SSLC Science: Q&A of Control and Coordination

SSLC Science: Q&A of Control and Coordination

Control and Coordination (ನಿಯಂತ್ರಣ ಮತ್ತು ಸಹಭಾಗಿತ್ವ) - Solved Questions:

SSLC Science Model Questions/Solved Questions on the lesson Control and Coordination (ನಿಯಂತ್ರಣ ಮತ್ತು ಸಹಭಾಗಿತ್ವ) for the SSLC Kannada medium students have been updated in this post below. The students of SSLC can make use of this Online Study Package to get good scores in the SSLC examinations.

Teachers also can help the students to access this platform to use this Online Study Package anywhere and any time.

ನಿಯಂತ್ರಣ ಮತ್ತು ಸಹಭಾಗಿತ್ವ

ಸಾರಾಂಶ

1. ನಿಯಂತ್ರಣ ಮತ್ತು ಸಹಭಾಗಿತ್ವದ ಅವಶ್ಯಕತೆ.
2. ಮಾನವದೇಹದಲ್ಲಿ ನಿಯಂತ್ರಣ ಮತ್ತು ಸಹಭಾಗಿತ್ವಕ್ಕೆ ಪೂರಕವಾದ ಘಟಕಗಳೆಂದರೆ ನರವ್ಯೂಹ ಮತ್ತು ನಿರ್ನಾಳ ಗ್ರಂಥಿಗಳು.
3. ನರವ್ಯೂಹದ ಘಟಕಗಳಾದ ಮೆದುಳು, ಮೆದುಳುಬಳ್ಳಿ, ಮತ್ತು ನರಗಳ (ಜ್ಞಾನವಾಹಿ ಮತ್ತು ಕ್ರಿಯಾವಾಹಿ) ರಚನೆ ಮತ್ತು ಕಾರ್ಯಗಳು.
4. ಪರಾವರ್ತಿತ ಪ್ರತಿಕ್ರಿಯೆ, ಅನೈಚ್ಛಿಕ ಕ್ರಿಯೆಗಳು ಮತ್ತು ಐಚ್ಛಿಕ ಕ್ರಿಯೆಗಳ ನಿಯಂತ್ರಣ ನರವ್ಯೂಹದ ಪ್ರಮುಖ ಕಾರ್ಯ . ನರವ್ಯೂಹದಲ್ಲಿ ಸಂದೇಶಗಳ ರವಾನೆ ವಿದ್ಯುತ್ ಆವೇಗಗಳ ಮೂಲಕ ಉಂಟಾಗುತ್ತದೆ.
5. ಸಸ್ಯ ಮತ್ತು ಪ್ರಾಣಿಗಳಲ್ಲಿ ಹಾರ್ಮೋನುಗಳು : ರಾಸಾಯನಿಕ ಸಂದೇಶವಾಹಕಗಳು, ಅವುಗಳ ಪ್ರಾಮುಖ್ಯತೆ.
6. ಮಾನವನಲ್ಲಿನ ವಿವಿಧ ನಿರ್ನಾಳ ಗ್ರಂಥಿಗಳು ಮತ್ತು ವಿವಿಧ ಹಾರ್ಮೋನುಗಳು ಮತ್ತು ಅವುಗಳ ಕಾರ್ಯಗಳು.
7. ಸಸ್ಯ ಹಾರ್ಮೋನುಗಳು ಮತ್ತು ಅವುಗಳ ಕಾರ್ಯಗಳು : ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ಬೆಳವಣಿಗೆಯನ್ನು ಕುಂಠಿತಗೊಳಿಸುವ ಹಾರ್ಮೋನುಗಳು.

ಒಂದು ಅಂಕದ ಪ್ರಶ್ನೆಗಳು

ಉತ್ತರ: ನರಕೋಶ (ನ್ಯೂರಾನ್)

ಉತ್ತರ: ಮುಮ್ಮೆದುಳು, ಮಧ್ಯಮೆದುಳು ಮತ್ತು ಹಿಮ್ಮೆದುಳು.

