ಪದ್ಯ ಪಾಠ: ಹಲಗಲಿ ಬೇಡರು

ಒಂದು ಅಂಕದ ಪ್ರಶ್ನೆಗಳು

ಉತ್ತರ: ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ ಈ ನಾಲ್ಕು ಮಂದಿ ಹಲಗಲಿಯ ಪ್ರಮುಖರು.

ಉತ್ತರ: ಅನುಮತಿ ಇಲ್ಲದೇ ಯಾರೂ ಆಯುಧವನ್ನು ಇಟ್ಟುಕೊಳ್ಳುವಂತಿಲ್ಲ. ಹಾಗೂ ಇರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕೆಂದು ಕುಂಪಣಿ ಸರ್ಕಾರ ಆದೇಶ ಹೊರಡಿಸಿತು.

ಉತ್ತರ: ಹೆಬಲಕ್ ನನ್ನು ಹನುಮನು ಗುಂಡಿಟ್ಟು ಕೊಂದ ಸುದ್ದಿ ತಿಳಿದು ಕಾರಸಾಹೇಬ ಕೋಪದಿಂದ ಬೆಂಕಿ ಚೂರಾದನು.

ಉತ್ತರ: ಕಾರ್ ಸಾಹೇಬನ ಆದೇಶದ ಮೇರೆಗೆ ಬಿಳಿಯರ ದಂಡು ದಾಳಿ ನಡೆಸಿ, ಊರಿಗೆ ಬೆಂಕಿ ಹಚ್ಚಿದ್ದರಿಂದ ಹಲಗಲಿಯು ಗುರುತು ತಿಳಿಯದಂತೆ ಭಸ್ಮವಾಯಿತು.

ಉತ್ತರ: ‘ಹಲಗಲಿ ಬಂಟರ ಹತಾರ ಕದನದ’ ಘಟನೆಯು ‘ಹಲಗಲಿ ಬೇಡರು’ ಲಾವಣಿ ರಚನೆಗೆ ಕಾರಣವಾಗಿದೆ.

ಎರಡು ಅಂಕದ ಪ್ರಶ್ನೆಗಳು

ಉತ್ತರ : ಲಾವಣಿಗಳು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ಒಂದು ಘಟನೆಯನ್ನಾಧರಿಸಿ, ಕಥನಾತ್ಮಕವಾಗಿ ಕಟ್ಟಿದ ಹಾಡನ್ನು ಲಾವಣಿಗಳೆಂದು ಕರೆಯಲಾಗಿದೆ. ಲಾವಣಿಗಳಲ್ಲಿ ಸಾಮಾನ್ಯವಾಗಿ ವೀರತನ ಹಾಗೂ ಸಾಹಸಗಳನ್ನು ವರ್ಣಿಸುವುದರಿಂದ ಅವುಗಳನ್ನು ವೀರಗೀತೆಗಳು ಎನ್ನಲಾಗಿದೆ.

ಉತ್ತರ : ಹಲಗಲಿ ಹಳ್ಳಿಯ ರಾಮ, ಹನುಮ, ಬಾಲ, ಜಡಗ ಎಂಬ ನಾಲ್ವರು ಸಾಹಸಿ ಯುವಕರು ಸೇರಿ, ಬ್ರಿಟೀಷರ ಹುಕುಂ ವಿರುದ್ಧ ಸೆಟೆದು ನಿಂತರು. ತಾವು ಏನೇ ಆದರೂ ಬ್ರಿಟೀಷರಿಗೆ ಆಯುಧಗಳನ್ನು ಒಪ್ಪಿಸಬಾರದೆಂದು ತೀರ್ಮಾನಿಸಿದರು. ಕೈಯಾಗಿನ ಆಯುಧ ಒಮ್ಮೆ ಹೋದರೆ ಮತ್ತೆ ವಾಪಸ್ಸು ಬರದು. ಬೇಡರಿಗೆ ಆಯುಧವೇ ಜೀವ. ಆದ್ದರಿಂದ ಹತಾರ ನೀಡಬಾರದೆಂದು ನಿರ್ಧರಿಸಿದರು.

ಉತ್ತರ : ದಂಡು ಹಲಗಲಿಯ ಮೇಲೆ ದಾಳಿ ನಡೆಸಿ, ರಕ್ತದ ಕೋಡಿಹರಿಸಿತು. ಕೊಡಲಿ, ಕೋರೆ, ಕಬ್ಬಿಣ, ಮೊಸರು, ಬೆಣ್ಣೆ, ಹಾಲು, ಉಪ್ಪು, ಎಣ್ಣೆ, ಅರಿಶಿನ, ಜೀರಿಗೆ, ಅಕ್ಕಿ, ಸಕ್ಕರೆ, ಬೆಲ್ಲ, ಗಂಗಳ, ಚೆರಗಿ, ಮಂಗಳಸೂತ್ರ, ಬೀಸುಕಲ್ಲು ಎಲ್ಲಾ ಹಾಳಾಗಿ ಹೋದವು. ಬ್ರಿಟೀಷರು ಸಿಕ್ಕದ್ದು ತಗೊಂಡು ಊರಿಗೆ ಕೊಳ್ಳಿ ಇಟ್ಟರು. ಸಂಪೂರ್ಣ ಊರನ್ನು ಸುಟ್ಟು ಬೂದಿ ಮಾಡಿದರು. ಹಲಗಲಿ ಗುರುತು ಉಳಿಯಲಾರದಷ್ಟು ಹಾಳಾಗಿ ಹೋಯಿತು.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ:
ಆಯ್ಕೆ: ಈವಾಕ್ಯವನ್ನು “ಹಲಗಲಿ ಬೇಡರು” ಎಂಬ ಲಾವಣಿಯಿಂದ ಆರಿಸಿಕೊಳ್ಳಲಾಗಿದೆ. ಬಿ.ಎಸ್.ಗದ್ದಗಿಮಠ ರವರು ಸಂಪಾದಿಸಿದ್ದಾರೆ.

ಸಂದರ್ಭ: ಕಂಪನಿ ಸರ್ಕಾರದ ದಂಡಿನವರ ಯುದ್ಧದ ಬಗೆಯನ್ನು, ಕ್ರೌರ್ಯವನ್ನು ಲಾವಣಿಕಾರರು ಹೇಳುವಾಗ ಈ ಮೇಲಿನಂತೆ ವರ್ಣಿಸಿದ್ದಾರೆ. ಹಲಗಲಿಯ ಬೇಟೆಗಾರರಿಂದ ಆಯುಧಗಳನ್ನು ವಶಪಡಿಸಿಕೊಳ್ಳಬೇಕೆಂದು ತೀರ್ಮಾನಿಸಿದ ಸರ್ಕಾರ, ಹೆಚ್ಚಿನ ಸೇನೆಯನ್ನು ಕಳಿಸಿತು. ಆ ದಂಡು ಬೇಡರನ್ನು ಬೆನ್ನು ಹತ್ತಿ ಬೇಟೆಯಾಡಿತು. ಸುತ್ತಿ ಸುಳಿದು ಕೊಂದಿತು. ಅಸಹಾಯಕರನ್ನು ಅಮಾನವೀಯವಾಗಿ ಗುಂಡು ಹೊಡೆದು ಸುಟ್ಟರು, ಎಂದು ಹೇಳುವಾಗ ಈ ಮಾತು ಬಂದಿದೆ.

ಸ್ವಾರಸ್ಯ: ಕುಂಪಣಿ ಸರಕಾರದ ನಿರ್ದಯತೆ ಮತ್ತು ಕ್ರೂರತೆ ಇಲ್ಲಿ ವ್ಯಕ್ತವಾಗಿದೆ.