ಪ್ರಸ್ತುತ ಜಾರಿಯಲ್ಲಿ ಇರುವ ವೃಂದ ಮತ್ತು ನೇಮಕಾತಿ ನಿಯಮದ ಅನುಸಾರ 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ?
ಪ್ರೌಢಶಾಲಾ ಶಿಕ್ಷಕರ ಹುದ್ದೆಗಳ ಆಕಾಂಕ್ಷಿಗಳಿಗೆ ಕರ್ನಾಟಕ ರಾಜ್ಯ ಸರಕಾರ ಖುಷಿ ಪಡುವ ಸುದ್ದಿಯೊಂದನ್ನು ನೀಡಿದೆ.ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರು ದಿನಾಂಕ: 07-01-2022 ರ ತಮ್ಮ ಪತ್ರದಲ್ಲಿ ಪ್ರಸ್ತುತ ಜಾರಿಯಲ್ಲಿ ಇರುವ ವೃಂದ ಮತ್ತು ನೇಮಕಾತಿ ನಿಯಮದ ಅನುಸಾರ 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕಿರುವ ಪ್ರಯುಕ್ತ ನಾಲ್ಕೂ ವಿಭಾಗಗಳ ನೇಮಕಾತಿ ಪ್ರಾಧಿಕಾರಗಳಿಗೆ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಿದ್ದಾರೆ.
ಜಿಲ್ಲೆಯೊಳಗಿನ ಖಾಲಿ ಹುದ್ದೆಗಳ ವಿಷಯವಾರು ನಿಖರ ಮಾಹಿತಿಯನ್ನು ಪಡೆದು ಹಾಗೂ ವೃಂದ ಮತ್ತು ನೇಮಕಾತಿ ನಿಯಮ ಆಧರಿಸಿ ಈಗಾಗಲೇ ವಿಷಯವಾರು ಪ್ರೌಢ ಶಾಲಾ ಸಹ ಶಿಕ್ಷಕರ ನೇಮಕಾತಿ ಮಾಡಿರುವ ಕೊನೆಯ ಮೀಸಲಾತಿ ಬಿಂದುವಿನ ನಂತರದಿಂದ ಪ್ರಾರಂಭಿಸಿ ಆಯಾ ವಿಷಯವಾರು ಬಿಂದುವಿನಿಂದ ಮೀಸಲಾತಿ ನಿಗಧಿಪಡಿಸಿ ಸೀಟ್ ಮ್ಯಾಟ್ರಿಕ್ಸ್ ತಯಾರಿಸಿ ನಾಲ್ಕೂ ವಿಭಾಗಗಳ ಆಯ್ಕೆ ಪ್ರಾಧಿಕಾರಿಗಳು ಹಾಗೂ ವಿಭಾಗೀಯ ಸಹನಿರ್ದೇಶಕರಿಗೆ ಮಾಹಿತಿ ನೀಡಲು ಸೂಚಿಸುತ್ತಾರೆ. ಅಲ್ಲದೆ, ಸದರಿ ಪ್ರಕ್ರಿಯೆ ತುರ್ತಾಗಿರುವ ಪ್ರಯುಕ್ತ ಪ್ರಥಮ ಆದ್ಯತೆ ಮೇರೆಗೆ ಕ್ರಮ ಜರುಗಿಸಲು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮಾನ್ಯ ಆಯುಕ್ತರ ಪತ್ರವನ್ನು ಗಮನಿಸಿ.