ಉತ್ತರ: ಪರಾವರ್ತಿತ ಪ್ರತಿಕ್ರಿಯೆ.

ಉತ್ತರ: ಪರಾವರ್ತಿತ ಚಾಪ.

ಉತ್ತರ: ಅನುಮಸ್ತಿಷ್ಕ.

ಉತ್ತರ: ರಾಸಾಯನಿಕಗಳ ರೂಪದಲ್ಲಿ ಸಂದೇಶಗಳ ವಾಹಕತೆ ಉಂಟಾಗುತ್ತದೆ.

ಉತ್ತರ: ನೋಟ, ಶಬ್ದ, ವಾಸನೆ, ರುಚಿ ಮತ್ತು ಸ್ಪರ್ಶ.

ಉತ್ತರ: ಐಚ್ಛಿಕ ಕ್ರಿಯೆ.

ಉತ್ತರ: ಮೆನಿಂಜಿಸ್ ಮತ್ತು ಸೆರೆಬ್ರೋ ಸ್ಪೈನಲ್ ದ್ರವ.

ಉತ್ತರ : ಮೆದುಳನ್ನು ಯಾಂತ್ರಿಕ ಆಘಾತಗಳಿಂದ ರಕ್ಷಿಸುವುದು ಮತ್ತು ಮೆದುಳಿಗೆ ಪೋಷಕಾಂಶಗಳನ್ನು ಒದಗಿಸುವುದು.

ಉತ್ತರ : ಹಿಮ್ಮೆದುಳಿನ ಮೆಡುಲ್ಲ.

ಉತ್ತರ : ಮೆದುಳು ಬಳ್ಳಿ.

ಉತ್ತರ : ಮೆಡುಲಾ ಆಬ್ಲಾಂಗೇಟ.

ಉತ್ತರ: ದೇಹದ ಎಡಭಾಗದ ಅಂಗಗಳು.

ಉತ್ತರ : ರಕ್ತದೊತ್ತಡ, ಬಾಯಲ್ಲಿ ನೀರೂರುವಿಕೆ ಮತ್ತು ವಾಂತಿಯಾಗುವಿಕೆ.

ಉತ್ತರ : ಮೇದೋಜೀರಕ ಗ್ರಂಥಿ.

ಉತ್ತರ : ಇಥಲೀನ್.

ಉತ್ತರ : ಅಯೋಡಿನ್ ನ ಕೊರತೆ ನಮ್ಮ ದೇಹದಲ್ಲಿರುವ ಥೈರಾಯ್ಡ್ ಗ್ರಂಥಿಯ ವಿಸ್ತಾರಕ್ಕೆ ಕಾರಣವಾಗಿ ಗಳಗಂಡ ರೋಗ ಉಂಟಾಗುವುದನ್ನು ತಡೆಯಲು.

ಉತ್ತರ : ಅಕ್ರೋಮೆಗಾಲಿ.

ಉತ್ತರ : ಇನ್ಸುಲಿನ್, ಮೇದೋಜೀರಕ ಗ್ರಂಥಿ.

ಉತ್ತರ : ಪ್ರೌಢಾವಸ್ಥೆಗೂ ಮೊದಲು ಬೆಳವಣಿಗೆ ಹಾರ್ಮೋನಿನ ಕೊರತೆಯಿಂದ.

ಉತ್ತರ : ಥೈರಾಕ್ಸಿನ್ ನಮ್ಮ ದೇಹದ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುವುದರ ಮೂಲಕ ವ್ಯಕ್ತಿತ್ವದ ಬೆಳವಣಿಗೆಗೆ ಪರೋಕ್ಷವಾಗಿ ಕಾರಣವಾಗುವುದರಿಂದ.

