ಸಾಮಾಜಿಕ ಸ್ತರ ವಿನ್ಯಾಸ ಮತ್ತು ದುಡಿಮೆ

ಕಿರು ಉತ್ತರದ ಪ್ರಶ್ನೆಗಳು

ಉತ್ತರ: ಸಮಾಜದಲ್ಲಿ ಇರುವ ಜನರನ್ನು ವಿವಿಧ ಸ್ತರಗಳನ್ನಾಗಿ ವರ್ಗೀಕರಿಸುವ ವ್ಯವಸ್ಥೆಯನ್ನು ಸಾಮಾಜಿಕ ಸ್ತರವಿನ್ಯಾಸ ಎನ್ನುವರು.

ಉತ್ತರ: ಆರರಿಂದ ಹದಿನಾಲ್ಕು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂದು ಸಂವಿಧಾನದ ವಿಧಿ 21ಎ ನಲ್ಲಿ ತಿಳಿಸಲಾಗಿದೆ.

ಉತ್ತರ: "ಅಸ್ಪೃಶ್ಯತೆ ಜಾತಿಯ ಅತ್ಯಂತ ತಿರಸ್ಕಾರ್ಹವಾದ ಅಭಿವ್ಯಕ್ತಿ" ಎಂದು ಹೇಳಿದವರು ಮಹಾತ್ಮ ಗಾಂಧೀಜಿ.

ಉತ್ತರ: ಡಾಕ್ಟರ್ ಬಿ.ಆರ್. ಅಂಬೇಡ್ಕರ್.

ಉತ್ತರ: ಆಸಕ್ತಿ ,ವಯಸ್ಸು, ಅಭಿರುಚಿ, ಸಾಮರ್ಥ್ಯ ಹಾಗೂ ಕೌಶಲ್ಯ ಮುಂತಾದವುಗಳ ಆಧಾರದ ಮೇಲೆ ಕೆಲಸವನ್ನು ಹಂಚಿಕೊಂಡು ಮಾಡುವುದು.

ಉತ್ತರ: ವಿಶೇಷ ಪರಿಣಿತಿ ಎಂದರೆ ನಿರ್ದಿಷ್ಟ ಕ್ಷೇತ್ರದಲ್ಲಿ ಸಾಕಷ್ಟು ಆಳವಾದ ತರಬೇತಿ ಅಥವಾ ಕೌಶಲ್ಯ ಪಡೆಯುವುದು ಎಂದರ್ಥ.

ದೀರ್ಘ ಉತ್ತರದ ಪ್ರಶ್ನೆಗಳು

ಉತ್ತರ :
ಸಾಮಾಜಿಕ ಸ್ತರವಿನ್ಯಾಸದ ಲಕ್ಷಣಗಳು:
* ಸಾಮಾಜಿಕ ಸ್ತರವಿನ್ಯಾಸ ಸಾಮಾಜಿಕವಾದದ್ದು.
* ಸಾಮಾಜಿಕ ಸ್ತರವಿನ್ಯಾಸ ಸರ್ವ ವ್ಯಾಪಕವಾದದ್ದು.
* ಸ್ತರವಿನ್ಯಾಸ ಪುರಾತನವಾದದ್ದು.
* ಸ್ತರವಿನ್ಯಾಸ ವಿವಿಧ ರೂಪಗಳಲ್ಲಿ ಇದೆ.

ಉತ್ತರ :
1. ಆದಿವಾಸಿ ಸಮಾಜ
2. ಗುಲಾಮಗಿರಿ
3. ಎಸ್ಟೇಟ್ ಪದ್ಧತಿ
4. ವರ್ಣವ್ಯವಸ್ಥೆ
5. ಜಾತಿವ್ಯವಸ್ಥೆ

ಉತ್ತರ : ಅಸ್ಪೃಶ್ಯತೆಯ ಆಚರಣೆ ಹೊಂದಿರುವ ಸಮಸ್ಯೆಗಳನ್ನು ಚರ್ಚಿಸಿದಾಗ ಅಸ್ಪೃಶ್ಯತೆಯು ಒಂದು ಸಾಮಾಜಿಕ ಪಿಡುಗು ಎಂಬುದು ಅರ್ಥವಾಗುತ್ತದೆ. ಆ ಸಮಸ್ಯೆಗಳು ಯಾವುದೆಂದರೆ
1. ಅಸ್ಪೃಶ್ಯರಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಕೆಳಮಟ್ಟದ ಸ್ಥಾನ ನೀಡಲಾಗಿದೆ.
2. ಅಸ್ಪೃಶ್ಯರಿಗೆ ಶೈಕ್ಷಣಿಕ ವ್ಯವಸ್ಥೆಯಿಂದ ಹೊರಗಿಡಲಾಗಿತ್ತು.
3. ಆಸ್ತಿಯ ಹಕ್ಕನ್ನು ನಿರಾಕರಿಸಲಾಗಿತ್ತು.
4. ಅಸ್ಪೃಶ್ಯರಿಗೆ ರಾಜಕೀಯ ಭಾಗವಹಿಸುವಿಕೆ ನಿರಾಕರಿಸಲಾಗಿತ್ತು.

ಉತ್ತರ :
ಅಸ್ಪೃಶ್ಯತಾ ನಿವಾರಣ ಕ್ರಮಗಳು:
1. ಸಂವಿಧಾನದ 17ನೇ ವಿಧಿ ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದೆ.
2. 1955 ರಲ್ಲಿ ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯನ್ನು ಜಾರಿಗೊಳಿಸಿದೆ.
3. ಈ ಕಾಯ್ದೆಯನ್ನು ತಿದ್ದುಪಡಿ ಮಾಡಿ 1976 ರಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಎಂದು ಮಾರ್ಪಾಡು ಗೊಳಿಸಲಾಯಿತು.
4. ಈ ಕಾಯ್ದೆ ಪ್ರಕಾರ ಅಸ್ಪೃಶ್ಯತೆಯ ಆಚರಣೆಯು ಶಿಕ್ಷಾರ್ಹ ಅಪರಾಧವಾಗಿದೆ.
5. ನಮ್ಮ ಸಂವಿಧಾನವು ದೇಶದ ಎಲ್ಲಾ ನಾಗರಿಕರಿಗೆ ಸಮಾನತೆ ಹಾಗೂ ಸಾರ್ವತ್ರಿಕ ಮತದಾನದ ಹಕ್ಕನ್ನು ನೀಡಿದೆ.
6. ಪರಿಶಿಷ್ಟ ಹಾಗೂ ಹಿಂದುಳಿದ ಜಾತಿಯವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿಮೀಸಲಾತಿ ನೀಡಲಾಗಿದೆ.
7. 1989ರ ಶಾಸನವು ಅಸ್ಪೃಶ್ಯತೆಯ ನಿವಾರಣೆಗಾಗಿ ರಾಜ್ಯಸರ್ಕಾರಗಳಿಗೆ ವಿಶೇಷ ಜವಾಬ್ದಾರಿ ನೀಡಿದೆ.

ಉತ್ತರ :
ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವವರು ಅನೇಕ ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು
1. ವಲಸೆ : ಅಸಂಘಟಿತ ವಲಯದ ದುಡಿಮೆಗಾರರು ಕೆಲಸಕ್ಕಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗಬೇಕಾಗಿರುವುದರಿಂದ ಸಾಮಾಜಿಕ ಭದ್ರತೆಗಳು ಇರುವುದಿಲ್ಲ.
2. ಸಾಮಾಜಿಕ ಭದ್ರತೆ : ಅಸಂಘಟಿತ ವಲಯದ ದುಡಿಮೆಗಾರರು ಬದುಕಲು ಅವಶ್ಯಕವಾಗಿ ಬೇಕಾಗಿರುವ ಸಾಮಾಜಿಕ ಭದ್ರತೆಯನ್ನು ಹೊಂದಿರುವುದಿಲ್ಲ.
3. ಕಾನೂನು ಚೌಕಟ್ಟು: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವವರಿಗೆ ಕಾನೂನಾತ್ಮಕ ಆರ್ಥಿಕ ಬೆಂಬಲಗಳು ಇರುವುದಿಲ್ಲ.
4. ಬಾಲ ಕಾರ್ಮಿಕರು : ಅಸಂಘಟಿತ ವಲಯದಲ್ಲಿ ದೈಹಿಕ ಶ್ರಮ ಆಧಾರಿತ ಕೆಲಸವನ್ನು ಮಕ್ಕಳು ಶೋಚನೀಯ ಪರಿಸ್ಥಿತಿಯಲ್ಲಿ ಮಾಡುತ್ತಿದ್ದಾರೆ ಸಂಘಟಿತ ವಲಯ ಬಾಲಕಾರ್ಮಿಕ ಪದ್ಧತಿಯನ್ನು ಪೋಷಿಸುತ್ತದೆ.
5. ದೈಹಿಕ ಮತ್ತು ಮಾನಸಿಕ ದೌರ್ಜನ್ಯ: ಅಸಂಘಟಿತ ವಲಯಗಳಲ್ಲಿ ಮನೆ ಕೆಲಸಗಾರರಾಗಿ ದುಡಿಯುತ್ತಿರುವ ಬಹುತೇಕ ಮಹಿಳೆಯರು ದೈಹಿಕ ಮತ್ತು ಮಾನಸಿಕ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ.
6. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಅವರಿಗೆ ನಿಗದಿತ ಕೆಲಸವಾಗಲಿ ವೇತನ ವಾಗಲಿ, ನಿಗದಿತ ಸೌಲಭ್ಯಗಳಾಗಲಿ ಇರುವುದಿಲ್ಲ ಕನಿಷ್ಠ ವೇತನವೂ ಸಿಗುವುದಿಲ್ಲ.

ಉತ್ತರ: ಯಾವ ವಲಯವು ಸರ್ಕಾರದಲ್ಲಿ ನೋಂದಣಿಯಾಗಿ ಕಾನೂನಿನ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸುತ್ತದೆ. ಸಂಘಟಿತ ವಲಯದ ಸೌಲಭ್ಯಗಳು:
1. ಉದ್ಯೋಗದ ಭರವಸೆ ಇರುತ್ತದೆ.
2. ದುಡಿಯುವ ಕಾರ್ಮಿಕರಿಗೆ ನಿಗದಿತ ಕೆಲಸವಿರುತ್ತದೆ.
3. ನಿಗದಿತ ಕೆಲಸಕ್ಕೆ ನಿಗದಿತ ವೇತನ ನೀಡಲಾಗುತ್ತದೆ. 4.ವಾರ್ಷಿಕ ಭತ್ತ್ಯೆ ಮತ್ತು ಹೆಚ್ಚಿನ ಅವಧಿಗೆ ಹೆಚ್ಚುವರಿ ವೇತನ ನೀಡಲಾಗುತ್ತದೆ.
5. ವೈದ್ಯಕೀಯ ಸೌಲಭ್ಯ ನೀಡಲಾಗುತ್ತದೆ.
6. ನಿವೃತ್ತಿ ವೇತನ ನೀಡಲಾಗುತ್ತದೆ.
7. ಕಾರ್ಮಿಕ ಮತ್ತು ಉದ್ಯಮಿಗಳ ನಡುವೆ ಕಾನೂನಾತ್ಮಕ ಸಂಬಂಧವಿರುತ್ತದೆ.