ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ?

ಒಂದು ಅಂಕದ ಪ್ರಶ್ನೆಗಳು

ಉತ್ತರ: ಕೋಶ ವಿಭಜನೆಯ ಸಂದರ್ಭದಲ್ಲಿ ಡಿ.ಎನ್.ಎ. ತನ್ನನ್ನು ತಾನೇ ನಕಲುಗೊಳಿಸಿಕೊಂಡು ಎರಡು ಪ್ರತಿರೂಪಗಳಾಗುವ ಪ್ರಕ್ರಿಯೆ.

ಉತ್ತರ: ಅನುವಂಶೀಯ ಮಾಹಿತಿಯ ನಿರ್ದಿಷ್ಟ ಘಟಕಗಳಿರುವ ನ್ಯೂಕ್ಲಿಕ್ ಆಮ್ಲ ಮತ್ತು ಪ್ರೋಟೀನ್ ಗಳಿಂದಾದ ರಚನೆ.

ಉತ್ತರ: ಅನುವಂಶೀಯ ಗುಣಗಳಿಗೆ ಕಾರಣವಾದ ರಚನಾತ್ಮಕ ಮತ್ತು ಕಾರ್ಯಾತ್ಮಕ ಮೂಲ ಘಟಕ.

ಉತ್ತರ: ಅನುವಂಶೀಯ ಗುಣಗಳಲ್ಲಿ ಪರಿವರ್ತನೆ ತರಬಲ್ಲ ಡಿ.ಎನ್.ಎ. ದಲ್ಲಾಗುವ ಬದಲಾವಣೆ.

ಉತ್ತರ: ಗರ್ಭಕೋಶದ ಗೋಡೆಯೊಳಗೆ ಹುದುಗಿಕೊಂಡಿರುವ ತಟ್ಟೆಯಾಕಾರದ ರಚನೆಯಾಗಿದ್ದು ಇದು ಭ್ರೂಣಕ್ಕೆ ಪೋಷಣೆ ಒದಗಿಸುತ್ತದೆ.

ಉತ್ತರ: ಅಂಡವು ಫಲಿತಗೊಳ್ಳದಿದ್ದರೆ ಅಂಡಾಶಯದ ಒಳಸ್ತರಿಯು ಬಿರುಕುಬಿಟ್ಟು ರಕ್ತ ಮತ್ತು ಲೋಳೆಯ ರೂಪದಲ್ಲಿ ಯೋನಿಯಿಂದ ಹೊರಬರುತ್ತದೆ. ಇದು ಪ್ರತೀ ತಿಂಗಳೂ ನಡೆಯುತ್ತದೆ. ಇದನ್ನು ಋತುಚಕ್ರ ಎನ್ನುವರು.

ಉತ್ತರ: ದೇಹದ ಸಾಮಾನ್ಯ ಬೆಳವಣಿಗೆಯ ದರವು ನಿಧಾನವಾಗಲು ಪ್ರಾರಂಭಿಸಿದಂತೆ ಸಂತಾನೋತ್ಪತ್ತಿಯ ಅಂಗಾಂಶಗಳು ಫಕ್ವವಾಗಲು ಪ್ರಾರಂಭವಾಗುತ್ತವೆ. ಹದಿಹರೆಯದ ಈ ಅವಧಿಯನ್ನು ಪ್ರೌಢಾವಸ್ಥೆ ಎನ್ನುವರು.

ಉತ್ತರ: ಇಲ್ಲ. ಏಕೆಂದರೆ, ಜೀವಿಗಳ ಸೃಷ್ಟಿಯು ಡಿ.ಎನ್.ಎ. ಸ್ವಪ್ರತೀಕರಣವನ್ನು ಒಳಗೊಂಡಿದೆ. ಡಿ.ಎನ್.ಎ. ಸ್ವಪ್ರತೀಕರಣವು ಒಂದು ಜೀವ ರಾಸಾಯನಿಕ ಕ್ರಿಯೆಯಾಗಿದ್ದು, ಇದು ಸಂಪೂರ್ಣ ವಿಶ್ವಾಸಾರ್ಹವಲ್ಲ.

ಎರಡು ಅಂಕದ ಪ್ರಶ್ನೆಗಳು


ಉತ್ತರ :

ಪರಾಗಸ್ಪರ್ಶ ನಿಶೇಚನ
ಹೂವಿನ ಪರಾಗಕೋಶದಿಂದ ಪರಾಗ ರೇಣುಗಳು ಶಲಾಕಾಗ್ರಕ್ಕೆ ವರ್ಗಾವಣೆಯಾಗುವ ಪ್ರಕ್ರಿಯೆ. ಹೂವಿನ ಅಂಡಾಣುವಿನೊಳಗೆ ಗಂಡು ಲಿಂಗಾಣುಗಳು ಸಂಯೋಗ ಹೊಂದುವ ಪ್ರಕ್ರಿಯೆ.
ಗಾಳಿ, ನೀರು ಅಥವಾ ಪ್ರಾಣಿಗಳಂತಹ ಮಾಧ್ಯಮಗಳ ಮೂಲಕ ನಡೆಯುತ್ತವೆ. ಪರಾಗನಾಳದ ಮೂಲಕ ಗಂಡು ಲಿಂಗಾಣು ಅಂಡಾಣುವಿನಲ್ಲಿರುವ ಹೆಣ್ಣು ಲಿಂಗಾಣುವನ್ನು ತಲುಪುವುದರ ಮೂಲಕ ನಡೆಯುತ್ತದೆ.

ಉತ್ತರ :

ಸ್ವಕೀಯ ಪರಾಗಸ್ಪರ್ಶಪರಕೀಯ ಪರಾಗಸ್ಪರ್ಶ
ಒಂದು ಹೂವಿನ ಪರಾಗಕೋಶದಿಂದ ಪರಾಗರೇಣುಗಳು ಅದೇ ಹೂವಿನ ಶಲಾಕಾಗ್ರಕ್ಕೆ ವರ್ಗಾವಣೆಯಾಗುವ ಪ್ರಕ್ರಿಯೆ. ಒಂದು ಹೂವಿನ ಪರಾಗಕೋಶದಿಂದ ಪರಾಗರೇಣುಗಳು ಅದೇ ಪ್ರಬೇಧಕ್ಕೆ ಸೇರಿದ ಇನ್ನೊಂದು ಸಸ್ಯದಲ್ಲಿರುವ ಹೂವಿನ ಶಲಾಕಾಗ್ರಕ್ಕೆ ವರ್ಗಾವಣೆಯಾಗುವ ಪ್ರಕ್ರಿಯೆ.
ಪರಾಗರೇಣುಗಳ ಪ್ರಸಾರಕ್ಕೆ ಗಾಳಿ, ನೀರು ಅಥವಾ ಪ್ರಾಣಿಗಳಂತಹ ಮಾಧ್ಯಮಗಳ ಅಗತ್ಯವಿಲ್ಲ.ಪರಾಗರೇಣುಗಳ ಪ್ರಸಾರಕ್ಕೆ ಗಾಳಿ, ನೀರು ಅಥವಾ ಪ್ರಾಣಿಗಳಂತಹ ಮಾಧ್ಯಮಗಳ ಅಗತ್ಯವಿದೆ.

ಉತ್ತರ : ಹುಡುಗಿಯರಲ್ಲಿ ಸ್ತನಗಳ ಗಾತ್ರ ದೊಡ್ಡದಾಗಲು ಪ್ರಾರಂಭವಾಗುತ್ತದೆ ಮತ್ತು ಸ್ತನಾಗ್ರದ ತೊಟ್ಟುಗಳು ದಟ್ಟವಾದ ಬಣ್ಣವನ್ನು ಹೊಂದುತ್ತವೆ ಹಾಗೂ ಇದೇ ಸಮಯದಲ್ಲಿ ಹುಡುಗಿಯರಲ್ಲಿ ಮಾಸಿಕ ಋತುಚಕ್ರ ಪ್ರಾರಂಭವಾಗುತ್ತದೆ.

ಉತ್ತರ : ಹುಡುಗರಲ್ಲಿ ಮುಖದ ಮೇಲೆ ಹೊಸದಾಗಿ ಕೂದಲುಗಳು ಕಾಣಿಸಿಕೊಳ್ಳುತ್ತವೆ. ಹುಡುಗರ ಧ್ವನಿ ಒಡೆಯಲು ಪ್ರಾರಂಭವಾಗುತ್ತವೆ. ಮುಂದುವರೆದು, ಹಗಲುಗನಸಿನಲ್ಲಿ ಅಥವಾ ರಾತ್ರಿ ವೇಳೆಯಲ್ಲಿ ಶಿಶ್ನವು ಆಗಾಗ್ಗೆ ದೊಡ್ಡದಾಗುತ್ತದೆ ಮತ್ತು ನಿಮಿರುತ್ತದೆ.

ಉತ್ತರ : ಇಲ್ಲ. ಏಕೆಂದರೆ, ಕಾಪರ್-ಟಿಯ ಬಳಕೆಯು ವೀರ್ಯಾಣುವಿನ ಒಳಸೇರುವಿಕೆಯನ್ನು ತಡೆಗಟ್ಟುತ್ತದೆಯೇ ಹೊರತು ಲೈಂಗಿಕ ರೋಗವನ್ನಲ್ಲ. ಕಾಪರ್-ಟಿಯ ಬಳಕೆಯ ವಿಧಾನವು ಒಂದು ಗರ್ಭನಿರೋಧಕ ವಿಧಾನವಾಗಿದೆ.

$ads={2}

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ:
1. ಬೇಡದ ಗರ್ಭವನ್ನು ತಡೆಯುವುದು.
2. ಜನಸಂಖ್ಯಾ ಸ್ಪೋಟಕವನ್ನು ನಿಯಂತ್ರಿಸುವುದು.
3. ಲೈಂಗಿಕ ರೋಗಗಳನ್ನು ತಡೆಯುವುದು.

ಉತ್ತರ :
1. ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಹೆಚ್ಚು ಭಿನ್ನತೆಗಳು ಉಂಟಾಗುವುದರಿಂದ ಪ್ರಭೇದದ ಉಳುಯುವಿಕೆಗೆ ಕಾರಣವಾಗಿದೆ.
2. ಉತ್ಪತ್ತಿಯಾದ ಹೊಸ ಜೀವಿಯು ತಂದೆ ಮತ್ತು ತಾಯಿಯ ಲಕ್ಷಣಗಳನ್ನು ಪಡೆಯುತ್ತದೆ.
3. ಎರಡು ಅಥವಾ ಹೆಚ್ಚು ಜೀವಿಗಳಲ್ಲಿನ ಭಿನ್ನತೆಗಳನ್ನು ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಒಟ್ಟುಗೂಡಿಸುವುದರಿಂದ ಹೊಸ ಸಂಯೋಜನೆ ಉಂಟಾಗುತ್ತದೆ.

ಉತ್ತರ :
ಅಂಡಾಶಯ: ಅಂಡಾಣು ಉತ್ಪಾದನೆ ಮಾಡುತ್ತದೆ. ಎರಡು ಅಂಡಾಶಯಗಳು ಪ್ರತಿ ತಿಂಗಳು ಪರ್ಯಾಯವಾಗಿ ಅಂಡಾಣು ಉತ್ಪಾದನೆ ಮಾಡುತ್ತವೆ.
ಫೆಲೋಪಿಯನ್ ನಾಳ: ಅಂಡವು ನಾಳದ ಮೂಲಕ ಗರ್ಭಕೋಶಕ್ಕೆ ಸಾಗಿಸಲ್ಪಡುತ್ತದೆ.
ಗರ್ಭಕೋಶ: ಭ್ರೂಣದ ಬೆಳವಣಿಗೆಯ ಭಾಗವಾಗಿದೆ.
ಗರ್ಭಕೋಶದ ಕಂಠ: ಯೋನಿ ಮತ್ತು ಗರ್ಭಕೋಶವನ್ನು ಸೇರಿಸುವ ಭಾಗವಾಗಿದೆ.

ಉತ್ತರ :
ನೈಸರ್ಗಿಕ ವಿಧಾನ: ಈ ವಿಧಾನವು ಅಂಡಾಣು ಬಿಡುಗಡೆಯ ಸಮಯದಲ್ಲಿ ಅಂದರೆ, ಋತುಚಕ್ರದ ನಂತರ ಹತ್ತರಿಂದ ಹದಿನೇಳು ದಿನಗಳವರೆಗೆ ಲೈಂಗಿಕ ಸಂಪರ್ಕವನ್ನು ನಿಲ್ಲಿಸಿ ನಿಶೇಚನವನ್ನು ತಡೆಗಟ್ಟುವ ವಿಧಾನ.
ಯಾಂತ್ರಿಕ ವಿಧಾನ: ಕಾಂಡೋಮ್ ಧರಿಸುವುದು ಮತ್ತು ಯೋನಿಯೊಳಗೆ ಚೀಲವನ್ನು ಅಳವಡಿಸಿಕೊಳ್ಳುವುದು.
ಬಾಯಿಯ ಮೂಲಕ ಔಷಧ ತೆಗೆದುಕೊಳ್ಳುವುದು: ಇದರಿಂದ ಹಾರ್ಮೋನುಗಳ ಸಮತೋಲನವನ್ನು ಬದಲಾಯಿಸಲಾಗುತ್ತದೆ.
ಅಳವಡಿಕೆ ಮತ್ತು ಶಸ್ತ್ರಚಿಕಿತ್ಸಾ ವಿಧಾನ: ಈ ವಿಧಾನದಲ್ಲಿ ಗರ್ಭನಿರೋಧಕ ಸಾಧನಗಳಾದ ವಂಕಿ ಅಥವಾ ಕಾಪರ್-ಟಿಯನ್ನು ಗರ್ಭಕೋಶದೊಳಗೆ ಅಳವಡಿಸಲಾಗುತ್ತದೆ. ಶಸ್ತ್ರ ಚಿಕಿತ್ಸೆಯ ಮೂಲಕ ಮಹಿಳೆಯರ ಅಂಡನಾಳಕ್ಕೆ ತಡೆಯೊಡ್ಡಲಾಗುತ್ತದೆ.

ಉತ್ತರ: 1. ಭ್ರೂಣವು ಜರಾಯು ಎಂಬ ವಿಶೇಷ ಅಂಗಾಂಶದ ಮೂಲಕ ತಾಯಿಯ ರಕ್ತದಿಂದ ಫೋಷಣೆ ಪಡೆಯುತ್ತದೆ.
2. ಜರಾಯುವು ಗರ್ಭಕೋಶದ ಒಳಗೆ ಹುದುಗಿಕೊಂಡಿರುವ ತಟ್ಟೆಯಂತಹ ರಚನೆಯಾಗಿದೆ.
3. ಇದು ಭ‍್ರೂಣದ ಅಂಗಾಂಶದ ಭಾಗದಲ್ಲಿ ವಿಲ್ಲೈಗಳನ್ನು ಹೊಂದಿದೆ. ಮತ್ತು ತಾಯಿಯ ಕಡೆಗಿನ ಭಾಗದಲ್ಲಿ ವಿಲ್ಲೈಗಳನ್ನು ಸುತ್ತುವರೆದಂತೆ ರಕ್ತಾವಕಾಶಗಳಿವೆ.
4. ಇದು ತಾಯಿಯಿಂದ ಭ್ರೂಣಕ್ಕೆ ಗ್ಲುಕೋಸ್ ಮತ್ತು ಆಕ್ಸಿಜನ್ ಹಾದುಹೋಗಲು ವಿಶಾಲವಾದ ಮೇಲ್ಮೈಯನ್ನು ಒದಗಿಸುತ್ತದೆ.

