ಭಾರತದ ವಿದೇಶಾಂಗ ನೀತಿ

ಪ್ರಶ್ನೆಗಳು

ಉತ್ತರ: ಒಂದು ದೇಶ ಬೇರೆ ದೇಶಗಳೊಡನೆ ವ್ಯವಹರಿಸುವಾಗ ಅನುಸರಿಸುವ ನೀತಿಯನ್ನು ವಿದೇಶಾಂಗ ನೀತಿ ಎನ್ನುವರು.

ಉತ್ತರ: ಒಂದು ದೇಶ ಯಾವುದೆ ಬಗೆಯಲ್ಲಿ ಆಂತರಿಕವಾಗಲೀ, ಬಾಹ್ಯವಾಗಲಿ ಇತರೆ ದೇಶಗಳಿಗೆ ಅಧೀನವಾಗಿರದೆ ಸ್ವತಂತ್ರವಾಗಿರುವದನ್ನು ಸಾರ್ವಭೌಮ ರಾಷ್ಟ್ರ / ಪರಮಾಧಿಕಾರವುಳ್ಳ ರಾಷ್ಟ್ರ ಎನ್ನುವರು.

ಉತ್ತರ:
* ಭಾರತ ಅಪಾರ ಜನಸಂಖ್ಯೆ ಹೊಂದಿದೆ.
* ಭಾರತ ಅಪಾರ ಪ್ರಾಕೃತಿಕ ಸಂಪತ್ತು ಹೊಂದಿದೆ.
* ಪರಿಣಿತ ಭೌದ್ಧಿಕ & ಔದ್ಯೋಗಿ ಬಲ ಹೊಂದಿದೆ.
* ಬಲಾಢ್ಯ ಸೈನಿಕ ಬಲ ಹೊಂದಿದೆ.
ಹೀಗೆ ಭಾರತ ಪ್ರಭಾವಶಾಲಿ ದೇಶವಾಗಿ ವಿಶ್ವಮಾನ್ಯ ಪಡೆದಿದೆ.

ಉತ್ತರ:
1. ದೇಶದ ಭದ್ರತೆ.
2. ದೇಶದ ಆರ್ಥಿಕ ಸಂವರ್ಧನೆ.
3. ನಮ್ಮ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಬೇರೆ ದೇಶದಲ್ಲಿ ಹರಡುವುದು/ಬಿತ್ತರಿಸುವದು.
4. ಮಿತ್ರ ದೇಶಗಳನ್ನು ಹೆಚ್ಚಿಸಿಕೊಂಡು ವಿರೋಧಿ ದೇಶಗಳನ್ನು ಹತ್ತಿಕ್ಕುವುದು.
5. ವಿಶ್ವಶಾಂತಿ & ಸಹಬಾಳ್ವೆಯನ್ನು ಸಾಧಿಸುವುದು.

ಉತ್ತರ:
1. ರಾಷ್ಡ್ರೀಯ ಹಿತಾಶಕ್ತಿ
2. ಭೌಗೋಳಿಕ ಅಂಶಗಳು
3.ರಾಜಕೀಯ ಪರಿಸ್ಥಿತಿ
4.ಆರ್ಥಿಕ ವ್ಯವಸ್ಥೆ
5.ರಕ್ಷಣಾ ಸಾಮರ್ಥ್ಯ
6. ಜನಾಭಿಪ್ರಾಯ
7.ಅಂತರಾಷ್ಟ್ರೀಯ ಪರಿಸರ.

ಉತ್ತರ: 1. ಪಂಚಶಿಲ ತತ್ವಗಳು
2. ಅಲಿಪ್ತ ನೀತಿ
3. ವಸಾಹತು ಶಾಹಿತ್ವಕ್ಕೆ ವಿರೋಧ
4. ವರ್ಣಭೇಧ ನೀತಿಗೆ ವಿರೋಧ
5. ನಿಶ್ಯಸ್ತ್ರೀಕರಣ

ಉತ್ತರ: ಏಕೆಂದರೆ ನೆಹರುರವರು ಪ್ರಥಮ ಪ್ರಧಾನಿ ಹುದ್ದೆ ಜೊತೆಗೆ ಪ್ರಥಮವಾಗಿ ವಿದೇಶಾಂಗ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದರು. ಹಾಗೂ ಭಾರತದ ವಿದೇಶಾಂಗ ನೀತಿಯನ್ನು ವಿಶೇಷವಾಗಿ ನಿರೂಪಿಸಿದ್ದಾರೆ.

ಉತ್ತರ : 1. ಪರಸ್ಪರ ಆಕ್ರಮಣ ಮಾಡದಿರುವದು.
2. ಪರಸ್ಪರ ರಾಷ್ಟ್ರಗಳ ಪ್ರಾದೇಶಿಕ ಹಾಗೂ ಸಾರ್ವಭೌಮತೆಗೆ ಗೌರವ ನೀಡುವದು.
3. ಆಂತರಿಕ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದಿರುವದು.
4. ಪರಸ್ಪರ ಸಹಕಾರ ಮತ್ತು ಸಮಾನತೆ.
5. ಶಾಂತಿಯುತ ಸಹಬಾಳ್ವೆ.

ಉತ್ತರ : 2ನೇ ಮಹಾಯುದ್ದದ ನಂತರ ಜಗತ್ತು ಎರಡು ಬಣಗಳಾಗಿ ಒಡೆದುಹೋದಾಗ ಭಾರತ ಯಾವ ಬಣಕ್ಕೂ ಸೇರದೆ ತಟಸ್ಥ ನೀತಿಯನ್ನು ಅನುಸರಿಸಿತು . ಇದುವೆ ಅಲಿಪ್ತನೀತಿ.

ಉತ್ತರ :
* ಜಗತ್ತು ಅಮೇರಿಕಾ & ರಷ್ಯಾ ನೇತೃತ್ವದಲ್ಲಿ ಎರಡು ಬಣಗಳಾಗಿ ಒಡೆದಾಗ ಭಾರತ ಯಾವ ಬಣವನ್ನು ಸೇರಲಿಲ್ಲ.
* ಅಮೇರಿಕಾದಿಂದ ಆರ್ಥಿಕ ನೆರವನ್ನು & ರಷ್ಯಾದಿಂದ ಭದ್ರತಾ ನೆರವು ಪಡೆಯುವಲ್ಲಿ ಯಶಸ್ವಿಯಾಯಿತು.
* ವಿಶ್ವದ ಪ್ರತಿಯೊಂದು ವಿದ್ಯಮಾನವನ್ನು ಅದರ ಗುಣ-ದೋಷಗಳ ಆಧಾರದ ಮೇಲೆ ಸ್ವಾಗತಿಸುವ & ವಿರೋಧಿಸುವ ಸ್ವತಂತ್ರ ಕಾರ್ಯಶೈಲಿಯನ್ನು ಭಾರತ ಹೊಂದಿದೆ.

ಉತ್ತರ: ಒಂದು ದೇಶ ಇನ್ನೊಂದು ದೇಶವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಆ ದೇಶದ ಸಾರ್ವಭೌಮತ್ವವನ್ನು ಹತ್ತಿಕ್ಕಿ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವುದಕ್ಕೆ ವಸಾಹತುಶಾಹಿತ್ವ ಎನ್ನುವರು.

ಉತ್ತರ: ಏಕೆಂದರೆ ಭಾರತ ವಸಾಹತುಶಾಹಿತ್ವವನ್ನು ವಿರೋಧಿಸಿ ಸ್ವತಂತ್ರಗಳಿಸಿಕೊಂಡ ದೇಶ. ವಸಾಹತುಶಾಹಿತ್ವಕ್ಕೆ ಸಿಲುಕಿ ಅದರ ಕಷ್ಟವನ್ನು ಅನುಭವಿಸಿದ ದೇಶ. ಹೀಗಾಗಿ ಸ್ವಾಭಾವಿಕವಾಗಿ ಭಾರತ ವಸಾಹತುಶಾಹಿತ್ವ ವಿಶ್ವದ ಯಾವುದೆ ಮೂಲೆಯಲ್ಲೂ ಇರಕೂಡದು ಎಂದು ಪ್ರತಿಪಾದಿಸುತ್ತಿದೆ. ಅಲ್ಲದೆ 1949 ರಲ್ಲಿ ದೆಹಲಿಯಲ್ಲಿ & 1955ರಲ್ಲಿ ಬಾಂಡೂಂಗ್ ನಲ್ಲಿ ನಡೆದ ಏಷ್ಯಾ ದೇಶಗಳ ಸಮ್ಮೇಲನದಲ್ಲಿ ತನ್ನ ನಿಲುವು ಪ್ರತಿಪಾದಿಸಿದೆ.

ಉತ್ತರ : ಒಂದು ಜನಾಂಗದ / ವರ್ಣದ ಜನ ಸಮುದಾಯ ಇನ್ನೋಂದು ಜನಾಂಗದ / ವರ್ಣದ ಜನ ಸಮುದಾಯವನ್ನು ತಮಗಿಂತ ಕೀಳು ಎಂದು ಭಾವಿಸಿ ಅವರನ್ನು ಕಡೆಗಣಿಸುವ / ವಿರೋಧಿಸುವ ನೀತಿಯೆ ವರ್ಣಭೇದ ನೀತಿ.

ಉತ್ತರ:
* ಇದೊಂದು ಅಮಾನವೀಯ ಆಚರಣೆ.
* ಇದು ಮಾನವ ಹಕ್ಕುಗಳನ್ನು ಉಲ್ಲಂಘಿಸಿ ವೀಶ್ವಶಾಂತಿ & ಸಹಬಾಳ್ವೆಗೆ ಮಾರಕವಾಗಿದೆ.
* ಜನರ ನಡುವೆ ತಾರತಮ್ಯಕ್ಕೆ ಕಾರಣವಾಗಿದೆ. ಹೀಗೆ ವರ್ಣಭೇದ ನೀತಿ ಮಾನವತ್ವಕ್ಕೆ ವಿರೋಧವಾದದ್ದು.

ಉತ್ತರ : ಕೆಲವು ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತ ಹಂತವಾಗಿ ಇಲ್ಲವಾಗಿಸುವದೇ ನಿಶ್ಯಸ್ತ್ರೀಕರಣ.

ಉತ್ತರ :
* ಇದರಿಂದ ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ, ಮಾರಾಟ, ಸಂಗ್ರಹಣೆ, ನಡೆಯಬಹುದು. * ಇದರಿಂದ ಮೂರನೆ ಮಹಾಯುದ್ಧ ನಡೆಯಬಹುದೆಂಬ ಆತಂಕ ಎದುರಾಗಿದೆ.
* ಶಸ್ತ್ರಾಸ್ತ್ರಗಳ ಪೈಪೋಟಿಗೆ ಒಳಗಾದ ದೇಶಗಳು ಅಚಾತುರ್ಯದಿಂದಲೋ ತಪ್ಪುಗ್ರಹಿಕೆಯಿಂದಲೋ ಅಥವಾ ಬೇಕಂತಲೋ ಒಂದರ ಮೇಲೊಂದು ಶಸ್ತ್ರಾಸ್ತ್ರಗಳನ್ನು ಬಳಸುವ ಅಪಾಯವಿದೆ.
* ಅದರಲ್ಲೂ ಈಗಂತೂ ಅಣ್ವಸ್ತ್ರ ಬಳಸುವ ಅಪಾಯವಿದೆ. ಆದ್ಧರಿಂದ ಭಾರತ ನಿಶ್ಯಸ್ತ್ರೀಕರಣ ಪ್ರಚಲಿತ ಜಗತ್ತಿಗೆ ಅತೀ ಅಗತ್ಯ ಎಂದು ಭಾರತ ಪ್ರತಿಪಾದಿಸುತ್ತದೆ.

ಉತ್ತರ : ಏಕೆಂದರೆ ಪ್ರತಿಯೊಂದು ದೇಶಕ್ಕೂ ತನ್ನದೆ ಆದ ರಕ್ಷಣಾವ್ಯೂಹ ಅತ್ಯಗತ್ಯ.

ಉತ್ತರ :
* ಭಾರತ ಈಗಾಗಲೆ ಕಾಮನ್ ವೆಲ್ತ ಆಪ್ ನೇಶನ್ಸ್ & ಸಾರ್ಕ ಸಂಘಟನೆಯ ಸದಸ್ಯ ದೇಶವಾಗಿದ್ದು ಹಲವಾರು ದೇಶಗಳೊಡನೆ ನಿಕಟ ಸಂಬಂಧ ಹೊಂದಿದೆ.
* ವಿಶ್ವಸಂಸ್ಥೆ ಸದಸ್ಯ ದೇಶವಾಗಿದ್ದು ಭಾರತ ಮಹತ್ವದ ಪಾತ್ರವಹಿಸುತ್ತದೆ.

ಉತ್ತರ : ಹೇಗೆಂದರೆ ದೇಶ ವಿಶ್ವದ ಅನೇಕ ದೇಶಗಳೊಡನೆ ಸಂಬಂಧವನ್ನು ಇಟ್ಟುಕೊಳ್ಳುವ ಮೂಲಕ ಬೇರೆ ಬೇರೆ ದೇಶಗಳಿಂದ ನಾನಾರೀತಿಯ ಸಹಕಾರ ಪಡೆಯಲು ಸಾಧ್ಯವಾಗುತ್ತದೆ. ಆರ್ಥಿಕ ತಾಂತ್ರಿಕ ಶೈಕ್ಷಣಿಕ ಇತ್ಯಾದಿ. ಯಾವುದೇ ದೇಶ ವಿಶ್ವದಲ್ಲಿ ಏಕಾಂಗಿಯಾಗಿ ಇರಲು ಸಾಧ್ಯವಿಲ್ಲ. ನಾನಾ ಕಾರಣಗಳಿಂದ ಬೇರೆ ದೇಶಗಳೊಂದಿಗೆ ಸಂಬಂಧ ಅನಿವಾರ್ಯ.