ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ

ಒಂದು ಅಂಕದ ಪ್ರಶ್ನೆಗಳು

ಉತ್ತರ: ರೌಲತ್ ಕಾಯ್ದೆ.

ಉತ್ತರ: ನೀಲಿ ಬೆಳೆಯಿಂದ ಸಂತ್ರಪ್ತರಾದ ರೈತರ ಪರವಾಗಿ ಬಿಹಾರದ ಚಂಪಾರಣ್ಯದಲ್ಲಿ ಚಳುವಳಿ ಆರಂಭಿಸಿದರು.

ಉತ್ತರ: ಲಂಡನ್

ಉತ್ತರ: ಮಹಾತ್ಮ ಗಾಂಧೀಜಿ ಮತ್ತು ಬಿ. ಆರ್. ಅಂಬೇಡ್ಕರ್.

ಉತ್ತರ: ಸುಭಾಷ್ ಚಂದ್ರ ಬೋಸ್.

ಉತ್ತರ: ಡಾ. ಬಿ.ಆರ್. ಅಂಬೇಡ್ಕರ್.

ಉತ್ತರ: ಮುಸ್ಲಿಂ ಲೀಗ್

ಉತ್ತರ: ಸರದಾರ ವಲ್ಲಭ ಬಾಯಿ ಪಟೇಲ್.

ಉತ್ತರ: ಸುಭಾಷ್ ಚಂದ್ರ ಬೋಸ್.

ಎರಡು ಅಂಕದ ಪ್ರಶ್ನೆಗಳು

ಉತ್ತರ :
• ಶಾಲಾ ಕಾಲೇಜು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸುವುದು.
• ಪ್ರಾಂತೀಯ ಶಾಸನಸಭೆಗಳಿಗೆ ನಡೆಯುವ ಚುನಾವಣೆಯನ್ನು ಬಹಿಷ್ಕರಿಸುವುದು.
• ಬ್ರಿಟಿಷರು ನೀಡಿರುವ ಗೌರವ ಮತ್ತು ಪದವಿಗಳನ್ನು ವಾಪಸ್ಸು ಮಾಡುವುದು.
• ಸ್ಥಳೀಯ ಸಭೆಗಳಿಗೆ ನಾಮನಿರ್ದೇಶನಗೊಂಡ ಸದಸ್ಯರು ರಾಜಿನಾಮೆ ನೀಡುವುದು.
• ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಬಹಿಷ್ಕರಿಸುವುದು.
• ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದು.

ಉತ್ತರ :
• ಉತ್ತರ ಪ್ರದೇಶದ ಗೋರಕ್ಪುರದ ಚೌರಿ ಚೌರಾ ಎಂಬಲ್ಲಿ 3000 ರೈತರನ್ನೊಳಗೊಂಡ ದೊಡ್ಡ ಗುಂಪು ಪೋಲಿಸ್ ಸ್ಟೇಷನ್ನಿನ ಮುಂದೆ ಸೇರಿತು.
• ಇವರ ಉದ್ದೇಶ ಮದ್ಯದ ಅಂಗಡಿಯ ಮುಂದೆ ಮುಷ್ಕರ ನಡೆಸುತ್ತಿದ್ದ ಹೋರಾಟಗಾರರನ್ನು ಥಳಿಸಿದ ಪೋಲಿಸ್ ಅಧಿಕಾರಿಯ ವಿರುದ್ಧ ಪ್ರತಿರೋಧವನ್ನು ವ್ಯಕ್ತಪಡಿಸುವುದು.
• ಇದನ್ನು ಸಹಿಸದ ಪೋಲಿಸರು ಅಲ್ಲಿ ನೆರೆದಿದ್ದವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು.
• ಇದು ಜನರನ್ನು ಕೆರಳಿಸಿತು.
• ಅವರು ಪೋಲಿಸ್ ಸ್ಟೆಷನ್ನಿಗೆ ಬೆಂಕಿ ಇಟ್ಟರು.
• ಒಳಗಡೆ ಇದ್ದ 22 ಪೊಲೀಸರು ಸಜೀವವಾಗಿ ಸುಟ್ಟು ಹೋದರು.

