ಭಾರತಕ್ಕೆ ಯುರೋಪಿಯನ್ನರ ಆಗಮನ

ಒಂದು ಅಂಕದ ಪ್ರಶ್ನೆಗಳು

ಉತ್ತರ: ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರತರದ ತೆರಿಗೆಗಳನ್ನು ವಿಧಿಸಿದ್ದು.

ಉತ್ತರ: ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಲಾರಂಭಿಸಿದರು.

ಉತ್ತರ: ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು.

ಉತ್ತರ: 1453 ರಲ್ಲಿ ಆಟೋಮನ್ ಟರ್ಕರು ಕಾನ್ ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.

ಉತ್ತರ: ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾ ಶಕ್ತಿಯನ್ನು ಬಲಪಡಿಸುವ ಉದ್ದೇಶದಿಂದ.

ಉತ್ತರ: ಸಾ.ಶ. 1510 ರಲ್ಲಿ ಬಿಜಾಪುರದ ಸುಲ್ತಾನದಿಂದ ಗೋವಾವನ್ನು ಗೆದ್ದುಕೊಂಡು ಪೋರ್ಚುಗೀಸರ ಆಡಳಿತ ಕೇಂದ್ರವಾಗಿ ಪರಿವರ್ತಿಸಿದನು.

ಉತ್ತರ: ಪೂರ್ವ ದೇಶಗಳಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ.

ಉತ್ತರ: ಇಂಗ್ಲೀಷರು ಮತ್ತು ಫ್ರೆಂಚರ ಪೈಪೋಟಿಯನ್ನು ಎದುರಿಸಲಾರದೆ

ಉತ್ತರ: ದಕ್ಷಿಣ ಭಾರತದಲ್ಲಿ ಫ್ರೆಂಚರ ಅಧಿಪತ್ಯವನ್ನು ಸ್ಥಾಪಿಸುವುದು.

ಉತ್ತರ: ಪೋರ್ಚುಗೀಸರ ಯಶಸ್ವಿ ಪ್ರಯತ್ನಗಳಿಂದ ಪ್ರೇರಣೆಗೊಂಡರು.

ಉತ್ತರ: ಡಚ್ ಮತ್ತು ಇಂಗ್ಲೀಷರ ಆಗಮನ

ಉತ್ತರ: ದಕ್ಷಿಣ ಭಾರತದಲ್ಲಿ ತಮ್ಮ ರಾಜಕೀಯ ಪ್ರಭಾವವನ್ನು ಉಳಿಸಿಕೊಳ್ಳುವ ಸಲುವಾಗಿ.

ಉತ್ತರ: ಕೃಷಿ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಬಂಗಾಳ ಪ್ರಾಂತ್ಯವು ಸಮೃದ್ಧ ಬೆಳವಣಿಗೆ ಹೊಂದಿತ್ತು.

ಉತ್ತರ: ದಸ್ತಕಗಳನ್ನು ಕಂಪನಿಯ ನೌಕರರು ತಮ್ಮ ಖಾಸಗಿ ವ್ಯಾಪಾರ-ವ್ಯವಹಾರಕ್ಕಾಗಿ ದುರುಪಯೋಗ ಪಡಿಸಿಕೊಳ್ಳತೊಡಗಿದರು.

ಉತ್ತರ: ಲಾಬೋರ್ಡಿನನು ಡೂಪ್ಲೆಗೆ ತಿಳಿಸದೆ ಬ್ರಿಟಿಷರಿಂದ ಹಣ ಪಡೆದು ಮದ್ರಾಸ್ ನ್ನು ಬಿಟ್ಟುಕೊಟ್ಟು ಮಾರಿಷಸ್ ಗೆ ಹೊರಟು ಹೋದನು.

ಉತ್ತರ: ಎರಡನೇಯ ಕಾರ್ನಾಟಿಕ್ ಯುದ್ಧದಲ್ಲಿ ಫ್ರೆಂಚರಿಗೆ ಆದ ಸೋಲು.

