ವಿದ್ಯುಚ್ಛಕ್ತಿ

ವಿದ್ಯುತ್ ಪ್ರವಾಹದ ನಿರಂತರ ಮತ್ತು ಆವೃತ ಮಾರ್ಗವನ್ನು ವಿದ್ಯುತ್ ಮಂಡಲ ಎಂದು ಕರೆಯಲಾಗುತ್ತದೆ.

ವಿದ್ಯುತ್ ಪ್ರವಾಹವು ಒಂದು ಏಕಮಾನ ಸಮಯದಲ್ಲಿ ಒಂದು ನಿರ್ದಿಷ್ಟ ಕ್ಷೇತ್ರದ ಮೂಲಕ ಪ್ರವಹಿಸುವ ಆವೇಶಗಳ ಪರಿಮಾಣ ಅಥವಾ ವಿದ್ಯುದಾವೇಶಗಳ ಪ್ರವಾಹದ ದರ.

ವಿದ್ಯುತ್ ಆವೇಶದ SI ಏಕಮಾನ ಕೂಲಮ್(C)(Coulomb). ಇದು ಸುಮಾರು 6x1018 ಎಲೆಕ್ಟ್ರಾನ್ ಗಳಿಗೆ ಸಮನಾಗಿರುತ್ತದೆ.

ವಿದ್ಯುತ್ ವಿಭವಾಂತರ:

ಒಂದು ಏಕಮಾನ ಆವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ ಆಗುವ ಕೆಲಸ. ವಿಭವಾಂತರವನ್ನು ಅಳೆಯುವ ಉಪಕರಣ ವೋಲ್ಟ್ ಮೀಟರ್.

ಓಮ್ ನ ನಿಯಮ:

ಸ್ಥಿರ ತಾಪಮಾನದಲ್ಲಿ ವಿದ್ಯುತ್ ಮಂಡಲದಲ್ಲಿನ ಲೋಹದ ತಂತಿಯ ನಡುವಿನ ವಿಭವಾಂತರ (V) ಅದರ ಮೂಲಕ ಹರಿಯುವ ವಿದ್ಯುತ್ಪ್ರವಾಹಕ್ಕೆ (I) ನೇರ ಅನುಪಾತದಲ್ಲಿರುತ್ತದೆ.

ವಾಹಕದಲ್ಲಿ ಪ್ರವಹಿಸುವ ಆವೇಶಗಳ ಪ್ರವಾಹವನ್ನು ಪ್ರತಿರೋಧಿಸುವ ಗುಣವೇ ರೋಧ. ರೋಧದ SI ಏಕಮಾನ ಓಮ್.

ವಿದ್ಯುತ್ ವಿಭವಾಂತರದ ಮೂಲವನ್ನು ಬದಲಾಯಿಸದೆ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ಉಪಯೋಗಿಸುವ ಉಪಕರಣವನ್ನು ಪರಿವರ್ತಿತ ರೋಧ ಎನ್ನುವರು. ವಿದ್ಯುತ್ ಮಂಡಲದಲ್ಲಿ ಅನೇಕ ಬಾರಿ ರೋಧವನ್ನು ಬದಲಾಯಿಸಲು ರಿಯೋಸ್ಟಾಟ್ ಎಂಬ ಸಾಧನವನ್ನು ಬಳಸಲಾಗುತ್ತದೆ.

ವಾಹಕದ ರೋಧವು ವಾಹಕದ ಉದ್ದ, ವಾಹಕದ ಅಡ್ಡಕೊಯ್ತ, ವಸ್ತುವಿನ ಪ್ರಾಕೃತಿಕ ಗುಣ ಮತ್ತು ತಾಪ ಇವುಗಳ ಮೇಲೆ ಅವಲಂಬಿಸಿದೆ.

ಬಹಳಷ್ಟು ರೋಧಕಗಳನ್ನು ಸರಣಿಯಲ್ಲಿ ಜೋಡಿಸಿದಾಗ, ಸಂಯೋಜನೆಯ ರೋಧವು Rs ವೈಯಕ್ತಿಕ ರೋಧಗಳಾದ R1, R2, R3 ಗಳ ಮೊತ್ತಕ್ಕೆ ಸಮನಾಗಿರುತ್ತದೆ.

ಸಮಾಂತರವಾಗಿ ಜೋಡಿಸಲಾದ ರೋಧಕಗಳ ಸಮೂಹದ ಸಮಾನ ರೋಧದ ವ್ಯುತ್ಕ್ರಮವು ಪ್ರತಿಯೊಂದು ರೋಧಕಗಳ ರೋಧದ ವ್ಯುತ್ಕ್ರಮಗಳ ಮೊತ್ತಕ್ಕೆ ಸಮನಾಗಿರುತ್ತದೆ.

ರೋಧಕಗಳ ಸರಣಿ ಸಂಯೋಜನೆಯಲ್ಲಿ ಮಂಡಲದ ಪ್ರತಿಯೊಂದು ಭಾಗದಲ್ಲಿ ಸಮನಾದ ವಿದ್ಯುತ್ ಪ್ರವಾಹವಿರುತ್ತದೆ.

ವಿದ್ಯುತ್ಪ್ರವಾಹದ ಉಷ್ಣೋತ್ಪಾದನಾ ಪರಿಣಾಮಕ್ಕೆ ಕಾರಣ ವಸ್ತುವಿನ ರೋಧ.

ಜೌಲ್ ನ ಉಷ್ಣೋತ್ಪಾದನಾ ನಿಯಮ H = I2Rt.

ವಿದ್ಯುತ್ ಇಸ್ತ್ರಿಪೆಟ್ಟಿಗೆ, ವಿದ್ಯುತ್ ಒಲೆ, ವಿದ್ಯುತ್ ಹೀಟರ್, ವಿದ್ಯುತ್ ಫ್ಯೂಸ್ ಮತ್ತು ವಿದ್ಯುತ್ ಕೆಟಲ್ ಗಳು ವಿದ್ಯುತ್ಪ್ರವಾಹದ ಉಷ್ಣೋತ್ಪಾದನಾ ಪರಿಣಾಮ ಆಧರಿಸಿದ ಸಾಧನಗಳು.

ವಿದ್ಯುನ್ಮಂಡಲದಲ್ಲಿ ಶಕ್ತಿ ಬಳಕೆಯಾಗುವ ಅಥವಾ ಕ್ಷೀಣಿಸುವ ದರವೇ ವಿದ್ಯುತ್ ಸಾಮರ್ಥ್ಯ. ಇದರ SI ಏಕಮಾನ ವ್ಯಾಟ್(W).

ವಿದ್ಯುತ್ ಶಕ್ತಿಯ ವ್ಯವಹಾರಿಕ ಏಕಮಾನ ಕಿಲೋ ವ್ಯಾಟ್ ಗಂಟೆ (kWh).

ಮಾದರಿ ಪ್ರಶ್ನೋತ್ತರಗಳು

ಒಂದು ಅಂಕದ ಪ್ರಶ್ನೆಗಳು

ಉತ್ತರ: ಅಮ್ಮೀಟರ್.

ಉತ್ತರ: ಕೂಲಮ್.

ಉತ್ತರ: ಓಮ್.

ಉತ್ತರ: ಯೂನಿಟ್.

ಉತ್ತರ: ಫ್ಯೂಸ್.

ಉತ್ತರ: ರಿಯೋಸ್ಟಾಟ್.

ಉತ್ತರ: ವೋಲ್ಟ.

ಉತ್ತರ: ವೋಲ್ಟ್ ಮೀಟರ್.

ಉತ್ತರ: 3 ಓಮ್.

ಉತ್ತರ : ವಿದ್ಯುತ್ ವಾಹಕದ ಎರಡು ತುದಿಗಳಲ್ಲಿ ವಿದ್ಯುತ್ ಒತ್ತಡ ವ್ಯತ್ಯಾಸವನ್ನು ವಿಭವಾಂತರ ಎನ್ನುತ್ತಾರೆ. ವಿಭವಾಂತರ ಇದ್ದಾಗ ಮಾತ್ರ ಎಲೆಕ್ಟ್ರಾನುಗಳು ಚಲಿಸುತ್ತವೆ.

ಉತ್ತರ : ಒಂದು ನಿರ್ದಿಷ್ಟ ಗಾತ್ರದ ಅವ್ಯಯ ಕಡಿಮೆ ರೋಧವನ್ನು ಒದಗಿಸಿದಾಗ ಅದು ಉತ್ತಮ ವಾಹಕವಾಗಿರುತ್ತದೆ. ವಾಹಕವು ಗಣನೀಯವಾದ ರೋಧವನ್ನು ಹೊಂದಿದ್ದರೆ ಅದನ್ನು ರೋಧಕ ಎನ್ನುತ್ತಾರೆ.

ಉತ್ತರ : 9 : 1

ಉತ್ತರ : ಹೆಚ್ಚು ರೋಧ ಮತ್ತು ಹೆಚ್ಚು ದ್ರವನಬಿಂದು ಅನ್ನು ಹೊಂದಿರಬೇಕು.

ಉತ್ತರ: ಒಂದು ವಾಹಕದ ಯಾವುದೇ ಅನುಕ್ರಮವಾದ ಎರಡು ಬಿಂದುಗಳ ನಡುವೆ ಒಂದು ಕೂಲಮ್ ಆವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ 1 ಜೌಲ್ ಕೆಲಸ ನಡೆದರೆ ಆ ಎರಡು ಬಿಂದುಗಳ ನಡುವಿನ ವಿಭವಾಂತರ 1 ವೋಲ್ಟ್ ಆಗಿರುತ್ತದೆ.
1 ವೋಲ್ಟ್ = 1 ಜೌಲ್/1 ಕೂಲಮ್.

ಎರಡು ಅಂಕದ ಪ್ರಶ್ನೆಗಳು


ಉತ್ತರ : ಸ್ಥಿರ ತಾಪಮಾನದಲ್ಲಿ ವಿದ್ಯುತ್ ಮಂಡಲದಲ್ಲಿನ ಲೋಹದ ತಂತಿಯ ನಡುವಿನ ವಿಭವಾಂತರ (V) ಅದರ ಮೂಲಕ ಹರಿಯುವ ವಿದ್ಯುತ್ ಪ್ರವಾಹಕ್ಕೆ (I) ನೇರಾನುಪಾತದಲ್ಲಿರುತ್ತದೆ.
R = V/I or V = IR

ಉತ್ತರ : ವಾಹಕದಲ್ಲಿ ಪ್ರವಹಿಸುವ ಆವೇಶಗಳಿಗೆ ಪ್ರತಿರೋಧಿಸುವ ಗುಣ. SI ಮಾನ ಓಮ್.
ಅವಲಂಬಿಸಿರುವ ಅಂಶಗಳು:
i) ವಾಹಕದ ಉದ್ಧ
ii) ವಾಹಕದ ಅಡ್ಡಕೊಯ್ತ
iii) ವಸ್ತುವಿನ ಪ್ರಾಕೃತಿಕ ಗುಣ
iv) ವಸ್ತುವಿನ ತಾಪ.

ಉತ್ತರ : ರೋಧಕದಲ್ಲಿ ಉತ್ಪತ್ತಿಯಾದ ಉಷ್ಣವು (H) ವಿದ್ಯುತ್ಪ್ರವಾಹದ ವರ್ಗಕ್ಕೆ (I2), ರೋಧಕ್ಕೆ (R) ಮತ್ತು ಕಾಲಕ್ಕೆ (T) ನೇರ ಅನುