ಗದ್ಯ ಪಾಠ ೧: ನಮ್ಮ ಭಾಷೆ

ಕೃತಿಕಾರರು: ಎಂ. ಮರಿಯಪ್ಪ ಭಟ್ಟ

ಪದಗಳ ಅರ್ಥ

ಪದ ಅರ್ಥ
ಅಮೂಲ್ಯಬೆಲೆಕಟ್ಟಲಾಗದ, ಶ್ರೇಷ್ಠ
ನಿರೀಕ್ಷಕಸೂಕ್ಷ್ಮವಾಗಿ ಅವಲೋಕಿಸುವವನು
ಮೇಧಾಶಕ್ತಿಬುದ್ಧಿ ಸಾಮರ್ಥ್ಯ
ಪೀಯೂಷಅಮೃತ
ಪರಿಷ್ಕರಿಸುತಿದ್ದು, ಸರಿಪಡಿಸು
ಅಸ್ವಾದುಅರುಚಿಯುಳ್ಳ (ರುಚಿಯಿಲ್ಲದ)
ಅಭಿಮತಅಭಿಪ್ರಾಯ
ಪುಂಗವಶ್ರೇಷ್ಠ

ಅ. ಒಂದು ವಾಕ್ಯದಲ್ಲಿ ಉತ್ತರಿಸಿ

ಉತ್ತರ: ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಒಂದು ಅಮೂಲ್ಯ ಸಾಧನವಾಗಿದೆ.

ಉತ್ತರ: ಪ್ರಾಣಿಗಳು ತಮ್ಮ ಮಕ್ಕಳಿಗೆ ಚಲನವಲನಗಳ ವಿಷಯವಾಗಿ ಹಾಗೂ ಆಹಾರ ವಿಚಾರಗಳ ಬಗ್ಗೆ ಸಹಜವಾಗಿ ತರಪೇತು ಕೊಡುತ್ತವೆ.

ಉತ್ತರ: ನವಶಿಲಾಯುಗದ ಮಾನವ ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ನೆಲೆಸಿ ಆಸ್ತಿ, ಮನೆ, ಬದುಕು ಮೊದಲಾದ ಭಾವನೆಗಳನ್ನು ತಳೆಯಲು ಆರಂಭಿಸಿದಾಗ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು.

ಉತ್ತರ: ಎಣ್ಣೆ ಮತ್ತು ತುಪ್ಪದ ಅಸ್ವಾದು ಮಿಶ್ರಣ ಬೇಡವೆಂದು ೧೨ ನೆಯ ಶತಮಾನದ ನಯಸೇನ ಕವಿ ಹೇಳಿದ್ದಾನೆ.

ಉತ್ತರ: ಮಹಮ್ಮದೀಯರ ಆಳ್ವಿಕೆಯ ಅವಧಿಯಲ್ಲಿ ಪರ್ಷಿಯನ್ ಭಾಷೆಯಿಂದ ಅನೇಕ ಶಬ್ದಗಳು ಕನ್ನಡಕ್ಕೆ ಬಂದವು.

ಆ. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ

ಉತ್ತರ: ಜನರು ಮಾತನಾಡುವ ಮತ್ತು ದೈನಂದಿನ ವ್ಯವಹಾರಕ್ಕೆ ಬಳಸುವ ಜೀವದ್ಭಾಷೆಯನ್ನು ವ್ಯಾವಹಾರಿಕ ಭಾಷೆ ಎನ್ನುತ್ತಾರೆ. ಅಭಿವೃದ್ಧಿ ಹೊಂದಿ ಗ್ರಂಥ ರಚನೆಯಲ್ಲಿ ಉಪಯೋಗವಾಗುವ ಭಾಷೆಯನ್ನು ಗ್ರಾಂಥಿಕ ಭಾಷೆ ಎನ್ನುತ್ತಾರೆ.

ಉತ್ತರ: ಓದುಬರೆಹವಿಲ್ಲದ ಹಳ್ಳಿಯ ಕೆಲಸಗಾರರು ತಾವು ಮಾಡಿದ ಕೆಲಸದ ಲೆಕ್ಕವನ್ನು ಗೋಡೆಯ ಮೇಲೆ ಗೆರೆ ಎಳೆದು ಗುರುತಿಸುತ್ತಿದ್ದರು. ವ್ಯಾಪಾರ-ವ್ಯವಹಾರದ ಇಂತಹ ಪ್ರಾಥಮಿಕ ಗುರುತುಗಳೇ ಲಿಪಿಯ ಮೊದಲ ಜಾಡು.

ಉತ್ತರ: ಲಿಪಿಯ ಮೂಲಕ ಪರಂಪರೆಯಿಂದ ಬಂದ ಅನೇಕ ವಿಷಯಗಳನ್ನು ಬರೆದಿಡಲು ಸಾಧ್ಯವಾಯಿತು. ಇದರಿಂದ ಜ್ಞಾನ ಭಂಡಾರ ಭದ್ರವಾಯಿತು ಮತ್ತು ಸಂಸ್ಕೃತಿಯ ಇತಿಹಾಸ ಉಳಿಯಿತು.

ಉತ್ತರ: ಬಸವೇಶ್ವರ, ಅಲ್ಲಮಪ್ರಭುಗಳಂತಹ ಶರಣರು ಹಾಗೂ ಪುರಂದರದಾಸ, ಕನಕದಾಸರಂತಹ ದಾಸರು ತಮ್ಮ ಅನುಭವಗಳನ್ನು ಸುಲಭವಾದ ಮಾತುಗಳಲ್ಲಿ ಅಭಿವ್ಯಕ್ತಪಡಿಸಿದಾಗ ಕನ್ನಡ ಭಾಷೆ ಹದಗೊಂಡಿತು.

ಉತ್ತರ: ಆಂಗ್ಲ ಜನರು ತಮ್ಮ ಭಾಷೆಯನ್ನು ಪ್ರೀತಿಸಿ ಬೆಳೆಸಿದರು. ಅವರ ವಿಜ್ಞಾನಿಗಳು, ರಾಜಕಾರಣಿಗಳು ತಮ್ಮ ಆಸೆ-ಆಕಾಂಕ್ಷೆಗಳನ್ನು ಸ್ವಭಾಷೆಯಲ್ಲೇ ಹೇಳುವ ಉಜ್ವಲ ಅಭಿಮಾನ ಹೊಂದಿದ್ದರಿಂದ ಅದು ವಿಶ್ವವ್ಯಾಪಿಯಾಯಿತು.

ಇ. ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ

ಉತ್ತರ: ಭಾಷೆಯು ತನ್ನ ಮೂಲಸ್ವರೂಪದ ಜಾಯಮಾನವನ್ನು ಸಮರ್ಥಿಸುತ್ತಲೇ ವಿಕಾಸಗೊಳ್ಳುತ್ತದೆ. ನೆರೆಹೊರೆಯ ಭಾಷೆಗಳೊಂದಿಗೆ ಕೊಳುಕೊಡುಗೆಯ ವ್ಯವಹಾರ ನಡೆಸಿದಾಗ ಅದು ಸಜೀವವಾಗಿರುತ್ತದೆ. ಭಾಷೆಯನ್ನು ಆಡುವ ಜನರು ಅಭಿಮಾನಧನರೂ, ಬುದ್ಧಿಶಾಲಿಗಳೂ ಮತ್ತು ಪ್ರಯೋಗಶೀಲರೂ ಆಗಿರಬೇಕು. ಆಯಾ ಭಾಷೆಯ ಮೇಧಾವಿಗಳು, ವಿಜ್ಞಾನಿಗಳು ಮತ್ತು ರಾಜಕಾರಣಿಗಳು ತಮ್ಮ ವಿಚಾರಗಳನ್ನು ಸ್ವಭಾಷೆಯಲ್ಲೇ ಅಭಿವ್ಯಕ್ತಪಡಿಸಿದಾಗ ಭಾಷೆ ಸತ್ವಪೂರ್ಣವಾಗಿ ವಿಕಾಸಗೊಳ್ಳುತ್ತದೆ.

ಉತ್ತರ: ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇದು ಇತರ ಭಾಷೆಗಳಿಂದ ಪ್ರಭಾವಿತವಾದರೂ ತನ್ನ ದೇಸಿ ಸೊಗಡನ್ನು ಉಳಿಸಿಕೊಂಡು ಬೆಳೆದು ಬಂದಿದೆ. ಪ್ರಾಚೀನ ಕಾಲದಿಂದಲೂ ಸಂಸ್ಕೃತದ ಪೋಷಣೆ ದೊರೆತರೂ, ನಯಸೇನನಂತಹ ಕವಿಗಳು ಅಚ್ಚಗನ್ನಡದ ಬಳಕೆಗೆ ಒತ್ತು ನೀಡಿದರು. ನಂತರ ಶರಣರು, ದಾಸರು ಮತ್ತು ಕವಿಗಳು ಜನಸಾಮಾನ್ಯರ ಸರಳ ಭಾಷೆಯಲ್ಲಿ ಸಾಹಿತ್ಯ ರಚಿಸಿ ಕನ್ನಡವನ್ನು ಹದಗೊಳಿಸಿದರು. ಮುಸ್ಲಿಮರ ಆಳ್ವಿಕೆಯಲ್ಲಿ ಪರ್ಷಿಯನ್ ಶಬ್ದಗಳು ಮತ್ತು ಬ್ರಿಟಿಷರ ಕಾಲದಲ್ಲಿ ಇಂಗ್ಲಿಷ್ ಶಬ್ದಗಳು ಕನ್ನಡಕ್ಕೆ ಬಂದು ಸೇರಿದವು. ಗಡಿ ಪ್ರದೇಶಗಳಲ್ಲಿ ನೆರೆಹೊರೆಯ ಭಾಷೆಗಳ ಜೊತೆಗಿನ ಕೊಳುಕೊಡುಗೆಯಿಂದ ಕನ್ನಡವು ಇಂದು ಸಮೃದ್ಧವಾಗಿ ರೂಪುಗೊಂಡಿದೆ.

ಈ. ಸಂದರ್ಭ ಸಹಿತ ಸ್ವಾರಸ್ಯ

ಉತ್ತರ: ಲಿಪಿಯ ಮೂಲಕ ಜ್ಞಾನವನ್ನು ದಾಖಲಿಸಿಡಲು ಸಾಧ್ಯವಾದಾಗ ಮಾತ್ರ ಒಂದು ಜನಾಂಗದ ಸಂಸ್ಕೃತಿ ಮತ್ತು ಇತಿಹಾಸ ಅಳಿಯದೆ ಉಳಿಯಲು ಸಾಧ್ಯ ಎಂಬುದು ಇಲ್ಲಿನ ಸ್ವಾರಸ್ಯ.

ಉತ್ತರ: ಕವಿ ನಯಸೇನನು ಕನ್ನಡದಲ್ಲಿ ಅತಿಯಾಗಿ ಸಂಸ್ಕೃತ ಪದಗಳನ್ನು ಬೆರೆಯಿಸುವುದನ್ನು ವಿರೋಧಿಸುವಾಗ ಈ ಮಾತನ್ನು ಹೇಳಿದ್ದಾನೆ. ಎಣ್ಣೆ ಮತ್ತು ತುಪ್ಪದ ಅಸಹಜ ಮಿಶ್ರಣದಂತೆ ಭಾಷೆ ಇರಬಾರದು ಎಂಬುದು ಇಲ್ಲಿನ ಸ್ವಾರಸ್ಯ.

ಉತ್ತರ: ಕವಿ ಮಹಲಿಂಗರಂಗನು ಹದಗೊಂಡ ಕನ್ನಡ ಭಾಷೆಯ ಸುಲಭತೆ ಮತ್ತು ಸವಿಯನ್ನು ವರ್ಣಿಸುವ ಸಂದರ್ಭದಲ್ಲಿ ಈ ಉಪಮೆಯನ್ನು ಬಳಸಿದ್ದಾನೆ.

ಉತ್ತರ: ಭಾಷೆಗಳಲ್ಲಿ ಮೇಲು-ಕೀಳೆಂಬ ಭೇದವಿಲ್ಲ ಎಂದು ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮ ಮಾತೃಭಾಷೆ ಶ್ರೇಷ್ಠ ಎಂಬುದು ಇಲ್ಲಿನ ಭಾವ.

ಉ. ಬಿಟ್ಟ ಸ್ಥಳ ತುಂಬಿರಿ

೧. ಭಾಷೆ ಇದ್ದೂ ಅದರ ಪೀಯೂಷವನ್ನು ಕುಡಿದು ಅರಗಿಸಿಕೊಳ್ಳದ ವ್ಯಕ್ತಿ ಜಂತುವೇ ಸರಿ.
೨. ಕನ್ನಡಕ್ಕೆ ಬಹಳ ಪ್ರಾಚೀನ ಕಾಲದಿಂದಲೂ ಸಂಸ್ಕೃತದ ಪೋಷಣೆ ದೊರೆಯುತ್ತಾ ಬಂದಿದೆ.
೩. ಇಂಗ್ಲಿಷ್ ಶಬ್ದಗಳು ಕನ್ನಡದ ಉಡುಪನ್ನು ಧರಿಸಿ ಒಳಗೆ ಬಂದು ಬಿಟ್ಟಿವೆ.
೪. ನಮ್ಮ ಭಾಷೆ ಗದ್ಯ ಭಾಗದ ಆಕರ ಗ್ರಂಥ 'ಕನ್ನಡ ಸಂಸ್ಕೃತಿ'.

ಊ. ಹೊಂದಿಸಿ ಬರೆಯಿರಿ

೧. ವ್ಯಾವಹಾರಿಕಶ್ರವಣ
೨. ದಾಸರುಕೀರ್ತನೆಗಳು
೩. ದಿವಾನಅನ್ಯದೇಶ್ಯ
೪. ಗ್ರಾಂಥಿಕಚಾಕ್ಷುಷ
೫. ಶಿವಶರಣರುವಚನಗಳು

ಪ್ರಾಯೋಗಿಕ ಅಭ್ಯಾಸ

ಮೂಲರೂಪ ಬರೆಯಿರಿ:
ಹೋಟ್ಲು - Hotel
ಇಸ್ಕೂಲು - School
ಆಫೀಸು - Office
ಲೈಟು - Light
ಆಸ್ಪತ್ರೆ - Hospital