ಶಿಕ್ಷಕರ ನೇಮಕಾತಿ ಪರೀಕ್ಷೆ 2022 (GPSTR 2022): ಇನ್ನೆರಡು ದಿನಗಳಲ್ಲಿ ಕೀ ಉತ್ತರಗಳ (Key Answers) ಪ್ರಕಟ

ಶಿಕ್ಷಕ ನೇಮಕಾತಿಯ ಸಿಇಟಿ ಪರೀಕ್ಷೆಗಳು ಮುಗಿದಿದೆ. ಶಿಕ್ಷಣ ಇಲಾಖೆ ಇರಡು ಮೂರು ದಿನಗಳಲ್ಲಿ ಕೀ ಉತ್ತರವನ್ನು ಬಿಡುಗಡೆ ಮಾಡಲಿದೆ. 15,000 ಶಿಕ್ಷಕರು ಅಧಿಕೃತವಾಗಿ ಕೀ ಉತ್ತರಗಳು ಪ್ರಕಟವಾದ ನಂತರ ತಮ್ಮ ಓಎಂಆರ್ ಕಾಪಿಗಳನ್ನು ಪರಿಶೀಲಿಸಿಕೊಂಡು ತಾವೂ ಸರ್ಕಾರಿ ಶಿಕ್ಷಕರಾಗಬಹುದೇ ಎಂಬುದನ್ನು ತಾಳೆಹಾಕಬಹುದು.

ಶಿಕ್ಷಕರ ನೇಮಕಾತಿ ಪರೀಕ್ಷೆ: ಇನ್ನೆರಡು ದಿನಗಳಲ್ಲಿ ಕೀ ಉತ್ತರಗಳ ಬಿಡುಗಡೆ

ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆಯು ಮೇ21 ಮತ್ತು ಮೇ22 ನಡೆದಿದೆ. ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಅಭ್ಯರ್ಥಿಗಳು ಬರೆದಿದ್ದಾರೆ. ಕರ್ನಾಟಕ ಶಿಕ್ಷಕರ ನೇಮಕಾತಿ ಹುದ್ದೆ 2022ರ ಪರೀಕ್ಷೆಗೆ 1,06,083 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು. ಈ ಪೈಕಿ ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿದ್ದವರು 31,967 ಅಭ್ಯರ್ಥಿಗಳು. ಶಿಕ್ಷಕ ಹುದ್ದೆಗೆ ಅರ್ಜಿಗಳ ಪರಿಗಣನೆ ಆಗಿರುವುದು 74,116 ಮಂದಿ ಅಭ್ಯರ್ಥಿಗಳದ್ದು. ಪರೀಕ್ಷೆಗೆ ಹಾಜರಾದವರ ಸಂಖ್ಯೆ 69,159 ಅಭ್ಯರ್ಥಿಗಳು. ಪರೀಕ್ಷೆಗೆ ಗೈರು ಹಾಜರಾದವರು 4957 ಅಭ್ಯರ್ಥಿಗಳು ಅಂದರೆ 93% ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೇ 7% ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಎರಡನೇ ಪತ್ರಿಕೆಯನ್ನು ಬರೆಯುವಾಗಲು ಕೆಲ ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ.

ಮೆರಿಟ್ ನಿರ್ಧರಿಸುವ ವಿಧಾನ ಹೇಗೆ..?

ಯಾವ ವೇಯ್ಟೇಜ್‌ನಲ್ಲಿ ಮೆರಿಟ್ ನಿರ್ಧಾರ 6 ರಿಂದ 8 ನೇ ತರಗತಿಯ ಪದವೀಧರ ಶಿಕ್ಷಕರ ನೇಮಕಾತಿಗಾಗಿ ಆಯ್ಕೆ ಪ್ರಾಧಿಕಾರವು ವಿಷಯವಾರು ಮತ್ತು ಮಾಧ್ಯಮವಾರು ಪ್ರವರ್ಗವಾರು ಅಧಿಸೂಚನೆಯಂತೆ ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕರ ಅರ್ಹತಾ ಪರೀಕ್ಷೆ (TET), ಪದವಿ ಶಿಕ್ಷಣ (degree) ಮತ್ತು ಶಿಕ್ಷಕರರ ಶಿಕ್ಷಣ (B.ed) ಕೋರ್ಸ್ ಗಳಲ್ಲಿ ಪಡೆದಿರುವ ಶೇಕಡವಾರು ಅಂಕಗಳನ್ನು ಪರಿಗಣಿಸಿ ವೆಯ್ಟೇಜ್ (weightage) ಉಪಯೋಗಿಸಿ ಲೆಕ್ಕಹಾಗಿ divided percentage ಲೆಕ್ಕಹಾಕಿ ಅದರ ಆಧಾರದಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ. ಶಿಕ್ಷಕರ ಕೋರ್ಸ್ ನಲ್ಲಿ ಎರಡು ವರ್ಷ ವ್ಯಾಸಂಗದ ಆಯ್ಕೆ ಮಾದರಿ. 4 ವರ್ಷದ ಕೋರ್ಸ್ ಮಾಡಿದವರ ಆಯ್ಕೆ ಮಾದರಿ ಹೇಗೆ? ಶಿಕ್ಷಕರ ಕೋರ್ಸ್ ಎರಡು ವರ್ಷ ವ್ಯಾಸಂಗ ಮಾಡಿದ್ದಾರೇ ಅವರ ಆಯ್ಕೆಯ ಹೀಗೆ ಮಾಡುತ್ತಾರೆ.

➤ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕ 50%
➤ ಟಿಇಟಿಯಲ್ಲಿ ಪಡೆದ ಅಂಕ 20%
➤ ಪದವಿಯಲ್ಲಿ ಪಡೆದದ ಅಂಕ 20%
➤ ಶಿಕ್ಷಕರ ಕೋರ್ಸ್ ನಲ್ಲಿ ಪಡೆದ ಅಂಕ 10% 

ಎಲ್ಲಾ ಶೇಕಡವಾರು ಅಂಕಗಳನ್ನು ಪರಿಗಣಿಸಿ 100% ಗೆ ಲೆಕ್ಕಹಾಕಿ ಆಯ್ಕೆ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಲಿದೆ.

ಇನ್ನು ವಿಶೇಷವಾಗಿ ನಾಲ್ಕು ವರ್ಷದ ಕೋರ್ಸ್ ಮಾಡಿರುವ ಅಭ್ಯರ್ಥಿಗಳು ಶಿಕ್ಷಕರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದರೇ ಅವರ ಆಯ್ಕೆ ಹೀಗೆ ನಿರ್ಧರಿಸುತ್ತಾರೆ.

➤ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕ 50%
➤ ಟಿಇಟಿಯಲ್ಲಿ ಪಡೆದ ಅಂಕ 20%

ನಾಲ್ಕು ವರ್ಷದ ಶಿಕ್ಷಣ ಕೋರ್ಸ್ ಮಾಡಿದವರು 30% ಹೀಗೆ ಅಭ್ಯರ್ಥಿಗಳ ಶೇಕಡಾವಾರು ಅಂಕಗಳನ್ನು ಲೆಕ್ಕಹಾಕಿ 100% ಆಗಿ ಪರಿಗಣಿಸಿ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ.

ಶಿಕ್ಷಣ ಇಲಾಖೆ ಸಿಇಟಿಯ ಕೀ ಉತ್ತರ ಬಿಡುಗಡೆಗೊಳಿಸಿದ ಬಳಿ ಉತ್ತರವನ್ನು ತಾಳೆಹಾಕಿ ಗಳಿಸಿದ ಅಂಕದ ಶೇ 50 ಅನ್ನು ಪರಿಗಣಿಸಿ, ಟಿಇಟಿ, ಪದವಿ, ಶಿಕ್ಷಕರ ಕೋರ್ಸ್ ನಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ ಲೆಕ್ಕಹಾಕಬೇಕು. ಆ ನಂತರವೇ ಶಿಕ್ಷಣ ಇಲಾಖೆ ಕಟ್ ಆಫ್(cut off) ಶೇಕಡವಾರು ಮತ್ತು ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡುವ ವೇಳೆ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪಂಗಡ, ವರ್ಗ, ಒಬಿಸಿಗಳಿಗೆ ಅನುಗುಣವಾಗಿ ಆಯ್ಕೆ ಪಟ್ಟಿ ಬಿಡುಗಡೆಯಾಗಲಿದೆ. 

ಇನ್ನು ಕೀ ಉತ್ತರಗಳನ್ನು ಪ್ರಕಟಿಸಿದ ನಂತರ ಈ ಕೆಳಗಿನ ಲಿಂಕ್ ಬಳಸಿ ತಮ್ಮ ಕೀ ಉತ್ತರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು:Previous Post Next Post