ಪದ್ಯ ಪಾಠ: ಹಕ್ಕಿ ಹಾರುತಿದೆ ನೋಡಿದಿರಾ

ಒಂದು ಅಂಕದ ಪ್ರಶ್ನೆಗಳು

ಉತ್ತರ: ಹಕ್ಕಿಯ ಗರಿಯಲ್ಲಿ ಕಪ್ಪು, ಬಿಳಿ, ಕೆಂಪು ಹಾಗೂ ಹೊನ್ನಿನ ಬಣ್ಣಗಳಿವೆ.

ಉತ್ತರ: ಹಕ್ಕಿಯು ಸಾರ್ವಭೌಮರ ನೆತ್ತಿಯನ್ನು ಕುಕ್ಕಿದೆ.

ಉತ್ತರ: ಹಕ್ಕಿಯು ಕಾಲದ ಸಂಕೇತವಾಗಿದೆ.

ಎರಡು ಅಂಕದ ಪ್ರಶ್ನೆಗಳು

ಉತ್ತರ: ಹಕ್ಕಿಯು ಯುಗಯುಗಗಳ ಹಣೆ ಬರೆಹವನ್ನು ಒರೆಸಿ ಪರಿವರ್ತನೆಯ ಮೂಲಕ ಭಾಗ್ಯೋದಯವಾಗುವಂತೆ ಮಾಡುತ್ತಿದೆ. ರೆಕ್ಕೆಯನ್ನು ಬೀಸುತ್ತಾ ಚೈತನಯುಕ್ತರನ್ನಾಗಿಸಿ ಉತ್ತಮ ಭವಿಷ್ಯತ್ತಿಗಾಗಿ ಹೊಸಗಾಲದ ಹಸುಮಕ್ಕಳನ್ನು ಹರಸುತ್ತಿದೆ.

ಉತ್ತರ: ಹಕ್ಕಿಯು ಸೂರ್ಯಚಂದ್ರರನ್ನು ತನ್ನ ಕಣ್ಣಾಗಿಸಿಕೊಂಡು ನಕ್ಷತ್ರಗಳ ಮಾಲೆಯನ್ನು ಧರಿಸಿಕೊಂಡಿದೆ. ನೀಲಾಕಾಶದಲ್ಲಿ ಮಿನುಗುತ್ತಾ, ರೆಕ್ಕೆಯನ್ನು ಬಡಿಯುತ್ತಾ ಹಾರುತ್ತಿದೆ.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಆಯ್ಕೆ: ಈ ವಾಕ್ಯವನ್ನು ದ. ರಾ. ಬೇಂದ್ರೆ ಅವರು ರಚಿಸಿರುವ ಗರಿ ಕವನ ಸಂಕಲನದಿಂದ ಆಯ್ದ ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ: ಕವಿ ದ. ರಾ. ಬೇಂದ್ರೆಯವರು ಕಾಲದ ಗತಿಯನ್ನು ಹಾರುವ ಹಕ್ಕಿಗೆ ಸಮೀಕರಿಸಿ ವರ್ಣಿಸುವ ಸಂದರ್ಭದಲ್ಲಿ ಕಾಲಪಕ್ಷಿಯು ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಭೂಮಂಡಲದ ಜೀವಿಗಳಿಗೆ ಚೈತನ್ಯ ನೀಡಿ, ಮುಂದಿನ ಜನಾಂಗದ ಮಕ್ಕಳನ್ನು ಹರಸಿ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತಿದೆ ಎಂದು ಹೇಳುತ್ತಾರೆ.

ಸ್ವಾರಸ್ಯ: ಕಾಲಪಕ್ಷಿಯು ಯುಗಯುಗದಲ್ಲೂ ಜನರಿಗೆ ಚೈತನ್ಯವನ್ನು ತುಂಬಿ ಮುಂದಿನ ಜನಾಂಗವನ್ನು ಹರಸುತ್ತಿದೆ ಎಂಬುದನ್ನು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ.

