ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು - ಮಾದರಿ ಪ್ರಶ್ನೋತ್ತರಗಳು:
SSLC ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗಾಗಿ ಆನ್ ಲೈನ್ ನಲ್ಲಿಯೇ ಮನೆಯಲ್ಲಿಯೇ ಕುಳಿತು ಅಭ್ಯಾಸ ಮಾಡಲು ಸಮಾಜ ವಿಜ್ಞಾನ ವಿಷಯದ ಅಧ್ಯಾಯ: ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಈ ಪಾಠದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ತಮಗೆ ಅನುಕೂಲವಾದ ಯಾವುದೇ ಸಮಯದಲ್ಲಿ ಈ ಪುಟಕ್ಕೆ ಭೇಟಿ ನೀಡಿ, ಇಲ್ಲಿ ನೀಡಲಾಗಿರುವ ಪ್ರಶ್ನೋತ್ತರಗಳನ್ನು ಪದೇ ಪದೇ ಅಭ್ಯಾಸ ಮಾಡಬಹುದಾಗಿದೆ.
ಈ ಪ್ರಶ್ನೋತ್ತರಗಳನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ, SSLC ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಅತ್ಯಂತ ಸಹಾಯಕವಾಗಲಿದೆ.
ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
ಪಾಠದ ಸಾರಾಂಶ
ಪೀಠಿಕೆ
ಬ್ರಿಟಿಷ್ ಈಸ್ಟ ಇಂಡಿಯಾ ಕಂಪನಿ ಆರಂಭದಲ್ಲಿ ಕೇವಲ ವ್ಯಾಪಾರ ಕಂಪನಿಯಾಗಿ ತನ್ನ ವ್ಯಾಪಾರ ಹಿತಾಸಕ್ತಿಗಳನ್ನು ಮಾತ್ರ ಕಾಪಾಡಿ ಕೊಂಡು ಬರುವ ಕೆಲಸ ಮಾಡುತ್ತಿತ್ತು.ಆದರೆ ತದನಂತರ ಭಾರತದ ರಾಜರುಗಳ ನಡುವೆ ಒಡೆದು ಆಳುವ ನೀತಿ ಬಳಸಿ ಒಂದೊಂದೆ ರಾಜ್ಯಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಅದಕ್ಕಾಗಿ ಯುದ್ಧ ಮತ್ತು ಸಂಧಾನ ಮಾರ್ಗಗಳನ್ನು ಸರಿಯಾಗಿ ಬಳಸಿಕೊಂಡರು. ಗಳಿಸಿಕೊಂಡ ಭಾರತವನ್ನು ಉಳಿಸಿಕೊಳ್ಳಲು ನಾನಾ ಕ್ಷೇತ್ರಗಳಲ್ಲಿ ಅನೇಕ ಸುಧಾರಣೆ ತಂದರು ಇದರ ಫಲ ಭಾರತದ ಶಿಕ್ಷಣ, ನ್ಯಾಯಾಂಗ, ಕಂದಾಯ ಕೃಷಿ, ವ್ಯಾಪಾರ ಆಡಳಿತ ಕ್ಷೇತ್ರದಲ್ಲಿ ಸಾಕಷ್ಟು ಪರಿಣಾಮ ಬೀರಿತು.
* ಭಾರತೀಯರಿಗೆ ಸೇನೆಯಲ್ಲಿ ಸಿಗುತ್ತಿದ್ದ ಅತ್ಯುನ್ನತ ಹುದ್ದೆ ಎಂದರೆ “ ಸುಬೇದಾರ್ “ ಸ್ಥಾನ.
* “ ಪೀಲ್ “ ನೇತೃತ್ವದ ಸಮಿತಿಯ ಸಿಫಾರಸ್ಸಿನಂತೆ ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಲಾಯಿತು.
* ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ “ವಾರನ್ ಹೇಸ್ಟಿಂಗ್ಸ”. ಈತ ಕಲ್ಕತ್ತಾ ಮದರಸಾ ಆರಂಭಿಸಿದ.
* ಜೋನಾಥನ್ ಡಂಕನ್ ಎನ್ನುವವನು ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜ್ ಆರಂಭಿಸಿದ.
* ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು “ಚಾರ್ಲ್ಸ ಗ್ರಾಂಟ್”.
* ಗವರ್ನರ್ ವಿಲಿಯಂ ಬೆಂಟಿಂಕ್ ಆಂಗ್ಲ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ಕೊಟ್ಟ.
* ಮೆಕಾಲೆ ಗವರ್ನರ್ ಜನರಲ್ ನ ಕಾರ್ಯಾಂಗ ಸಭೆಗೆ ಆಯ್ಕೆಯಾದ ಮೊದಲ ಕಾನೂನು ಸದಸ್ಯ.
* ಇಂಗ್ಲಿಷ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೆಕಾಲೆ ಕೊಟ್ಟ ವರದಿಯೆ “ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ” ತಳಹದಿಯಾಯಿತು.
* ಸರ್ ಚಾರ್ಲ್ಸ ವುಡ್ ಆಯೋಗದ ಶಿಪಾರಸ್ಸಿನಂತೆ ಗವರ್ನರ್ ಡಾಲ್ ಹೌಸಿ “ಕಲ್ಕತ್ತಾ, ಬಾಂಬೆ, ಮತ್ತು ಮದರಾಸು” ಗಳಲ್ಲಿ ವಿಶ್ವವಿದ್ಯಾಲಯಗಳನ್ನು ಆರಂಭಿಸಿದ. ಇಲ್ಲಿಂದ ಶಿಕ್ಷಣ ಸಾರ್ವತ್ರಿಕರಣಗೊಳ್ಳತೊಡಗಿತು.
* ವಾರ್ಷಿಕವಾಗಿ ಈಸ್ಟ ಇಂಡಿಯಾ ಕಂಪನಿ ಯಿಂದ ಬ್ರಿಟಿಷ್ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು “ಅಪರಾಧ ತೆರಿಗೆ” ಎಂದವನು “ಎಡ್ಮಂಡ್ ಬರ್ಕ್”.
* ಚರ್ಚ್ / ಕ್ರೈಸ್ತ ಮಿಶನರಿಗಳಿಗೆ ಭಾರತಕ್ಕೆ ಅಧಿಕೃತ ಪ್ರವೇಶ ಕೊಟ್ಟ ಶಾಸನ 1813ರ ಚಾರ್ಟರ್ ಕಾಯ್ದೆ.
ಪ್ರಶ್ನೆಗಳು
ಉತ್ತರ:
1. ಲಾರ್ಡ ಕಾರ್ನವಾಲಿಸನು ನಾಗರಿಕಾ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದನು.
2. ಕಂಪನಿ ನೌಕರರ ಅನೈತಿಕ ವ್ಯವಹಾರ ನಿಯಂತ್ರಿಸಲು ರೆಗ್ಯುಲೇಟಿಂಗ್ ಕಾಯ್ದೆ ಜಾರಿಗೆ ತರಲಾಯಿತು.
3. ನಾಗರಿಕ ಸೇವೆಗೆ ಸೇರಬಯಸುವವರಿಗೆ ಶಿಕ್ಷಣ ನೀಡಲು ಕಲ್ಕತ್ತಾದಲ್ಲಿ ಪೋರ್ಟವಿಲಿಯಂ ಕಾಲೆಜ್ ಸ್ಥಾಪಿಸಿದರು.
4. 1853ರ ನಂತರ ನಾಗರಿಕ ಸೇವೆಗೆ ಮಾಡುವ ಎಲ್ಲಾ ನೇಮಕಾತಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಗಬೇಕೆಂದು ತೀರ್ಮಾನಿಸಲಾಯಿತು.
ಉತ್ತರ:
1. ಬ್ರಿಟಿಷರು ಬಂಗಾಳದಲ್ಲಿ ದ್ವಿ ಆಡಳಿತ / ದ್ವಿ ಸರ್ಕಾರ ಜಾರಿಗೆ ತಂದರು.
2. ವಾರನ್ ಹೇಸ್ಟಿಂಗ್ಸ್ ಜಾರಿಗೆ ತಂದ ಹೊಸ ಪದ್ದತಿಯಂತೆ ಪ್ರತಿ ಜಿಲ್ಲೆ ಎರಡು ಬಗೆಯ ನ್ಯಾಯಾಲಯ ಹೊಂದಿತ್ತು.
3. “ ದಿವಾನಿ ಅದಾಲತ್ “ ಎಂಬ ನಾಗರಿಕ ನ್ಯಾಯಾಲಯ ಮತ್ತು “ಫೌಜದಾರಿ ಅದಾಲತ್ ಎಂಬ ಅಪರಾಧಿ ನ್ಯಾಯಾಲಯ ಜಾರಿಗೆ ತಂದನು.
4. ಇಲ್ಲಿ ನಾಗರೀಕ ನ್ಯಾಯಾಲಯದಲ್ಲಿ ಹಿಂದೂಗಳಿಗೆ ಹಿಂದೂ ಗ್ರಂಥದ ಪ್ರಕಾರ ಮತ್ತು ಮುಸ್ಲಿಂರಿಗೆ ಷರಿಯತ್ ಕಾನೂನು ಪ್ರಕಾರ ನ್ಯಾಯದಾನ ನೀಡಲಾಗುತ್ತಿತ್ತು.
5. ಅಪರಾಧ ಪ್ರಕರಣದಲ್ಲಿ ಎಲ್ಲರಿಗೂ ಇಸ್ಲಾಂ ಕಾನೂನಿನ ಪ್ರಕಾರ ವಿಚಾರಣೆ ನಡೆಸಲಾಗುತ್ತುತ್ತು.
6. ಕ್ರಮೇಣ ಬ್ರಿಟಿಷ ಕಾನೂನು ಜಾರಿಗೆ ತರಲಾಯಿತು.
7. ನಾಗರಿಕ ನ್ಯಾಯಾಲಯಗಳು ಯುರೋಪಿನ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಿದರೆ, ಅಪರಾಧ ನ್ಯಾಯಾಲಯಗಳು “ ಕಾಜಿ”ಗಳ ಅಧೀನದಲ್ಲಿದ್ದು ಯುರೋಪಿಯನ್ ರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು.
ಉತ್ತರ:
1. ಲಾರ್ಡ ಕಾರ್ನವಾಲಿಸ್ ನು ಪ್ರಥಮಬಾರಿಗೆ ವ್ಯವಸ್ಥಿತವಾದ ಪೋಲಿಸ್ ವಿಭಾಗವನ್ನು ಜಾರಿಗೆ ತಂದನು.
2. ಲಾರ್ಡ ಕಾರ್ನವಾಲಿಸ್ ನು “ ಸೂಪರಿಂಟೆಂಡೆಂಟ್ ಆಫ್ ಪೋಲಿಸ್ “( S.P ) ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದನು.
3. 1793ರಲ್ಲಿ ಪ್ರತಿ ಜಿಲ್ಲೆಯನ್ನು “ಠಾಣೆ” ಗಳಾಗಿ ವಿಭಜಿಸಿ ಪ್ರತಿ ಠಾಣೆಯನ್ನು “ ಕೊತ್ವಾಲ”ರ ಅಧೀನಕ್ಕೆ ಒಳಪಡಿಸಿದನು.
4. ಹಳ್ಳಿಗಳು “ಚೌಕಿದಾರನ” ಅಧೀನಕ್ಕೆ ಒಳಪಡಿಸಿದನು.
5. ಕೊತ್ವಾಲರು ಹಳ್ಳಿಗಳಲ್ಲಿ ಕಳ್ಳತನ, ಅಪರಾಧಗಳು, ದರೋಡೆಗಳ ನಿಯಂತ್ರಣದ ಜವಬ್ದಾರಿ ಹೊತ್ತಿದ್ದನು.
6. ಪೋಲಿಸ್ ಅಧಿಕಾರಿಗಳನ್ನು ಮ್ಯಾಜಿಸ್ಟ್ರೇಟ ಅಧೀನಕ್ಕೊಳಪಡಿಸಲಾಯಿತು.
7. 1861 ರಲ್ಲಿ ಪೋಲಿಸ್ ಕಾಯ್ದೆಯನ್ನು ಜಾರಿಗೊಳಿಸಲಾಯಿತು.
ಉತ್ತರ:
ಬ್ರಿಟಿಷರು ಜಾರಿಗೆ ತಂದ ಹೊಸ ತೆರಿಗೆ ನೀತಿಗಳು:
1) ಖಾಯಂ ಜಮೀನ್ದಾರಿ ಪದ್ದತಿ.
2) ಮಹಲ್ವಾರಿ ಪದ್ದತಿ.
3) ರೈತವಾರಿ ಪದ್ದತಿ
ಉತ್ತರ: 1. ಲಾರ್ಡ ಕಾರ್ನವಾಲಿಸನು ವಾರ್ಷಿಕ ನಿರ್ದಿಷ್ಟ ಕಂದಾಯದ ಹಣವನ್ನು ಪಡೆಯಲು 1793ರಲ್ಲಿ ಬಂಗಾಳ ಮತ್ತು ಬಿಹಾರದಲ್ಲಿ ಒಂದು ಹೊಸ ಕಂದಾಯ ವ್ಯವಸ್ಥೆ ಜಾರಿಗೊಳಿಸಿದ ಅದುವೇ ಖಾಯಂ ಜಮೀನ್ದಾರಿ ಪದ್ದತಿ.
2. ಈ ಪದ್ದತಿಯಲ್ಲಿ ಜಮೀನ್ದಾರನು ಭೂಮಾಲಿಕನಾದನು.
3. ಈ ಪದ್ದತಿಯಲ್ಲಿ ಜಮೀನ್ದಾರ ಸರ್ಕಾರಕ್ಕೆ ಮೊದಲೆ ಒಪ್ಪಿಕೊಂಡ ಕಂದಾಯವನ್ನುನಿರ್ದಿಷ್ಟ ಪಡಿಸಿದ ದಿನಕ್ಕೆ ಮೊದಲೆ ನೀಡಬೇಕಾಗಿತ್ತು.
4. ಇಲ್ಲಿ ಭೂಮಾಲಿಕನಿಗೆ ಹೆಚ್ಚಿನ ಲಾಭವಾಯಿತು.ಏಕೆಂದರೆ ಸರ್ಕಾರಕ್ಕೆ ಕೊಡಬೇಕಾದ ಮೊತ್ತಕ್ಕಿಂತ ಹೆಚ್ಚಿನ ಕಂದಾಯ ವಸೂಲಿ ಮಾಡಿ ಹೆಚ್ಚಿನ ಹಣವನ್ನು ತಾವೇ ಇಟ್ಟಿಕೊಳ್ಳುತ್ತಿದ್ದರು.
5. ಬರಗಾಲ, ಅತಿವೃಷ್ಟಿ ಇತ್ಯಾದಿಗಳ ಸಂದರ್ಭದಲ್ಲಿ ಕಂದಾಯ ನೀಡಲು ವಿಫಲವಾದರೆ ಆಂಗ್ಲ ಸರ್ಕಾರ ಭೂಮಿಯನ್ನು ಜಮೀನ್ದಾರರಿಂದ ಹಿಂದಕ್ಕೆ ಕಸಿದು ಕೊಳ್ಳುತ್ತಿತ್ತು.
6. ಈ ಪದ್ದತಿಯಿಂದ ಸರ್ಕಾರಕ್ಕೆ, ಜಮೀನ್ದಾರಿಗೆ ಲಾಭವಾಯಿತೆ ವಿನಃ ರೈತರಿಗಲ್ಲ.
7. ರೈತರು ಈ ಪದ್ದತಿಯಲ್ಲಿ ಶೋಷಣೆಗೆ ಒಳಗಾದರು.
8. ಈ ಪದ್ದತಿ ಒರಿಸ್ಸಾ, ಆಂದ್ರ ಮತ್ತು ವಾರಣಾಸಿಯಲ್ಲಿ ಜಾರಿಗೆ ಬಂದಿತ್ತು.
ಉತ್ತರ: 1. “ ಮಹಲ್ “ ಎಂದರೆ ತಾಲ್ಲೂಕ್ ಎಂದರ್ಥ.
2. ಈ ಪದ್ದತಿಯನ್ನು R.M. ಬರ್ಡ ಮತ್ತು ಜೇಮ್ಸ್ ಥಾಮ್ಸನ್ ಪ್ರಯೋಗಿಸಿದರು.
3. ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಈ ಪದ್ದತಿಯಲ್ಲಿ ವ್ಯತ್ಯಾಸವಿತ್ತು.
4. ಈ ಪದ್ದತಿಯಲ್ಲಿ ಮಹಲ್ಲುಗಳೆ ಒಪ್ಪಂದ ಮಾಡಿಕೊಂಡು ಸರ್ಕಾರಕ್ಕೆ ತೆರಿಗೆ ಸಲ್ಲಿಸುತ್ತದ್ದವು.
5. ಉತ್ತರಪ್ರದೇಶ ,ಮಧ್ಯಪ್ರದೇಶ,ಪಂಜಾಬ, ದೆಹಲಿಯಲ್ಲಿ ಈ ಪದ್ದತಿಜಾರಿಗೆ ಬಂದಿತ್ತು.
6. ಭೂಮಿಯ ಉತ್ಪಾದನೆಗಿಂತ ಹೆಚ್ಚಿನ ತೆರಿಗೆ ವಿಧಿಸಿದ್ದರಿಂದ ಅನೇಕ ಭೂಮಾಲಿಕರು
ತಮ್ಮ ಭೂಮಾಲಿಕತ್ವವನ್ನು ಕಳೆದುಕೊಂಡರು.
ಉತ್ತರ:
** ಈ ಪದ್ದತಿಯನ್ನು ಪ್ರಾಯೋಗಿಕವಾಗಿ ಬಾರಾಮಹಲ್ ಪ್ರಾಂತ್ಯದಲ್ಲಿ ಮೊದಲಿಗೆ ಜಾರಿಗೆ ತಂದವನು “ಅಲೆಕ್ಸಾಂಡರ್ ರೀಡ್”.
** ಈ ಪದ್ದತಿಯನ್ನು ಮದರಾಸು ಮತ್ತು ಮೈಸೂರು ಪ್ರಾಂತ್ಯದಲ್ಲಿ ಜಾರಿಗೊಳಿಸಿದವನು “ ಥಾಮಸ್ ಮನ್ರೋ “.
** ಈ ಪದ್ದತಿಯು ರೈತರು ಮತ್ತು ಸರಕಾರದ ನಡುವೆ ನೇರ ಸಂಪರ್ಕ ಕಲ್ಪಿಸಿತ್ತು.
** ಭೂಮಿ ಉಳುಮೆ ಮಾಡುವವನೆ ಅದರ ಮಾಲಿಕ ಎಂದು ಸರ್ಕಾರ ಮಾನ್ಯ ಮಾಡಿತ್ತು.
** ಭೂಮಿಯ ಉತ್ಪನ್ನದ ಶೇ 50 ರಷ್ಟು ಭಾಗವನ್ನು ಕಂದಾಯವಾಗಿ ಕೊಡಬೇಕಾಗಿತ್ತು.
** ಕಂದಾಯವನ್ನು 30 ವರ್ಷಕ್ಕೆ ನಿಗಧಿ ಮಾಡಲಾಗಿತ್ತು.
** ಹಕ್ಕನ್ನೂ ರೈತರಿಗೆ ನೀಡಿದ್ದರೂ ಹೆಚ್ಚಿನ ಕಂದಾಯ ನಿಗದಿ ಮಾಡಲಾಗಿತ್ತು.
** ಈ ಪದ್ದತಿಯಿಂದ ಗರಿಷ್ಟ ಪ್ರಮಾಣದ ರೈತರು ಸಾಲದ ಸುಳಿಗೆ ಸಿಲುಕಿದರು.
** ರೈತರು ಸಾಲ ತೀರಿಸಲಾಗದೆ ಜಮೀನನ್ನೆ ಮಾರಾಟ ಮಾಡಿದರು.
ಉತ್ತರ:
1) ಬಂಗಾಳದ ಪ್ರೆಸಿಡೆನ್ಸಿಯು ಉಳಿದ ಎರಡು ಪ್ರೆಸಿಡೆನ್ಸಿಗಳ ಮೇಲೆ ಅಧಿಕಾರವನ್ನು ಪಡೆಯಿತು.
2) ಬಂಗಾಳದ ಗವರ್ನರ್ ಮೂರು ಪ್ರೆಸಿಡೆನ್ಸಿಗಳಿಗೆ ಗವರ್ನರ್ ಜನರಲ್ ಆದನು.
3) ಗವರ್ನರ್ ಜನರಲ್ಲನಿಗೆ ಬಾಂಬೆ & ಮದ್ರಾಸ ಪ್ರೆಸಿಡೆನ್ಸಿಗಳಿಗೆ ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಈ ಕಾನೂನು ನೀಡಿತು.
4) ಬಂಗಾಳ ಸರ್ಕಾರದ ಮತ್ತು ಇಂಗ್ಲೆಂಡ್ ನಿರ್ದೇಶಕ ಮಂಡಳಿಯ ಪೂರ್ವಾನುಮತಿಯಿಲ್ಲದೆ ಬಾಂಬೆ & ಮದರಾಸು ಸರ್ಕಾರಗಳು ಯಾರ ಮೇಲೂ ಯುದ್ಧಅಥವಾ ಸಂಧಾನ ನಡೆಸುಂತಿಲ್ಲಾ.
5) ಕಲ್ಕತ್ತಾದಲ್ಲಿ ಈ ಕಾನೂನಿನ ಅನ್ವಯ “ಸುಪ್ರೀಂಕೋರ್ಟ” ಸ್ಥಾಪನೆಯಾಯಿತು.
ಉತ್ತರ: 1) ಈಸ್ಟ ಇಂಡಿಯಾ ಕಂಪನಿ ಮಾನ್ಯತೆ ರದ್ದು, ಭಾರತ ರಾಣಿಯ ಆಡಳಿತಕ್ಕೆ ವರ್ಗವಾಯಿತು.
2) ಗವರ್ನರ್ ಜನರಲ್ ಹುದ್ದೆಯ ಪದನಾಮ ವೈಸರಾಯ್ ಎಂಬ ಪದನಾಮವಾಗಿ ಬದಲಾಯಿತು.
“ಲಾರ್ಡ ಕ್ಯಾನಿಂಗ್” ವೈಸರಾಯ್ ಆದನು.
3) “ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ” ಸ್ಥಾನವನ್ನು ಆಂಗ್ಲ ಸರ್ಕಾರ ಸೃಷ್ಟಿಸಿತು.
4) “ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ” ಇವರಿಗೆ ಸಹಾಯ ಮಾಡಲು 15 ಸದಸ್ಯರನ್ನೊಳಗೊಂಡ ಭಾರತ ಮಂಡಳಿ ಅಸ್ತಿತ್ವಕ್ಕೆ ಬಂದಿತು.
ಉತ್ತರ :
1) ಕೇಂದ್ರದಲ್ಲಿ ದ್ವಿಸದನ ಶಾಸಕಾಂಗ ರಚನೆಗೆ ಅವಕಾಶ ನೀಡಲಾಯಿತು.
2) ಪ್ರಾಂತ್ಯಗಳಲ್ಲಿ ದ್ವಿಸರ್ಕಾರ ಪದ್ಧತಿಗೆ ಅವಕಾಶ ನೀಡಲಾಯಿತು.
3) ಭಾರತಕ್ಕೆ ಒಬ್ಬ ಹೈಕಮಿಷನರ್ ರನ್ನು ನೇಮಕ ಮಾಡಲಾಯಿತು.
4) ಸ್ವಯಂ ಆಡಳಿತವುಳ್ಳ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಭರವಸೆ ನೀಡಲಾಯತು.
5) ಕೇಂದ್ರದ ಬಜೆಟ್ ನಿಂದ ಪ್ರಾಂತ್ಯದ ಬಜೆಟ್ ನ್ನು ಬೇರ್ಪಡಿಸಲಾಯಿತು.
6) ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಮುಸ್ಲಿಂ, ಸಿಖ್, ಆಂಗ್ಲೋ ಭಾರತೀಯರು & ಯುರೋಪಿಯನ್ನರಿಗೂ ವಿಸ್ತರಿಸಲಾಯಿತು.
ಉತ್ತರ : 1) ಸಂವಿಧಾನದ ಬಹುತೇಕ ಅಂಶಗಳು ಈ ಕಾಯ್ದೆ ಆಂಶವನ್ನೆ ಆಧರಸಿವೆ.
2) ಭಾರತಕ್ಕೆ ಸಂಪೂರ್ಣ ಜವಬ್ದಾರಿ ಸರ್ಕಾರ ರಚಿಸಲು ಅವಕಾಶ ನೀಡಿದೆ.
3) ಈ ಕಾಯ್ದೆ ಅಖಿಲಭಾರತ ಒಕ್ಕೂಟ ರಚಿಸಲು ಅವಕಾಶ ನೀಡಿದೆ.
4) ಭಾರತದಲ್ಲಿ ಫೆಡರಲ್ ಕೋರ್ಟ ಸ್ಥಾಪನೆಗೆ ಅವಕಾಶ ಮಾಡಿ ಕೊಟ್ಟಿದೆ.
5) ರಿಸರ್ವ್ ಬ್ಯಾಂಕ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ.
6) ಈಗೀನ ಭಾರತದ ಸಂವಿಧಾನದ ರಚನೆಗೆ ಈ ಕಾಯ್ದೆ ಬುನಾದಿಯಾಗಿದೆ.