ದಿನನಿತ್ಯ ಬಳಕೆಗೆ ಬರುವ ಕೆ.ಸಿ.ಎಸ್.ಆರ್. (KCSR Rules) ಪ್ರಮುಖ ನಿಯಮಗಳು | Important KCSR Rules PDF

ಕರ್ನಾಟಕ ರಾಜ್ಯ ಸರಕಾರಿ ನೌಕರರು ತಮ್ಮ ಸೇವಾ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ನೌಕರರು ಕೆ.ಸಿ.ಎಸ್.ಆರ್ ನಿಯಮಗಳ (KCSR Rules) ಬಗ್ಗೆ ತಿಳಿದುಕೊಂಡರೆ ತಮ್ಮ ಸಾರ್ವಜನಿಕ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿ ಮಾಡಲು ಸಹಾಯಕವಾಗಲಿದೆ. ಅಲ್ಲದೆ ಕೆ.ಸಿ.ಎಸ್.ಆರ್ ನಿಯಮಗಳಲ್ಲಿ ನೌಕರಿರಿಗೆ ಇರುವ ಸವಲತ್ತುಗಳ ಬಗ್ಗೆ ಅರಿವು ಮೂಡಲಿದೆ.

ಆದ್ದರಿಂದ, ಕರ್ನಾಟಕ ಸರ್ಕಾರಿ ನೌಕರಿಗೆ ತಮ್ಮ ಸೇವಾ ಸಮಯದಲ್ಲಿ ಅವಶ್ಯಕವಿರುವ ಪ್ರಮುಖ ಕೆ.ಸಿ.ಎಸ್.ಆರ್ ನಿಯಮಗಳ (Important KCSR Rules) ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ದಿನನಿತ್ಯ ಬಳಕೆಗೆ ಬರುವ ಕೆ.ಸಿ.ಎಸ್.ಆರ್. (KCSR Rules) ಪ್ರಮುಖ ನಿಯಮಗಳು | Important KCSR Rules


ದಿನನಿತ್ಯ ಬಳಕೆಗೆ ಬರುವ ಕೆ.ಸಿ.ಎಸ್.ಆರ್. (KCSR Rules) ಪ್ರಮುಖ ನಿಯಮಗಳು:

ನಿಯಮ ವಿಷಯ
7(B) ಪುಭಾರದಲ್ಲಿರುವ ಅಧಿಕಾರಿಯು ಖಾಯಂ ಅಧಿಕಾರಿಯ ಹುದ್ದೆಗೆ ನಿಗದಿಪಡಿಸಿರುವ ದಿನನಿತ್ಯದ ಮತ್ತು ಆರ್ಥಿಕ ಕರ್ತವ್ಯಗಳನ್ನು ಮಾತ್ರ ನಿರ್ವಹಿಸಬಹುದು.
ಖಾಯಂ ಅಧಿಕಾರಿಯ ಆದೇಶಗಳನ್ನು ತಿದ್ದುಪಡಿ, ಪರಿಷ್ಕರಣೆ ಮಾಡುವಂತಿಲ್ಲ. (ಅತ್ಯಂತ ತುರ್ತು ಸಂದರ್ಭಗಳಲ್ಲಿ ಮಾತ್ರ ಮೇಲಧಿಕಾರಿಗಳ ಅನುಮತಿ ಪಡೆಯಬೇಕು).
8(1) ಅನಧಿಕೃತ ಗೈರುಹಾಜರಿ- ತನ್ನ ಹುದ್ದೆಯ ಹಕ್ಕನ್ನು ಹೊಂದಿರುವ ನೌಕರನು ತನ್ನ ಹುದ್ದೆಯಲ್ಲಿನ ಕರ್ತವ್ಯಗಳನ್ನು ನಿರ್ವಹಿಸದೇ ಗೈರುಹಾಜರಾಗುವುದು.
8(3) ವಯಸ್ಸು:- ನೌಕರನಿಗೆ ನಿವೃತ್ತಿ ಹೊಂದಲು ಸರ್ಕಾರ ನಿಗದಿಪಡಿಸಿರುವ ವಯಸ್ಸು.
8(15)(f) ನೇಮಕಾತಿಗಾಗಿ ಕಾಯ್ತ ಅವಧಿ ಬಗ್ಗೆ ವರ್ಗಾವಣೆ ಗೊಂಡು ಸ್ಥಳ ನಿಯುಕ್ತಿ ತೋರಿಸದೇ ಇರುವ, ತರಬೇತಿಯಿಂದ ಹಿಂದಿರುಗಿದಾಗ ಸ್ಥಳ ನಿಯುಕ್ತಿಗಾಗಿ ಕಾಯ್ದಿರುವ ಅವಧಿಯನ್ನು ಘೋಷಣೆ ಮಾಡುವುದು.
8(26) ಹುದ್ದೆಯ ಹಕ್ಕು:- ನೌಕರನು ತನ್ನ ಸ್ನಾನ ಪನ್ನ ಹುದ್ದೆಯ (ಖಾಯಂ ಹುದ್ದೆಯ) ಮೇಲೆ ಹೊಂದಿರುವ ಹಕ್ಕು.
8(29) ಲಿಪಿಕ ನೌಕರ- ಸಂಪೂರ್ಣವಾಗಿ ಕಛೇರಿಯಲ್ಲೇ ಕರ್ತವ್ಯ ನಿರ್ವಹಿಸುವ ನೌಕರರು.
8(31) ಸ್ನಾನಪನ್ನ:- ನಿರ್ದಿಷ್ಟ ಖಾಲಿ ಹುದ್ದೆಯಲ್ಲಿ ಒಬ್ಬ ನೌಕರನು ಹೊಂದಿರುವ ಹಕ್ಕು. ಬೇರಾವ ನೌಕರನೂ ಹುದ್ದೆಯ ಮೇಲಿನ ಹಕ್ಕು ಹೊಂದಿರದಿದ್ದರೆ, ಖಾಲಿ ಹುದ್ದೆಯಲ್ಲಿ ಒಬ್ಬ ನೌಕರನನ್ನು ಸ್ನಾನವನ್ನನಾಗಿ ಸಕ್ಷಮ ಪ್ರಾಧಿಕಾರಿಯು ನೇಮಿಸಬಹುದು.
8(32) ವೇತನ:-ಒಂದು ಹುದ್ದೆಗೆ ಸರ್ಕಾರ ನಿಗದಿಪಡಿಸಿರುವ ಸ್ಥಾನಪನ್ನ ಮೊಬಲಗು. ನೌಕರನ ಸ್ನಾನಮಾನದ ಪ್ರಕಾರ ಆತನಿಗೆ ಹಕ್ಕಿರುವ ಮೊಬಲಗು. ಇದರಲ್ಲಿ ಸ್ಥಗಿತ ವೇತನ, ಉಪಲಬ್ಬಿಗಳು, ವೈಯುಕ್ತಿಕ ವೇತನ ಗಳು ಸೇರಿರುತ್ತವೆ.
8(34) ವೈಯುಕ್ತಿಕ ವೇತನ- ವಿಶೇಷ ಸಂದರ್ಭಗಳಲ್ಲಿ ಮತ್ತು ಇತರ ವೈಯುಕ್ತಿಕ ಕಾರಣಗಳಿಗಾಗಿ ಮಂಜೂರು ಮಾಡಿರುವ ಹೆಚ್ಚಿನ ವೇತನ, ಇದಕ್ಕೆ ವಿಶೇಷ ಆದೇಶ ಹೊರಡಿಸಿರಲೇಬೇಕು.
8(37) ಪ್ರೋಬೇಷನರ್- ಇದಕ್ಕೆ ಕೆ.ಸಿ.ಎಸ್.(ಪ್ರೊಬೇಷನರ್) ನಿಯಮಗಳು 1977 ರಲ್ಲಿ ವಿವರಿಸಲಾಗಿದೆ. ಒಟ್ಟಿನಲ್ಲಿ ಹಂಗಾಮಿ ಅಥವಾ ಪರೀಕ್ಷಾರ್ಥ ನೌಕರ.
8(39) ವರ್ಗಾವಣೆ- ಹೊಸ ಹುದ್ದೆಯ ಕರ್ತವ್ಯಗಳನ್ನು ವಹಿಸಿಕೊಳ್ಳಲು ನೌಕರರನನ್ನು ಕೇಂದ್ರಸ್ಥಾನದ ಬದಲಾವಣೆ ಮಾಡುವುದು.
17(A) ಒಂದೇ ಹುದ್ದೆಗೆ ಇಬ್ಬರು ನೌಕರರನ್ನು ಏಕ ಕಾಲಕ್ಕೆ ನೇಮಕ ಮಾಡಬಾರದು.
17(B) ಒಬ್ಬ ನೌಕರರನ್ನು ಹಂಗಾಮಿಯಾಗಿ ಅಲ್ಲದೇ ಒಂದೇ ಕಾಲದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಖಾಯಂ ಹುದ್ದೆಗಳಿಗೆ ಮೂಲತ: ನೇಮಿಸಬಾರದು.
18(A) ಒಬ್ಬ ನೌಕರನು ಹುದ್ದೆಯ ಹಕ್ಕು ಹೊಂದಿದ್ದ ಹುದ್ದೆಗೆ ಮತ್ತೊಬ್ಬ ನೌಕರರನ್ನು ಮೂಲತ: ನೇಮಿಸಬಾರದು.
19 ಒಬ್ಬ ನೌಕರನು ಬೇರೆಡೆಗೆ ವರ್ಗಾವಣೆಯಾಗದ ಹೊರತು ತನ್ನ ಹುದ್ದೆಯ ಮೇಲಿನ ಹಕ್ಕನ್ನು ಹೊಂದಿರುತ್ತಾನೆ ಆತನು ಅಮಾನತ್ತಿನಲ್ಲಿರಲಿ, ರಜೆಯ ಮೇಲಿರಲಿ ತನ್ನ ಹುದ್ದೆಯ ಹಕ್ಕನ್ನು ಹೊಂದಿರುತ್ತಾನೆ.
20(A) ಮೂಲತ: ನೇಮಕಗೊಂಡಿರುವ ನೌಕರನ ಹುದ್ದೆಯ ಹಕ್ಕನ್ನು ಸರ್ಕಾರವು ಅಮಾನತ್ತುಗೊಳಿಸಬಹುದು.
32 ಸ್ಥಾನಪನ್ನನಾಗಿ ಮತ್ತೊಬ್ಬ ನೌಕರರನ್ನು ನೇಮಿಸುವ ಬದಲಾಗಿ ಈಗಾಗಲೇ ಇರುವ ನೌಕರರನ್ನೇ ಪಚಲಿತ ತನ್ನ ಕರ್ತವ್ಯಗಳ ಜೊತೆಗೇ ಅಧಿಕ ಪ್ರಭಾರದಲ್ಲಿ ಆ ಕರ್ತವ್ಯವನ್ನೂ ನಿರ್ವಹಿಸಲು ನೇಮಿಸಬಹುದು. ಇದಕ್ಕೆ ನಿಯಮ 68 ರ ಪ್ರಕಾರ ಪ್ರಭಾರ ಭತ್ಯ (ಹೆಚ್ಚುವರಿ ವೇತನ)ದೊರೆಯುತ್ತದೆ. ಇದೇ ನಿಯಮದ ಟಿಪ್ಪಣಿ 3 ರಲ್ಲಿ ಸಕ್ಷಮ ಪ್ರಾಧಿಕಾರಿಯು ಪ್ರಭಾರದಲ್ಲಿಡಬಹುದಾದ ಗರಿಷ್ಠ ಅವಧಿಗಳ ವಿವರಗಳಿವೆ.
41, 41(A), 42(A), 42(B), 42(C) ವೇತನ ನಿಗದಿಪಡಿಸುವ ಬಗ್ಗೆ ವಿವರಣೆಗಳಿವೆ. ಬಡ್ತಿಯಾದಾಗ ವೇತನ ನಿಗದಿ, ಮಿಲಿಟರಿ ಸೇವೆಯ ನೌಕರರು ಸಿವಿಲ್ ಸೇವೆಗೆ ಬಂದಾಗ ನಿಗದಿಪಡಿಸುವ ವೇತನ, ಇತ್ಯಾದಿ ವಿವರಗಳಿವೆ. ಇದರಲ್ಲಿ ಕಾಲಮಿತಿ ವೇತನ ಬಡ್ತಿ, ಸ್ವಯಂ ಚಾಲಿತ ವಿಶೇಷ ವೇತನ ಬಡ್ತಿ, ಸ್ಥಗಿತ ವೇತನ ಬಡ್ತಿ, ಹೆಚ್ಚುವರಿ ಬಡ್ತಿಗಳು ಇತ್ಯಾದಿಗಳೂ ಸೇರುತ್ತವೆ. ಇವುಗಳಿಗೆ ಕಾಲಕಾಲಕ್ಕೆ ಸರ್ಕಾರವು ಹೊರಡಿಸಿರುವ ಪ್ರತ್ಯೇಕ ಆದೇಶಗಳನ್ನು ನೋಡುವುದು.
50(1), 50(2) ಬೇರೆ ಬೇರೆ ಇಲಾಖೆಗಳಿಗೆ ನಿಯೋಜಿತನಾದ ನೌಕರನು ಪಡೆಯುವ ವೇತನದ ಬಗ್ಗೆ ವಿವರಗಳಿಗೆ ಮತ್ತು ಆತನು ತನ್ನ ಮಾತ್ರ ಇಲಾಖೆಗೆ ಮರಳಿದಾದ ಪಡೆಯುವ ವೇತನದ ವಿವರಗಳಿವೆ.