ಆಯ್ಕೆ: ಈ ವಾಕ್ಯವನ್ನು ದ. ರಾ. ಬೇಂದ್ರೆ ಅವರು ರಚಿಸಿರುವ ಗರಿ ಕವನ ಸಂಕಲನದಿಂದ ಆಯ್ದ 'ಹಕ್ಕಿ ಹಾರುತಿದೆ ನೋಡಿದಿರಾ' ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ: ಕವಿ ದ. ರಾ. ಬೇಂದ್ರೆಯವರು ಕಾಲದ ಗತಿಯನ್ನು ಹಾರುವ ಹಕ್ಕಿಗೆ ಸಮೀಕರಿಸಿ ವರ್ಣಿಸುವ ಸಂದರ್ಭದಲ್ಲಿ ಕಾಲಪಕ್ಷಿಯು ಸಾರ್ವಭೌಮರೆಂದು ಮೆರೆಯುತ್ತಿದ್ದ ಸಾಮ್ರಾಟರ ನೆತ್ತಿಯನ್ನು ಕುಕ್ಕಿ ಅವರ ಅಹಂಕಾರವನ್ನು ಮೆಟ್ಟಿ ನಿಂತಿದೆ ಎಂದು ಈ ಮಾತನ್ನು ಹೇಳುತ್ತಾರೆ.

ಸ್ವಾರಸ್ಯ: ಕಾಲದ ಗತಿಯಲ್ಲಿ ವೈಭವದಿಂದ, ಅಹಂಕಾರದಿಂದ ಮೆರೆದ ಸಾರ್ವಭೌಮರೆಲ್ಲರೂ ನಾಶವಾಗಿದ್ದಾರೆ ಎಂಬುದನ್ನು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ.

ಸಂದರ್ಭ: ಬೇಂದ್ರೆಯವರು ಕಾಲದ ಗತಿಯನ್ನು ಹಾರುವ ಹಕ್ಕಿಗೆ ಹೋಲಿಸಿ ವರ್ಣಿಸುವ ಸಂದರ್ಭದಲ್ಲಿ ಕಾಲವೆಂಬ ಪಕ್ಷಿಯು ವಿಶ್ವದ ಎಲ್ಲಾ ಭಾಗಗಳನ್ನು ಒಂದು ಸಲ ವೈಭವದಿಂದ ಮೆರೆಯುವಂತೆ ಮಾಡಿ ಮತ್ತೊಂದು ಸಲ ಮುಳುಗುವಂತೆ ಮಾಡಿದೆ ಎಂದು ಈ ಮಾತನ್ನು ಹೇಳುತ್ತಾರೆ.

ಸ್ವಾರಸ್ಯ: ಕಾಲದ ಗತಿಯಲ್ಲಿ ಅಹಂಕಾರದಿಂದ ಮೆರೆದ ಸಾರ್ವಭೌಮರೆಲ್ಲರೂ ನಾಶವಾಗಿ, ವೈಭವದಿಂದ ಮೆರೆದ ಜಗತ್ತೇ ಮುಳುಗಿ ಹೋಗಿದೆ ಎಂದು ಸ್ವಾರಸ್ಯಕರವಾಗಿ ವರ್ಣಸಿದ್ದಾರೆ.

ವಿವರಣೆ: ಬೇಂದ್ರೆಯವರು ಈ ಪದ್ಯದಲ್ಲಿ ಕಾಲದ ಸಾರ್ವಭೌಮತ್ವವನ್ನು ವಿವರಿಸಿದ್ದಾರೆ. ಈ ಕಾಲವು ರಾಜ್ಯ ಸಾಮ್ರಾಜ್ಯಗಳನ್ನು ವೈಭವದಿಂದ ಮೆರೆಯುವಂತೆ ಮಾಡಿ, ಹಾಗೆಯೇ ತೆನೆಯಲ್ಲಿನ ಕಾಳುಗಳನ್ನು ಬೇರ್ಪಡಿಸುವಂತೆ ಬೇರೆ ಬೇರೆ ಮಾಡಿದೆ. ರಾಜ ಮಹಾರಾಜರ ಕೋಟೆ ಕೊತ್ತಲಗಳನ್ನು ನಾಶ ಮಾಡಿದೆ. ವಿಶ್ವದ ಎಲ್ಲಾ ಭಾಗಗಳನ್ನು ಒಂದು ಸಲ ವೈಭವದಿಂದ ಮೆರೆಯುವಂತೆ ಮಾಡಿ, ಇನ್ನೊಂದು ಸಲ ಮುಳುಗುವಂತೆ ಮಾಡಿ, ಸಾರ್ವಭೌಮರೆಂದು ಮೆರೆದವರ ನೆತ್ತಿಯ ಮೇಲೆ ಕುಕ್ಕಿ ಕೆಳಗೆ ಬೀಳಿಸಿ ಹೊಸಕಿ ಹಾಕಿ ಹಕ್ಕಿ ಹಾರಿ ಹೋಗಿದೆ. ಅಂದರೆ ಕಾಲ ಉರುಳಿದೆ ಎಂದು ಹೇಳುತ್ತಾರೆ.

ಮೌಲ್ಯ: ಆಯಾ ಕಾಲದಲ್ಲಿ ನಡೆದ ಪ್ರತಿಯೊಂದು ಘಟನೆಯೂ ಕಾಲ ಉರುಳಿದಂತೆ ಇತಿಹಾಸವಾಗುತ್ತದೆ. ಕಾಲ ಪಕ್ಷಿಯ ಹೊಡೆತಕ್ಕೆ ಮಾನವ ತಲೆಬಾಗಿ ನಡೆಯಬೇಕೆಂಬ ಮೌಲ್ಯವನ್ನು ತಿಳಿಸಿದೆ.

ವಿವರಣೆ: ಬೇಂದ್ರೆಯವರು ಈ ಪದ್ಯದಲ್ಲಿ ಕಾಲದ ಪರಿವರ್ತನಾ ನಿಯಮ ಹಾಗೂ ಹಾರೈಕೆಯನ್ನು ವಿವರಿಸಿದ್ದಾರೆ. ಕಾಲವು ಯುಗಯುಗಗಳ ಹಣೆಬರಹವನ್ನು, ಚರಿತ್ರೆಯನ್ನು ಅಳಿಸಿಹಾಕಿ, ಹೊಸತನವನ್ನು ಬರೆದು ಎಲ್ಲರಿಗೂ ಬದಲಾವಣೆಯಾಗುವ ಒಳ್ಳೆಯ ಭಾಗ್ಯವನ್ನು ತೆರೆದು ಕೊಟ್ಟಿದೆ. ಹಾಗೆಯೇ ರೆಕ್ಕೆಯ ಬೀಸುತ, ಮೇಲಕ್ಕೆ ಹಾರುತ, ಹಾರುವ ಶಕ್ತಿಯನ್ನು ನೀಡುತ್ತಾ, ಈ ಹೊಸಗಾಲದ ಹಸು ಮಕ್ಕಳನ್ನು ಹರಸಿ, ಹಾರೈಸಿ ಬದಲಾವಣೆಯ ಹಾದಿಯನ್ನು ಹಿಡಿದು ಹಕ್ಕಿ ಹಾರಿ ಹೋಗಿದೆ ಎಂದು ಹೇಳುತ್ತಾರೆ.

ಮೌಲ್ಯ: ಹಕ್ಕಿಯ ಹಾರುವಿಕೆ ಪ್ರಕೃತಿಯ ಸಹಜ ಕ್ರಿಯೆಯೊಂದಿಗೆ ಯುಗಗಳೇ ಉರುಳಿ ಹೊಸತನಕ್ಕೆ ತೆರೆದುಕೊಳ್ಳುವ ಸಂಕೇತವಾಗಿದೆ.

ಉತ್ತರ:ಪಠ್ಯ ಪುಸ್ತಕ ನೋಡಿ