ನಮ್ಮ ಪರಿಸರ

ಒಂದು ಅಂಕದ ಪ್ರಶ್ನೆಗಳು

ಉತ್ತರ: ಸಸ್ಯಗಳು, ಪ್ರಾಣಿಗಳು, ಮತ್ತು ಎಲ್ಲಾ ರೀತಿಯ ಜೀವಿಗಳು ಜೈವಿಕ ಘಟಕಗಳು
ಉಷ್ಣತೆ, ಮಳೆ, ಗಾಳಿ, ಮಣ್ಣು ಮತ್ತು ಖನಿಜಗಳು ಅಜೈವಿಕ ಘಟಕಗಳು

ಉತ್ತರ: ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಎಲ್ಲಾ ಹಸಿರು ಸಸ್ಯಗಳು ಮತ್ತು ಕೆಲವು ಬ್ಯಾಕ್ಟೀರಿಯಾಗಳನ್ನು ಉತ್ಪಾದಕರು ಎನ್ನುತ್ತಾರೆ.

ಉತ್ತರ: ಸಂಕೀರ್ಣ ಸಾವಯವ ಪದಾರ್ಥಗಳನ್ನು ಸರಳ ನಿರವಯವ ಪದಾರ್ಥಗಳನ್ನು ವಿಭಜಿಸುವ ಸೂಕ್ಷ್ಮಜೀವಿಗಳಿಗೆ ವಿಘಟಕರು ಎನ್ನುವರು.

ಉತ್ತರ: ಸಿ. ಎಫ್. ಸಿ.

ಉತ್ತರ: ಹಾನಿಕಾರಕ ರಾಸಾಯನಿಕಗಳು ವಿಘಟನೆಗೆ ಒಳಗಾಗದ ಕಾರಣ ಪ್ರತಿ ಪೋಷಣಾ ಸ್ತರಗಳಲ್ಲಿ ಸಂಗ್ರಹಗೊಂಡು ಒಂದು ಪೋಷಣಾ ಸ್ತರದಿಂದ ಇನ್ನೊಂದು ಪೋಷಣಾ ಸ್ತರಕ್ಕೆ ಹೆಚ್ಚುತ್ತಾ ಹೋಗುವ ವಿದ್ಯಮಾನ.

ಉತ್ತರ: ಶೇಕಡ 10

ಉತ್ತರ: ಆಹಾರ ಸರಪಳಿಯಲ್ಲಿ ಶಕ್ತಿಯು ವರ್ಗಾವಣೆಯಾಗುವ ಪ್ರತಿಯೊಂದು ಹಂತ ಅಥವಾ ಮಟ್ಟ.

ಉತ್ತರ: ಜೈವಿಕ ಕ್ರಿಯೆಗಳಿಂದ ವಿಭಜಿಸಲ್ಪಡುವ ವಸ್ತುಗಳನ್ನು ಜೈವಿಕ ವಿಘಟನೆಗೆ ಒಳಗಾಗುವ ವಸ್ತುಗಳು ಎನ್ನುವರು.

ಎರಡು ಅಂಕದ ಪ್ರಶ್ನೆಗಳು


ಉತ್ತರ : ವಾತಾವರಣದ ಉನ್ನತ ಸ್ತರದಲ್ಲಿ ನೇರಳಾತೀತ ವಿಕಿರಣಗಳು ಆಕ್ಸಿಜನ್ ಅಣು O2 ವಿನ ಜೊತೆ ವರ್ತಿಸಿ ಉಂಟಾದ ಒಂದು ಸಂಯುಕ್ತ ವಾಗಿದೆ ಹೆಚ್ಚಿನ ತೀವ್ರತೆಯ ನೇರಳಾತೀತ ಕಿರಣಗಳು ಕೆಲವು ಆಕ್ಸಿಜನ್ ಅಣುಗಳನ್ನು O2 ಆಕ್ಸಿಜನ್ ಪರಮಾಣು O ಗಳಾಗಿ ವಿಭಜಿಸುತ್ತದೆ ನಂತರ ಈ ಪರಮಾಣುಗಳು ಇತರ ಆಕ್ಸಿಜನ್ ಅಣುಗಳೊಂದಿಗೆ ಸೇರಿ ಓಝೋನ್ ರೂಪುಗೊಳ್ಳುತ್ತದೆ.
O2----------------> O+O
O+O2------------> O3

ಉತ್ತರ :
ಹುಲ್ಲು (ಉತ್ಪಾದಕ) ----> ಮಿಡತೆ (ಪ್ರಾಥಮಿಕ ಭಕ್ಷಕ) ----> ಕಪ್ಪೆ (ದ್ವಿತೀಯಕ ಭಕ್ಷಕ) ----> ಹಾವು (ತೃತೀಯಕ ಭಕ್ಷಕ)

ಉತ್ತರ : ಸೂಕ್ಷ್ಮಜೀವಿಗಳು ಸಂಕೀರ್ಣ ಸಾವಯವ ಪದಾರ್ಥಗಳನ್ನು ಸರಳ ನಿರವಯವ ಪದಾರ್ಥಗಳಾಗಿ ವಿಘಟಿಸುತ್ತವೆ ಇಲ್ಲಿ ನಿರವಯವ ಪದಾರ್ಥಗಳನ್ನು ಪುನಹ ಸಸ್ಯಗಳು ಬಳಸಿಕೊಳ್ಳುತ್ತವೆ ಈ ರೀತಿ ವಿಘಟಕಗಳು ಇರುವುದರಿಂದ ಪರಿಸರದಲ್ಲಿ ಸಮತೋಲನವಿದೆ.

ಉತ್ತರ :
• ಜೈವಿಕ ವಿಘಟನೀಯ ವಸ್ತುಗಳಿಂದ ಪರಿಸರ ಮಾಲಿನ್ಯ ಉಂಟಾಗುವುದಿಲ್ಲ.
• ತ್ಯಾಜ್ಯವಸ್ತುಗಳನ್ನು ವಿಭಜಿಸಿ ಅದನ್ನು ಹಲವಾರು ಪ್ರಕ್ರಿಯೆಗೆ ಒಳಪಡಿಸಿ ಫಲವತ್ತಾದ ಗೊಬ್ಬರ ಉತ್ಪತ್ತಿಯಾಗುವುದು.

ಉತ್ತರ :
• ಜೈವಿಕ ವಿಘಟನೀಯ ವಲ್ಲದ ವಸ್ತುಗಳ ಪ್ರಭಾವ ಪರಿಸರದಲ್ಲಿ ದೀರ್ಘಕಾಲದವರೆಗೂ ಇರುವುದು.
• ಇವುಗಳಿಂದ ಭೂ ಮಾಲಿನ್ಯ ಜಲ ಮಾಲಿನ್ಯ ಮತ್ತು ವಾಯುಮಾಲಿನ್ಯ ಉಂಟಾಗುತ್ತದೆ.

ಉತ್ತರ: ಓಜೋನ್ ಪದರದ ನಾಶದಿಂದ ನೇರಳಾತೀತ ಕಿರಣಗಳು ನೇರವಾಗಿ ಭೂಮಿಯನ್ನು ಪ್ರವೇಶಿಸಿ ಮಾನವರಲ್ಲಿ ಚರ್ಮದ ಕ್ಯಾನ್ಸರ್ ಉಂಟುಮಾಡುತ್ತದೆ. ಜೀವಿಗಳಲ್ಲಿ ಕಣ್ಣಿನ ಕ್ಯಾಟರಾಕ್ಟ್ ರೋಗನಿರೋಧಕ ಶಕ್ತಿ ಕುಂದುವಿಕೆಯಂತಹ ದೋಷಗಳಿಗೆ ಕಾರಣವಾಗುತ್ತದೆ.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ:
• ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್ ನಂತಹ ವಸ್ತುಗಳ ಮರುಬಳಕೆ ಹಾಗೂ ಮರುಚಕ್ರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು.
• ಬಳಸಿ ಬಿಸಾಡುವ ಸಂಸ್ಕೃತಿಗೆ ಕಡಿವಾಣ ಹಾಕುವುದು.
• ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದಾಗ ಆಹಾರ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಸಂಬಂಧಿಸಿದ ಕಸದ ಬುಟ್ಟಿಗೆ ಎಸೆಯುವುದು.

ಉತ್ತರ : ಒಂದು ವೇಳೆ ನಾವು ಒಂದು ಪೋಷಣ ಸ್ತರದಲ್ಲಿನ ಎಲ್ಲಾ ಜೀವಿಗಳನ್ನು ಕೊಂದರೆ ಆ ಪೋಷಣಾಸ್ತರದಿಂದ ಆಹಾರ ಶಕ್ತಿಯು ಮೇಲಿನ ಪೋಷಣ ಸ್ತರಕ್ಕೆ ವರ್ಗಾವಣೆಯಾಗುವುದಿಲ್ಲ ಇದರಿಂದ ಪರಿಸರ ಸಮತೋಲನ ಏರುಪೇರಾಗುತ್ತದೆ. ಇದರ ಪರಿಣಾಮವಾಗಿ ಮೇಲಿನ ಪೋಷಣಾ ಸ್ತರದ ಜೀವಿಗಳು ಆಹಾರವಿಲ್ಲದೆ ಸಾಯುವ ಸ್ಥಿತಿ ತಲುಪುತ್ತದೆ. ಮತ್ತು ಕೆಳಗಿನ ಪೋಷಣಾ ಸ್ತರದಲ್ಲಿರುವ ಜೀವಿಗಳು ಅಪಾರವಾಗಿ ಬೆಳೆದು ಅವುಗಳ ಸಂಖ್ಯೆ ಮಿತಿ ಮೀರುತ್ತದೆ. ಈ ಎರಡು ಸ್ಥಿತಿಗಳು ಪರಿಸರವನ್ನು ಗಲಿಬಿಲಿಗೊಳಿಸುತ್ತದೆ.

ಉತ್ತರ : ಎಂಬತ್ತರ ದಶಕದಲ್ಲಿ ಓಝೋನ್ ಪ್ರಮಾಣವು ತೀವ್ರವಾಗಿ ಕುಸಿಯಲಾರಂಭಿಸಿದ್ದು ಶೀತಲೀಕರಣ ಮತ್ತು ಅಗ್ನಿಶಾಮಕದಲ್ಲಿ ಬಳಸಲ್ಪಡುವ ಕ್ಲೋರೋ ಪ್ಲೋರೋ ಕಾರ್ಬನ್ ಗಳಂತಹ ಸಂಶ್ಲೇಷಿತ ರಾಸಾಯನಿಕಗಳು ಈ ಕುಸಿತಕ್ಕೆ ಕಾರಣ ಎಂದು ಕಂಡುಹಿಡಿಯಲಾಯಿತು. 1987 ರಲ್ಲಿ ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮ CFC ಗಳ ಉತ್ಪಾದನೆಯನ್ನು 1986 ರ ಮಟ್ಟಕ್ಕೆ ಸ್ಥಗಿತಗೊಳಿಸುವಂತೆ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತ.ು ಇಂದು ಪ್ರಪಂಚದಾದ್ಯಂತ CFC ಮುಕ್ತ ರೆಫ್ರಿಜರೇಟರ್ ಗಳನ್ನು ಎಲ್ಲಾ ಉತ್ಪಾದನಾ ಕಂಪನಿಗಳು ತಯಾರಿಸುವುದು ಕಡ್ಡಾಯವಾಗಿದೆ.