ಉತ್ತರ: ಮೀರ್ ಖಾಸಿಂ ದಸ್ತಕ್ ನ ದುರ್ಬಳಕೆಯನ್ನು ಪರಿಶೀಲಿಸಿ ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕ ಮುಕ್ತ ಎಂದು ಘೋಷಿಸಿದನು.

ಉತ್ತರ: ಸಲಾಬತ್ ಜಂಗನ ರಕ್ಷಣೆಗಾಗಿ

ಉತ್ತರ: ಬ್ರಿಟಿಷರು ಮೀರ್ ಜಾಫರನಿಗೆ ನವಾಬನನ್ನಾಗಿ ಮಾಡುವ ಆಮಿಷಮೊಡ್ಡಿದ್ದರಿಂದ.

ಉತ್ತರ: ಬ್ರಿಟಿಷರು ಮೀರ್ ಜಾಫರ್ ಅಸಮರ್ಥನೆಂದು ಬಿಂಬಿಸಿ

ಎರಡು ಅಂಕದ ಪ್ರಶ್ನೆಗಳು

ಉತ್ತರ:
 1453 ರಲ್ಲಿ ಆಟೋಮನ್ ಟರ್ಕರು ಕಾನಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.
 ಆ ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು.
 ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರವಾದ ತೆರಿಗೆಯನ್ನು ವಿಧಿಸತೊಡಗಿದರು.
 ವರ್ತಕರಿಗೆ ಈ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ.

ಉತ್ತರ:
 ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಕಾನಸ್ಟಾಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು.
 ಅಲ್ಲಿಂದ ಇಟಲಿಯ ವರ್ತಕರು ಅವುಗಳನ್ನು ಕೊಂಡು ಯುರೋಪಿನ ದೇಶಗಳಲ್ಲಿ ಮಾರುತ್ತಿದ್ದರು.

ಉತ್ತರ:
 ಸ್ಫೇನ್, ಪೋರ್ಚುಗಲ್ ಮೊದಲಾದ ಯುರೋಪಿನ ದೇಶಗಳ ರಾಜರು ಸಾಹಸಿ ನಾವಿಕರನ್ನು ಪ್ರೊತ್ಸಾಹಿಸಲಾರಂಭಿಸಿದರು.
 ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ, ಆಸ್ಟ್ರೋಲೋಬ್, ಸಿಡಿಮದ್ದು ಮೊದಲಾದವುಗಳು ನೆರವಿಗೆ ಬಂದವು.

ಉತ್ತರ: ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರಿಗೆ ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ, ಆಸ್ಟ್ರೋಲೋಬ್, ಸಿಡಿಮದ್ದು ಮೊದಲಾದವುಗಳು ಸಹಕಾರಿಯಾದವು.

ಉತ್ತರ: ಲಿಸ್ಟನ್ ನಿಂದ ಹೊರಟ ಪೋರ್ಚುಗಲ್ ನಾವಿಕ ವಾಸ್ಕೋಡಗಾಮನು 1498 ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ‘ಕಾಪ್ಪಡ್’ ಎಂಬಲ್ಲಿಗೆ ಬಂದು ತಲುಪಿದನು.

ಉತ್ತರ:
 ಸಾ.ಶ. 1602 ರಲ್ಲಿ ಡಚ್ಚರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದರು.
 ಭಾರತದಲ್ಲಿ ಸೂರತ್, ಬ್ರೋಚ್, ಕ್ಯಾಂಬೆ, ಕೊಚ್ಚಿನ್, ನಾಗಪಟ್ಟಣ, ಮಚಲೀಪಟ್ಟಣ, ಚಿನ್ಸೂರ್ ಮೊದಲಾದ ಕಡೆಗಳಲ್ಲಿ ತಮ್ಮ ಕೋಠಿಗಳನ್ನು ಸ್ಥಾಪಿಸಿಕೊಂಡರು.

ಉತ್ತರ:
 ನವಾಬನ ವಿರೋಧಿಗಳಾದ ಮಾಣಿಕ್ ಚಂದ್, ಓಮೀಚಾಂದಾ, ಜಗತ್ ಸೇಠ್ ಮೊದಲಾದ ಶ್ರೀಮಂತರನ್ನು ತನ್ನತ್ತ ಸೆಳೆದುಕೊಂಡನು.
 ಸಿರಾಜನ ಸೇನಾಪತಿಯಾದ ಮೀರ್ ಜಾಫರನಿಗೆ ನವಾಬನನ್ನಾಗಿ ಮಾಡುವ ಆಮಿಷವೊಡ್ಡಿ ಯುದ್ಧದಲ್ಲಿ ತಟಸ್ಥವಾಗಿರಲು ರಾಜ್ಯವನ್ನು ಒಪ್ಪಿಸಿದನು.

ಉತ್ತರ: ಸಿರಾಜನ ಸೇನಾಪತಿಯಾದ ಮೀರ್ ಜಾಫರನಿಗೆ ಬ್ರಿಟಿಷರು ಯುದ್ಧದಲ್ಲಿ ತಟಸ್ಥವಾಗಿದ್ದರೆ ಬಂಗಾಳದ ನವಾಬನನ್ನಾಗಿ ಮಾಡುವುದಾಗಿ ಆಮಿಷವೊಡ್ಡಿದ್ದರು, ಅದರಂತೆ ಯುದ್ಧದ ನಂತರ ಬಂಗಾಳದ ನವಾಬನನ್ನಾಗಿ ಮಾಡಿದರು.

ಉತ್ತರ:
 ಮೀರ್ ಖಾಸಿಂ ತನ್ನನ್ನು ಸ್ವತಂತ್ರ ರಾಜನೆಂದು ಭಾವಿಸಿದನು.
 ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕಮುಕ್ತ ಎಂದು ಘೋಷಿಸಿದನು.
 ಭಾರತೀಯರು ಸುಂಕವಿಲ್ಲದೆ ವ್ಯಾಪಾರ ನಡೆಸುವ ಮೂಲಕ ಬ್ರಿಟಿಷರೊಡನೆ ನೇರ ಸ್ಪರ್ಧೆಗಿಳಿದರು.
 ಬ್ರಿಟಿಷರ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿತು.

ಉತ್ತರ:
 ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ‘ದಿವಾನಿ’ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು.
 ಷಾ ಆಲಂ ಬಂಗಾಳದ ಮೇಲಿನ ತನ್ನ ಹಕ್ಕನ್ನೆಲ್ಲ ಬಿಟ್ಟುಕೊಡಬೇಕಾಯಿತು.
 ಯುದ್ಧ ನಷ್ಟ ಪರಿಹಾರವಾಗಿ ಷೂಜ್-ಉದ್-ದೌಲನು 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು.
 ಮೀರ್ ಜಾಫರ್ನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಆಡಳಿತ ಕಂಪನಿಯು ನಿರ್ವಹಿಸತೊಡಗಿತು.

ಉತ್ತರ:
ಬ್ರಿಟಿಷರು ಭೂಕಂದಾಯ ವಸೂಲಿ ಮಾಡುವ ಹಕ್ಕನ್ನು ಹೊಂದಿದ್ದರು. ನವಾಬನು ಆಡಳಿತ, ನ್ಯಾಯ ಮೊದಲಾದ ಆಡಳಿತಾತ್ಮಕ ಕಾರ್ಯ ನಿರ್ವಹಿಸುತ್ತಿದ್ದನು.
ರಾಬರ್ಟ್ ಕ್ಲೈವ್

ಉತ್ತರ:
 ಬಕ್ಸಾರ್ ಕದನವು ಬ್ರಿಟಿಷರು ಬಂಗಾಳದ ನಿಜವಾದ ಒಡೆಯರೆಂದು ದೃಢೀಕರಿಸಿತು.
 ಔದ್ ಕೂಡ ಅವರ ಅಧೀನದಲ್ಲಿ ಉಳಿಯುವಂತಾಯಿತು.
 ರಾಬರ್ಟ್ ಕ್ಲೈವ್ ಬಂಗಾಳದಲ್ಲಿ ‘ದ್ವಿ ಪ್ರಭುತ್ವ’ ಪದ್ಧತಿಯನ್ನು ಜಾರಿಗೊಳಿಸಿದನು.
 ಬ್ರಿಟಿಷರು ತಮ್ಮ ವಾಣಿಜ್ಯ ಹಿತಾಸಕ್ತಿ ಕಾಪಾಡಿಕೊಳ್ಳುವ ಸಲುವಾಗಿ ರಾಜಕೀಯ ಪರಮಾಧಿಕಾರ ಸ್ಥಾಪಿಸಿದರು.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

$ads={2}

ಉತ್ತರ:
 ಲಾಬೋರ್ಡಿನನು ಬ್ರಿಟಿಷರಿಂದ ಹಣ ಪಡೆದು ಮದ್ರಾಸ್ ನ್ನು ಬಿಟ್ಟುಕೊಟ್ಟನು.
 ಡೂಪ್ಲೆಯು ಮದ್ರಾಸ್ ನ್ನು ಮತ್ತೆ ಪಡೆಯುವ ವಿಫಲ ಪ್ರಯತ್ನ ನಡೆಸಿದನು.
 ಕಾರ್ನಾಟಿಕ್ ಯುದ್ಧವು ಫ್ರೆಂಚರಿಗೆ ರಾಜಕೀಯ ಹಿನ್ನಡೆಯನ್ನು ಬ್ರಿಟಿಷರಿಗೆ ಪ್ರತಿಷ್ಠೆಯನ್ನು ತಂದುಕೊಟ್ಟಿತು.
 ಫ್ರೆಂಚರು ಭಾರತದಲ್ಲಿ ತಮ್ಮ ಎಲ್ಲಾ ನೆಲೆಗಳನ್ನು ಕಳೆದುಕೊಂಡರು.
 ದಕ್ಷಿಣ ಭಾರತದಲ್ಲಿ ಫ್ರೆಂಚರು ಮೂಲೆ ಗುಂಪಾದರು.

ಉತ್ತರ:
ಪ್ಲಾಸಿ ಕದನಕ್ಕೆ ಕಾರಣಗಳು:
 ದಸ್ತಕ್ ಗಳ ದುರುಪಯೋಗ
 ಅನುಮತಿ ಇಲ್ಲದೆ ಕೋಟೆಯ ದುರಸ್ಥಿ
 ಕಪ್ಪು ಕೋಣೆ ದುರಂತ
ಪ್ಲಾಸಿ ಕದನದ ಪರಿಣಾಮಗಳು –
 ಈ ಯುದ್ಧವು ಭಾರತೀಯರಲ್ಲಿದ್ದ ಅನೈತಿಕ, ಅಸಂಘಟನೆ ಮತ್ತು ಈ ಕಾಲದ ವ್ಯಾಪಾರಿ ವರ್ಗದಲ್ಲಿದ್ದ ಲೋಭಿತನವನ್ನು ಪ್ರದರ್ಶಿಸಿತು.
 ಮೀರ್ ಜಾಫರ್ ಬಂಗಾಳದ ನವಾಬನಾದನು.
 ಕಂಪನಿಯು ಬಂಗಾಳ ಪ್ರಾಂತ್ಯದಲ್ಲಿ ವ್ಯಾಪಾರ ನಡೆಸಲು ಅನಿರ್ಬಂಧಿತ ಹಕ್ಕನ್ನು ಪಡೆಯಿತು.
 ಮೀರ್ ಜಾಫರನು ಕಂಪನಿಗೆ 17 ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ನೀಡಿದನು.

ಉತ್ತರ:
ಬಕ್ಸಾರ ಕದನಕ್ಕೆ ಕಾರಣಗಳು:
 ಬ್ರಿಟಿಷರು ಮೀರ್ ಖಾಸಿಂನನ್ನು ಇಳಿಸಿ ಮೀರ್ ಜಾಫರ್ ನನ್ನು ಬಂಗಾಳದ ನವಾಬನನ್ನಾಗಿ ಮಾಡಿದರು.
 ಭಾರತೀಯ ವ್ಯಾಪಾರಿಗಳು ಮತ್ತು ವಿವಿಧ ಕಸುಬುದಾರರು ಅವನ ಬೆಂಬಲಕ್ಕೆ ನಿಂತರು.
 ಮೀರ್ ಖಾಸಿಂನು ಎರಡನೇ ಷಾ ಆಲಂ ಮತ್ತು ಷೋಜ-ಉದ್-ದೌಲನೊಂದಿಗೆ ಒಪ್ಪಂದ ಮಾಡಿಕೊಂಡನು.
ಬಕ್ಸಾರ ಕದನದ ಪರಿಣಾಮಗಳು
 ಬಂಗಾಳದ ಮೇಲಿನ ‘ದಿವಾನಿ’ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು.
 ಷಾ ಆಲಂ ವಾರ್ಷಿಕ 26 ಲಕ್ಷ ರೂಪಾಯಿಗಳನ್ನು ಪಡೆದು ಬಂಗಾಳದ ಮೇಲಿನ ತನ್ನ ಹಕ್ಕನ್ನೆಲ್ಲ ಬಿಟ್ಟುಕೊಡಬೇಕಾಯಿತು.
 ಷೂಜ್-ಉದ್-ದೌಲನು ಕಂಪನಿಗೆ ಯುದ್ಧ ನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು.
 ಮೀರ್ ಜಾಫರನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಪೂರ್ಣ ಆಡಳಿತವನ್ನು ಕಂಪನಿಯು ನಿರ್ವಹಿಸತೊಡಗಿತು.

ಉತ್ತರ:
 ಜಹಾಂಗೀರನು ಸೂರತ್ ನಲ್ಲಿ ಮೊದಲ ದಾಸ್ತಾನು ಮಳಿಗೆಯನ್ನು ಸ್ಥಾಪಿಸಲು ಫರ್ಮಾನ್ ನೀಡಿದನು.
 ಜಹಾಂಗೀರನಿಂದ ಸರ್. ಥಾಮಸ್ ರೋ ಮೊಘಲ್ ಸಾಮ್ರಾಜ್ಯದ ಕೆಲವೆಡೆಗಳಲ್ಲಿ ಫ್ಯಾಕಟ್ರಿಗಳನ್ನು ಸ್ಥಾಪಿಸಲು ಅನುಮತಿ ಪಡೆದನು.
 ಚಂದ್ರಗಿರಿಯ ರಾಜನಿಂದ ಮದ್ರಾಸ್ ನಲ್ಲಿ ಭೂಮಿಯನ್ನು ಪಡೆದು ಸೆಂಟ್ ಜಾರ್ಜ್ ಫೋರ್ಟ್ ಎಂಬ ಬಲಿಷ್ಠ ಕೋಟೆಯನ್ನು ಕಟ್ಟಿದನು.
 ಸುತನುತಿ, ಕಲ್ಕತ್ತ ಮತ್ತು ಗೋವಿಂದಪುರ ಎಂಬ ಮೂರು ಹಳ್ಳಿಗಳನ್ನು ಖರೀದಿಸಿ ಫೋರ್ಟ್ ವಿಲಿಯಂ ಎಂಬ ಕೋಟೆಯನ್ನು ಕಟ್ಟಿದರು.
 ಕಾರ್ನಾಟಿಕ್ ಯುದ್ಧಗಳಿಂದ ಫ್ರೆಂಚರನ್ನು ಮೂಲೆ ಗುಂಪನ್ನಾಗಿಸಿದರು.
 17 ನೇ ಶತಮಾನದ ಅಂತ್ಯದ ವೇಳೆಗೆ ಇಂಗ್ಲೀಷರು ಮದ್ರಾಸ್, ಬಾಂಬೆ ಮತ್ತು ಕಲ್ಕತ್ತಗಳನ್ನು ತಮ್ಮ ಪ್ರೆಸಿಡೆನ್ಸಿ ಕೇಂದ್ರಗಳನ್ನು ಮಾಡಿಕೊಂಡರು.
 ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೀಷರು ಕಲ್ಕತ್ತಾವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು.