SSLC Science: Q&A of Life Processes

SSLC Science: Q&A of Life Processes

Life Processes (ಜೀವ ಕ್ರಿಯೆಗಳು) - Solved Questions:

SSLC Science Model Questions/Solved Questions on the lesson Life Processes (ಜೀವ ಕ್ರಿಯೆಗಳು) for the SSLC Kannada medium students have been updated in this post below. The students of SSLC can make use of this Online Study Package to get good scores in the SSLC examinations.

Teachers also can help the students to access this platform to use this Online Study Package anywhere and any time.

ಜೀವಕ್ರಿಯೆಗಳು

ಮುಖ್ಯಾಂಶಗಳು

• ಜೀವನ ನಿರ್ವಹಣೆಗೆ ಮತ್ತು ಉಳಿವಿಗಾಗಿ ಜೀವಿಗಳು ನಡೆಸುವ ಪ್ರಮುಖ ಕ್ರಿಯೆಗಳೇ ಜೀವಕ್ರಿಯೆಗಳು.

• ಏಕಕೋಶ ಜೀವಿಗಳಲ್ಲಿ ವಿಸರಣೆಯ ಮೂಲಕ ಜೀವಕ್ರಿಯೆ ನಡೆದರೆ, ಬಹುಕೋಶ ಜೀವಿಗಳಲ್ಲಿ ವಿವಿಧ ರೀತಿಯ ಜೀವಕ್ರಿಯೆಗಳನ್ನು ನಡೆಸಲು ವಿಶೇಷ ಅಂಗಗಳಿರುತ್ತವೆ.

• ಜೀವಕ್ರಿಯೆಗಳನ್ನು ನಡೆಸಲು ಶಕ್ತಿಯ ಅವಶ್ಯಕತೆಯಿದೆ, ಆ ಶಕ್ತಿಯ ಅವಶ್ಯಕತೆಯನ್ನು ಪೋಷಣೆಯ ಮೂಲಕ ಪಡೆಯುತ್ತವೆ.
• ಪೋಷಣೆಯಲ್ಲಿ ಎರಡು ವಿಧಗಳಿವೆ.

ಸ್ವಪೋಷಣೆ: ತನ್ನ ಪೋಷಣೆಯನ್ನು ಆಹಾರವನ್ನು ಜೀವಿಯು ಸ್ವತಹ ತಾನೆ ಮಾಡಿಕೊಳ್ಳುತ್ತವೆ (ಉದಾ: ಹಸಿರು ಸಸ್ಯ ಆಹಾರ ತಯಾರಿಸುವ ವಿಧಾನ).

ಪರಪೋಷಣೆ: ಆಹಾರಕ್ಕಾಗಿ ಬೇರೆ ಜೀವಿಗಳ ಮೇಲೆ ಅವಲಂಬನೆ. (ಉದಾ: ಪ್ರಾಣಿಗಳು ಆಹಾರಕ್ಕಾಗಿ ಸಸ್ಯ ಮತ್ತು ಪ್ರಾಣಿಗಳನ್ನು ಅವಲಂಬಿಸಿರುವುದು)

• ಮಾನವರಲ್ಲಿ ಪೋಷಣೆ: 2 ಹಂತದಲ್ಲಿ ನಡೆಯುತ್ತದೆ. ಯಾಂತ್ರಿಕ ಪಚನಕ್ರಿಯೆ ಮತ್ತು ರಾಸಾಯನಿಕ ಪಚನಕ್ರಿಯೆ (ಕಿಣ್ವಗಳ ಸಹಾಯದಿಂದ).

• ಉಸಿರಾಟ ಕ್ರಿಯೆ: ಗ್ಲುಕೋಸ್ ವಿಭಜಿಸಿ ಶಕ್ತಿ ಬಿಡುಗಡೆಯಾಗುವ ಕ್ರಿಯೆ ಅಥವಾ ವಿಧಾನ.

• ಆಮ್ಲಜನಕ ಸಹಿತ ಮತ್ತು ಆಮ್ಲಜನಕ ರಹಿತ ಉಸಿರಾಟಗಳೆ ಎಂಬ ಎರಡು ವಿಧಾನಗಳಿವೆ.

• ರಕ್ತಪರಿಚಲನೆ (ಸಾಗಾಣಿಕ ವ್ಯೂಹ): ಹೃದಯ, ರಕ್ತ ಮತ್ತು ರಕ್ತನಾಳಗಳನ್ನು ಒಳಗೊಂಡಿದೆ.

• ವಿಸರ್ಜನೆ: ನೈಟ್ರೋಜನ್ ಯುಕ್ತ ತ್ಯಾಜ್ಯ ಪದಾರ್ಥವನ್ನು ದೇಹದಿಂದ ಹೊರ ಹಾಕುವ ಕ್ರಿಯೆ.

• ವಿಸರ್ಜನಾಂಗ ವ್ಯೂಹವು ಮೂತ್ರಪಿಂಡ, ಮೂತ್ರನಾಳ, ಮೂತ್ರಕೋಶಗಳನ್ನು ಒಳಗೊಂಡಿದೆ.


• ಮೂತ್ರಪಿಂಡವು ನೆಫ್ರಾನ್ ಎಂಬ ಸೂಕ್ಷ್ಮನಾಳವನ್ನು ಹೊಂದಿದ್ದು, ಅದು ಮುಖ್ಯ ಕಾರ್ಯನಿರ್ವಾಹಕ ಘಟಕವಾಗಿದೆ.

• ಸಸ್ಯಗಳಲ್ಲಿ ನೀರು, ಖನಿಜ, ಆಹಾರ ಮತ್ತು ಇತರೆ ವಸ್ತುಗಳ ಸಾಗಾಣಿಕೆಯು ವಾಹಕ ಅಂಗಾಂಶಗಳಾದ ಕ್ಸೈಲಂ ಮತ್ತು ಪ್ಲೋಯಂ ಮೂಲಕ ನಡೆಯುತ್ತದೆ.

• ಸಸ್ಯಗಳಲ್ಲಿ ವಿಸರ್ಜನೆಯು ವಿಶೇಷವಾಗಿ ಹಳೆಯ ಕ್ಸೈಲಂ ಗಳಲ್ಲಿ ತ್ಯಾಜ್ಯ ಪದಾರ್ಥಗಳು ಅಂಟು ಮತ್ತು ರಾಳಗಳ ರೂಪದಲ್ಲಿ ಸಂಗ್ರಹವಾಗುತ್ತದೆ.

ಒಂದು ಅಂಕದ ಪ್ರಶ್ನೆಗಳು

ಉತ್ತರ: ಏಕೆಂದರೆ ಏಕಕೋಶ ಜೀವಿಗಳ ಸಂಪೂರ್ಣ ಹೊರಮೈ ಪರಿಸರದ ಸಂಪರ್ಕದಲ್ಲಿರುವುದರಿಂದ ಜೀವಕ್ರಿಯೆ ನಡೆಸಲು ನಿರ್ದಿಷ್ಟ ಅಂಗಗಳ ಅಗತ್ಯವಿಲ್ಲ.

ಉತ್ತರ: ಬಹುಕೋಶ ಜೀವಿಗಳಲ್ಲಿ ಎಲ್ಲಾ ಜೀವಕೋಶಗಳ ಅಗತ್ಯವನ್ನು ಪೂರೈಸಲು ಸಾಧ್ಯವಿಲ್ಲ. ಏಕೆಂದರೆ ಬಹುಕೋಶ ಜೀವಿಗಳ ಗಾತ್ರ ಹೆಚ್ಚಾದಂತೆ ಎಲ್ಲಾ ಜೀವಕೋಶಗಳು ಸುತ್ತಲಿನ ಪರಿಸರದೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಿಲ್ಲ.

ಉತ್ತರ: ಜೀವಿಯು ವಿಭಿನ್ನ ಜೀವಕ್ರಿಯೆಗಳನ್ನು ನಡೆಸಲು ಹಾಗು ಬೆಳವಣಿಗೆ ಹೊಂದಲು ಹೊರಗಿನಿಂದ (ಕಾರ್ಬನ್ ಮೂಲದ) ಆಹಾರ ಪಡೆಯುವುದನ್ನು ಪೋಷಣೆ ಎನ್ನುವರು.

ಉತ್ತರ: ಕಾರ್ಬನ್ ಡೈಆಕ್ಸೈಡ್, ಸೂರ್ಯನ ಬೆಳಕು, ಕ್ಲೋರೋಫಿಲ್, ಲವಣ ಮತ್ತು ನೀರು.

ಉತ್ತರ: ಜೈವಿಕ ವೇಗವರ್ಧಕಗಳನ್ನು ಕಿಣ್ವ ಎನ್ನುವರು.

ಉತ್ತರ: ಸಸ್ಯಗಳಲ್ಲಿ ಕಾರ್ಬೋಹೈಡ್ರೇಟ್ (ಗ್ಲುಕೋಸ್) ರೂಪದಲ್ಲಿ ಹಾಗೂ ಪ್ರಾಣಿಗಳಲ್ಲಿ ಗ್ಲೈಕೋಜನ್ ರೂಪದಲ್ಲಿ ಶಕ್ತಿ ಬಿಡುಗಡೆಯಾಗುತ್ತದೆ.

ಉತ್ತರ: ಸಸ್ಯಗಳಲ್ಲಿ ಅನಿಲ ವಿನಿಮಯ ಕಾರ್ಯಕ್ಕೆ ಸಹಾಯಕವಾಗಿದೆ.

ಉತ್ತರ: ಕಾವಲು ಜೀವಕೋಶ.

ಉತ್ತರ: ಕಾವಲು ಜೀವಕೋಶದೊಳಗೆ ನೀರು ಪ್ರವೇಶಿಸಿದಾಗ ಅವು ಉಬ್ಬುತ್ತವೆ ಮತ್ತು ಪತ್ರರಂಧ್ರ ತೆರೆಯಲು ಕಾರಣವಾಗುತ್ತದೆ.

ಉತ್ತರ : ಅಮೈಲೇಸ್ ಕಿಣ್ವ.
ಅದು ಪಿಷ್ಠವನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ.

ಉತ್ತರ : ಕಂಪನ ಚಲನೆ.

ಉತ್ತರ : ಪೆಪ್ಸಿನ್ ಕಿಣ್ವ, ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಲೋಳೆಯನ್ನು ಒಳಗೊಂಡಿದೆ.

ಉತ್ತರ : ಪೆಪ್ಸಿನ್ ಕಿಣ್ವ ಕ್ರಿಯೆಯನ್ನು ಉತ್ತೇಜಿಸುತ್ತದೆ.

ಉತ್ತರ: ಲೋಳೆಯು ಜಠರದ ಗೋಡೆಯನ್ನು ಆಮ್ಲದ ಕ್ರಿಯೆಯಿಂದ ರಕ್ಷಿಸುತ್ತದೆ.

ಉತ್ತರ: ಪ್ರೋಟೀನನ್ನು ಜೀರ್ಣಿಸುತ್ತದೆ.

ಉತ್ತರ: ಸಸ್ಯದಲ್ಲಿರುವ ಸೆಲ್ಯುಲೋಸ್ ನ್ನು ಜೀರ್ಣಗೊಳಿಸಲು.

ಉತ್ತರ: ಸಣ್ಣಕರುಳು

ಉತ್ತರ: ಪಿತ್ತರಸವು ಕೊಬ್ಬುಗಳ ದೊಡ್ಡ ದೊಡ್ಡ ಕಣಗಳನ್ನು ಚಿಕ್ಕ ಚಿಕ್ಕ ಕಣಗಳಾಗಿ ವಿಭಜಿಸುವುದನ್ನು ಎಮಲ್ಸೀಕರಣ ಎನ್ನುವರು.

ಉತ್ತರ: ಜಠರದಿಂದ ಬರುವ ಆಹಾರವು ಆಮ್ಲೀಯವಾಗುದ್ದು ಮೇದೋಜೀರಕ ಕಿಣ್ವಗಳ ಪ್ರತಿವರ್ತಣೆಗಾಗಿ ಕ್ಷಾರೀಯಗೊಳಿಸುವ ಅಗತ್ಯವಿದೆ.

ಉತ್ತರ: ಟ್ರಿಪ್ಸಿನ್

ಉತ್ತರ: ಕೊಬ್ಬನ್ನು ವಿಭಜಿಸಿ ಕೊಬ್ಬಿನಾಮ್ಲ ಮತ್ತು ಗ್ಲಿಸರಾಲ್ ಆಗಿ ಪರಿವರ್ತಿಸುತ್ತದೆ.

ಉತ್ತರ: ಅಮೈನೋ ಆಮ್ಲ, ಗ್ಲುಕೋಸ್, ಕೊಬ್ಬಿನಾಮ್ಲ ಮತ್ತು ಗ್ಲಿಸರಾಲ್

ಉತ್ತರ: ವಿಲ್ಲೈ

ಉತ್ತರ: ಜೀರ್ಣವಾದ ಆಹಾರವನ್ನು ಹೀರಿಕೊಳ್ಳುತ್ತದೆ.

ಉತ್ತರ: ಪೈರುವೇಟ್

ಉತ್ತರ: ಕೋಶದ್ರವ್ಯದಲ್ಲಿ

ಉತ್ತರ: ಆಕ್ಸಿಜನ್ ಕೊರತೆ ಇದ್ದಾಗ.

ಉತ್ತರ: ದೇಹಕ್ಕೆ ಆಕ್ಸಿಜನ್ ಕೊರತೆ ಒಂಟಾಗಿ, ಸ್ನಾಯು ಜೀವಕೋಶಗಳಲ್ಲಿ ಲ್ಯಾಕ್ಟಿಕ್ ಆಮ್ಲ ಉತ್ಪತ್ತಿಯಾಗಿ ಸ್ನಾಯು ಸೆಳೆತ ಉಂಟಾಗುತ್ತದೆ.

ಉತ್ತರ: ATP (ಏಟಿಪಿ).

ಉತ್ತರ: ಗಾಳಿಗೂಡು (ಅಲ್ವಿಯೋಲೈ)

ಉತ್ತರ: ಹೀಮೋಗ್ಲೋಬಿನ್

ಉತ್ತರ: ನೀರಿನಲ್ಲಿ ಕರಗಿರುವ ಆಮ್ಲಜನಕದ ಪ್ರಮಾಣ ಕಡಿಮೆ ಇರುವುದರಿಂದ.

ಉತ್ತರ: ಗಾಳಿ ಹಾದುಹೋಗುವ ರಚನೆ ಕುಸಿಯದಂತೆ ನೋಡಿಕೊಳ್ಳಲು.

ಉತ್ತರ: ಅನಿಲ ವಿನಿಮಯ

ಉತ್ತರ: ರಕ್ತವು ಹಿಮ್ಮುಖವಾಗಿ ಹರಿಯದಂತೆ ನಿಯಂತ್ರಿಸುತ್ತದೆ.

ಉತ್ತರ: ವಸ್ತುಗಳ ವಿನಿಮಯಕ್ಕೆ ಸಹಾಯಕವಾಗಿದೆ.

ಉತ್ತರ: ಸಸ್ಯಗಳಲ್ಲಿ ಹೆಚ್ಚಾದ ನೀರು ಎಲೆಗಳಲ್ಲಿರುವ ಪತ್ರರಂಧ್ರಗಳ ಮೂಲಕ ಆವಿಯಾಗುವ ಕ್ರಿಯೆ.

ಉತ್ತರ: ನೈಟ್ರೋಜನ್ ಯುಕ್ತ ತ್ಯಾಜ್ಯ ಪದಾರ್ಥವನ್ನು ದೇಹದಿಂದ ಹೊರಹಾಕುವ ಕ್ರಿಯೆ.

ಉತ್ತರ: ನೆಫ್ರಾನ್

ಉತ್ತರ: ಯೂರಿಯಾ ಅಥವಾ ಯೂರಿಕ್ ಆ್ಯಸಿಡ್.

ಎರಡು ಅಂಕದ ಪ್ರಶ್ನೆಗಳು

ಉತ್ತರ : ನಮ್ಮದೇಹದಲ್ಲಿ ಸಂಪೂರ್ಣ ಜೀರ್ಣಕ್ರಿಯೆ ನಡೆಯುವ ಭಾಗ ಸಣ್ಣಕರುಳು.
ಪ್ರೋಟೀನ್-ಅಮೈನೋ ಆಮ್ಲ, ಕಾರ್ಬೋಹೈಡ್ರೇಟ್-ಗ್ಲುಕೋಸ್, ಕೊಬ್ಬಿನ ಆಮ್ಲ ಮತ್ತು ಗ್ಲಿಸರಾಲ್.

ಉತ್ತರ :
ಮೇದೋಜೀರಕ ಗ್ರಂಥಿ ಸ್ರವಿಸುವ ಕಿಣ್ವ:
ಟ್ರಿಪ್ಸಿನ್ ಮತ್ತು ಲೈಪೇಸ್.
ಟ್ರಿಪ್ಸಿನ್ - ಪ್ರೋಟೀನ್ ನ್ನು ಜೀರ್ಣಿಸುತ್ತದೆ.
ಲೈಪೇಸ್ - ಕೊಬ್ಬನ್ನು ಜೀರ್ಣಿಸುತ್ತದೆ.

ಉತ್ತರ :
1. ಕೊಬ್ಬಿನ ಎಮಲ್ಸೀಕರಣಗೊಳಿಸುವ ಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
2. ಮೇದೋಜೀರಕ ಕಿಣ್ವಗಳ ಪ್ರತಿವರ್ತನೆಗೆ ತೊಂದರೆಯಾಗಿ ಅದರ ಕಾರ್ಯಕ್ಷಮತೆ ಕುಂಠಿತಗೊಳ್ಳುತ್ತದೆ.

ಉತ್ತರ : ಮೇದೋಜೀರಕ ಕಿಣ್ವಗಳು ಕ್ಷಾರೀಯ ಮಾಧ್ಯಮದಲ್ಲಿ ಪ್ರತಿವರ್ತಿಸುತ್ತದೆ. ಈ ಕಾರ್ಯಕ್ಕೆ ಪಿತ್ತರಸ ಸಹಕರಿಸುತ್ತದೆ.

ಉತ್ತರ :
1. ಸಣ್ಣಕರುಳಿನ ಒಳಭಾಗದ ಗೋಡೆಗಳು ವಿಲ್ಲೈಗಳೆಂಬ ಬೆರಳಿನಾಕಾರದ ರಚನೆಗಳನ್ನು ಹೊಂದಿದ್ದು, ಇವುಗಳು ಆಹಾರವನ್ನು ಹೀರಿಕೊಳ್ಳಲು ಮೇಲ್ಮೈ ಹೆಚ್ಚಿಸುತ್ತದೆ.
2. ವಿಲ್ಲೈಗಳು ರಕ್ತನಾಳದಿಂದ ಸಮೃದ್ಧವಾಗಿದ್ದು, ಅವು ಹೀರಿಕೊಂಡು ದೇಹಗತಗೊಳಿಸುತ್ತದೆ.

ಉತ್ತರ:
ಕಪ್ಪೆಗಳು ಮತ್ತು ಹಲ್ಲಿಗಳು ಮೂರು ಕೋಣೆಗಳ ಹೃದಯವನ್ನು ಹೊಂದಿದೆ. ಆಕ್ಸಿಜನ್ ಸಹಿತ ಮತ್ತು ಆಕ್ಸಿಜನ್ ರಹಿತ ರಕ್ತವು ಹೃದಯದಲ್ಲಿ ಮಿಶ್ರಣವಾಗುತ್ತದೆ. ಶಕ್ತಿಯ ಉತ್ಪಾಧನೆಯು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ ಮತ್ತು ಸ್ಥಿರ ಉಷ್ಣತೆ ಕಾಪಾಡಿಕೊಳ್ಳಲು ಈ ಶಕ್ತಿಯು ಬಳಕೆಯಾಗುವುದಿಲ್ಲ.

ಉತ್ತರ:
1. ಅನಿಲ ವಿನಿಮಯ
2. ಬಾಷ್ಪ ವಿಸರ್ಜನೆ

ಉತ್ತರ :
1. ಪಕ್ಷಿಗಳು ಮತ್ತು ಸ್ತನಿಗಳು ಹೆಚ್ಚಿನ ಚಟುವಟಿಕೆಯಿಂದ ಕೂಡಿರುವುದರಿಂದ ಶಕ್ತಿಯ ಅವಶ್ಯಕತೆಯಿರುವುದರಿಂದ.
2. ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಅಧಿಕ ಶಕ್ತಿಯ ಅವಶ್ಯಕತೆ ಇದೆ.

ಉತ್ತರ : ಕೆಂಪು ರಕ್ತಕಣದಲ್ಲಿರುವ ಹಿಮೋಗ್ಲೋಬಿನ್ ಆಮ್ಲಜನಕದ ಕಡೆಗೆ ಹೆಚ್ಚಿನ ಆಕರ್ಷಣೆಯನ್ನು ಹೊಂದಿದ್ದು, ಇದು ಶ್ವಾಸಕೋಶಗಳಿಂದ ಆಕ್ಸಿಜನ್ ನ್ನು ದೇಹದ ಇತರೆ ಭಾಗಗಳಿಗೆ ಸಾಗಿಸುತ್ತದೆ. ಕಾರ್ಬನ್ ಡೈಆಕ್ಸೈಡ್ ಆಕ್ಸಿಜನ್ ಗಿಂತ ನೀರಿನಲ್ಲಿ ಹೆಚ್ಚಾಗಿ ಕರಗುವುದರಿಂದ ರಕ್ತದ ಪ್ಲಾಸ್ಮಾದ ಮೂಲಕ ಶ್ವಾಸಕೋಶಗಳಿಗೆ ಸಾಗಾಣಿಕೆಯಾಗುತ್ತದೆ.

ಉತ್ತರ : ದುಗ್ಧರಸವು ಜೀರ್ಣವಾದ ಮತ್ತು ಕರುಳಿನಿಂದ ಹೀರಲ್ಪಟ್ಟ ಕೊಬ್ಬನ್ನು ಅಭಿಧಮನಿಗಳಿಗೆ ಸಾಗಿಸುತ್ತದೆ ಮತ್ತು ಜೀವಕೋಶದ ಹೊರಗಿರುವ ಅಧಿಕ ದ್ರವ ಪದಾರ್ಥವನ್ನು ಮರಳಿ ರಕ್ತಕ್ಕೆ ಹರಿಯುವಂತೆ ಮಾಡುತ್ತದೆ.

ಉತ್ತರ : ಋತ್ಕುಕ್ಷಿಗಳು ರಕ್ತವನ್ನು ಹಲವಾರು ಅಂಗಗಳಿಗೆ ಒತ್ತಡದಿಂದ ಪಂಪು ಮಾಡಬೇಕಾಗಿರುವುದರಿಂದ ಋತ್ಕುಕ್ಷಿಗಳು ಋತ್ಕರ್ಣಗಳಿಗಿಂತ ದಪ್ಪವಾದ ಸ್ನಾಯುವಿನ ಭಿತ್ತಿಗಳನ್ನು ಹೊಂದಿದೆ.

ಉತ್ತರ : ಲೈಪೇಸ್ ಕಿಣ್ವಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು.

ಉತ್ತರ : ಆಮ್ಲಜನಕಸಹಿತ ರಕ್ತ ಮತ್ತು ಆಮ್ಲಜನಕರಹಿತ ರಕ್ತ ಮಿಶ್ರಣವಾಗದಂತೆ ತಡೆಯುವುದು.

ಉತ್ತರ: ಗ್ಸೈಲಂ ಮತ್ತು ಪ್ಲೋಯಂ.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

$ads={2} 

ಉತ್ತರ:
1. ಗ್ಲೊಮೆರುಲಸ್ ಸೋಸುವಿಕೆ: ರಕ್ತನಾಳದ ಜಾಲವಾಗಿದ್ದು, ಇಲ್ಲಿ ರಕ್ತವು ಶೋಧಿಸಲ್ಪಡುತ್ತದೆ.
2. ವ್ಯತ್ಯಸ್ಥ ಮರು ಹೀರಿಕೆ: ಶೋಧಿಸಲ್ಪಟ್ಟ ರಕ್ತದಲ್ಲಿ ಗ್ಲುಕೋಸ್, ಅಮೈನೋ ಆಮ್ಲ, ಲವಣ ಮತ್ತು ಹೆಚ್ಚಿನ ಪ್ರಮಾಣದ ನೀರು ಹಾಗೂ ಕೆಲವು ಉಪಯುಕ್ತ ವಸ್ತುಗಳು ಇದ್ದು ಅವು ಮೂತ್ರನಾಳದಲ್ಲಿ ಪುನಹ ಹೀರಲ್ಪಡುತ್ತದೆ.
3. ನಳಿಕಾಶ್ರವಿಕೆ: ಪುನಹ ಹೀರಲ್ಪಟ್ಟನಂತರ ಉಳಿಯುವ ದ್ರವವು ಸಂಗ್ರಾಹಕ ನಾಳದಲ್ಲಿ ಸಂಗ್ರಹಿಸಲ್ಪಡುತ್ತದೆ.

ಉತ್ತರ : ಸಸ್ಯಗಳಲ್ಲಿ ಆಹಾರ ಮತ್ತು ಇತರೆ ವಸ್ತುಗಳ ಸ್ಥಾನಾಂತರಣವು ಪ್ಲೋಯಂ ಅಂಗಾಂಶದ ಜರಡಿ ನಾಳದ ಪಾರ್ಶ್ವಸಂಗಾತಿ ಜೀವಕೋಶದ ಸಹಾಯದಿಂದ ಮೇಲ್ಮುಖ ಹಾಗೂ ಕೆಳಮುಖ ಎರಡೂ ದಿಕ್ಕುಗಳಲ್ಲಿ ನಡೆಯುತ್ತದೆ. ಪ್ಲೋಯಂನಲ್ಲಿ ಶಕ್ತಯನ್ನು ಬಳಸಿಕೊಂಡು ವಸ್ತುಗಳ ಸ್ಥಾನಾಂತರಣವನ್ನು ಸಾಧಿಸಲಾಗುತ್ತದೆ. ATP ಯಿಂದ ಶಕ್ತಿಯನ್ನು ಬಳಸಿಕೊಂಡು ಆಹಾರದ ಮೇಲ್ಮುಖ ಮತ್ತು ಕೆಳಮುಖ ಸಾಗಾಣಿಕೆಗೆ ಬೇಕಾದ ಅಭಿಸರಣ ಒತ್ತಡವನ್ನು ಏರ್ಪಟಿಸುತ್ತದೆ.

ಉತ್ತರ :
1. ಕ್ಲೋರೋಪೋಫಿಲ್ ನಿಂದ ಬೆಳಕಿನ ಶಕ್ತಿ ಹೀರುವಿಕೆ.
2. ಬೆಳಕಿನ ಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುವುದು ಮತ್ತು ನೀರಿನ ಅಣುಗಳು ಹೈಡ್ರೋಜನ್ ಮತ್ತು ಆಕ್ಸಿಜನ್ ಆಗಿ ವಿಭಜಿಸಲ್ಪಡುವುದು.
3. ಕಾರ್ಬನ್ ಡೈ ಆಕ್ಸೈಡ್ ಕಾರ್ಬೀಹೈಡ್ರೇಟ್ ಆಗಿ ಪರಿವರ್ತಿಸಲ್ಪಡುವುದು.

ಉತ್ತರ : ಕಶೇರುಕಗಳಲ್ಲಿ ರಕ್ತವು ಪ್ರತಿಯೊಂದು ಪರಿಚಲನೆಗೆ ಎರಡು ಬಾರಿ ಹೃದಯವನ್ನು ಹಾದುಹೋಗುವ ಕ್ರಿಯೆಗೆ ಇಮ್ಮಡಿ ಪರಿಚಲನೆ ಎನ್ನುವರು.
ಮೀನುಗಳಲ್ಲಿ ಇಮ್ಮಡಿ ಪರಿಚಲನೆ ಕಂಡುಬರುವುದಿಲ್ಲ. ಏಕೆಂದರೆ ಮೀನುಗಳು ಕೇವಲ ಎರಡು ಕೋಣೆಗಳ ಹೃದಯವನ್ನು ಹೊಂದಿದ್ದು ಕಿವಿರುಗಳಿಗೆ ಪಂಪ್ ಮಾಡಲ್ಪಡುವ ರಕ್ತವು ಆಕ್ಸಿಜನ್ ಯುಕ್ತವಾಗಿದ್ದು, ದೇಹದ ಭಾಗಗಳಿಗೆ ನೇರವಾಗಿ ಚಲಿಸುತ್ತದೆ. ಹೀಗೆ ಮೀನಿನ ದೇಹದಲ್ಲಿ ರಕ್ತವು ಒಂದು ಬಾರಿ ಪರಿಚಲಿಸಲು ಕೇವಲ ಒಮ್ಮೆ ಮಾತ್ರ ಹೃದಯವನ್ನು ಹಾದು ಹೋಗುತ್ತದೆ.

ಆಮ್ಲಜನಕ ಸಹಿತ ಆಮ್ಲಜನಕ ರಹಿತ
ಆಮ್ಲಜನಕದ ಉಪಸ್ಥಿತಿಯಲ್ಲಿ ನಡೆಯುತ್ತದೆ. ಆಮ್ಲಜನಕದ ಅನುಪಸ್ಥಿತಿಯಲ್ಲಿ ನಡೆಯುತ್ತದೆ.
ಜೀವಕೋಶದ ಮೈಟೋಕಾಂಡ್ರಿಯಾದಲ್ಲಿ ನಡೆಯುತ್ತದೆ . ಯೀಸ್ಟ್ ಕೋಶದಲ್ಲಿ ನಡೆಯುತ್ತದೆ.
ಉಪ ಉತ್ಪನ್ನ: CO2 ಮತ್ತು ನೀರು ಬಿಡುಗಡೆಯಾಗುತ್ತದೆ. ಎಥೆನಾಲ್ ಮತ್ತು CO2 ಬಿಡುಗಡೆಯಾಗುತ್ತದೆ.

ರಕ್ತನಾಳ ಕಾರ್ಯ
ಅಪಧಮನಿ ಹೃದಯದಿಂದ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಸಾಗಿಸುತ್ತದೆ.
ಅಭಿಧಮನಿ ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಸಾಗಿಸುತ್ತದೆ.
ಲೋಮನಾಳಗಳು ರಕ್ತ ಮತ್ತು ಅದರ ಸುತ್ತಲಿನ ಕೋಶಗಳ ನಡುವೆ ವಸ್ತುಗಳ ವಿನಿಮಯ ನಡೆಯುತ್ತದೆ.

ಉತ್ತರ: ಬೇರು ಕಾಂಡ ಮತ್ತು ಎಲೆಗಳಲ್ಲಿರುವ ಗ್ಸೈಲಂ ಅಂಗಾಂಶವು ಪರಸ್ಪರ ಸಂಪರ್ಕ ಹೊಂದಿ ನಿರಂತರ ಕೊಳವೆಯನ್ನು ಉಂಟುಮಾಡುತ್ತದೆ. ಬೇರುಗಳಲ್ಲಿ ಮಣ್ಣಿನ ಸಂಪರ್ಕದಲ್ಲಿರುವ ಜೀವಕೋಶಗಳು ಸಕ್ರಿಯವಾಗಿ ಅಯಾನುಗಳನ್ನು ಹೀರಿಕೊಳ್ಳುತ್ತವೆ. ಇದು ಬೇರು ಮಣ್ಣಿನ ನಡುವೆ ಅಯಾನುಗಳ ಸಾರಥೆಯಲ್ಲಿ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಈ ವ್ಯತ್ಯಾಸವನ್ನು ನಿವಾರಿಸಲು ಮಣ್ಣಿನಿಂದ ಬೇರುಗಳಿಗೆ ನೀರು ಚಲಿಸುತ್ತದೆ. ಅಲ್ಲಿ ಬೇರುಗಳ ಗ್ಸೈಲಂನೊಳಕ್ಕೆ ನೀರಿನ ಸ್ಥಿರವಾದ ಚಲನೆಯು ನೀರಿನ ಒಂದು ಸ್ಥಂವನ್ನುಂಟುಮಾಡಿ ಅದು ನೀರನ್ನು ನಿರಂತರವಾಗಿ ಮೇಲಕ್ಕೆ ತಳ್ಳುತ್ತಿರುತ್ತದೆ. ಆದರೆ ಅತ್ಯಂತ ಎತ್ತರದ ಸಸ್ಯಗಳಿಗೆ ನೀರನ್ನು ಚಲಿಸುವಂತೆ ಮಾಡಲು ಈ ಒತ್ತಡವೊಂದೇ ಸಾಕಾಗುವುದಿಲ್ಲ. ಬಾಷ್ಪವಿಸರ್ಜನೆಯಲ್ಲಿ ಎಲೆಗಳ ಮೂಲಕ ಆವಿಯಾಗುವ ನೀರಿನ ಅಣುಗಳು ಚೋಷಣವನ್ನು ಮಾಡಿ ಇದು ಬೇರುಗಳ ಗ್ಸೈಲಂ ಕೋಶಗಳಿಂದ ಎಳೆದುಕೊಳ್ಳುತ್ತದೆ. ಹೀಗೆ ನೀರು ಸಸ್ಯದ ಎತ್ತರದ ಭಾಗಗಳಿಗೆ ತಲುಪುತ್ತದೆ.

ಉತ್ತರ :
1. ಅಮಿಬಾವು ಆಹಾರದ ಕಣದ ಸುತ್ತ ತಾತ್ಕಾಲಿಕ ಬೆರಳಿನಂತಹ ಜೀವಕೋಶ ಮೇಲ್ಮೈನ್ನು ಹೊರ ಚಾಚಿ ಆಹಾರವನ್ನು ಒಳತೆಗೆದುಕೊಳ್ಳುತ್ತವೆ.
2. ಈ ರಚನೆಗಳು ಆಹಾರ ಕಣಗಳನ್ನು ಆವರಿಸಿ ಆಹಾರ ರಸದಾನಿಯನ್ನು ಉಂಟುಮಾಡುತ್ತದೆ.
3. ಆಹಾರ ರಸದಾನಿಯೊಳಗೆ ಸಂಕೀರ್ಣ ಆಹಾರ ಪದಾರ್ಥ ವಿಭಜನೆಗೊಂಡು ಸರಳ ಆಹಾರ ಪದಾರ್ಥಗಳಾಗುತ್ತವೆ. ನಂತರ ಅವು ಕೋಶದ್ರವ್ಯಕ್ಕೆ ವಿಸರಣೆಗೊಳ್ಳುತ್ತವೆ.

Previous Post Next Post