51(1) ವಾರ್ಷಿಕ ವೇತನ ಬಡ್ತಿ. ಇತ್ತೀಚೆಗೆ ವಾರ್ಷಿಕ ವೇತನ ಬಡ್ತಿ ದಿನಾಂಕಗಳಿಗಾಗಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ನೋಡುವುದು. (ಜನವರಿ (ಜನವರಿ ಯಿಂದ ಜೂನ್) ಮತ್ತು ಜುಲೈ (ಜುಲೈ ನಿಂದ ಡಿಸೆಂಬರ್ ಮಾಹೆಗಳು ವಾರ್ಷಿಕ ವೇತನ ಬಡ್ತಿ ದಿನಾಂಕಗಳಾಗಿರುತ್ತವೆ.
53 ಕಾಲಿಕ ವೇತನ ಶ್ರೇಣಿಯಲ್ಲಿ ವೇತನ ಬಡ್ತಿಗಳ ಬಗ್ಗೆ ಪರಿಗಣಿಸಬೇಕಾದ ಸೇವಾ ಷರತ್ತುಗಳು. (ಇದರಲ್ಲೂ ಸಹಾ ಕಾಲಕಾಲಕ್ಕೆ ಸರ್ಕಾರವು ಹೊರಡಿಸುವ ಆದೇಶಗಳನ್ನು ನೋಡುವುದು)
55 ಸಕ್ಷಮ ಪ್ರಾಧಿಕಾರಿಯು ಅಮಾನತ್ತಿನ ಅವಧಿಯನ್ನು ಇದೇ ನಿಯಮ 100 ರ ಪಕಾರ ಕರ್ತವ್ಯವೆಂದು ಪರಿಗಣಿಸಿದೇ ಇದ್ದರ ಈ ಅವಧಿಯನ್ನು ವಾರ್ಷಿಕ ವೇತನ ಬಡ್ತಿಗೆ ಲೆಕ್ಕಹಾಕಬಾರದು.
64 ಸರ್ಕಾರದ ಪೂರ್ವ ಮಂಜೂರಾತಿ ಇಲ್ಲದೇ ಯಾವುದೇ ನೌಕರರನ್ನೂ ಭಾರತದ ಹೊರಗೆ ಪ್ರತಿನಿಯೋಜಿಸಬಾರದು.
68 ಒಬ್ಬ ನೌಕರನು ತನ್ನ ಕರ್ತವ್ಯಗಳ ಜೊತೆಗೆ ಮತ್ತೊಂದು ಹುದ್ದೆಯ ಕರ್ತವ್ಯಗಳ ಪ್ರಭಾರವನ್ನು ನಿರ್ವಹಿಸುತ್ತಿದ್ದರೆ (ನಿ. 32 ರ ಪ್ರಕಾರ ನೇಮಿಸಿದ್ದರ) ಹೆಚ್ಚಿನ ವೇತನವನ್ನು ಪಡೆಯುವನು . ಇದಕ್ಕೆ ಇತ್ತೀಚಿನ ಸರ್ಕಾರಿ ಆದೇಶ ನೋಡುವುದು. (ಸರ್ಕಾರಿ ಆದೇಶದ ಪುಕಾರ ಮೊದಲ ಮೂರು ತಿಂಗಳಿಗೆ ಆ ಹುದ್ದೆಯ ಮೂಲ ವೇತನದ ಶೇ.7.5% ರಷ್ಟು ನಂತರದ ದಿನಗಳಿಗೆ ಶೇ. 15% ರಷ್ಟು ಪ್ರಭಾರ ಭತ್ಯೆ (ಅಧಿಕ ವೇತನ) ಪಡೆಯಬಹುದು. ಇದೇ ನಿಯಮದ ಟಿಪ್ಪಣಿ 8 ರ ಪ್ರಕಾರ ಸಕ್ಷಮ ಪ್ರಾಧಿಕಾರಿಯು ಹೆಚ್ಚಿನ ಪಭಾರದಲ್ಲಿಡಬಹುದಾದ ಗರಿಷ್ಠ ಅವಧಿ ಬಗ್ಗೆ ವಿವರಗಳಿವೆ.
76 to 89 ಸೇರುವ ಕಾಲದ ವಿವರಣೆ ಇದೆ. ನಿರ್ದಿಷ್ಟ ಸೇರುವ ಕಾಲದ ಅವಧಿಗಳ ಬಗ್ಗೆ ನಿಯಮ 78 ರಲ್ಲಿ ವಿವರಿಸಲಾಗಿದೆ.
95(1) ನಿವೃತ್ತಿ (ಈಗಿನ ಸರ್ಕಾರಿ ಆದೇಶದ ಪ್ರಕಾರ 60 ವರ್ಷ ವಯಸ್ಸಿಗೆ ಸೇವಾ ನಿವೃತ್ತಿ ಮಾಡಬೇಕಾಗಿರುವುದು) ಇದರಲ್ಲಿ ಅತೀ ಮುಖ್ಯವಾದುದೆಂದರೆ- ಯಾವ ನೌಕರನ ಜನ್ಮ ದಿನಾಂಕ ಮಾಹೆಯ ಮೊದಲ ದಿನಾಂಕವಾಗಿದ್ದರ ಅವನು 60 ವರ್ಷ ತಲುಪಿದ ( ಅಂದರ ಹಿಂದಿನ ಮಾಹೆಯ ಕೊನೆಯ ದಿನಾಂಕದಂದು) ದಿನ ಅಪರಾಹ್ನವೇ ಆತನ ಸೇವೆ ಕೊನೆಯಾಗುವುದು.
97 ನೌಕರರನ್ನು ಸೇವೆಯಿಂದ ವಜಾ, ಕಡ್ಡಾಯ ನಿವೃತ್ತಿ, ತೆಗೆದುಹಾಕಿದ ದಿನಾಂಕದಿಂದಲೇ ವೇತನ ಮತ್ತು ಭತ್ಯೆಗಳು ನಿಂತುಹೋಗುವುದು.
97(A) ಅಮಾನತ್ತಿನಲ್ಲಿರುವ ನೌಕರನು ಬೇರೆ ಉದ್ಯೋಗ ಮಾಡುವಂತಿಲ್ಲ.
98 ಅಮಾನತ್ತಿನಲ್ಲಿರುವ ನೌಕರನು ಜೀವನಾಧಾರ ಭತ್ಯೆ ಪಡೆಯುವನು. ಸಾಮಾನ್ಯವಾಗಿ ಆತನ ಎಲ್ಲಾ ಉಲಬಿಗಳ ಶೇ.50% ರಷ್ಟು, (ಅಮಾನತ್ತಿನ ಮೊದಲ 06 ತಿಂಗಳ ವರೆಗೆ ಮಾತ್ರ. ನಂತರವೂ ಅಮಾನತ್ತು ಮುಂದುವರೆದಿದ್ದರೆ ನಿರ್ದಿಷ್ಟ ಆದೇಶ ಪಡೆದು ಶೇ. 75%)
100 ಅಮಾನತ್ತಿನಲ್ಲಿರುವ ಸರ್ಕಾರಿ ನೌಕರರನ್ನು ಪುನಃ ಕೆಲಸಕ್ಕೆ ತೆಗೆದಕೊಂಡಾಗ ನೀಡಬೇಕಾದ ವೇತನ ಮತ್ತು ಭತ್ಯೆಗಳ ಲೆಕ್ಕಾಚಾರದ ಬಗ್ಗೆ ಹೇಳಲಾಗಿದೆ. ಮತ್ತು ಅಮಾನತ್ತಿನ ಅವಧಿಯನ್ನು ಇದರ ಪ್ರಕಾರವೇ ನಿರ್ಧರಿಸಬೇಕು.
104(1) ಅಮಾನತ್ತಿನಲ್ಲಿರುವ ನೌಕರನು ತನ್ನ ಕೇಂದ್ರಸ್ಥಾನವನ್ನು ಬಿಡತಕ್ಕದ್ದಲ್ಲ.
105 to 206 ರಜಾ ನಿಯಮಗಳು. ಇದರಲ್ಲಿ ಗಳಿಕೆ ರಜೆ, ಅರ್ಧವೇತನ ರಜೆ (ಪರಿವರ್ತಿತ ರಜೆ) ಅಸಾಧಾರಣ ರಜೆ, ಪ್ರಸೂತಿ ರಜೆ, ಗಳಿಕೆ ರಜೆ ನಗದೀಕರಣ, ರಜೆ ಮಂಜೂರಾತಿಯ ಷರತ್ತುಗಳು, ಇತ್ಯಾದಿಗಳೂ ಸೇರಿವೆ. ನಿಯಮ 106ಎ- ರಜೆಯ ಪಡೆಯದೇ ಗೈರುಹಾಜರಾಗುವ ನೌಕರನಿಗೆ ವೇತನ ಪಾವತಿಸುವಂತಿಲ್ಲ. ಇದೇ ನಿಯಮ ಟಿಪ್ಪಣಿ-1 ರ ಪ್ರಕಾರ ಕಛೇರಿ ಸಮಯಕ್ಕಿಂತ 10 ನಿಮಿಷ ತಡವಾಗಿ ಬರುವ ನೌಕರನ ಸಾಂಧರ್ಭಿಕ ರಜೆ ಕಳೆಯಬೇಕು. ಸಾಂಧರ್ಭಿಕ ರಜೆ ಇಲ್ಲದಿದ್ದರೆ ಗಳಿಕೆ ರಜೆ / ಇತರೆ ರಜೆಗಳಲ್ಲಿ ಒಂದು ದಿನವನ್ನು ಕಳೆಯಬೇಕು. 106ಬಿ- ಮುಷ್ಕರದ ಕಾರಣಕ್ಕಾಗಿ ಗೈರುಹಾಜರಾಗುವ ನೌಕರನಿಗೆ ಯಾವುದೇ ರಜೆ ಮಂಜೂರು ಮಾಡುವಂತಿಲ್ಲ. 107- ರಜೆಯನ್ನು ತನ್ನ ಹಕ್ಕೆಂದು ಪ್ರತಿಪಾದಿಸುವಂತಿಲ್ಲ. 108- ನಾಲ್ಕು ತಿಂಗಳಿಗೂ ಅಧಿಕವಾಗಿ ಗೈರುಹಾಜರಾದರೆ ಅವರ ವಿರುದ್ಧ ಸಿಸಿಎ ಕ್ರಮ ಜರುಗಿಸಬಹುದು. 109- ಸಾಂಧರ್ಭಿಕ ರಜೆಯನ್ನು ಹೊರತುಪಡಿಸಿ ಉಳಿದ ಇತರ ಬಗೆಯ ರಜೆಗಳನ್ನು ಸಂಯೋಜಿಸಿ ಪಡೆಯಬಹುದು.
105 to 206 ನಿಯಮ 112(ಗಳಿಗೆ ರಜೆ), ನಿಯಮ 113 (ಬಿಡುವಿರುವ ಇಲಾಖೆಯ ರಜೆ ನಿಯಮಗಳು) 114 ಅರ್ಧವೇತನ(ಪರಿವರ್ತಿತ ರಜೆ), 117 (ಅಸಾಧಾರಣ ರಜೆ) 118(1)(ಎ) ಮತ್ತು 118(2)(i) ಗಳಿಕೆ ರಜೆ ನಗದೀಕರಣ (ನಗದೀಕರಣಕ್ಕಾಗಿ ಸರ್ಕಾರಿ ಆದೇಶವನ್ನೂ ಸಹಾ ಅನುಸಬೇಕು) 118(3) ರಜೆ ನಗದೀಕರಣಕ್ಕಾಗಿ ಲೆಕ್ಕಾಚಾರದ ಫಾರ್ಮುಲಾ., 118(2)(ಬಿ) ಮತ್ತು (ಸಿ) ಗಳಿಕೆ ರಜೆ ನಗದೀಕರಣ (ನಿವೃತ್ತಿ ಮತ್ತು ಮರಣ ಸಮಯದಲ್ಲಿ ಗರಿಷ್ಠ 300 ದಿನಗಳು)119-ರಜೆ ಲೆಕ್ಕದ ನಮೂನೆ, 130 ಪರೀಕ್ಷಾ ರಜೆ, 135(1) ವುಸೂತಿ ರಜೆ, 135 (ಎ) ದತ್ತು ಮಕ್ಕಳನ್ನು ತೆಗೆದುಕೊಂಡಿದ್ದರೆ ಅದಕ್ಕೆ ರಜೆ, 135(ಬಿ)(1) ಪಿತೃತ್ವ ರಜೆ., 135(ಸಿ) ಅಂಗವಿಕಲ ಮಕ್ಕಳ ಪಾಲನಾ ರಜೆ., 136 ಅಂಗವೈಕಲ್ಯ ವಿಶೇಷ ರಜೆ., 137 ಸ್ವಾಸ್ಥ್ಯತಾ ರಜೆ, 161 ಅಗತ್ಯವಾದಲ್ಲಿ ರಜೆಯಿಂದ ಹಿಂದಿರುಗಿ ಕರೆಸಬಹುದು. 162 ರಜೆಯನ್ನೂ ಮೀರಿ ಗೈರುಹಾಜರಾದರೆ, 165 ರಜೆ ಮಂಜೂರು ಮಾಡುವ ಪ್ರಾಧಿಕಾರ, 168 ರಜೆ ಅವಧಿಯಲ್ಲಿ ಬೇರೆ ಉದ್ಯೋಗ ಮಾಡುವಂ ಲ್ಲ. 179 ರಿಂದ 189 ವೈದ್ಯಕೀಯ ರಜೆ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ್ದು, 192 (ಡಿ) ರಜೆ ಮಂಜೂರಿ ಮಾಡುವ ಸಕ್ಷಮ ಪ್ರಾಧಿಕಾರಿ ಮತ್ತು ಗರಿಷ್ಠ ದಿನಗಳು.