ಉತ್ತರ :ಅಡ್ರಿನಾಲಿನ್ , ಅಡ್ರಿನಲ್ ಗ್ರಂಥಿಯಿಂದ.

ಉತ್ತರ : ಈಸ್ಟ್ರೋಜನ್ ನ ಕೊರತೆ.

ಉತ್ತರ : ಟೆಸ್ಟೋಸ್ಟಿರಾನ್

ಉತ್ತರ : ಅಂಡಾಶಯದ ಕಡೆಗೆ ಪರಾಗ ನಳಿಕೆಯ ಬೆಳವಣಿಗೆ.

ಉತ್ತರ :ಅಬ್ಸೆಸಿಕ್ ಆಮ್ಲ.

ಉತ್ತರ : ಬೇರುಗಳು.

ಉತ್ತರ : ಸಸ್ಯವೊಂದರ ಕಾಂಡವು ಬೆಳಕಿನೆಡೆಗೆ ಬೆಳೆಯುವುದನ್ನು ದ್ಯುತಿ ಅನುವರ್ತನೆ ಎನ್ನುತ್ತಾರೆ.

ಉತ್ತರ : ಆಕ್ಸಿನ್, ಜಿಬ್ಬರ್ ಲಿನ್, ಸೈಟೋಕೈನಿನ್, ಇಥಲೀನ್ ಮತ್ತು ಅಬ್ಸೆಸಿಕ್ ಆಮ್ಲ.

ಉತ್ತರ : ಸ್ವತಂತ್ರ ಚಲನೆ ಮತ್ತು ಬೆಳವಣಿಗೆಯಾಧಾರಿತ ಚಲನೆ.

ಉತ್ತರ : ಸ್ಪರ್ಶಾನುವರ್ತನೆ.

ಉತ್ತರ : ಮೆದುಳುಬಳ್ಳಿಯು ಗಾಯಗೊಂಡ ಸಂದರ್ಭದಲ್ಲಿ ಪರಾವರ್ತಿತ ಕ್ರಿಯೆ ಮತ್ತು ಅನೈಚ್ಛಿಕ ಕ್ರಿಯೆಗಳ ಸಂಕೇತಗಳ ರವಾನೆಗೆ ಅಡ್ಡಿಯುಂಟಾಗುತ್ತದೆ.

ಎರಡು ಅಂಕದ ಪ್ರಶ್ನೆಗಳು

ಉತ್ತರ : ನಮ್ಮ ಮೆದುಳಿನ ಭಾಗದಲ್ಲಿ ಇರುವ ಈ ಗ್ರಂಥಿ ಇತರ ನಿರ್ನಾಳ ಗ್ರಂಥಿಗಳು ಕಾರ್ ಯನಿರ್ವಹಿಸುವಂತೆ ಮಾಡುವ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತದೆ ಮತ್ತು ಇದರ ಮೂಲಕ ಇತರ ಎಲ್ಲ ನಿರ್ನಾಳ ಗ್ರಂಥಿಗಳ ಕಾರ್ಯವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಇದನ್ನು ಮಾಸ್ಟರ್ ಗ್ರಂಥಿ ಎನ್ನುವರು.

ಉತ್ತರ : ಉರಿಯುತ್ತಿರುವ ಊದುಬತ್ತಿಯ ವಾಸನೆಯ ಕಣಗಳು ನಮ್ಮ ಮೂಗನ್ನು ತಲುಪಿದಾಗ, ನಮ್ಮ ಮೂಗಿನ ಒಳಭಾಗದಲ್ಲಿ ಇರುವ ಆಘ್ರಾಣ ಗ್ರಾಹಕಗಳು ಅದರಿಂದ ಪ್ರಚೋದಿಸಲ್ಪಟ್ಟು, ವಿದ್ಯುತ್ ಸಂಕೇತಗಳನ್ನಾಗಿಸಿ ಅದನ್ನು ಮುಮ್ಮೆದುಳಿನ ವಾಸನೆ ಗ್ರಾಹಕ ಕೇಂದ್ರಕ್ಕೆ ತಲುಪಿಸುತ್ತದೆ. ಮೆದುಳು ಅದನ್ನು ಗ್ರಹಿಸಿ ನಮಗೆ ಪರಿಮಳವನ್ನು ಗುರುತಿಸುವಂತೆ ಮಾಡುತ್ತದೆ.

ಉತ್ತರ : ನಮ್ಮ ದೇಹದಲ್ಲಿರುವ ಮೇದೋಜೀರಕ ಗ್ರಂಥಿಯು ನಳಿಕಾ ಗ್ರಂಥಿಯಾಗಿದ್ದು, ಅದರಿಂದ ಉತ್ಪತ್ತಿಯಾಗುವ ಮೇದೋಜೀರಕ ರಸವು ನಾಳಗಳ ಮೂಲಕ ನಮ್ಮ ದೇಹದ ಜೀರ್ಣಾಂಗವ್ಯೂದ ಭಾಗವಾದ ಸಣ್ಣಕರುಳನ್ನು ತಲುಪಿ ಅಲ್ಲಿ ಆಹಾರದ ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಮತ್ತು ಈ ಗ್ರಂಥಿಯ ಕೆಲವು ನಿರ್ದಿಷ್ಟ ಘಟಕಗಳು ಇನ್ಸುಲಿನ್ ಮತ್ತು ಗ್ಲುಕಗಾನ್ ಎಂಬ ಹಾರ್ಮೋನುಗಳನ್ನು ಸ್ರವಿಕೆ ಮಾಡುವುದರೊಂದಿಗೆ ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.
ಈ ಮೇಲಿನಅಂಶಗಳಿಂದಾಗಿ “ಮೇದೋಜೀರಕ ಗ್ರಂಥಿಯು ನಳಿಕಾ ಗ್ರಂಥಿಯೂ ಹೌದು, ನಿರ್ನಾಳ ಗ್ರಂಥಿಯೂ ಹೌದು” ಎಂಬ ಹೇಳಿಕೆಯನ್ನು ಸಮರ್ಥಿಸಬಹುದು.

ಉತ್ತರ : ಹೌದು. ಇದು ಪರಾವರ್ತಿತ ಪ್ರತಿಕ್ರಿಯೆಯೇ. ಏಕೆಂದರೆ ಇಲ್ಲಿ ತೋರ್ಪಡಿಸಿರುವುದು ಉಂಟಾದ ಪ್ರಚೋದನೆಗೆ ತಕ್ಷಣದ ಪ್ರತಿಕ್ರಿಯೆ. ಇಲ್ಲಿ ನಮ್ಮ ದೇಹವನ್ನು ಆಕಸ್ಮಿಕ ಘಟನೆಗಳಿಂದ ಪಾರು ಮಾಡುವುದಾಗಿದೆ. ಇಂತಹ ಸಂದರ್ಭದಲ್ಲಿ ಮೆದುಳಿನ ಅರಿವಿಗೆ ಬರುವಷ್ಟರಲ್ಲಿ ಪ್ರತಿಕ್ರಿಯೆ ಮೆದುಳುಬಳ್ಳಿಯಿಂದಾಗಿ ಉಂಟಾಗಿರುತ್ತದೆ. ಹಾಗಾಗಿ ಇದು ಪರಾವರ್ತಿತ ಪ್ರತಿಕ್ರಿಯೆಯಾಗಿದೆ.

ಉತ್ತರ : ಸಮುದ್ರಮಟ್ಟದ ವಾತಾವರಣ ಹಾಗೂ ಹತ್ತಿರವಿರುವ ಪ್ರದೇಶದ ವಾತಾವರಣದಲ್ಲಿಯೇ ಸಾಕಷ್ಟು ಪ್ರಮಾಣದ ಅಯೋಡಿನ್ ಇದ್ದು, ಇದು ಥೈರಾಯ್ಡ್ ಗ್ರಂಥಿಯ ಸಮರ್ಪಕ ಕಾರ್ಯನಿರ್ವಹಣೆಗೆ ಪೂರಕ. ಪರ್ವತ ಪ್ರದೇಶ ಅಥವಾ ಸಮುದ್ರಮಟ್ಟದಿಂದ ಮೇಲಕ್ಕೆ ಹೋದಂತೆ ಆ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಅಲ್ಲಿನ ಇದರಿಂದಾಗಿ ಥೈರಾಯ್ಡ್ ಗ್ರಂಥಿಯು ಸಮರ್ಪಕವಾಗಿ ಕಾರ್ಯನಿರ್ವಹಿಸದೇ, ಥೈರಾಕ್ಸಿನ್ ಕೊರತೆಯುಂಟಾಗಿ ಗಳಗಂಡ ಉಂಟಾಗಬಹುದು.

ಉತ್ತರ:
ಐಚ್ಛಿಕ ಕ್ರಿಯೆಗಳು ನಮ್ಮ ನಿಯಂತ್ರಣದಲ್ಲಿ ಇವೆ ಮತ್ತು ಮೆದುಳಿನಿಂದ ನಿಯಂತ್ರಸಲ್ಪಡುತ್ತವೆ.
ಪ್ರತಿಕ್ರಿಯೆ ಉಂಟಾಗುವುದು ಐಚ್ಛಿಕ ಸ್ನಾಯುಗಳಿಂದ ಉದಾ : ಕೈ, ಕಾಲಿನ ಸ್ನಾಯುಗಳ ಚಲನೆ
ಅನೈಚ್ಛಿಕ ಕ್ರಿಯೆಗಳು
ನಮ್ಮ ನಿಯಂತ್ರಣದಲ್ಲಿ ಇಲ್ಲ ಆದರೆ ಮೆದುಳಿನಿಂದ ನಿಯಂತ್ರಿಸಲ್ಪಡುತ್ತವೆ.
ಪ್ರತಿಕ್ರಿಯೆ/ಕ್ರಿಯೆ ಉಂಟಾಗುವುದು ಅನೈಚ್ಛಿಕ ಸ್ನಾಯುಗಳಿಂದ. ಉದಾ: ಸಣ್ಣಕರುಳಿನಲ್ಲಿನ ಚಲನೆಗಳು, ಉಸಿರಾಟ ಇತ್ಯಾದಿ.

ಉತ್ತರ:
ನರವ್ಯೂಹ
ಸಂದೇಶಗಳ ರವಾನೆ ಮತ್ತು ಪ್ರತಿಕ್ರಿಯೆ ಶೀಘ್ರ ವಾಗಿರುತ್ತದೆ.
ವಿದ್ಯುತ್ ಆವೇಗಗಳ ಸಹಾಯದಿಂದ ಉಂಟಾಗುತ್ತದೆ.
ಹಾರ್ಮೋನು ವ್ಯವಸ್ಥೆ
ಸಂದೇಶಗಳ ರವಾನೆ ಮತ್ತು ಪ್ರತಿಕ್ರಿಯೆ ನಿಧಾನ.
ರಾಸಾಯನಿಕಗಳ ಸಹಾಯದಿಂದ ಉಂಟಾಗುತ್ತದೆ.

ಉತ್ತರ : ಹಾರ್ಮೋನುಗಳು ಬಿಡುಗಡೆಯಾಗ ಬೇಕಾದ ಸಮಯ ಮತ್ತು ಪ್ರಮಾಣವನ್ನು ಹಿಮ್ಮಾಹಿತಿ ವ್ಯವಸ್ಥೆಯು ನಿಯಂತ್ರಿಸುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶ ಏರಿದಾಗ ಮೇದೋಜೀರಕ ಗ್ರಂಥಿಯ ಜೀವಕೋಶಗಳು ಅದನ್ನು ಪತ್ತೆ ಹಚ್ಚುತ್ತವೆ. ಆಗ ಹೆಚ್ಚಿನ ಇನ್ಸುಲಿನ್ ಅನ್ನು ಬಿಡುಗಡೆ ಮಾಡಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತವೆ ಹೀಗಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಿಸಲ್ಪಡುತ್ತದೆ.

ಉತ್ತರ : ಮಾನವ ಮೆದುಳಿನ ಪ್ರಮುಖ ಭಾಗ ಮುಮ್ಮೆದುಳು. ಇದರ ಇತರ ಕಾರ್ಯಗಳೆಂದರೆ
1) ಕೇಳಿಸುವಿಕೆ, ವಾಸನೆ ಗ್ರಹಣ ಮತ್ತು ನೋಟ
2) ಮಾಹಿತಿಗಳ ಸಂಗ್ರಹಣೆ
3) ಐಹಿಕ ಸ್ನಾಯುಗಳ ಚಲನೆ
4) ಹಸಿವು ಬಾಯಾರಿಕೆಗಳ ಅನುಭವ.

ಉತ್ತರ : ಅಡ್ರಿನಲ್ ಹಾರ್ಮೋನ್ ತನ್ನ ಗುರಿ ಅಂಗವಾದ ಹೃದಯಕ್ಕೆ ತಲುಪುತ್ತದೆ ಹೆಚ್ಚಾಗುತ್ತದೆ. ಇದರಿಂದ ಅಧಿಕ ಆಮ್ಲಜನಕ ಸರಬರಾಜಾಗುತ್ತದೆ. ಜೀರ್ಣಾಂಗವ್ಯೂಹ ಮತ್ತು ಚರ್ಮಕ್ಕೆ ಸಂಚಾರ ಕಡಿಮೆಯಾಗುತ್ತದೆ. ಮೂಳೆ ಮತ್ತು ಸ್ನಾಯುಗಳ ಕಡೆಗೆ ತಿರುಗುತ್ತದೆ. ಮತ್ತು ದೇಹವು ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗುತ್ತದೆ.

ಉತ್ತರ : ಆಕ್ಸಿನ್ ಇದು ಸಾಮಾನ್ಯವಾಗಿ ಬೇರು ಮತ್ತು ಕಾಂಡದ ತುದಿಗಳಲ್ಲಿ ಸಂಶ್ಲೇಷಣೆಗೊಳ್ಳುವ ಹಾರ್ಮೋನ್ ಆಗಿದೆ. ಸಸ್ಯದ ಒಂದು ಭಾಗದ ಮೇಲೆ ಬೆಳಕು ಬಿದ್ದಾಗ ಆಕ್ಸಿನ್ ಚಿಗುರಿನ ವ್ಯಾಪಿಸುತ್ತದೆ. ಇದರಿಂದ ಆಕ್ಸಿನ್ ಸಾಂದ್ರತೆಯು ನೆರಳಿನ ಜಾಗದಲ್ಲಿ ಅಧಿಕಗೊಂಡು ಅಲ್ಲಿನ ಜೀವಕೋಶಗಳು ವೇಗವಾಗಿ ಬೆಳೆದು ಬೆಳಕಿನ ಕಡೆಗೆ ಬಾಗುತ್ತವೆ.

ಉತ್ತರ : ಭೂಮಿಯ ಗುರುತ್ವದ ಪ್ರಚೋದನೆಗೆ ಒಳಪಟ್ಟು ಸಸ್ಯದ ಭಾಗವು ಅದರ ಕಡೆಗೆ ಬೆಳೆಯುವುದನ್ನು ಗುರುತ್ವಾನುವರ್ತನೆ ಎನ್ನುತ್ತೇವೆ.
ಉದಾಹರಣೆಗೆ ಬೇರು ಭೂಮಿಯ ಕಡೆಗೆ ಬೆಳೆಯುವುದು
ಗುರುತ್ವ ಬಲಕ್ಕೆ ವಿರುದ್ಧವಾಗಿ ಸಸ್ಯದ ಭಾಗಗಳು ಬೆಳೆಯುವುದನ್ನು ಋಣ ಗುರುತ್ವಾನುವರ್ತನೆ ಎನ್ನಲಾಗುತ್ತದೆ.
ಉದಾಹರಣೆಗೆ ಕಾಂಡವು ಮೇಲ್ಮುಖವಾಗಿ ಬೆಳೆಯುವುದು.

ಉತ್ತರ : ಪಠ್ಯಪುಸ್ತಕ ಭಾಗ -1 ಪುಟ ಸಂಖ್ಯೆ :100

ಉತ್ತರ : ಪಠ್ಯಪುಸ್ತಕ ಭಾಗ -1 ಪುಟ ಸಂಖ್ಯೆ :103

ಮೂರು/ನಾಲ್ಕು ಅಂಕದ ಪ್ರಶ್ನೆಗಳು

$ads={2}

 

ಉತ್ತರ:
1. ಮುಮ್ಮೆದುಳು : ಆಲೋಚನೆ, ಜ್ಞಾಪಕಶಕ್ತಿ, ಶ್ರವಣ, ಓದು, ಮಾತು, ಇವೆಲ್ಲವನ್ನೂ ನಿಯಂತ್ರಿಸುವುದು.
2. ಮಧ್ಯ ಮೆದುಳು : ಸಂದೇಶಗಳ ರವಾನೆ. ಮುಖ್ಯವಾಗಿ ಕಣ್ಣು ಮತ್ತು ಕಿವಿ ಯಿಂದ ಬರುವ ಸಂದೇಶಗಳನ್ನು ಮೆದುಳಿನಿಂದ ಮೊಮ್ಮಗಳಿಗೂ ಮೆದುಳಿನಿಂದ ಹಿಮ್ಮೆದುಳು ತಲುಪಿಸುತ್ತದೆ.
3. ಹಿಮ್ಮೆದುಳು: ದೇಹ ಸಮತೋಲನವನ್ನು ನಿಯಂತ್ರಿಸುವುದು, ಅನೈಚ್ಛಿಕ ಕ್ರಿಯೆಗಳಾದ ಉಸಿರಾಟ, ಹೃದಯ ಬಡಿತ, ವಾಂತಿಯಾಗುವಿಕೆ ಇವುಗಳನ್ನು ನಿಯಂತ್ರಿಸುವುದು.

ಉತ್ತರ :ಮುಟ್ಟಿದರೆ ಮುನಿ ಸಸ್ಯದಲ್ಲಿ ಸ್ಪರ್ಶಿಸಲ್ಪಟ್ಟ ಭಾಗಕ್ಕಿಂತ ವಿಭಿನ್ನವಾದ ಭಾಗದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಇಲ್ಲಿ ಮಾಹಿತಿಯು ಜೀವಕೋಶದಿಂದ ಜೀವಕೋಶಕ್ಕೆ ವಿದ್ಯುತ್ ರಾಸಾಯನಿಕ ವಿಧಾನದಲ್ಲಿಯೇ ತಲುಪುತ್ತದೆ. ಆದರೆ ವಿಶಿಷ್ಟಅಂಗಾಂಶಗಳಿರುವುದಿಲ್ಲ. ಸಸ್ಯಜೀವಕೋಶಗಳು ತಮ್ಮೊಳಗಿನ ನೀರಿನ ಪ್ರಮಾಣವನ್ನು ಬದಲಾಯಿಸಿಕೊಂಡು ತಮ್ಮ ಆಕಾರವನ್ನು ಬದಲಿಸುತ್ತವೆ. ಇದರ ಪರಿಣಾಮವಾಗಿ ಅವು ಉಬ್ಬುವ ಅಥವಾ ಮುದುಡುವುದರ ಮೂಲಕ ತಮ್ಮ ಆಕಾರವನ್ನು ಬದಲಿಸಿ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ.

ಉತ್ತರ : ಸಸ್ಯದಲ್ಲಿ ಉತ್ಪತ್ತಿಯಾಗುವ ರಾಸಾಯನಿಕವಾಗಿದ್ದು ಅದರ ಸಹಕಾರ ಮತ್ತು ನಿಯಂತ್ರಣಕ್ಕೆ ಪೂರಕವಾಗುವ ರಾಸಾಯನಿಕಗಳೇ ಸಸ್ಯ ಹಾರ್ಮೋನುಗಳು.
1. ಆಕ್ಸಿನ್ : ಜೀವಕೋಶವನ್ನು ಉದ್ದವಾಗಿರುತ್ತದೆ.
2. ಜಿಬ್ಬರಲಿನ್ : ಕಾಂಡದ ಬೆಳವಣಿಗೆಗೆ ಸಹಾಯ ಮಾಡುತ್ತದೆ.
3. ಸೈಟೋಕೈನಿನ್ : ಕೋಶ ವಿಭಜನೆಯನ್ನು ಪ್ರಚೋದಿಸುತ್ತದೆ.
4. ಇಥಲೀನ್ : ಹಣ್ಣುಗಳು ಮಾಗಲು ಸಹಾಯಕ.
5. ಅಬ್ಸಿಸಿಕ್ಆಮ್ಲ: ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಉತ್ತರ : ಪರಾವರ್ತಿತ ಚಾಪ ಈ ಕೆಳಗಿನಂತೆ ಇದೆ.
ಗ್ರಾಹಕವು ಪ್ರಚೋದನೆಯನ್ನು ಗ್ರಹಿಸುವುದು.
ಜ್ಞಾನವಾಹಿ ನರದ ಮೂಲಕ ಪ್ರಚೋದನೆ ಮೆದುಳು ಬಳ್ಳಿಯನ್ನು ತಲುಪುವುದು.
ಸಂಪರ್ಕನರಕೋಶದ ಮೂಲಕ ನಿರ್ಧಾರವು ಕ್ರಿಯಾವಾಹಿ ನರಕ್ಕೆ ರವಾನೆಯಾಗುವುದು.
ಕ್ರಿಯಾವಾಹಿ ನರವು ಸಂದೇಶವನ್ನು ಸಂಬಂಧಪಟ್ಟ ಸ್ನಾಯುಗಳಿಗೆ ತಲುಪಿಸುವುದು.
ಸ್ನಾಯುಗಳು ಪ್ರತಿಕ್ರಿಯೆಯನ್ನು ಉಂಟುಮಾಡುವುದು.

ಉತ್ತರ:
1 ಥೈರಾಕ್ಸಿನ್ : ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುವುದು.
2 ಅಡ್ರಿನಾಲಿನ್ : ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಹಕಾರ ನೀಡುತ್ತದೆ.
3 ಈಸ್ಟ್ರೋಜನ್ : ಸ್ತ್ರೀತ್ವದ ಲಕ್ಷಣಗಳನ್ನು ಪ್ರಚೋದಿಸುತ್ತದೆ.
4 ಟೆಸ್ಟೋಸ್ಟೆರಾನ್ : ಪುರುಷ ಲಕ್ಷಣಗಳನ್ನು ಪ್ರಚೋದಿಸುತ್ತದೆ.
5 ಬೆಳವಣಿಗೆ ಹಾರ್ಮೋನ್ : ದೇಹದ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.

ಉತ್ತರ : ಪಠ್ಯಪುಸ್ತಕ ಭಾಗ -1 ಪುಟ ಸಂಖ್ಯೆ : 104

Previous Post Next Post