ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ( 1857 )

ಮುಖ್ಯಾಂಶಗಳು

** 1857ರ ದಂಗೆಯನ್ನು “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ “ ಎಂದವರು ಭಾರತೀಯ ಇತಿಹಾಸಕಾರರು.
** 1857ರ ದಂಗೆಯನ್ನು “ ಸಿಪಾಯಿ ದಂಗೆ “ ಎಂದವರು ಆಂಗ್ಲ ಇತಿಹಾಸಕಾರರು .
** ದಂಗೆ ಸ್ಪೋಟಗೊಂಡದ್ದು “ಬ್ಯಾರಕ್ ಪುರದಲ್ಲಿ”.
** ಬ್ರಿಟಿಷ ಸೇನಾಧಿಕಾರಿಯನ್ನು ಗುಂಡಿಟ್ಟು ಕೊಂದವನು “ಮಂಗಲಪಾಂಡೆ”.
** ಭಾರತೀಯ ಸೈನಿಕರು ಕೆಂಪುಕೋಟೆಗೆ ನುಗ್ಗಿ “ಮೊಘಲ್ ದೊರೆ 2ನೇ ಬಹಾದ್ದೂರ್ ಷಾ “ ನನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು.
** ದಂಗೆ ಬ್ಯಾರಕ್ ಪುರ –ಮೀರತ್ –ದೆಹಲಿ—ಕಾನ್ಪುರ—ಝಾನ್ಸಿಗೆ ದಂಗೆ ಹರಡಿತು.
** ಕಾನ್ಪುರದಲ್ಲಿ ದಂಗೆಯ ನೆತೃತ್ವ ವಹಿಸಿದವರು “ ನಾನಾಸಾಹೆಬ್“.
** ಝಾನ್ಸಿಯಲ್ಲಿ ದಂಗೆಯ ನೆತೃತ್ವ ವಹಿಸಿದವರು “ ರಾಣಿ ಲಕ್ಷ್ಮೀ ಬಾಯಿ”.
** ರಾಣಿ ಲಕ್ಷ್ಮೀ ಬಾಯಿ ಬ್ರಿಟಿಷರ ವಿರುದ್ದ ಹೋರಾಡಿ “ ಗ್ವಾಲಿಯರ್ “ ವಶಪಡಿಸಿಕೊಂಡಳು.

ಪ್ರಶ್ನೆಗಳು

ಉತ್ತರ:
1) ರಾಜಕೀಯ ಕಾರಣ
2) ಆರ್ಥಿಕ ಕಾರಣ
3) ಆಡಳಿತಾತ್ಮಕ ಕಾರಣ
4) ಸೈನಿಕ ಕಾರಣ
5) ತತ್ ಕ್ಷಣದ ಕಾರಣ
6) ಸಾಮಾಜಿಕ ,ಧಾರ್ಮಿಕ ಕಾರಣ.

ಉತ್ತರ:
* ಆಂಗ್ಲರು ಜಾರಿಗೆ ತಂದ ದತ್ತು ಪುತ್ರರಿಗೆ ಹಕ್ಕಿಲ್ಲ ನೀತಿ.
* ಈ ನೀತಿಯ ಅನ್ವಯ ಅನೇಕ ದೇಶೀಯ ರಾಜರುಗಳು ತಮ್ಮ ರಾಜ್ಯಗಳನ್ನು ಕಳೆದು ಕೊಂಡದ್ದು.
* ಸತಾರ, ಜೈಪುರ, ಝಾನ್ಸಿ, ಉದಯಪುರ ಇತ್ಯಾದಿ ಆಂಗ್ಲರ ವಶವಾದವು.
* ಡಾಲ್ ಹೌಸಿ ತಂಜಾವೂರು & ಕರ್ನಾಟಿಕ್ ನವಾಬನಿಗಿದ್ದ ರಾಜ ಪದವಿ ರದ್ದು. ಪಡಿಸಿದ್ದು.
* ಮೊಘಲ್ ಚಕ್ರವರ್ತಿ, ಔದ್ ನವಾಬನನ್ನು ಅಧಕಾರದಿಂದ ಪದಚ್ಯುತಗೊಳಿಸಿದ್ದು.
* ಇದೆಲ್ಲದರ ಪರಿಣಾಮ ಇವರನ್ನೆ ನಂಬಿದ್ದ ಲಕ್ಷಾಂತರ ಸೈನಿಕರು ನಿರುದ್ಯೋಗಿಯಾಗಿದ್ದು 1857 ರ ದಂಗೆಗೆ ಕಾರಣವಾಯಿತು.

ಉತ್ತರ:
* ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿ.
* ಭಾರತದ ಕರಕುಶಲ ಕೈಗಾರಿಕೆಗಳು & ದೇಶೀಯ ಕೈಗಾರಿಕೆಗಳು ನಶಿಸಿ ಭಾರತದ ಕುಶಲ ಕರ್ಮಿಗಳು ನಿದುದ್ಯೋಗಿಗಳಾದರು.
* ವಿಶೇಷವಾಗಿ ಬಟ್ಟೆ & ಉಣ್ಣೆ ಕೈಗಾರಿಕೆಗಳು ಅವನತಿ ಹೊಂದಿ ನೇಕಾರರು ಉದ್ಯೋಗ ಕಳೆದು ಕೊಂಡರು.
* ಭಾರತದ ವಸ್ತುಗಳ ಮೇಲೆ ಇಂಗ್ಲಿಷರು ದುಬಾರಿ ಸುಂಕ ಹೇರಿದ್ದು.
* ಇಂಗ್ಲಿಷರು ಜಾರಿಗೆ ತಂದ ಜಮೀನ್ದಾರಿ ಪದ್ದತಿಯಿಂದ ಭಾರತದ ರೈತರು ಶೋಷಣೆಗೆ ಒಳಗಾಗಿದ್ದು.
* ಇನಾಂ ಆಯೋಗ ಇನಾಂ ಭೂಮಿಯನ್ನು ಹಿಂದಕ್ಕೆ ಪಡೆದಿದ್ದು ಇತ್ಯಾದಿ.

ಉತ್ತರ:
* ಇಂಗ್ಲಿಷರು ಜಾರಿಗೆತಂದ ಹೊಸ ನಾಗರಿಕ & ಅಪರಾಧ ಕಾಯ್ದೆಗಳು.
* ಕಾನೂನಿನಲ್ಲಿ ಪಕ್ಷಪಾತ & ಭಾರತೀಯರಿಗೆ ಪ್ರತ್ಯೇಕ ನಿಯಮ ಅನ್ವಯವಾಗುತ್ತಿದ್ದದ್ದು.
* ಆಂಗ್ಲ ಭಾಷೆ ನ್ಯಾಯಾಲಯದ ಭಾಷೆಯಾಯಿತು.
* ಆಂಗ್ಲ ನ್ಯಾಯಾಧೀಶರು ಬಹುತೇಕ ಆಂಗ್ಲರ ಪರ ನ್ಯಾಯದಾನ ಮಾಡುತ್ತಿದ್ದದ್ದು.
* ಹೊಸ ಕಾನೂನಿನ ಆಶಯಗಳು ಜನರಿಗೆ ಅರಿವಾಗದೆ ಇದ್ದದ್ದು.

ಉತ್ತರ:
* ಆಂಗ್ಲರ ಸೇನೆಯಲ್ಲಿದ್ದ ಭಾರತೀಯರ ಸೈನಿಕರ ಸ್ಥಿತಿ ಶೋಚನೀಯವಾಗಿತ್ತು.
* ಆಂಗ್ಲ ಸೈನಿಕರಿಗಿದ್ದ ಸ್ಥಾನಮಾನ , ವೇತನ, ಬಡ್ತಿ ಅವಕಾಶಗಳು ಭಾರತೀಯ ಸೈನಿಕರಿಗಿರಲಿಲ್ಲ.
* ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸಿದ್ದು ಧಾರ್ಮಿಕವಾಗಿ ಸೈನಿಕರನ್ನು ಪ್ರಚೋದಿಸಿತು.

ಉತ್ತರ: ಭಾರತೀಯ ಸೈನಿಕರಿಗೆ “ ರಾಯಲ್ ಎನ್ ಫೀಲ್ಡ್ “ ಎಂಬ ಹೊಸ ಮಾದರಿಯ ಬಂದೂಕುಗಳನ್ನು ನೀಡಿದ್ದು.

ಉತ್ತರ:
* ಭಾರತೀಯ ಸೈನಿಕರಿಗೆ “ ರಾಯಲ್ ಎನ್ ಫೀಲ್ಡ್ “ ಎಂಬ ಹೊಸ ಮಾದರಿಯ ಬಂದೂಕುಗಳನ್ನು ನೀಡಿದ್ದು.
* ಆ ಬಂದೂಕುಗಳ ತುಪಾಕಿಗಳಿಗೆ ಹಂದಿ & ದನದ ಕೊಬ್ಬನ್ನು ಸವರಿದ್ದಾರೆ ಎಂಬ ವದಂತಿ ಹಬ್ಬಿದ್ದು.
* ಹಸು ಹಿಂದುಗಳಿಗೆ ಪವತ್ರವಾದರೆ ಹಂದಿ ಮುಸ್ಲಿಂರಿಗೆ ನಿಷಿದ್ಧವಾಗಿತ್ತು ಈ ವದಂತಿ ದಂಗೆಗೆ ತಕ್ಷಣದ ಕಾರಣವಾಯಿತು.

ಉತ್ತರ:
** ಈ ದಂಗೆ ಇಡೀ ಭಾರತವನ್ನು ವ್ಯಾಪಿಸಿರಲಿಲ್ಲ.
** ದೇಶದ ಬಿಡುಗಡೆಕ್ಕಿಂತ ರಾಜ ರಾಣಿಯರ ಸ್ವಂತ ಹಿತಾಸಕ್ತಿಗಾಗಿ ನಡೆದಿತ್ತು.
ತು ** ಇದು ಯೋಜಿತ ದಂಗೆಯಾಗಿರಲಿಲ್ಲ.
** ಆಂಗ್ಲ ಸೈನಿಕರಲ್ಲಿದ್ದ ಒಗ್ಗಟ್ಟು ಹಾಗೂ ಭಾರತೀಯ ಸೈನಿಕರಲ್ಲಿದ್ದ ಭಿನ್ನತೆ.
** ಈ ದಂಗೆಗೆ ಸೂಕ್ತ ನಾಯಕರು ಇರಲಿಲ್ಲ.
** ಈ ದಂಗೆಗೆ ನಿಶ್ಚಿತ ಗುರಿ ಇರಲಿಲ್ಲ.
** ಸೇನೆಯ ನಾಯಕತ್ವ ಮತ್ತು ಶಿಸ್ತಿನಲ್ಲಿ ಕೊರತೆ ಇತ್ತು.
** ಅನೇಕ ದೇಶೀಯ ರಾಜರುಗಳು ಆಂಗ್ಲರಿಗೆ ನಿಷ್ಠೆ ತೋರಿಸಿದ್ದು.
** ಸಿಪಾಯಿಗಳು ತಮ್ಮ ತಪ್ಪಿನಿಂದಾಗಿ ಜನಸಾಮಾನ್ಯರ ನಂಬಿಕೆ ಕಳೆದುಕೊಂಡದ್ದು ಇತ್ಯಾದಿ

ಉತ್ತರ: * ಕಾನೂನಿ ಮುಂದೆ ಸಮಾನತೆ.
* ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವದು.
* ಪ್ರಾದೇಶಿಕ ವಿಸ್ತರಣೆ ಕೈಬಿಡುವದು.
* ಕಂಪನಿ ದೇಶೀಯ ರಾಜರೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಅಂಗೀಕರಿಸಲಾಯಿತು.
* ಭಾರತೀಯರ ಧಾರ್ಮಿಕ ವಿಷಯಗಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.
* ಧಾರ್ಮಿಕ ಸಹಿಷ್ಣುತೆ ಕಾಪಾಡುವದು.

ಉತ್ತರ :
* ಭಾರತದಲ್ಲಿ ಕಂಪನಿ ಆಡಳಿತ ಕೊನೆಯಾಯಿತು.
* ಬ್ರಿಟನ್ ರಾಣಿಗೆ ಆಡಳಿತ ವರ್ಗಾವಣೆಗೊಂಡಿತು.
* ಭಾರತದ ವ್ಯವಹಾರವನ್ನುಬ್ರಿಟಷ್ ಪಾರ್ಲಿಮೆಂಟಿನ ವ್ಯವಹಾರ ಕಾರ್ಯದರ್ಶಿಗೆ ಒಪ್ಪಿಸಲಾಯಿತು.
* 1858ರಲ್ಲಿ ಇಂಗ್ಲೆಂಡಿನ ರಾಣಿ ಘೋಷಣೆಯನ್ನು ಹೊರಡಿಸಿದರು.
* ಭಾರತೀಯರ ಪ್ರೀತಿ ಬೆಂಬಲವಿದ್ದರೆ ಮಾತ್ರ ತಮಗೆ ಉಳಿಗಾಲ ಎಂದು ಅರಿತರು.
* ಈ ದಂಗೆ ಸ್ವಾತಂತ್ರ್ಯ ಹೋರಟಕ್ಕೆ ಹೊಸ ದಿಕ್ಷೂಚಿಯಾಯಿತು.
* ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಭಾರತೀಯರು ಪಾಲ್ಗೊಳ್ಳುವ ನೀತಿ ಜಾರಿಗೆ ಕಾರಣವಾಯಿತು.