ಗದ್ಯ ಪಾಠ: ಯುದ್ಧ | ಮಾದರಿ ಪ್ರಶ್ನೋತ್ತರಗಳು:
SSLC ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗಾಗಿ ಆನ್ ಲೈನ್ ನಲ್ಲಿಯೇ ಮನೆಯಲ್ಲಿಯೇ ಕುಳಿತು ಅಭ್ಯಾಸ ಮಾಡಲು ಪ್ರಥಮ ಭಾಷೆ ಕನ್ನಡ ವಿಷಯದ ಗದ್ಯ ಪಾಠ: ಯುದ್ಧ ಈ ಪಾಠದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ತಮಗೆ ಅನುಕೂಲವಾದ ಯಾವುದೇ ಸಮಯದಲ್ಲಿ ಈ ಪುಟಕ್ಕೆ ಭೇಟಿ ನೀಡಿ, ಇಲ್ಲಿ ನೀಡಲಾಗಿರುವ ಪ್ರಶ್ನೋತ್ತರಗಳನ್ನು ಪದೇ ಪದೇ ಅಭ್ಯಾಸ ಮಾಡಬಹುದಾಗಿದೆ.
ಈ ಪ್ರಶ್ನೋತ್ತರಗಳನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ, SSLC ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಅತ್ಯಂತ ಸಹಾಯಕವಾಗಲಿದೆ.
ಗದ್ಯ ಪಾಠ 1 ಯುದ್ಧ
ಒಂದು ಅಂಕದ ಪ್ರಶ್ನೆಗಳು
ಉತ್ತರ: ಸೇನೆಯಲ್ಲಿದ್ದ ವೈದ್ಯನ ಹೆಸರು ರಾಹಿಲ.
ಉತ್ತರ: ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಔಷಧ ಮತ್ತು ಶಸ್ತ್ರಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು ಭದ್ರವಾಗಿ ಹಿಡಿದುಕೊಂಡಿದ್ದನು.
ಉತ್ತರ: ರಾಹಿಲ ಯುದ್ಧ ವಿಮಾನದಲ್ಲಿದ್ದ ಒಬ್ಬ ಸೈನಿಕ ಡಾಕ್ಟರ್.
ಉತ್ತರ: ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು “ಬ್ಲಾಕ್ ಔಟ್” ನಿಯಮವನ್ನು ಪಾಲಿಸಲಾಗುತ್ತದೆ.
ಉತ್ತರ: “ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯಮಾಡುವುದೇ ಯುದ್ಧದ ಪರಿ” ಎಂದು ಗೊಣಗಿಕೊಂಡು ಬಾಗಿಲು ತೆರೆದಳು.
ಎರಡು ಅಂಕದ ಪ್ರಶ್ನೆಗಳು
ಉತ್ತರ: ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ “ ಅಯ್ಯೋ ಆ ಮಹಿಳೆ ಯಾವ ರೀತಿ ಅಪಾಯದಲ್ಲಿ ಸಿಲುಕಿದ್ದಾಳೆ? ಆ ಮನೆಯೊಳಗೆ ಏನು ಸಂಭವಿಸುತ್ತಿದೆ? ನಾನು ಈಗ ಆ ಮನೆಯ ಕದವನ್ನು ತಟ್ಟಿದರೆ ಪರಿಣಾಮ ಏನಾಗಬಹುದು? ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು “ಬ್ಲಾಕ್ ಔಟ್” ನಿಯಮ ಪಾಲಿಸಲಾಗುತ್ತಿದೆ. ಇಂತಹ ಈ ಸಮಯದಲ್ಲಿ ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತದೆ?” ಎಂಬ ಪ್ರಶ್ನೆಗಳು ಮೂಡಿದವು.
ಶ್ರೀಮತಿ ಸಾರಾ ಅಬೂಬಕ್ಕರ್ ಅವರು ಕ್ರಿ.ಶ. 1936 ರಂದು ಕಾಸರಗೋಡು ಎಂಬ ಊರಿನಲ್ಲಿ ಜನಿಸಿದರು. ಚಂದ್ರಗಿರಿಯ ತೀರದಲ್ಲಿ, ಸಹನಾ, ಕದನ ವಿರಾಮ, ವಜ್ರಗಳು, ಸುಳಿಯಲ್ಲಿ ಸಿಕ್ಕವರು, ತಳ ಒಡೆದ ದೋಣಿಯಲ್ಲಿ ಇತ್ಯಾದಿ ಇವರ ಪ್ರಮುಖ ಕಾದಂಬರಿಗಳು. ಚಪ್ಪಲಿಗಳು, ಖೆಡ್ಡಾ, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಪಯಣ ಮುಂತಾದ ಕಥಾಸಂಕಲನಗಳನ್ನು ಬರೆದಿದ್ದಾರೆ. ಇವರ ಸಾಹಿತ್ಯ ಕೃಷಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ “ನೃಪತುಂಗ ಪ್ರಶಸ್ತಿ” ಲಭಿಸಿದೆ.
ಮೂರು/ನಾಲ್ಕು ಅಂಕದ ಪ್ರಶ್ನೆಗಳು
ಉತ್ತರ: ಈ ವಾಕ್ಯವನ್ನು ಸಾರಾ ಅಬೂಬಕ್ಕರ್ ಅವರ “ಚಪ್ಪಲಿಗಳು” ಕಥಾಸಂಕಲನದಿಂದ ಆಯ್ದ “ಯುದ್ಧ” ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ರಾಹಿಲನು ಮುದುಕಿಗೆ ಹೇಳಿದನು. ಮನೆಯ ಒಳಗಡೆ ಹೋದ ರಾಹಿಲನಿಗೆ
ಮುದುಕಿಯ ಸೊಸೆ ಹೆರಿಗೆಯ ನೋವು ತಿನ್ನುತ್ತಿದ್ದಾಳೆ ಎಂದು ಗೊತ್ತಾಗುತ್ತದೆ. ರಾಹಿಲನು ತಾನು
ಡಾಕ್ಟರ್ ಎಂದು ಹೇಳಿದಾಗ ಮುದುಕಿಯು ಆತನನ್ನು ತನ್ನ ಸೊಸೆ ಇರುವ ಕೋಣೆಗೆ ಕರೆದುಕೊಂಡು
ಹೋದಳು. ಆಗ ರಾಹಿಲನು ಮುದುಕಿಗೆ ಹೇಳಿದ ಸಂದರ್ಭವಾಗಿದೆ.
ಉತ್ತರ: ರಾಹಿಲನು ಮುದುಕಿಗೆ ನಿಮ್ಮ ಮಗ ಈಗ ಎಲ್ಲಿದ್ದಾನೆಂದು ಕೇಳಿದಾಗ, ಮುದುಕಿಯು “ ನನ್ನ ಮಗ ಯುದ್ಧಕ್ಕೆ ಹೋಗಿದ್ದಾನೆ ! ನನ್ನ ಮಗ ಇನ್ನೂ ಚಿಕ್ಕವನಿದ್ದಾಗ ಯುದ್ಧಕ್ಕೆ ಹೋದ ಅವನ ತಂದೆ ಹಿಂತಿರುಗಲಿಲ್ಲ. ಎದೆ ಬೂದಿ ಮುಚ್ಚಿದ ಕೆಂಡ, ಎದೆಯ ಗಾಯ ಇಂದಿಗೂ ಇದೆ; ನೋಡು. ಎಲ್ಲ ದು:ಖ ನುಂಗಿಕೊಂಡು ಮಗನನ್ನು ಸಾಕಿ ಸಲಹಿದೆ; ಮದುವೆಯನ್ನೂ ಮಾಡಿದೆ. ಈಗ ಐದಾರು ವರ್ಷಗಳ ಬಳಿಕ ಸೊಸೆ ಗರ್ಭಿಣಿಯಾದಳು. ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ ಮಗನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು. ಅಷ್ಟರಲ್ಲಿ ಬಂತು ಯುದ್ಧ! ಅವನೊಮ್ಮೆ ಹಿಂತಿರುಗಿ ಬಂದಿದ್ದರೆ ಸಾಕಾಗಿತ್ತು. ಈ ವಿಷಯ ತಿಳಿದು ಅವನೆಷ್ಟು ಸಂಕಷ್ಟ ಪಡುತ್ತಾನೋ...” ಎಂದು ಮಗನು ಯುದ್ಧಕ್ಕೆ ಹೋದ ಸಂದರ್ಭವನ್ನು ವಿವರಿಸಿದಳು.