ಉತ್ತರ :
• ಗಾಂಧೀಜಿ 11 ಬೇಡಿಕೆಗಳನ್ನು ವೈಸರಾಯ್ ಮುಂದೆ ಇಟ್ಟರು.
• ವೈಸ್ ರಾಯ್ ಗಾಂಧೀಜಿಯವರ ಮನವಿಯನ್ನು ತಿರಸ್ಕರಿಸಿದರು.
• ಈ ಕಾರಣದಿಂದ 1930 ಮಾ. 12 ರಂದು ಅನುಯಾಯಿಗಳೊಂದಿಗೆ ಸಬರಮತಿ ಆಶ್ರಮದಿಂದ ಗುಜರಾತಿನ ಕಡಲ ತೀರದ ದಂಡಿಯವರೆಗೆ 375 ಕಿಲೋ ಮಿಟರ್ ದೂರ ಕ್ರಮಿಸಿದರು.
• ಗಾಂಧೀಜಿ ದಂಡಿಯನ್ನು ತಲುಪಿ ಉಪ್ಪನ್ನು ತಯಾರಿಸುವ ಮೂಲಕ ಕಾನೂನು ಮುರಿದರು.
• ಚರಕ ಈ ಚಳುವಳಿಯಲ್ಲಿ ಬಹಳ ಪ್ರಸಿದ್ಧವಾಯಿತು.
• ಸಾವಿರಾರು ಜನರು ಗಾಂಧೀಜಿಯವರ ಕರೆಗೆ ಸ್ಪಂದಿಸಿ, ಚಳುವಳಿಯಲ್ಲಿ ಭಾಗವಹಿಸಿದರು.

ಉತ್ತರ :
• ಗಾಂಧೀಜಿಯವರು ದೇಶಬಾಂಧವರಿಗೆ ‘ಮಾಡು ಇಲ್ಲವೆ ಮಡಿ’ ಕರೆ ನೀಡಿದರು.
• ಈ ಕರೆ ನೀಡಿದ ಹಿನ್ನೆಲೆಯಲ್ಲಿ ಗಾಂಧೀಜಿ, ನೆಹರು, ರಾಜೇಂದ್ರ ಪ್ರಸಾದ, ವಲ್ಲಭಬಾಯಿ ಪಟೇಲ್ ಮೊದಲಾದವರನ್ನು ಬ್ರಿಟಿಷ್ ಸರ್ಕಾರವು ಬಂಧಿಸಿ ಜೈಲಿನಲ್ಲಿಟ್ಟಿತು.
• ಭಾರತೀಯ ರಾಷ್ಟೀಯ ಕಾಂಗ್ರೆಸ್ ಬಹುತೇಕ ನಾಯಕರು ಬಂಧನದಲ್ಲಿದ್ದ ಕಾರಣ ಭಾರತೀಯ ಕಾಂಗ್ರೆಸ್ಸೇತರ ಸಂಘಟನೆಗಳು ಮುಖ್ಯ ಭೂಮಿಕೆಯಲ್ಲಿದ್ದವು.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ:
• ಇವರು ನೇತಾಜಿ ಎಂದು ಜನಪ್ರಿಯರಾದರು.
• ಗಾಂಧೀಜಿಯವರ ಸೌಮ್ಯ ಹೋರಾಟಕ್ಕೆ ಬದಲಾಗಿ ಕ್ರಾಂತಿಕಾರಿ ಹೋರಾಟ ನಡೆಸಿದರು.
• ಇವರ ದೇಶ ವಿದೇಶಗಳಲ್ಲಿ ಪ್ರವಾಸ ಬೆಳೆಸಿ ತಾಯ್ನಾಡಿಗೆ ಬೆಂಬಲ ಕೋರಿದರು.
• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ ಹರಿಪುರ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.
• ‘ಫಾರ್ವರ್ಡ್ ಬ್ಲಾಕ್’ ಎಂಬ ಹೊಸ ಪಕ್ಷ ಸ್ಥಾಪಿಸಿದರು.
• ಜರ್ಮನಿಗೆ ತೆರಳಿ ಭಾರತೀಯ ಯುದ್ಧ ಕೈದಿಗಳನ್ನು ಸಂಘಟಿಸಿದರು.
• ಆಜಾದ್ ಹಿಂದ್ ರೇಡಿಯೋ ಮೂಲಕ ಭಾರತೀಯರಿಗೆ ಭಾಷಣ ಪ್ರಸಾರ ಮಾಡಿದರು.
• “ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ” ಎಂದು ಕರೆ ನೀಡಿದರು.

ಉತ್ತರ :
• ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ ಜಾರಿಗೆ ತಂದ ಕಂದಾಯ ಮತ್ತು ಅರಣ್ಯ ನೀತಿಗಳು ಬುಡಕಟ್ಟು ದಂಗೆಗಳು ನೇರ ಪ್ರೇರಣೆ ಯಾದವು.
• ಸಂತಾಲರ ದಂಗೆ, ಹೋಲರ ದಂಗೆ, ಮತ್ತು ಮುಂಡ ಚಳುವಳಿ ಪ್ರಮುವಾಗಿದೆ.
• ಕರ್ನಾಟಕದಲ್ಲಿ ಹಲಗಲಿ ಬೇಡರ ಬಂಡಾಯವು ಈ ನಿಟ್ಟಿನಲ್ಲಿ ಗಮನಾರ್ಹವಾಗಿದೆ.
• ಸಂತಾಲ ಬುಡಕಟ್ಟು ದಂಗೆಯನ್ನು ಭಾರತದ ಆದ್ಯ ಹೋರಾಟವೆಂದು ಗುರುತಿಸಲಾಗಿದೆ.
• ಈ ಬುಡಕಟ್ಟು ಜನರನ್ನು ಬಂಗಾಳಿ ಮತ್ತು ಓರಿಸ್ಸಾದ ಗುಡ್ಡಗಾಡ ಪ್ರದೇಶಗಳಲ್ಲಿ ಗುರುತಿಸಬಹುದು.
• ಖಾಯಂ ಜಮೀನ್ದಾರಿ ಪದ್ಧತಿಯಿಂದ ಬುಡಕಟ್ಟು ಜನರು ನಿರ್ಗತಿಕರಾದರು.
• ಬಂಗಾಳಿ ಜಮೀನ್ದಾರರು, ಲೇವಾದೇವಿಗಾರರು ಮತ್ತು ಕಂಪನಿ ಸರ್ಕಾರ ಸಂತಾಲರ ನೇರ ಶೋಷಣೆಗೆ ಒಳಗಾದರು.
• ಇದರಿಂದ ಅಸಮಾಧಾನಗೊಂಡ ಸಂತಾಲರು ರಹಸ್ಯ ಸಭೆಗಳನ್ನು ನಡೆಸಿ ಜಮೀನ್ದಾರರು ಮತ್ತು ಲೇವಾದೇವಿಗಾರರನ್ನು ಲೂಟಿ ಮಾಡಲು ನಿರ್ಧರಿಸಿದರು.

ಉತ್ತರ :
• ಭಾರತದ ಪ್ರಥಮ ಪ್ರಧಾನಮಂತ್ರಿ ಮತ್ತು ನವಭಾರತದ ಶಿಲ್ಪಿ.
• ವಲ್ಲಭಬಾಯಿ ಪಟೆಲ್ ಜೊತೆ ಸೇರಿ ದೇಶೀಯ ಸಂಸ್ಥಾನಗಳ ವಿಲೀನೀಕರಣಕ್ಕೆ ಕಾರಣರಾದರು.
• ಭಾಷಾವಾರು ಪ್ರಾಂತ್ಯಗಳ ರಚನೆ.
• ಬೃಹತ್ ಕೈಗಾರಿಕೆಗಳ ಅಭಿವೃದ್ಧಿ.
• ಪಂಚವಾರ್ಷಿಕ ಯೋಜನೆಗಳ ಜಾರಿ.
• ಬಂಡವಾಳ ಹಾಗೂ ಸಮಾಜವಾದಿ ತತ್ವವನ್ನೊಳಗೊಂಡ ಮಿಶ್ರ ಆರ್ಥಿಕನೀತಿ.
• ಅಣುಶಕ್ತಿ ಉತ್ಪಾದನೆ ಭದ್ರತಳಹದಿ.
• ಪಂಚಶೀಲ ತತ್ವಗಳ ಆಧಾರದ ಮೇಲೆ ಶಾಂತಿ ಸಹಬಾಳ್ವೆಯ ಸೂತ್ರಗಳನ್ನು ಅನುಷ್ಟಾನಕ್ಕೆ ತಂದರು.

ಉತ್ತರ :
• ಸಾಮಾಜಿಕ ಸಮಾನತೆಯಿಲ್ಲದ ರಾಜಕೀಯ ಸ್ವಾತಂತ್ರ್ಯ ಅರ್ಥಹೀನವೆಂದು ನಂಬಿದ್ದರು.
• ಭಾರತವನ್ನು ರಾಜಕೀಯ ಪರಿಕಲ್ಪನೆಯಾಗಿ ಕಾಣದೆ ಅದರ ಒಟ್ಟಾರೆ ಮುಖವನ್ನು ಪರಿಚಯಿಸಿದರು.
• ಜಾತಿ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿ ಅದರ ವಿನಾಶಕ್ಕೆ ಹೋರಾಟ ರೂಪಿಸಿದರು.
• ಮಹದ್ಕೆರೆ’ ಮತ್ತು ‘ಕಾಲಾರಾಂ’ ದೇವಾಲಯ ಚಳುವಳಿ ರೂಪಿಸಿದರು.
• ದುಂಡು ಮೇಜಿನ ಪರಿಷತ್ ಸಮಾವೇಶದಲ್ಲಿ ಭಾಗವಹಿಸಿದರು.
• ‘ಬಹಿಷ್ಕøತ ಹಿತಕಾರಿಣಿ ಸಭಾ’ ಹಾಗೂ ‘ಸ್ವತಂತ್ರ ಕಾರ್ಮಿಕ ಪಕ್ಷ’ ಸ್ಥಾಪಿಸಿದರು.
• ‘ಪ್ರಬುದ್ಧ ಭಾರತ’ ಮೂಕನಾಯಕ, ಬಹಿಷ್ಕೃತ ಭಾರತ ಮೊದಲ ಪತ್ರಿಕೆ ಪ್ರಾರಂಭಿಸಿದರು.
• ಕಮ್ಯುನಿಷ್ಟ್ ಮತ್ತು ಸಮಾಜವಾದಿ ಧೋರಣೆಗಳಿಂದ ದೂರ ಉಳಿದು ಕೃಷಿ ಕಾರ್ಮಿಕರ ಏಳಿಗೆಗಾಗಿ ದುಡಿದರು.

ಉತ್ತರ:
• ಚಿತ್ತರಂಜನ್ ದಾಸ್, ಮೋತಿಲಾಲ್ ನೆಹರು, ರಾಜೇಂದ್ರ ಪ್ರಸಾದ ಮೊದಲಾದ ಹಿರಿಯ ವಕೀಲರು ತಮ್ಮ ವಕೀಲ ವೃತ್ತಿ ಬಿಟ್ಟರು.
• ವಿದ್ಯಾರ್ಥಿಗಳು ಶಾಲಾ ಕಾಲೇಜು ತೊರೆದರು.
• ಪ್ರಾಂತೀಯ ಚುನಾವಣೆಗಳನ್ನು ಬಹಿಷ್ಕರಿಸಿತು.
• ಕಾಶಿ ವಿದ್ಯಾವೀರ, ಗುಜರಾತ್ ವಿದ್ಯಾಪೀಠ, ಬಿಹಾರ ವಿದ್ಯಾಪೀಠ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ರಾಷ್ಟ್ರೀಯ ವಿದ್ಯಾಲಯಗಳನ್ನು ಸ್ಥಾಪಿಸಲಾಯಿತು.
• ರವೀಂದ್ರನಾಥ ಠಾಕೂರ್ ತಮ್ಮ ‘ನೈಟ್ ಹುಡ್’ ಪದವಿಯನ್ನು ಹಿಂತಿರುಗಿಸಿದರು.
• ಮಹಿಳೆಯರೂ ಸೇರಿದಂತೆ ಜನಸಾಮಾನ್ಯರು ಕಾಂಗ್ರೆಸ್ ಹೋರಾಟಕ್ಕೆ ದೇಣಿಗೆ ನೀಡಿದರು.
• ವಿದೇಶಿ ವಸ್ತುಗಳನ್ನು ಮಾರಾಟಮಾಡುವ ಅಂಗಡಿಗಳ ಮುಂದೆ ಮುಷ್ಕರ ನಡೆಸಲಾಯಿತು.
• ‘ಪ್ರಿನ್ಸ್ ಆಫ್ವೇಲ್ಸ್’ ಬರುವ ಕಾರ್ಯಕ್ರಮವನ್ನು ವಿರೋಧಿಸಲಾಯಿತು.

ಉತ್ತರ :
• ಬ್ರಿಟಿಷ್ ಸರ್ಕಾರವು ರೌಲತ್ ಕಾಯ್ದೆಯ ಅನುಷ್ಠಾನದ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲು.
• ಇದನ್ನು ವಿರೋಧಿಸಲು ಪಂಜಾಬಿನ ಅಮೃತಸರದ ಜಲಿಯನ್ ವಾಲಾಬಾಗ್ನಲ್ಲಿ ಜನ ಬೈಸಾಕಿ ಹಬ್ಬದಂದು ಸಭೆ ಸೇರಿದರು.
• ಸೇನಾಧೀಕಾರಿ ಜನರಲ್ ಡಯರ್ ಅಲ್ಲಿ ನೆರೆದ ಜನರ ಮೇಲೆ ಗುಂಡಿನ ಧಾಳಿ ನಡೆಸಿದ್ದರಿಂದ 380 ಜನ ಮರಣ ಹೊಂದಿದರು.
• ಈ ಘಟನೆಗೆ ಗಾಂಧೀಜಿಯವರನ್ನು ಹೊಣೆಗಾರರನ್ನಾಗಿ ಮಾಡಲಾಯಿತು.
• ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಪ್ರಾರಂಭಿಸಲು ಕಾರಣವಾಯಿತು.
• ಜನರಲ್ ಡಯರ್ ನ್ನು ಉದಾಮ್ ಸಿಂಗ್ ಹತ್ಯೆ ಮಾಡಿದನು.

ಉತ್ತರ:
• ಬ್ರಿಟಿಷ್ ಸರ್ಕಾರವು ಭಾರತೀಯ ರೊಂದಿಗಿನ ಸಂಧಾನಕ್ಕಾಗಿ ಕೆಲವು ಸಲಹೆಗಳನ್ನು ಮುಂದಿಟ್ಟಿತು.
• ಭಾರತಕ್ಕೆ ಡೊಮಿನಿಯನ್ ಸ್ಥಾನ ನೀಡುವುದು, ಸಂವಿಧಾನ ರಚನಾ ಸಭೆ ಕರೆಯುವುದು.
• ಹೊಸ ಸಂವಿಧಾನದಲ್ಲಿ ಭಾರತ ಒಕ್ಕೂಟ ಸೇರುವ ಅಥವಾ ಬಿಡುವ ಸ್ವಾತಂತ್ರ್ಯ ನೀಡುವ ಸಲಹೆ ನೀಡಿತು.
• ಈ ಸಲಹೆಯನ್ನು ಒಪ್ಪದೆ ಕಾಂಗ್ರೆಸ್ ಕ್ವಿಟ್ ಇಂಡಿಯಾ ಚಳುವಳಿಗೆ ಕರೆ ನೀಡಿತು.
• ಗಾಂಧೀಜಿಯವರು ಮಾಡು ಇಲ್ಲವೆ ಮಡಿ ಕರೆ ನೀಡಿದರು.
• ಈ ಕರೆ ನೀಡಿದ ಹಿನ್ನೆಲೆಯಲ್ಲಿ ಗಾಂಧೀಜಿ, ನೆಹರು, ರಾಜೇಂದ್ರ ಪ್ರಸಾದ, ಸರ್ದಾರ್ ವಲ್ಲಭಬಾಯಿ ಪಟೆಲ್ ಮೊದಲಾದವರನ್ನು ಬ್ರಿಟಿಷ್ ಸರ್ಕಾರ ಬಂಧಿಸಿತು.
• ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಬಹುತೇಕ ನಾಯಕರು ಬಂಧನದಲ್ಲಿದ್ದ ಕಾರಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸಂಘಟನೆಗಳು ಮುಖ್ಯ ಭೂಮಿಕೆಯಲ್ಲಿದ್ದವು.