಿಸುತ್ತದೆ.

ಈ) ಸಂದರ್ಭಸಹಿತ ಸ್ವಾರಸ್ಯ ವಿವರಿಸಿ

ಉತ್ತರ: ಶ್ರೀರಾಮನ ಅಶ್ವಮೇಧ ಯಜ್ಞದ ಕುದುರೆಯ ಪ್ರಭಾವ ಎಷ್ಟಿತ್ತೆಂದರೆ, ಭೂಮಿಯ ಮೇಲಿದ್ದ ಬಲಿಷ್ಠ ರಾಜರೆಲ್ಲರೂ ರಾಮನ ಆಜ್ಞೆಗೆ ಹೆದರಿ ಕುದುರೆಗೆ ನಮಸ್ಕರಿಸಿ ಅದನ್ನು ಬಿಟ್ಟು ಕಳುಹಿಸುತ್ತಿದ್ದರು ಎಂಬುದು ಇಲ್ಲಿನ ಸಂದರ್ಭ ಮತ್ತು ಸ್ವಾರಸ್ಯ.

ಉತ್ತರ: ಲವನು ಕುದುರೆಯ ಹಣೆಯ ಮೇಲಿನ ಬರಹವನ್ನು ಓದಿದಾಗ, ಇಂತಹ ಅಹಂಕಾರವನ್ನು ನಾನು ಅಡಗಿಸದಿದ್ದರೆ ಜನರು ನನ್ನ ತಾಯಿಯನ್ನು ವೀರ ಪುತ್ರನನ್ನು ಹೊಂದದ ಬಂಜೆ ಎಂದು ಕರೆಯುವುದಿಲ್ಲವೇ? ಎಂದು ತನ್ನ ಶೌರ್ಯವನ್ನು ಪ್ರಚೋದಿಸಿಕೊಳ್ಳುವ ಸಂದರ್ಭ ಇದಾಗಿದೆ.

ಉತ್ತರ: ಲವನು ಕುದುರೆಯನ್ನು ಕಟ್ಟಿದಾಗ ಹೆದರಿದ ಮುನಿಸುತರು, ಇದು ಸಾಮಾನ್ಯ ಕುದುರೆಯಲ್ಲ ಅರಸರ ಯಜ್ಞದ ಕುದುರೆ, ನಮಗೆ ಸಂಕಷ್ಟ ತರಬೇಡ ಕೂಡಲೇ ಇದನ್ನು ಬಿಟ್ಟುಬಿಡು ಎಂದು ಲವನಿಗೆ ಹೇಳುವ ಸಂದರ್ಭ ಇದಾಗಿದೆ.

ಉತ್ತರ: ಸೈನ್ಯದವರ ಆರ್ಭಟ ಮತ್ತು ಎಚ್ಚರಿಕೆಗೆ ಲವನು ಕಿವಿಗೊಡದೆ, ತಾನು ಸೀತೆಯ (ಜಾನಕಿಯ) ಮಗನೆಂದೂ ಇಂತಹ ಬೆದರಿಕೆಗಳಿಗೆ ತಾವು ಎದೆಗುಂದುವುದಿಲ್ಲ ಎಂದೂ ಸಾರಿ ಹೇಳುವ ವೀರಾವೇಶದ ಸಂದರ್ಭ ಇದಾಗಿದೆ.

ಉ) ಹೊಂದಿಸಿ ಬರೆಯಿರಿ

೧. ದೇವನೂರುಲಕ್ಷ್ಮೀಶ
೨. ಕೌಸಲ್ಯೆರಾಮ
೩. ವರುಣಅಬ್ಬಿಪ
೪. ವಾಲ್ಮೀಕಿಮುನಿ
೫. ತುರಂಗಅಶ್ವ

You May Also Like 👇

Loading...

Post a Comment

Previous Post Next Post