ಉತ್ತರ :
ವಿದಳನ: ತಾಯಿ ಜೀವಕೋಶವು ಎರಡು ಅಥವಾ ಎರಡಕ್ಕಿಂತ ಹೆಚ್ಚು ಮರಿ ಕೋಶಗಳಾಗಿ ವಿಭಜನೆ ಹೊಂದುವುದು.
ಉದಾ : ಅಮೀಬಾ
ತುಂಡರಿಕೆ: ಮಾತೃಕಾಯವು ಎರಡು ಅಥವಾ ಹೆಚ್ಚು ಭಾಗಗಳಾಗಿ ತುಂಡಾಗುತ್ತದೆ. ಪ್ರತಿಭಾಗವು ಸಂಪೂರ್ಣವಾಗಿ ಹೊಸಜೀವಿಯಾಗಿ ಬೆಳೆಯುತ್ತದೆ.
ಉದಾ: ಸ್ಪೈರೋಗೈರಾ
ಪುನರುತ್ಪಾದನೆ: ಜೀವಿಯು ಯಾವುದೇ ಕಾರಣದಿಂದ ತುಂಡಾದರೆ ಅಥವಾ ಅನೇಕ ಚೂರುಗಳಾಗಿ ಹೋದರೆ ಇಂಥಹ ಅನೇಕ ಚೂರುಗಳು ಪ್ರತ್ಯೇಕ ಜೀವಿಗಳಾಗಿ ಬೆಳೆಯುತ್ತವೆ.
ಉದಾ: ಪ್ಲನೇರಿಯಾ
ಮೊಗ್ಗುವಿಕೆ: ಜೀವಿಯ ನಿರ್ದಿಷ್ಟ ಭಾಗದಲ್ಲಿ ಪುನರಾವರ್ತಿತ ಕೋಶವಿಭಜನೆಯಿಂದ ಒಂದು ಮೊಗ್ಗು ಬಾಹ್ಯವೃದ್ಧಿಯಾಗಿ ಬೆಳೆಯುತ್ತದೆ. ಅದು ಸಂಪೂರ್ಣ ಜೀವಿಯಾಗಿ ಬೆಳೆದು ಮಾತೃದೇಹದಿಂದ ಬೇರ್ಪಟ್ಟು ಹೊಸ ಸ್ವತಂತ್ರ ಜೀವಿಗಳಾಗುತ್ತವೆ.
ಉದಾ: ಹೈಡ್ರಾ
ಬೀಜಕಗಳ ಉತ್ಪಾದನೆ: ಕೆಲವು ಜೀವಿಗಳು ಬೀಜಕಗಳನ್ನು ಹೊಂದಿದ್ದು, ಅವು ಅಂತಿಮವಾಗಿ ಹೊಸ ಜೀವಿಗಳಾಗಿ ಬೆಳವಣಿಗೆ ಹೊಂದುತ್ತವೆ.
ಉದಾ: ರೈಜೋಪಸ್
ಕಾಯಜ ಸಂತಾನೋತ್ಪತ್ತಿ: ಬೇರು, ಕಾಂಡ, ಎಲೆಗಳಿಂದ ಹೊಸ ಸಸ್ಯ ಬೆಳೆಯುವುದು. ಉದಾ: ಬ್ರಯೋಫಿಲಮ್

ಉತ್ತರ:
ವೃಷಣಗಳು: ವೀರ್ಯಾಣುಗಳನ್ನು ಉತ್ಪಾದನೆ ಮಾಡುತ್ತವೆ.
ವೃಷಣಚೀಲ: ವೃಷಣಗಳಿರುವ ಭಾಗ, ದೇಹದ ತಾಪಕ್ಕಿಂತ ಕೊಂಚ ಕಡಿಮೆ ತಾಪ ಇರುವಂತೆ ಕಾರ್ಯ ನಿರ್ವಹಿಸುತ್ತವೆ.
ವೀರ್ಯನಾಳ: ವೃಷಣದಿಂದ ಶಿಶ್ನಕ್ಕೆ ವೀರ್ಯಾಣುವನ್ನು ಸಾಗಿಸುವ ನಾಳ.
ಪ್ರಾಸ್ಪೇಟ್ ಗ್ರಂಥಿ: ವೀರ್ಯಾಣುಗಳ ಜೊತೆ ಒಂದು ರೀತಿಯ ದ್ರವವನ್ನು ಸೇರಿಸುತ್ತದೆ. ಸೇರ್ಪಡೆಯಾದ ಮೇಲೆ ಅದು ವೀರ್ಯ ಎನಿಸುಕೊಳ್ಳುತ್ತದೆ. ಸೇರ್ಪಡೆಯಾಗುವ ದ್ರವವು ರಾಸಾಯನಿಕಗಳನ್ನು, ಕಿಣ್ವಗಳನ್ನು ಒಳಗೊಂಡಿದ್ದು, ಕ್ಷಾರೀಯವಾಗಿರುತ್ತದೆ. ಹೆಣ್ಣು ಜನನಾಂಗದಲ್ಲಿ ವೀರ್ಯಾಣುಗಳು ನಾಶವಾಗದಂತೆ ತಡೆಯುತ್ತದೆ.
ವೀರ್ಯ ಕೋಶಿಕೆ: ವೀರ್ಯಾಣುವಿಗೆ ದ್ರವ ಸೇರ್ಪಡೆ ಮಾಡುತ್ತದೆ. ಸೇರ್ಪಡೆಯಾದ ದ್ರವ ಪ್ರೋಟೀನ್, ಕಿಣ್ವ, ಸಕ್ಕರೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.