196(A) & (B) ಸರ್ಕಾರವು ಇಲಾಖಾ ಮುಖ್ಯಸ್ಥರಿಗೆ ಪತ್ರಾಂಕಿತರಲ್ಲದ ನೌಕರರ ಖಾಲಿ ಹುದ್ದೆಗಳನ್ನು ಹಂಗಾಮಿಯಾಗಿ ತುಂಬಲು ನೀಡಿರುವ ಅಧಿಕಾರ. (ಪ್ರಭಾರ ವ್ಯವಸ್ಥೆ) (ಪುಭಾರಿ ವ್ಯವಸ್ಥೆ 06 ತಿಂಗಳಿಗಿಂತ ಹೆಚ್ಚಾಗಿರಬಾರದು)
207 to 395 ನಿವೃತ್ತಿ ವೇತನ ವಿಚಾರಗಳನ್ನು ತಿಳಿಸಲಾಗಿದೆ.
214(1)(A) ನೌಕರನ ದುರ್ನಡತೆ/ನಿರ್ಲಕ್ಷತೆ ಕಾರಣಕ್ಕಾಗಿ ನಿವೃತ್ತಿ ವೇತನವನ್ನು ಸರ್ಕಾರವು ತಡೆಹಿಡಿಯುವುದು.
214(B) ಸರ್ಕಾರಕ್ಕೆ ನೌಕರನಿಂದಾಗ ಆರ್ಥಿಕ ನಷ್ಟವನ್ನು ಬಡ್ಡಿ ಸಹಿತ ವಸೂಲು ಮಾಡುವುದು.
214(2)(A) & (B) to 332(A)(i) ಇಲಾಖಾ ವಿಚಾರಣೆ ನಡೆಯುತ್ತಿರುವ ನೌಕರ ನಿವೃತ್ತಿ ಹೊಂದಿದರೆ ತಾತ್ಕಾಲಿ (ಬಿ) ರಿಂದ ನಿವೃತ್ತಿ ವೇತನ ಮಂಜೂರಿ ಮತ್ತು ನಿವೃತ್ತಿ ನೌಕರರ ವಿರುದ್ಧ ನೌಕರನು ನಿವೃತ್ತನಾಗುವ ಒಂದು ವರ್ಷಕ್ಕೂ ಮೊದಲೇ ನಿವೃತ್ತಿ ವೇತನದ ದಾಖಲೆಗಳನ್ನು ತಯಾರಿಸುವ ಕಾರ್ಯವನ್ನು ಪ್ರಾರಂಭಿಸಬೇಕು. (ನೌಕರನಿಂದ ಔಪಚಾರಿಕ ಅರ್ಜಿ ಬರಲಿ ಬಾರದೇ ಇರಲಿ.)
333 ನಿವೃತ್ತಿ ವೇತನದ ಅರ್ಜಿಯ ಜೊತೆಗಿರಬೇಕಾದ ದಾಖಲೆಗಳು (ಕುಟುಂಬ ವೇತನ ಹೊರತುಪಡಿಸಿ)
341(A) ತಾತ್ಕಾಲಿಕ / ನಿರೀಕ್ಷಾ ನಿವೃತ್ತಿ ವೇತನ.
377 ಪರಿವರ್ತಿತ ನಿವೃತ್ತಿ ವೇತನದ ಕೋಷ್ಟಕ (ಪರಿವರ್ತನಾ ಮೌಲ್ಯ) (commuted value).
396 to 415 ಸೇವಾವಹಿಗಳ ಮತ್ತು ದಾಖಲೆಗಳ ನಿರ್ವಹಣೆ ಬಗ್ಗೆ ವಿವರಗಳಿವೆ.
397 ಸೇವಾವಹಿಯನ್ನು ನಮೂನ 18 ರಲ್ಲಿ ನಿರ್ವಹಿಸುವುದು.
398 ಸೇವಾವಹಿಗಳ ನಿರ್ವಹಣೆ ಬಗ್ಗೆ.
399 ಸರ್ಕಾರದ ಆದೇಶವಿಲ್ಲದೆಯೇ ನೌಕರನ ವೈಯುಕ್ತಿಕ ಚಾರಿತ್ರ್ಯ ಪ್ರಮಾಣ ಪತ್ರವನ್ನು ಸೇವಾವಹಿಯಲ್ಲಿ ದಾಖಲಿಸಬಾರದು.
400 ನೌಕರನಿಗೆ ವಿಚಾರಣೆ ನಂತರ ದಂಡನೆ ವಿಧಿಸಿದ್ದನ್ನು ಸೇವಾವಹಿಯಲ್ಲಿ (ವಾಗ್ಲೆಂಡನ ನಮೂದಿಸುವಂತಿಲ್ಲ-ಇದನ್ನು ದಾಖಲಿಸುವುದು ಕಾರ್ಯನಿರ್ವಹಣಾ ವರದಿಯಲ್ಲಿ ದಾಖಲಿಸಬೇಕು).
403 ರಜಾ ಲೆಕ್ಕದ ವಿವರಗಳನ್ನು ಕಛೇರಿಯ ಮುಖ್ಯಸ್ಥರು ಧೃಡೀಕರಿಸಬೇಕು.
405 ಜನ್ಮದಿನಾಂಕದ ನಮೂದುಗಳನ್ನು ದಾಖಲೆಗಳ ಸಹಿತ ನಮೂದು ಮಾಡಬೇಕು.
406 ಅನಕ್ಷರಸ್ಥ ನೌಕರನ ಕೈ ಬೆರಳುಗಳ ಗುರುತುಗಳು.
407 ನೌಕರನಿಗೆ ಪ್ರತೀ ವರ್ಷವೂ ಆತನ ಸೇವಾವಹಿಗಳನ್ನು ಪರಿಶೀಲಿಸಿಕೊಳ್ಳಲು ಕೊಡಬೇಕು. ಮತ್ತು ಸಹಿ ಪಡೆದುಕೊಳ್ಳಬೇಕು.
408 ನೌಕರನು ವರ್ಗಾವಣೆಗೊಂಡಾಗ ಆತನು ಕರ್ತವ್ಯ ನಿರ್ವಹಿಸುತ್ತಿದ್ದ ಕಛೇರಿಯಲ್ಲಿ ಆತನು ಬಿಡುಗಡೆ ಹೊಂದುವವರೆಗೂ ನಮೂದು ಮಾಡಿ ನಂತರ ವರ್ಗಾವಣೆಗೊಂಡ ಕಛೇರಿಗೆ ಕಳುಹಿಸಿಕೊಡಬೇಕು.
410 ನೌಕರನು ನಿವೃತ್ತಿ, ರಾಜೀನಾಮೆ, ಮರಣ ದ ನಂತರ ಸೇವಾವಹಿಯನ್ನು ನೌಕರನಿಗೇ ಕೊಡತಕ್ಕದ್ದಲ್ಲ.
412 ನೌಕರರ ಸೇವಾವಹಿಗಳನ್ನು ವರ್ಷಕ್ಕೊಮ್ಮೆ (ಪ್ರತೀ ಮಾರ್ಚಿ ಅಂತ್ಯಕ್ಕೆ) ಸತ್ಯಾಪನೆ ಮಾಡುವುದು.
426(A) ಅನ್ಯ ಸೇವೆಯಲ್ಲಿರುವ ನೌಕರರ ರಜಾ ವೇತನ ಕ್ಕೆ ಮತ್ತು ನಿವೃತ್ತಿ ವೇತನಗಳಿಗೆ ಅಂಶದಾನವನ್ನು ಕೊಡಬೇಕಾದ್ದು.
427(A) ಅಂಶದಾನದ ದರಗಳು (ರಜಾ ಸಂಬಳಕ್ಕೆ ಆತನ ವೇತನದ ಶೇ. 11 ರಷ್ಟು ಮತ್ತು ನಿವೃತ್ತಿ ವೇತನಕ್ಕೆ ಆತನ ವೇತನದ ಶೇ. 8 ರಷ್ಟು)
426 to 577 ಪುಯಾಣ ಭತ್ಯೆ ನಿಯಮಗಳು.
451 ಪ್ರಯಾಣ ಭತ್ಯೆಗಾಗಿ ನೌಕರರ ವರ್ಗೀಕರಣ ಮತ್ತು ದರಗಳು.
458 ಖಾಯಂ ಪಯಾಣ ಭತ್ಯೆಗಳು- ನಿಗದಿಯಾದ ಹುದ್ದೆಗಳಿಗೆ ಮಾತ್ರ.
498 ಪ್ರಯಾಣ ಭತ್ಯೆಗಾಗಿ ದಿನಭತ್ಯೆ ದರಗಳು.
513 ಪುಯಾಣ ಭತ್ಯೆ ಪಡೆಯಲು ಕನಿಷ್ಠ 08 ಕಿ.ಮೀ ದೂರ ಪ್ರಯಾಣಿಸಿಲೇಬೇಕು.
514 ಪುಯಾಣದ ಸಮಯದಲ್ಲಿ ತಂಗುವಿಕೆ ಮತ್ತು ಅದಕ್ಕೆ ದೊರೆಯುವ ದಿನಭತ್ಯದ ದರಗಳು.
527(A) ಸರ್ಕಾರಿ ವಾಹನ ಸೌಲಭ್ಯ ಪಡೆದಿರುವ ನೌಕರನ ಪ್ರಯಾಣ ಭತ್ಯೆ ಬಗ್ಗೆ.

Previous Post Next Post