ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

ಒಂದು ಅಂಕದ ಪ್ರಶ್ನೆಗಳು

ಉತ್ತರ: ನೀರು ಮತ್ತು ಕಾಡುಗಳು.

ಉತ್ತರ:
(1) ಪೈನ್ ವುಡ್-ಬೆಂಕಿಪೊಟ್ಟಣಗಳ ಕೈಗಾರಿಕೆಗಾಗಿ.
(2) ಬಿದಿರು-ಕಾಗದದ ಕೈಗಾರಿಕೆಯಲ್ಲಿ.

ಉತ್ತರ: ಖೇಜ್ರಿ ಮರಗಳು.

ಉತ್ತರ: ಕಾಡುಗಳು.

ಉತ್ತರ: ಸರ್ದಾರ್ ಸರೋವರ ಅಣೆಕಟ್ಟು.

ಉತ್ತರ:
ಮರುಬಳಕೆ: ಜ್ಯಾಮ್ ಮತ್ತು ಉಪ್ಪಿನಕಾಯಿಗಳ ಬಾಟಲ್ ಗಳನ್ನು ಆಹಾರ ಶೇಖರಿಸಲು ಬಳಸುವುದು.
ಮರುಚಕ್ರೀಕರಣ: ಹಳೆಯ ವಾರಪತ್ರಿಕೆ ಮತ್ತು ಅಲ್ಯೂಮೀನಿಯಂ ಕ್ಯಾನ್ ಗಳನ್ನು ಮರುಚಕ್ರೀಕರಣಗೊಳಿಸುವುದು.

ಉತ್ತರ: ಪಶ್ಚಿಮ ಬಂಗಾಳದ ಅರಾಬರಿ ಕಾಡುಗಳಲ್ಲಿ ಸ್ಥಳೀಯರ ಸಕ್ರೀಯ ಪಾಲ್ಗೊಳ್ಳುವಿಕೆ ಮತ್ತು ಮನೋಧೋರಣೆಯಿಂದ ಇದರಿಂದ ಸಾಲ್ ಮರಗಳು ಗಮನಾರ್ಹವಾಗಿ ಚೇತರಿಸಿಕೊಂಡವು.

ಉತ್ತರ: ನಾವು ಸುಲಭವಾಗಿ ಮರುಬಳಕೆ ಮಾಡಬಹುದಾದ 2 ವಸ್ತುಗಳು ಸ್ಟೀಲ್ ಕ್ಯಾನ್ ಗಳು ಹಾಗೂ ಕಾಗದ.

ಉತ್ತರ: ನೈಸರ್ಗಿಕ ವಸ್ತುಗಳ ಶೋಷಣೆ ಹಾಗೂ ಅತಿಯಾದ ಬಳಕೆ ಅವುಗಳ ಅಭಾವಕ್ಕೆ ಕಾರಣವಾಗಿದೆ.

ಉತ್ತರ : ಸಸ್ಯಗಳು ಸೌರಶಕ್ತಿಯನ್ನು ದ್ಯುತಿಸಂಶ್ಲೇಷಣೆಗೆ ಬಳಸಿಕೊಳ್ಳುತ್ತವೆ. ಇದು ಸೂರ್ಯನ ಶಕ್ತಿಯನ್ನು ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸಿ ಎಲ್ಲ ಜೀವಿಗಳಿಗೂ ಸಹಾಯಕವಾಗಿರುವ ಆಹಾರ ಶಕ್ತಿಯಾಗಿ ಬಳಕೆಯಾಗುತ್ತದೆ.

ಉತ್ತರ : ಕಾಡುಗಳ ಹಾಗೂ ವನ್ಯ ಜೀವಿಗಳ ಸಂರಕ್ಷಣೆಗೆ ಕಾರಣ ಪರಿಸರದಲ್ಲಿ ಸಮತೋಲನವನ್ನು ಕಾಪಾಡುವುದಾಗಿದೆ.

ಉತ್ತರ : ಹೆಚ್ಚುತ್ತಿರುವ ಶಕ್ತಿ ಬೇಡಿಕೆಯಿಂದ ಹೆಚ್ಚು ಹೆಚ್ಚು ನೈಸರ್ಗಿಕ ಸಂಪನ್ಮೂಲಗಳನ್ನು ನಾಶಮಾಡಲಾಗುತ್ತದೆ. ಇದರಿಂದ ಮಾಲಿನ್ಯ ಕಾರಕಗಳ ಪ್ರಮಾಣ ಅಧಿಕಗೊಂಡು ಪರಿಸರ ನಾಶಕ್ಕೆ ಕಾರಣವಾಗುತ್ತದೆ.

ಉತ್ತರ : ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟಿರಿಯಾದ ಪ್ರಮಾಣ ನೀರಿನ ಮಾಲಿನ್ಯತೆ ಹಾಗೂ ರೋಗಕಾರಕ ಬ್ಯಾಕ್ಟೇರಿಯಾಗಳ ಸೂಚಕವಾಗಿದೆ.

ಉತ್ತರ : ಸುಲಭವಾಗಿ ಪುನರ್ ಭರ್ತಿ ಮಾಡಲಾಗದ ಶಕ್ತಿಯ ಆಕರಗಳನ್ನು ನವೀಕರಿಸಲಾಗದ ಶಕ್ತಿಯ ಆಕರಗಳೆನ್ನುವರು.
ಉದಾ: ಪಳೆಯುಳಿಕೆ ಇಂಧನಗಳು.

ಉತ್ತರ : ಮಾನವರ ಸಣ್ಣಕರುಳಿನಲ್ಲಿ ಕಂಡುಬರುವ ಬ್ಯಾಕ್ಟಿರಿಯಾಗಳ ಗುಂಪೊಂದಕ್ಕೆ ಕೋಲಿಫಾರ್ಮ್ ಎನ್ನುತ್ತಾರೆ.

ಉತ್ತರ : ಪ್ರತಿ ಟನ್ ಲೋಹವನ್ನು ಉದ್ಧರಿಸಿದಾಗಲೂ ಅಪಾರ ಪ್ರಮಾಣದ ಮಡ್ಡಿ ಪರಿಸರವನ್ನು ಸೇರುವುದರಿಂದ ಗಣಿಗಾರಿಕೆ ಮಾಲಿನ್ಯಕ್ಕೆ ಕಾರಣವಾಗುತ್ತದೆ.

ಉತ್ತರ : ಕೋಲಿಫಾರ್ಮ್.

ಉತ್ತರ : ಚಿಕ್ಕ ಗುಂಡಿಗಳನ್ನು ತೋಡುವುದು, ಕೆರೆಗಳ ನಿರ್ಮಾಣ.

ಉತ್ತರ :
(1) ನೀರನ್ನು ಬಳಸದಿದ್ದಾಗ ನಲ್ಲಿಯನ್ನು ನಿಲ್ಲಿಸುವುದು.
(2) ಸೋರುತ್ತಿರುವ ನಲ್ಲಿ, ಕೊಳಾಯಿಗಳನ್ನು ಪರಿಶೀಲಿಸುವುದು ಮತ್ತು ದುರಸ್ತಿ ಮಾಡುವುದು. .

ಉತ್ತರ : ಸಂಪನ್ಮೂಲಗಳ ಉತ್ತಮ ನಿರ್ವಹಣೆಗಾಗಿ 2 ವಿಧಾನಗಳೆಂದರೆ
(1) ಮಳೆ ನೀರಿನ ಕೊಯ್ಲು
(2) ಅಣೆಕಟ್ಟುಗಳ ನಿರ್ಮಾಣ .

ಉತ್ತರ : ಸೂಕ್ತ ಪುನರ್ವಸತಿ ಮತ್ತು ಪರಿಹಾರ ನೀಡಿರುವುದರಿಂದ ಸ್ಥಳಾಂತರಗೊಂಡ ಸ್ಥಳೀಯ ಜನರು ವಿರೋಧ ವ್ಯಕ್ತಪಡಿಸುತ್ತಾರೆ.

ಉತ್ತರ :
(1) ಛಾವಣಿಯಲ್ಲಿ ಮಳೆ ನೀರಿನ ಕೊಯ್ಲು.
(2) ಜಲಾನಯನ ಪ್ರದೇಶಗಳ ನಿರ್ವಹಣೆ.

ಉತ್ತರ :
ಕೆರೆಗಳಲ್ಲಿ ನೀರಿನ ಸಂಗ್ರಹ
ಸಣ್ಣ ಸಣ್ಣ ಮಣ್ಣಿನ ಒಡ್ಡುಗಳ ನಿರ್ಮಾಣ.

ಉತ್ತರ : 1970 ರಲ್ಲಿ ಗರ್ ವಾಲ್ ನ ಕೀನಿ ಎಂಬಲ್ಲಿ ಉತ್ತರಾಖಂಡದ ಮಹಿಳೆಯರು ಕಾಡುಗಳ ರಕ್ಷಣೆಗೆ ಪ್ರಾರಂಭಿಸಿದ ಚಳುವಳಿಯನ್ನು ಚಿಪ್ಕೋ ಚಳುವಳಿ ಎನ್ನುವರು.

ಎರಡು ಅಂಕದ ಪ್ರಶ್ನೆಗಳು


ಉತ್ತರ : ನಾವು ನಮ್ಮ ಸಂಪನ್ಮೂಲಗಳನ್ನು ನಿರ್ವಹಿಸಬೇಕು ಏಕೆಂದರೆ
(1) ಬಹುತೇಕ ನೈಸರ್ಗಿಕ ಸಂಪನ್ಮೂಲಗಳು ಮಿತವಾಗಿವೆ.
(2) ಮಾನವನ ಜನಸಂಖ್ಯೆ ತೀವ್ರವಾಗಿ ಹೆಚ್ಚುತ್ತದೆ.
(3) ನೈಸರ್ಗಿಕ ಸಂಪನ್ಮೂಲಗಳು ಉಪಯೋಗವು ತೀವ್ರವಾಗಿ ಏರುತ್ತಿದೆ.
(4) ಮುಂದಿನ ಪೀಳಿಗೆಗೆ ಸಂಪನ್ಮೂಲಗಳನ್ನು ಸಂರಕ್ಷಿಸಬೇಕಿದೆ.

ಉತ್ತರ : ಗಂಗಾ ನದಿ ಮಾಲಿನ್ಯಗೊಳ್ಳಲು 2 ಕಾರಣಗಳು:
1. ಕೈಗಾರಿಕಾ ತ್ಯಾಜ್ಯಗಳನ್ನು ನದಿಗೆ ಬಿಡುವುದು.
2. ಗೃಹ ಬಳಕೆಗಾಗಿ ನೀರಿನ ಬಳಕೆ ಮತ್ತು ಮಾರ್ಜಕಗಳು ಮತ್ತು ಸಾಬೂನುಗಳನ್ನು ಬಿಡುವುದು.
3. ಧಾರ್ಮಿಕ ಆಚರಣೆಗಾಗಿ ನದಿನೀರಿನಲ್ಲಿ ದೇವರ ವಿಗ್ರಹಗಳನ್ನು ವಿಸರ್ಜಿಸುವುದು.

ಉತ್ತರ : ವಿದ್ಯುತ್ ಅಥವಾ ನೀರಿನ ಉಳಿತಾಯಕ್ಕಾಗಿ ನಾವು ಕೈಗೊಳ್ಳಬಹುದಾದ 2 ವಿಧಾನಗಳೆಂದರೆ,
1. ಫ್ಯಾನ್ ಅಥವಾ ವಿದ್ಯುತ್ ದೀಪಗಳನ್ನು ಬಳಸದಿರುವಾಗ ಆಫ್ ಮಾಡುವುದು.
2. ಸೋರುತ್ತಿರುವ ನಲ್ಲಿಗಳನ್ನು ತಕ್ಷಣವೇ ದುರಸ್ತಿ ಮಾಡುವುದು.

ಉತ್ತರ : ಕಲ್ಲಿದ್ದಲನ್ನು ಹಬೆ ಇಂಜಿನಗಳು ಮತ್ತು ಉಷ್ಣಶಕ್ತಿ ವಿದ್ಯುತ್ ಸ್ಥಾವರಗಳಲ್ಲಿ ಬಳಸುತ್ತಾರೆ.

ಉತ್ತರ : ದೀರ್ಘಸಮಯದ ವರೆಗೆ ಪರಿಸರಕ್ಕೆ ಹಾನಿ ಉಂಟಾಗದಂತೆ ಸಂಪನ್ಮೂಲಗಳ ನಿರ್ವಹಿಸಬೇಕಾದ ಅಭಿವೃದ್ಧಿಯನ್ನು ಸುಸ್ಥಿರ ಅಭಿವೃದ್ಧಿ ಎನ್ನುವರು.
ಅದರ ಎರಡು ಪ್ರಮುಖ ಉದ್ದೇಶಗಳು:
(i) ಈಗಿನ ಹಾಗೂ ಮುಂದಿನ ಪೀಳಿಗೆ ಆರ್ಥಿಕ ಸ್ವಾವಲಂಬನೆ ನೀಡುವುದು.
(ii) ಉತ್ತಮ ಪರಿಸರ ಹಾಗೂ ಜೀವ ವ್ಯವಸ್ಥೆಗೆ ಬೆಂಬಲ ನೀಡುವುದು.

ಉತ್ತರ: ದೀರ್ಘ ಸಮಯದವರೆಗೆ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯನ್ನು ಸುಸ್ಥಿರ ಅಭಿವೃದ್ದಿ ಎನ್ನುವರು. ಮರುಚಕ್ರೀಕರಣದಲ್ಲಿ ವಸ್ತುಗಳನ್ನು ತಯಾರಿಸಲು ಶಕ್ತಿಯಬಳಕೆಯಾಗುತ್ತದೆ. ಆದರೆ ಮರುಬಳಕೆಯಲ್ಲಿ ವಸ್ತುವನ್ನು ಅದೇ ರೂಪದಲ್ಲಿ ಬಳಸುವುದರಿಂದ ಶಕ್ತಿಯ ಅಪವ್ಯಯ ಆಗುವುದಿಲ್ಲ.

ಉತ್ತರ:
ಕಾಡುಗಳು:
ಅಂತರ್ಜಲ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯಕ.
ಪ್ರವಾಹವನ್ನು ತಡೆಗಟ್ಟುತ್ತವೆ.

ವನ್ಯಜೀವಿಗಳು :
ಪರಿಸರದ ಸಮತೋಲನ ಕಾಪಾಡುತ್ತವೆ.
ನಿಸರ್ಗವನ್ನು ರಕ್ಷಿಸುತ್ತವೆ.

ಉತ್ತರ :
ಪರಿಸರ ಸಂರಕ್ಷಣೆಗೆ ಸಹಾಯಕವಾಗುವ 3-R ಗಳು ಮಿತಬಳಕೆ, ಮರುಬಳಕೆ ಹಾಗೂ ಮರುಚಕ್ರೀಕರಣ
ಮಿತ ಬಳಕೆ: ಉಪಯೋಗವಿಲ್ಲದಿದ್ದಾಗ, ಬಲ್ಸ್ ಮತ್ತು ಫ್ಯಾನ್ ಗಳನ್ನು ಆರಿಸುವುದು.
ಮರು ಬಳಕೆ: ಪೇಪರ್, ಪಾಲಿಥೀನ್ ಬ್ಯಾಗ್ ಗಳನ್ನು ಮತ್ತೆ ಬೇರೆ ರೂಪದಲ್ಲಿ ಬಳಸುವುದು.
ಮರು ಚಕ್ರೀಕರಣ: ನೀರು, ಪ್ಲಾಸ್ಟಿಕ್ ಗಳನ್ನು ಬೇರೆ ಉಪಯುಕ್ತ ರೂಪಕ್ಕೆ ಬದಲಾಯಿಸಿ ಬಳಸುವುದು.

ಉತ್ತರ : ಸುಸ್ಥಿರ ಅಭಿವೃದ್ಧಿಯು ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳ ಪ್ರಮಾಣವನ್ನುಕಾಯ್ದಿರಿಸಿಕೊಳ್ಳುವುದಾಗಿದೆ. ಅದರಲ್ಲಿಯೂ ಮುಗಿದು ಹೋಗುವ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಪರಿಸರಕ್ಕಾಗುವ ಹಾನಿಯನ್ನು ತಪ್ಪಿಸುವುದು. ಮರುಬಳಕೆ ಹೆಚ್ಚು ಸೂಕ್ತವಾಗಿದೆ ಏಕೆಂದರೆ ಇದರಲ್ಲಿ ಶಕ್ತಿಯ ಬಳಕೆ ಆಗುವುದಿಲ್ಲ.

ಉತ್ತರ :
1. ಈಗಿನ ಜನಾಂಗಕ್ಕೆ ಸೈಸರ್ಗಿಕ ಸಂಪನ್ಮೂಲಗಳನ್ನು ಒದಗಿಸುತ್ತದೆ. ಮುಂದಿನ ಜನಾಂಗಕ್ಕೆ ಸಂಪನ್ಮೂಲಗಳನ್ನು ಸಂರಕ್ಷಿಸುತ್ತದೆ.
2. ಮರುಬಳಕೆ ಮರುಚಕ್ರೀಕರಣಕ್ಕಿಂತ ಉತ್ತಮ ಕಾರಣ ಇದರಲ್ಲಿ ಶಕ್ತಿಯ ಬಳಕೆ ಆಗುವುದಿಲ್ಲ.

ಉತ್ತರ : ಕಾಡುಗಳನ್ನು ನಾವು ಜೀವಿವೈವಿಧ್ಯತೆ ಕಾಪಾಡಲು ಕಾಡುಜನರಿಗೆ ಆಹಾರ ಮತ್ತು ರಕ್ಷಣೆ ಹಾಗೂ ಪರಿಸರದ ಮತೋಲನ ಕಾಪಾಡಲು ರಕ್ಷಿಸಬೇಕು.

ಉತ್ತರ :
(1) ಫಾಸಿಲ್ ಇಂಧನಗಳು ಸಾಂಪ್ರದಾಯಿಕ ಶಕ್ತಿ ಆಕರ
(2) ವಾಯುಮಾಲಿನ್ಯ ತಡೆಗಟ್ಟಲು

ಉತ್ತರ : ವನ್ಯಜೀವಿ ಹಾಗೂ ನೈಸರ್ಗಿಕ ಆಸಕ್ತರು ಯಾವ ರೀತಿಯಲ್ಲೂ ಅರಣ್ಯದ ಮೇಲೆ ಅವಲಂಬಿತರಾಗಿಲ್ಲ. ಆದರೆ ಅರಣ್ಯದ ನಿರ್ವಹಣೆಯಲ್ಲಿ ಗಮನಾರ್ಹ ಪಾಲುದಾರಿಕೆಯನ್ನು ಹೊಂದಿದ್ದಾರೆ. ಅವರು ಸಂಪೂರ್ಣ ಜೀವ ವೈವಿಧ್ಯಗಳ ಸಂರಕ್ಷಣೆಯ ಅಗತ್ಯವನ್ನು ಮನಗಂಡವರಾಗಿದ್ದಾರೆ.

ಉತ್ತರ :
(1) ಕಾಡುಗಳ ಉತ್ಪನ್ನಗಳ ಮೇಲೆ ಅವಲಂಬಿತರಾದ, ಕಾಡಿನ ಸುತ್ತ ವಾಸಿಸುವ ಜನಗಳು.
(2) ಸರ್ಕಾರದ ಅರಣ್ಯ ಇಲಾಖೆ.
(3) ಕಾಡುಗಳ ಉತ್ಪನ್ನಗಳನ್ನು ಬಳಸುವ ಕೈಗಾರಿಕೋದ್ಯಮಿಗಳು ಆದರೆ ಇವರು ಸಂಪೂರ್ಣವಾಗಿ ಒಂದು ಸ್ಥಳದ ಕಾಡನ್ನು ಅವಲಂಬಿಸಿರುವುದಿಲ್ಲ.
(4) ಕಾಡನ್ನು ಸಂರಕ್ಷಣೆ ಹಾಗೂ ವನ್ಯ ಜೀವಿಗಳನ್ನು ರಕ್ಷಿಸುವ ಪರಿಸರವಾದಿಗಳು.

ಉತ್ತರ : ಕಾಡುಗಳು ಜೀವ ವೈವಿಧ್ಯತೆಯ ಸೂಕ್ಷ್ಮ ತಾಣಗಳಾಗಿವೆ. ಜೀವಿವೈವಿಧ್ಯತೆಯ ನಾಶದಿಂದ ಪರಿಸರದ ಸಮತೋಲನ ಹಾಳಾಗುತ್ತದೆ.

ಉತ್ತರ : ಸರ್ಕಾರವು ಸ್ಥಳೀಯರಿಗೆ ಕಾಡುಗಳ ಉತ್ಪನ್ನಗಳ ಆದ್ಯತೆ ಮನರ್ವಿಮರ್ಶಿಸಿತು ಹಾಗೂ ತನ್ನ ನೀತಿಯಲ್ಲಿ ಬದಲಾವಣೆ ತಂದಿತು. ಇದರಿಂದ ಜನರಿಗೆ ಕಾಡು ಉತ್ಪನ್ನಗಳು ದೊರೆಯಲು ಖಚಿತ ಪಡಿಸಿಕೊಂಡಿತು. ಈ ಚಳುವಳಿಯಿಂದ ಕಾಡುಗಳ ಉತ್ತಮ ನಿರ್ವಹಣೆ ಅಲ್ಲದೆ ನೀರು ಮಣ್ಣು ಸಂರಕ್ಷಣೆಯಲ್ಲಿ ಸ್ಥಳೀಯರಿಗೆ ಉಪಯುಕ್ತವಾಯಿತು.

ಉತ್ತರ : ಒಂದು ಪ್ರದೇಶದ ಜೀವವೈವಿಧ್ಯತೆ ಅಲ್ಲಿ ಕಂಡುಬರುವ ವಿವಿಧ ಪ್ರಬೇಧದ ವೈವಿಧ್ಯತೆಯಾಗಿದೆ ಕಾಡುಗಳಲ್ಲಿ ನಾವು ಹೆಚ್ಚು ವಿಧದ ಪ್ರಾಣಿ ಹಾಗೂ ಸಸ್ಯ ಸಂಕುಲಗಳನ್ನು ಕಾಣಬಹುದಾಗಿರುವುದರಿಂದ ಅದು ಜೀವ ವೈವಿಧ್ಯದ ಸೂಕ್ಷ ತಾಣವಾಗಿದೆ. ಬ್ಯಾಕ್ಟಿರಿಯಾ ಶಿಲೀಂಧ್ರಗಳು, ಫರ್ನ್ ಗಳು, ಸಸ್ಯಗಳು, ಹುಳುಗಳು, ಕೀಟಗಳು, ಪಕ್ಷಿಗಳು ಸರೀಸೃಪಗಳು ಮತ್ತು ಸ್ತನಿಗಳು ಕಂಡುಬರುತ್ತವೆ. ಆದ್ದರಿಂದ ಕಾಡುಗಳನ್ನು ಜೀವವೈವಿಧ್ಯತೆಯ ಸೂಕ್ಷ್ಮತಾಣಗಳೆನ್ನುತ್ತಾರೆ.

ಉತ್ತರ :
ವನ್ಯ ಜೀವಿಗಳನ್ನು ರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳು:
(1) ಕಾಡುಗಳ ನಾಶ ಹಾಗೂ ವನ್ಯ ಜೀವಿಗಳ ಬೇಟೆ ಮಾಡದಿರುವುದು ಅಥವಾ ತಡೆಯುವುದು.
(2) ಜನರಿಗೆ ಕಾಡುಗಳ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಮಹತ್ವ ತಿಳಿಸುವುದು/ಶಿಕ್ಷಣ ನೀಡುವುದು.

ಉತ್ತರ :
(1) ತಂಗುದಾಣಗಳ ನಿರ್ಮಾಣದದಿಂದ ನೈಸರ್ಗಿಕ ಆವಾಸಕ್ಕೆ ಧಕ್ಕೆ ಉಂಟಾಗುತ್ತದೆ.ತ್ಯಾಜ್ಯ ನಿರ್ವಹಣೆ ಪ್ರಾಣಿಗಳನ್ನು ಬೇಟೆಯಾಡುವುದು ಹಾಗೂ ಅವುಗಳ ಅಲೆದಾಟ ನಿರ್ಬಂಧಿತವಾಗುತ್ತದೆ.
(2) ಸಾಕು ಪ್ರಾಣಿಗಳ ಮೇಯಿಸುವಿಕೆಯಿಂದ ಪರಿಸರ ಸಮತೋಲನ ನಾಶವಾಗುತ್ತದೆ. ಕಾರಣ ಸಸ್ಯಾಹಾರಿಗಳಿಗೆ ಆಹಾರ ಇಲ್ಲದಂತಾಗಿ, ಅವುಗಳಲ್ಲದೇ ಅವುಗಳನ್ನು ಅವಲಂಬಿಸಿದ ಇತರೇ ಜೀವಿಗಳೂ ಇಲ್ಲದಂತಾಗುತ್ತದೆ.

ಉತ್ತರ : ಕಾಡುಗಳನ್ನು ಸಂರಕ್ಷಿಸುವ ನಾಲ್ಕು ಕ್ರಮಗಳು:
(1) ಕಾಡಿನ ನಾಶ ತಡೆಗಟ್ಟುವುದು.
(2) ಕಾಡುಗಳ ಉತ್ಪನ್ನಗಳನ್ನು ಪ್ರಕೃತಿ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಮಿತವಾಗಿ ಬಳಸುವುದು.
(3) ನೈಸರ್ಗಿಕ ಸಂಪನ್ಮೂಲಗಳನ್ನು ವಿವೇಕಯುತವಾಗಿ ಬಳಕೆ ಮಾಡುವುದು.
(4) ಅರಣ್ಯೀಕರಣ ಮಾಡುವುದು. .

ಉತ್ತರ :
1. ಮರು ಬಳಕೆಯೆಂದರೆ ಒಂದು ವಸ್ತುವನ್ನು ಪದೇ ಪದೇ ಬಳಸುವುದು.
2.ಮರು ಬಳಕೆಯಲ್ಲಿ ಯಾವುದೇ ಶಕ್ತಿಯ ಉಪಯೋಗವಿಲ್ಲ.
3.ಮರು ಚಕ್ರೀಕರಣದಲ್ಲಿ ಬಳಕೆಯಾದ ವಸ್ತುವನ್ನು ಮತ್ತೊಂದು ಉಪಯುಕ್ತ ವಸ್ತುವಾಗಿ ಪರಿವರ್ತಿಸಲಾಗುತ್ತದೆ.
4.ಮರು ಚಕ್ರೀಕರಣ ಪ್ರಕ್ರೀಯೆಯಲ್ಲಿ ಶಕ್ತಿಯ ಬಳಕೆಯಾಗುತ್ತದೆ ಮತ್ತು ಸಂಪನ್ಮೂಲಗಳು ವ್ಯರ್ಥವಾಗಬಹುದು.

ಉತ್ತರ :
1. ಫಾಸಿಲ್ ಇಂಧನಗಳ ದಹನದಿಂದ ವಾಯು ಮಾಲಿನ್ಯ ಉಂಟಾಗುತ್ತದೆ.
2. ಇಂಧನಗಳ ದಹನದಿಂದ ಉಂಟಾದ ಕಾರ್ಬನ್ ಡೈ ಆಕ್ಸೈಡ್ ನಿಂದ ಹಸಿರು ಮನೆ ಪರಿಣಾಮ ಉಂಟಾಗುತ್ತದೆ.
3. ಇದು ನವೀಕರಣ ಗೊಳ್ಳದ ಸಂಪನ್ಮೂಲ.
4. ಇವುಗಳ ದಹನದಿಂದ ಉಂಟಾದ ಸಲ್ಫರ ಹಾಗೂ ನೈಟ್ರೋಜನ್ ಆಕ್ಸೈಡ್ ಗಳಿಂದ ಆಮ್ಲಮಳೆ ಉಂಟಾಗುತ್ತದೆ.

ಉತ್ತರ :
(1) ಮಳೆ ನೀರನ್ನು ಸಂಗ್ರಹಿಸಿ ಶುದ್ದ ನೀರನ್ನು ಪಡೆಯುವ ತಂತ್ರವೇ ನೀರಿನ ಕೊಯ್ಲು.
(2) ಅಂತರ್ಜಲದ ರೂಪದಲ್ಲಿ ಸಂಗ್ರಹಗೊಂಡ ನೀರು ಮಲಿನಗೊಂಡಿರುವುದಿಲ್ಲ. ಇದು ಬಾವಿಗಳನ್ನು ಮರುಪೂರಣ ಗೊಳಿಸುತ್ತದೆ. ಮತ್ತು ವಿಸ್ತಾರ ಪ್ರದೇಶದಲ್ಲಿನ ಸಸ್ಯಗಳಿಗೆ ತೇವಾಂಶವನ್ನು ಒದಗಿಸುತ್ತದೆ.

ಉತ್ತರ : ಜಲಾನಯನ ಪ್ರದೇಶದ ಲಕ್ಷಣಗಳನ್ನು ಅಧ್ಯಯನ ಮಾಡುವುದೇ ಜಲಾನಯನ ಪ್ರದೇಶದ ನಿರ್ವಹಣೆ. ನೀರಿನ ಸರಬರಾಜು ನೀರಿನ ಗುಣ ಮಟ್ಟ ನೀರಿನ ಹರಿವು ಮತ್ತು ಮಳೆ ನೀರಿನ ಹರಿವುಗಳನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ. ಜಲಾನಯನ ಪ್ರದೇಶಗಳ ಸುಸ್ಥಿರ ನಿರ್ವಹಣಾ ಯೋಜನೆಯನ್ನು ಇದು ಖಾತ್ರಿಪಡಿಸುತ್ತದೆ.
ಜಲಾನಯನ ಪ್ರದೇಶದ ನಿರ್ವಹಣಾ ವ್ಯವಸ್ಥೆಯ ಲಾಭಗಳು:
(1) ನೀರಿನ ಗುಣಮಟ್ಟವನ್ನು ಕಡ್ಡಾಯವಾಗಿ ನಿರ್ವಹಿಸುವುದು.
(2) ಸಮವಾದ ಮತ್ತು ಸಂಸ್ಥಿರವಾದ ನೀರಿನ ವಿತರಣೆ.
(3) ಪ್ರವಾಹಗಳ ಸಂದರ್ಭದಲ್ಲಿ ಮಳೆ ನೀರಿನ ಹರಿವನ್ನು ನಿಯಂತ್ರಿಸಿ ಮಣ್ಣಿನ ರಕ್ಷಣೆಗೆ ಸಹಾಯಕ.

ಉತ್ತರ :
(1) ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗುತ್ತದೆ.
(2) ಅಂತರ್ಜಲವು ಮೇಲಿನ ಮಣ್ಣಿನ ಪದರಗಳನ್ನು ತೇವಭರಿತವಾಗಿಸುತ್ತದೆ ಮತ್ತು ನೀರು ಆವಿಯಾಗುವುದನ್ನು ತಡೆಯುತ್ತದೆ. ಹಲವಾರು ಪೀಳಿಗೆಗಳಿಗೆ ನೀರಿನ ಅಗತ್ಯವಿರುವುದದರಿಂದ ಮಿತವಾಗಿರುವ ಆಕರದ ನಿರ್ವಹಣೆ ಅಗತ್ಯ ಎಲ್ಲರಿಗೂ ಸಮಾನ ನೈಸರ್ಗಿಕ ಸಂಪನ್ಮೂಲಗಳ ವಿತರಣೆಯನ್ನು ಖಾತ್ರಿಪಡಿಸಲು ಇದು ಅಗತ್ಯ.

ಉತ್ತರ :
(1) ಬಾವಿಗಳ ಮರುಮುರಣಕ್ಕಾಗಿ ನೀರು ಹರಡಿಕೊಳ್ಳುತ್ತದೆ.
(2) ದೀರ್ಘ ಪ್ರದೇಶದವರೆಗೂ ಸಸ್ಯಗಳಿಗೆ ತೇವಾಂಶವನ್ನೊದಗಿಸುತ್ತದೆ.
(3) ಸೊಳ್ಳೆಗಳ ಸಂತಾನೋತ್ಪತ್ತಿಗೆ ಅವಕಾಶ ನೀಡುವುದಿಲ್ಲ.
(4) ಮಲಿನಗೊಳ್ಳುವುದರಿಂದ ರಕ್ಷಿಸುತ್ತದೆ.

ಉತ್ತರ : ಪಳೆಯುಳಿಕೆ ಇಂಧನಗಳ ದಹನದಿಂದ ಹಸಿರು ಮನೆ ಅನಿಲಗಳಾದ CO, CO2, ನೈಟ್ರೋಜನ್ ಆಕ್ಷೆಡ್ ಗಳು ಮತ್ತು ಸಲ್ಪರ್ ಆಕ್ಸೈಡ್ ಗಳು ಬಿಡುಗಡೆಯಾಗುತ್ತವೆ. ಅತ್ಯಧಿಕ ಪ್ರಮಾಣದ CO2 ಜಾಗತಿಕ ತಾಪ ಏರಿಕೆಯನ್ನು ಉಂಟು ಮಾಡುತ್ತದೆ.

$ads={2}

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ:
1. ಸ್ಥಳೀಯ ಜನರ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ.
2. ಕೈಗಾರಿಕೋದ್ಯಮಿಗಳಿಂದ ಕಾಡುಗಳ ಉತ್ಪನ್ನಗಳು ಬಳಕೆಯಾಗುವುದರಿಂದ.
3. ದೇಶದ ಅಭಿವೃದ್ಧಿಗಾಗಿ, ಡ್ಯಾಮ್, ರಸ್ತೆ ಇವುಗಳ ಅಭಿವೃದ್ಧಿಗಾಗಿ
. 4. ಯಾತ್ರಾ/ಪ್ರೇಕ್ಷಣೀಯ ಸ್ಥಳಗಳಲ್ಲಿ ಯಾತ್ರಿಗಳಿಗಾಗಿ ಕಟ್ಟಡಗಳ ನಿರ್ಮಾಣದಿಂದ ಕಾಡುಗಳು ನಾಶವಾಗುತ್ತಿವೆ..

ಉತ್ತರ :
1. ಗಾಳಿ, ನೀರು, ಶಬ್ದ ಮತ್ತು ನೆಲ ಮಾಲಿನ್ಯ.
2. ಕಾಡುಗಳ ನಾಶದಿಂದ ಜೀವ ವೈವಿಧ್ಯತೆಯ ನಾಶ.
3. ಬೈಜಿಕ ಸ್ಥಾವರಗಳಿಂದ ಬರುವ ವಿಕಿರಣ.
4. ಆಮ್ಲ ಮಳೆ/ಜಾಗತಿಕ ತಾಪಮಾನ ಏರಿಕೆ.

ಉತ್ತರ :
1. ಜೀವ ವೈವಿಧ್ಯತೆಯ ನಾಶ.
2. ಸ್ಥಳೀಯ ಜನರ ವಿವಿಧ ಬೇಡಿಕೆಗಳು ಪೂರೈಸಲಾಗುವುದಿಲ್ಲ.
3. ಮಣ್ಣಿನ ಫಲವತ್ತತೆ ಕುಂಠಿತಗೊಳ್ಳುವುದು.

ಉತ್ತರ :
1. ಪ್ರವಾಹ ಮತ್ತು ಕ್ಷಾಮಗಳನ್ನು ತಗ್ಗಿಸುವುದು.
2. ಕೆಳಭಾಗದ ಆಣೆಕಟ್ಟು ಮತ್ತು ಜಲಾಶಯಗಳ ಆಯಸ್ಸನ್ನು ಹೆಚ್ಚಿಸುವುದು.
3. ಜೈವಿಕರಾಶಿ ಉತ್ಪಾದನೆಯಲ್ಲಿ ಹೆಚ್ಚಳ ಮತ್ತು ಜಲಾಶಯ ಪ್ರದೇಶಗಳು ಸಮುದಾಯಗಳ ವರಮಾನ ಹೆಚ್ಚಿಸುವುದು.
4. ಮಣ್ಣು ಮತ್ತು ನೀರಿನ ವೈಜ್ಞಾನಿಕ ಸಂರಕ್ಷಣೆಯ ಮೂಲಕ ಜೈವಿಕ ಸಮತೋಲನ ನಿರ್ವಹಣೆಯಲ್ಲಿ ಸಹಕಾರಿ.

ಉತ್ತರ:
ಬೃಹತ್ ಅಣೆಕಟ್ಟುಗಳ ನಿರ್ಮಾಣದಿಂದ ಉಂಟಾಗುವ 3 ಸಮಸ್ಯೆಗಳು:
(1) ಪಾರಿಸಾರಿಕ ಸಮಸ್ಯೆಗಳು : ಬೃಹತ್ ಅಣೆಕಟ್ಟುಗಳ ನಿರ್ಮಾಣದಿಂದ ಅಪಾರ ಪ್ರಮಾಣದ ಅರಣ್ಯ ನಾಶಕ್ಕೆ ಒಳಗಾಗುತ್ತದೆ, ಇದರಿಂದ ಅಪಾರ ಪ್ರಮಾಣದ ಜೀವ ವೈವಿಧ್ಯತೆ ನಷ್ಟವಾಗುತ್ತದೆ. ಇದು ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ನಾಶಮಾಡುತ್ತದೆ.
(2) ಸಾಮಾಜಿಕ ಸಮಸ್ಯೆಗಳು : ಬೃಹತ್ ಅಣೆಕಟ್ಟುಗಳ ನಿರ್ಮಾಣವುಬೃಹತ್ ಜಲಾಶಯಗಳ ನಿರ್ಮಾಣವನ್ನು ಒಳಗೊಂಡಿರುತ್ತದೆ. ಕೆಲವೊಮ್ಮೆ ನೆರೆಹೊರೆಯ ಪಟ್ಟಣ ಮತ್ತು ಗ್ರಾಮಗಳಲ್ಲಿ ಪ್ರವಾಹದಿಂದಾಗಿ ಮುಳುಗಡೆಯ ಅಪಾಯವಿರುತ್ತದೆ. ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಪುನರ್ವಸತಿ ಕಲ್ಪಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗುತ್ತದೆ.
ಪರಿಹಾರ: ಸರ್ಕಾರವು ಜನರನ್ನು ಸಂರಕ್ಷಿತ ಪ್ರದೇಶಗಳಿಗೆ.ಸ್ಥಳಾಂತರಿಸಬೇಕಾಗುತ್ತದೆ, ಅಲ್ಲಿ ಜನರು ತಮ್ಮ ದೈನಂದಿನ ಜೀವನ ನಿರ್ವಹಿಸಬಹುದು ಒಂದು ವೇಳೆ ಜನಜೀವನ ಅಸ್ತವ್ಯಸ್ತಗೊಂಡಲ್ಲಿ ಸರ್ಕಾರ ಸೂಕ್ತ ಪರಿಹಾರ ಒದಗಿಸತಕ್ಕದ್ದು.
(3) ಆರ್ಥಿಕ ಸಮಸ್ಯೆಗಳು : ಬೃಹತ್ ಅಣೆಕಟ್ಟುಗಳಿಗೆ ಬೃಹತ್ ಪ್ರಮಾಣದ ಹಣಕಾಸು ಅವಶ್ಯಕ.
ಪರಿಹಾರ: ಅಣೆಕಟ್ಟುಗಳು ವಿದ್ಯುತ್ ಉತ್ಪಾದನೆ ಮಾಡುವಂತಿದ್ದರೆ ಆರ್ಥಿಕ ದೃಷ್ಟಿಯಿಂದ ಲಾಭಕರ.

ಉತ್ತರ :
1. ಜೈವಿಕ ವಿಘಟನೀಯ ವಸ್ತುಗಳ ಮರುಚಕ್ರೀಕರಣದಿಂದ ಮೂಲ ಪೋಷಕಾಂಶಗಳು ಪರಿಸರದ ಒಡಲಿಗೆ ಸೇರುತ್ತದೆ.
ಉದಾ - ನೀರು ಮತ್ತು ನೆಲಮತ್ತು ಸಸ್ಯಗಳು ಅವುಗಳನ್ನು ಮರು ಹೀರಿಕೊಳ್ಳುತ್ತದೆ. ಗೋಬರ್ ಗ್ಯಾಸ ಉತ್ಪಾದನೆಯಿಂದ ಅಪಾರ ಪ್ರಮಾಣದ ಶಕ್ತಿ ಹಾಗೂ ಸ್ಲರಿಯಿಂದ ಉತ್ತಮ ಗೊಬ್ಬರ ದೊರೆಯುತ್ತದೆ.

2. ಜೈವಿಕ ವಿಘಟನೆಗೆ ಒಳಗಾಗದ ವಸ್ತುಗಳಾದ ಪ್ಲಾಸ್ಟಿಕ್ ಹಾಗೂ ಗಾಜುಗಳು ತ್ಯಾಜ್ಯ ನಿರ್ವಹಣೆಗೆ ತೊಂದರೆಯನ್ನು ಉಂಟುಮಾಡುತ್ತದೆ. ಇಂತಹ ವಸ್ತುಗಳ ಮರುಚಕ್ರೀಕರಣದಿಂದ ಉತ್ತಮ ವಸ್ತುಗಳನ್ನು ತಯಾರಿಸಬಹುದು.
ಉದಾ: ಪಾಲಿಥಿನ್ ಬ್ಯಾಗ್ ಹಾಗೂ ಅಲ್ಯುಮಿನಿಯಂ ವಸ್ತುಗಳ ಮರುಚಕ್ರೀಕರಣ.