Kalika Chetarike (ಕಲಿಕಾ ಚೇತರಿಕೆ): Frequently Asked Questions (FAQs)

The Karnataka government has launched an important learning programme called Kalika Chetarike (ಕಲಿಕಾ ಚೇತರಿಕೆ) for the academic year 2022–23. The aim of the programme is to fill the learning gaps of the students that occurred during the school closure at the time of the COVID-19 Pandemic.
 
The Frequently Asked Questions (FAQs) for the programme are listed below to help the teachers clear their doubts regarding the Kalika Chetarike program.

Kalika Chetarike (ಕಲಿಕಾ ಚೇತರಿಕೆ): Frequently Asked Questions (FAQs)


ಕಲಿಕಾ ಚೇತರಿಕೆಯ ಕಾರ್ಯಕ್ರಮದ ವಿಷಯವಾಗಿ ಎದುರಾಗಬಹುದಾದ ಸಾಮಾನ್ಯ ಪ್ರಶ್ನೆಗಳು:

ಪ್ರತಿ ವರ್ಷ ನಡೆಯುತ್ತಿದ್ದ ಸೇತುಬಂಧಕ್ಕಿಂತ ಇದು ಹೇಗೆ ಭಿನ್ನವಾಗಿದೆ?

ಉತ್ತರ: ಕಲಿಕಾ ಚೇತರಿಕೆಯು ಕಲಿಕಾ ಅಂತರವನ್ನು ಸರಿದೂಗಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಉಪಕ್ರಮವಾಗಿದೆ. ಇದು ಕಲಿಕೆಯಲ್ಲಿ ಉಂಟಾಗಿರುವ ನಷ್ಟವನ್ನು ತುಂಬುವುದಲ್ಲದೆ ಕಲಿಕೆಯನ್ನು ಕಲಿಕಾಫಲಗಳ ಆಧಾರದ ಮೇಲೆ ವ್ಯವಸ್ಥಿತವಾಗಿ ಬೋಧಿಸಲು ಮಾಡಿರುವ ಪ್ರಯತ್ನವಾಗಿದೆ. ಆದ್ದರಿಂದ ಇದು ಇಡೀ ವರ್ಷ ನಡೆಯುವ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯು ಕಲಿಕಾ ನಷ್ಟವನ್ನು ಭರಿಸುವುದು, ಹೊಸ ಕಲಿಕೆಯನ್ನು ಸಾಧಿಸುವುದು ಮತ್ತು ಮೌಲ್ಯಮಾಪನ ಈ ಎಲ್ಲಾ ಅಂಶಗಳನ್ನು ಒಳಗೊಂಡಿದೆ.

ಕಲಿಕಾ ಚೇತರಿಕೆಯ ಉಪಕ್ರಮವನ್ನು ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಏಕೆ ಅಳವಡಿಸಿಕೊಳ್ಳಲಾಗುತ್ತಿದೆ?

ಉತ್ತರ: ನಮ್ಮ ರಾಜ್ಯದಲ್ಲಿ ಶಾಲೆ ಮುಚ್ಚಿದ ಕಾರಣದಿಂದಾದ ಕಲಿಕಾ ನಷ್ಟವು ಹೆಚ್ಚಾಗಿ ಕಂಡುಬಂದಿದೆ. ವರ್ಚುವಲ್ ಕಲಿಕಾ ಮಾಧ್ಯಮಕ್ಕೆ ಸೌಲಭ್ಯಗಳ ಕೊರತೆ, ನೆಟ್‍ವರ್ಕ್ ಕೊರತೆ ಮತ್ತು ಮೊಬೈಲ್ ಹಾಗೂ ಇತರೆ ಸಲಕರಣೆಗಳ ಕೊರತೆಯಿಂದಾಗಿ ಸಾಕಷ್ಟು ಸರ್ಕಾರಿ ಶಾಲೆಯ ಮಕ್ಕಳು ದೂರ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆದಕಾರಣ ಸರ್ಕಾರವು ಜವಬ್ದಾರಿಯುತವಾಗಿ ಈ ಕಾರ್ಯಕ್ರಮವನ್ನು ಸರ್ಕಾರಿ ಶಾಲೆಗಳಲ್ಲಿ ಅಳವಡಿಸಿಕೊಳ್ಳಲು ತೀರ್ಮಾನಿಸಿದೆ. ಆದಾಗ್ಯೂ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಕಲಿಕಾ ಚೇತರಿಕೆಯನ್ನು ತಮ್ಮ ಅಗತ್ಯಾನುಸಾರುಯಾಗಿ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಅವರು ಯಾವುದೇ ಸಂದರ್ಭದಲ್ಲಿಯೂ ಕೂಡ ಇಲಾಖೆಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ತೆಗೆದುಕೊಳ್ಳಲು ಪ್ರೇರೇಪಿಸಲಾಗಿದೆ.

ಶಿಕ್ಷಕರು ಪಾಠಯೋಜನೆಯನ್ನು ಮಾಡಿಕೊಳ್ಳಬೇಕೆ? ಹೌದಾದರೆ ಹೇಗೆ ಮಾಡಿಕೊಳ್ಳಬೇಕು?

ಉತ್ತರ: ಪಾಠಯೋಜನೆಯು ಶಿಕ್ಷಕರು ಪಾಠವನ್ನು ಹೇಗೆ ಮಾಡಬೇಕೆಂಬುದರ ಮಾರ್ಗಸೂಚಿ. ಶಿಕ್ಷಕರ ಕೈಪಿಡಿಯು ಕಲಿಕಾ ಫಲಗಳನ್ನಾಧರಿಸಿ ಪಾಠ ಮಾಡುವ ಪ್ರಕ್ಕಿಯೆಯನ್ನು ವಿವರಿಸುತ್ತದೆ. ಆದಾಗ್ಯೂ ಶಿಕ್ಷಕರು ತಮ್ಮದೇಯಾದ ಪಾಠಯೋಜನೆಯನ್ನು ಕಲಿಕಾಫಲಗಳಗಳ ಆಧಾರದ ಮೇಲೆ ತಮ್ಮ ತರಗತಿಯ ಮಕ್ಕಳಿಗನುಗುಣವಾಗಿ ತಯಾರಿಸಿಕೊಳ್ಳಲು ಪ್ರೇರೇಪಿಸಲಾಗಿದೆ.

ಒಬ್ಬ ಶಿಕ್ಷಕರು ಒಂದಕ್ಕಿಂತ ಹೆಚ್ಚಿನ ಕಲಿಕಾಚೇತರಿಕೆ ತರಬೇತಿಗೆ ಹೋಗಬೇಕೆ? (ಒಬ್ಬ ಶಿಕ್ಷಕರು ಹೆಚ್ಚಿನ ವಿಷಯಗಳನ್ನು ಪಾಠ ಬೋಧಿಸುತ್ತಿರುವ ಸಂದರ್ಭದಲ್ಲಿ)

ಉತ್ತರ: ಕಲಿಕಾ ಚೇತರಿಕೆಯ ಮೂಲಭೂತ ತತ್ವವು ಎಲ್ಲಾ ವಿಷಯಗಳಲ್ಲಿಯೂ ಒಂದೇ ಆಗಿರುತ್ತದೆ. ಒಬ್ಬ ಶಿಕ್ಷಕರು ಕಲಿಕಾ ಚೇತರಿಕೆಯ ಒಂದು ತರಬೇತಿಯನ್ನು ಪಡೆದರೆ, ಅದೇ ತತ್ವವನ್ನು ತಾವು ಬೋಧಿಸುತ್ತಿರುವ ಇತರ ವಿಷಯಗಳಲ್ಲಿಯೂ ಅಳವಡಿಸಿಕೊಳ್ಳಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರೂ ಯಾವುದಾದರೊಂದು ವಿಷಯದಲ್ಲಿ ಈ ತರಬೇತಿಯನ್ನು ಪಡೆಯುವುದು ಅನಿವಾರ್ಯವಾಗಿದೆ. ಹಾಗೂ ತಾವು ಬೋಧಿಸುತ್ತಿರುವ ಎಲ್ಲಾ ವಿಷಯಗಳಲ್ಲಿಯೂ ತರಬೇತಿ ಪಡೆಯುವ ಅವಶ್ಯಕತೆಯಿಲ್ಲ.

ಕಲಿಕಾ ಚೇತರಿಕೆ ಅಳವಡಿಸಿಕೊಂಡಾದ ಮೇಲೂ ಪ್ರತೀ ಅವಧಿಯು 45 ನಿಮಿಷ ಇರುತ್ತದೆಯೇ?

ಉತ್ತರ: ಹೌದು

ಕಲಿಕಾ ಚೇತರಿಕೆ ಸಂದರ್ಭದಲ್ಲಿ ಪಠ್ಯಪುಸ್ತಕಗಳನ್ನು ಹೇಗೆ ಬಳಸಿಕೊಳ್ಳಬೇಕು?

ಉತ್ತರ: ಪಠ್ಯಪುಸ್ತಕಗಳ ಉಲ್ಲೇಖಗಳನ್ನು ಕಲಿಕಾ ಫಲಗಳ ಆಧಾರದ ಮೇಲೆ ಶಿಕ್ಷಕರ ಕೈಪಿಡಿಯಲ್ಲಿ ನೀಡಲಾಗಿದೆ. ಆದ್ದರಿಂದ ಶಿಕ್ಷಕರು ತರಗತಿಗೆ ಮುಂಚೆ ಶಿಕ್ಷಕರ ಕೈಪಿಡಿಯನ್ನು ಓದಿ ಅಗತ್ಯಾನುಸಾರವಾಗಿ ಪ್ರತೀ ವಿಷಯದಲ್ಲಿ ಪಠ್ಯಪುಸ್ತಕಗಳನ್ನು ಅಗತ್ಯವಿದ್ದಲ್ಲಿ ಕಲಿಕಾಹಾಳೆಗಳಿಗೆ ಪೂರಕವಾಗಿ ಬಳಸಲು ಪ್ರೇರೇಪಿಸಲಾಗಿದೆ.

ಎಲ್ಲಾ ಪೋಷಕರು ಮತ್ತು ಅಧಿಕಾರಿ ವರ್ಗದವರಿಗೆ ಕಲಿಕಾಚೇತರಿಕೆಯ ಮಾಹಿತಿಯನ್ನು ನೀಡಲಾಗುತ್ತದೆಯೇ?

ಉತ್ತರ: ಇಲಾಖೆಯು ಎಲ್ಲಾ ಭಾಗಿದಾರರಿಗೂ ಕಲಿಕಾಚೇತರಿಕೆಯ ಬಗ್ಗೆ ಮಾಹಿತಿ ನೀಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಶಾಲೆಯೂ ಸಹ ತಮಗೆ ದೊರೆಯುವ ವೇದಿಕೆಗಳಾದ ಸಮುದಾಯದತ್ತ ಶಾಲೆ, ಎಸ್. ಡಿ. ಎಂ. ಸಿ. ಸಭೆ ಮುಂತಾದವುಗಳಲ್ಲಿ ಕಲಿಕಾಚೇತರಿಕೆಯ ಬಗ್ಗೆ ಎಲ್ಲಾ ಭಾಗಿದಾರರಿಗೆ ಮಾಹಿತಿ ತಿಳಿಸಲು ಪ್ರೇರೇಪಿಸುತ್ತೇವೆ.

ಕಲಿಕಾಹಾಳೆ ಮತ್ತು ಅಭ್ಯಾಸ ಹಾಳೆಗಳಿಗಿರುವ ವ್ಯತ್ಯಾಸವೇನು?

ಉತ್ತರ: ಕಲಿಕಾ ಹಾಳೆಯನ್ನು ಕೊಟ್ಟಿರುವ ಪುಸ್ತಕದಿಂದ ಹರಿದು ಬೇರ್ಪಡಿಸಬಹುದಾಗಿದೆ. ಇದು ಮೌಲ್ಯಮಾಪನ ಮತ್ತು ಹಿಮ್ಮಾಹಿತಿ ಹೀಗೆ ಹಲವು ಉದ್ದೇಶಗಳಿಗೆ ಬಳಸಬಹುದಾಗಿದೆ. ಇದು ಮಕ್ಕಳ ಕೃತಿ ಸಂಪುಟ ಮತ್ತು ಪೋರ್ಟ್‍ಫೋಲಿಯೋ ತಯಾರಿಸಲು ಅನುಕೂಲ ಮಾಡುತ್ತದೆ. ಅಭ್ಯಾಸ ಹಾಳೆಯ ಬಳಕೆಯು ಅಭ್ಯಾಸ ಮತ್ತು ಮೌಲ್ಯಮಾಪನಕ್ಕೆ ಮಾತ್ರ ಸೀಮಿತವಾಗಿರುತ್ತದೆ.


ಮೌಲ್ಯಾಂಕನ/ಮೌಲ್ಯಮಾಪನಕ್ಕೆ ಸಂಬಂಧಿಸಿದ ಪ್ರಶ್ನೆಗಳು:

ಮಕ್ಕಳ ಸ್ತರಗಳನ್ನು SATS ನಲ್ಲಿ ಗ್ರೇಡ್ ಗಳಾಗಿ ಪರಿವರ್ತಿಸುವುದು ಹೇಗೆ?

ಉತ್ತರ: SATS ನಲ್ಲಿ ಎಂಟ್ರಿ ಮಾಡುವುದು ಆಡಳಿತಾತ್ಮಕವಾಗಿ ಅನಿವಾರ್ಯ. ಇದನ್ನು ಯಾವ ರೀತಿ ಮಾಡಬೇಕೆಂಬುದರ ಮಾಹಿತಿಯನ್ನು ಸುತ್ತೋಲೆಯ ಮೂಲಕ ಇಲಾಖೆಯು ಎಲ್ಲಾ ಶಿಕ್ಷಕರಿಗೂ ಸದ್ಯದಲ್ಲೇ ತಿಳಿಸಿಕೊಡುತ್ತದೆ.

ಪಠ್ಯಪುಸ್ತಕದಲ್ಲಿರುವ ಕಲಿಕಾಫಲಗಳು ಮತ್ತು ಕಲಿಕಾ ಚೇತರಿಕೆಯಲ್ಲಿ ಅಳವಡಿಸಿಕೊಂಡಿರುವ ಕಲಿಕಾ ಫಲಗಳು ಬೇರೆಬೇರೆಯವಾಗಿವೆ. ಇವುಗಳಲ್ಲಿ ಮೌಲ್ಯಮಾಪನದ ಉದ್ದೇಶದ ಹಿನ್ನೆಲೆಯಲ್ಲಿ ಯಾವುದನ್ನು ಪರಿಗಣಿಸಬೇಕು?

ಉತ್ತರ: ಕಲಿಕಾ ಚೇತರಿಕೆಯ ಸಂದರ್ಭದಲ್ಲಿ ಕಲಿಕಾ ಹಾಳೆ/ಶಿಕ್ಷಕರ ಕೈಪಿಡಿಗಳಲ್ಲಿರುವ ಕಲಿಕಾಫಲಗಳನ್ನೆ ಪರಿಗಣಿಸಬೇಕಾಗುತ್ತದೆ.

ವಿಷಯವಾರು ಮತ್ತು ತರಗತಿವಾರು ಸಾಮಾನ್ಯವಾದ ಪ್ರಶ್ನೆಪತ್ರಿಕೆ ದೊರೆಯುತ್ತದೆಯೇ?

ಉತ್ತರ: ಇಲ್ಲ, ಶಿಕ್ಷಕರು ಶಾಲಾಹಂತದಲ್ಲಿ ತರಗತಿ ಸಂದರ್ಭಕ್ಕನುಸಾರವಾಗಿ ಪ್ರಶ್ನೆಪತ್ರಿಕೆಗಳನ್ನು ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಲಾಗಿದೆ.

ಯಾವ ದಾಖಲೆಗಳನ್ನು/ಆಧಾರಗಳನ್ನು ನಿರ್ವಹಿಸಬೇಕು?

ಉತ್ತರ: ಮಕ್ಕಳ ಕಲಿಕಾ ಪ್ರಗತಿಯನ್ನು ಬಿಂಬಿಸುವ ನೈದಾನಿಕ ಪರೀಕ್ಷೆಗಳ ಫಲಿತಗಳು, ಕಲಿಕಾ ಹಾಳೆಗಳಿಂದ ಕೂಡಿದ ವಿದ್ಯಾರ್ಥಿಯ ಕೃತಿಸಂಪುಟ ಮತ್ತು ಉಪಾಖ್ಯಾನ ಪುರಾವೆಗಳನ್ನು ಕಲಿಕಾ ಚೇತರಿಕೆಯ ಸಂದರ್ಭದಲ್ಲಿ ನಿರ್ವಹಿಸಬೇಕು. ಯಾವುದೇ ಸಂಶಯಗಳಿದ್ದಲ್ಲಿ ಇಲಾಖೆಯನ್ನು ಸಂಪರ್ಕಿಸಿರಿ.

ನೈದಾನಿಕ ಪರೀಕ್ಷೆ ಮತ್ತು ಪೂರ್ವ ಪರೀಕ್ಷೆಗಳಿಗಿರುವ ವ್ಯತ್ಯಾಸಗಳೆನು?

ಉತ್ತರ:
• ನೈದಾನಿಕ ಪರೀಕ್ಷೆಯು ಮಕ್ಕಳ ಪೂರ್ವ ಕಲಿಕಾ ಜ್ಞಾನವನ್ನು ತಿಳಿಯಲು ಇರುವ ಸಾಧನವಾಗಿದೆ. ಇದು ಮಕ್ಕಳ ಅಗತ್ಯವನ್ನು ತಿಳಿದುಕೊಳ್ಳುವುದರ ಜೊತೆಗೆ ಅದನ್ನು ಪೂರೈಸಲು ಯಾವ ರೀತಿ ಯೋಜನೆ ಹಾಕಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

• ಪೂರ್ವ ಪರೀಕ್ಷೆಯು ಈ ರೀತಿಯಾದ ಸಮಗ್ರ ಮಾಹಿತಿಯನ್ನು ನೀಡುವುದಿಲ್ಲ.


ಕಲಿಕಾ ಚೇತರಿಕೆಯ ಅನುಷ್ಠಾನದಲ್ಲಿರುವ ಗೊಂದಲಗಳು:

ಕಲಿಕಾಚೇತರಿಕೆಯು ಈ ವರ್ಷ ಪೂರ್ತಿ ನಡೆಯುತ್ತದೆಯೇ?

ಉತ್ತರ: ಹೌದು, ಕಲಿಕಾ ಅಂತರವನ್ನು ಸರಿದೂಗಿಸಿ ಪ್ರಸಕ್ತ ತರಗತಿಯ ಅಗತ್ಯ ಕಲಿಕಾಫಲಗಳನ್ನು ಸಾಧಿಸಲು 2022-23ರ ಶೈಕ್ಷಣಿಕ ವರ್ಷಪೂರ್ತಿ ಕಲಿಕಾಚೇತರಿಕೆಯನ್ನು ಅಳವಡಿಸಿಕೊಳ್ಳಲಾಗುತ್ತದೆ.

ಕಲಿಕಾ ಹಾಳೆಗಳಲ್ಲಿ ಕೊಟ್ಟಿರುವುದಕ್ಕಿಂತ ಹೆಚ್ಚಿನ ಚಟುವಟಿಕೆಗಳನ್ನು ಶಿಕ್ಷಕರು ಕೈಗೊಳ್ಳಬಹುದೇ?

ಉತ್ತರ: ಕಲಿಕಾಹಾಳೆಗಳಲ್ಲಿ ಮತ್ತು ಶಿಕ್ಷಕರ ಕೈಪಿಡಿಗಳಲ್ಲಿ ಕೊಟ್ಟಿರುವ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಸಾಧಿಸಿದ ನಂತರವಷ್ಟೇ ಹೆಚ್ಚಿನ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸಲಾಗಿದೆ.

ಪ್ರೌಢಶಾಲಾ ವಿದ್ಯಾರ್ಥಿಗಳು NTSE ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಲಿಕಾಚೇತರಿಕೆಯ ಸಂದರ್ಭದಲ್ಲಿ ಯಾವ ರೀತಿ ತಯಾರಿ ಮಾಡಿಕೊಳ್ಳಬಹುದು?

ಉತ್ತರ: ಕಲಿಕಾಚೇತರಿಕೆಯು ಶಾಲೆ ಮುಚ್ಚಿದ್ದರ ಪರಿಣಾಮವಾಗಿ ಆದ ಕಲಿಕಾ ನಷ್ಟವನ್ನು ಭರಿಸಲು ಕಂಡುಕೊಂಡಿರುವ ಉಪಕ್ರಮವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಇಚ್ಛಿಸಿರುವ ವಿದ್ಯಾರ್ಥಿಗಳು ಕಲಿಕಾ ಚೇತರಿಕೆಯಲ್ಲಿ ಸೂಚಿಸಿರುವ ಕಲಿಕೆಯನ್ನು ಸಾಧಿಸಿದ ನಂತರ ತಮ್ಮದೇ ಹಂತದಲ್ಲಿ ವೈಯಕ್ತಿಕವಾಗಿ ತಯಾರಿ ಮಾಡಿಕೊಳ್ಳಬಹುದು.

ಸಕಾರಾತ್ಮಕ/ರಚನಾತ್ಮಕ ಹಿಮ್ಮಾಹಿತಿಯನ್ನು ಕೊಡುವುದು ಹೇಗೆ? ಉದಾಹರಣೆ ಕೊಡಿ.

ಉತ್ತರ: ರಚನಾತ್ಮಕ ಹಿಮ್ಮಾಹಿತಿಯು ಮಕ್ಕಳಲ್ಲಿ ಕಲಿಕಾಪ್ರಗತಿಯನ್ನು ಉಂಟುಮಾಡಬೇಕು. ಮತ್ತು ಶಿಕ್ಷಕರಿಗೆ ವಿದ್ಯಾರ್ಥಿಗಳ ಬಗ್ಗೆ ಸೂಕ್ತವಾದ ಮಾಹಿತಿ ನೀಡುವಂತಿರಬೇಕು. ನಕಾರಾತ್ಮಕ ಟೀಕೆಗಳನ್ನು ಬಳಸದೇ ಇರುವಂತೆ ಎಚ್ಚರಿಕೆ ವಹಿಸಬೇಕು.

ಉದಾಹರಣೆಗಳು:
ಉದಾ-1: ವಿದ್ಯಾರ್ಥಿಯು ಚಟುವಟಿಕೆಗಳನ್ನು ಸಂಪೂರ್ಣಗೊಳಿಸಲು ಪ್ರಯತ್ನಿಸಿದ್ದಾನೆ. ನಿಗದಿತ ಸಾಮಥ್ರ್ಯಗಳನ್ನು ಗಳಿಸಲು ಇನ್ನೂ ಹೆಚ್ಚಿನ ಅಭ್ಯಾಸದ ಅಗತ್ಯವಿದೆ. ಈ ಚಟುವಟಿಕೆಗೆ ಮುನ್ನ ಬೇರೆ ಸುಲಭವಾದ ಚಟುವಟಿಕೆಗಳನ್ನು ಮಾಡುವುದರಿಂದ ಮಗು ಈ ಸಾಮಥ್ರ್ಯವನ್ನು ಗಳಿಸಲು ನೆರವಾಗುತ್ತದೆ.

ಉದಾ-2: ವಿದ್ಯಾರ್ಥಿಗೆ ಈ ಚಟುವಟಿಕೆಗಳು ಸವಾಲಿನದ್ದಾಗಿದೆ. ಹಾಗಾಗಿ ಬೇರೆ ಸುಲಭವಾದ ಅಭ್ಯಾಸ ಚಟುವಟಿಕೆಗಳನ್ನು ಮಾಡಲು ಸೂಚಿಸಿದ್ದೇನೆ.

ಉದಾ-3: ವಿದ್ಯಾರ್ಥಿಯು ಈ ಕಲಿಕಾಫಲವನ್ನು ಸಮರ್ಥವಾಗಿ ಅರ್ಥಮಾಡಿಕೊಂಡಿದ್ದಾನೆ. ಆದ್ದರಿಂದ ಮುಂದಿನ ಸಾಮಥ್ರ್ಯಕ್ಕೆ ಹೋಗಬಹುದು.

ಒಬ್ಬ ಶಿಕ್ಷಕರು ಒಂದಕ್ಕಿಂತ ಹೆಚ್ಚಿನ ಕಲಿಕಾಚೇತರಿಕೆ ತರಬೇತಿಗೆ ಹೋಗಬೇಕೆ? (ಒಬ್ಬ ಶಿಕ್ಷಕರು ಹೆಚ್ಚಿನ ವಿಷಯಗಳನ್ನು ಪಾಠ ಬೋಧಿಸುತ್ತಿರುವ ಸಂದರ್ಭದಲ್ಲಿ)

ಉತ್ತರ: ಕಲಿಕಾ ಚೇತರಿಕೆಯ ಮೂಲಭೂತ ತತ್ವವು ಎಲ್ಲಾ ವಿಷಯಗಳಲ್ಲಿಯೂ ಒಂದೇ ಆಗಿರುತ್ತದೆ. ಒಬ್ಬ ಶಿಕ್ಷಕರು ಕಲಿಕಾ ಚೇತರಿಕೆಯ ಒಂದು ತರಬೇತಿಯನ್ನು ಪಡೆದರೆ, ಅದೇ ತತ್ವವನ್ನು ತಾವು ಬೋಧಿಸುತ್ತಿರುವ ಇತರ ವಿಷಯಗಳಲ್ಲಿಯೂ ಅಳವಡಿಸಿಕೊಳ್ಳಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರೂ ಯಾವುದಾದರೊಂದು ವಿಷಯದಲ್ಲಿ ಈ ತರಬೇತಿಯನ್ನು ಪಡೆಯುವುದು ಅನಿವಾರ್ಯವಾಗಿದೆ. ಹಾಗೂ ತಾವು ಬೋಧಿಸುತ್ತಿರುವ ಎಲ್ಲಾ ವಿಷಯಗಳಲ್ಲಿಯೂ ತರಬೇತಿ ಪಡೆಯುವ ಅವಶ್ಯಕತೆಯಿಲ್ಲ.

Previous Post Next Post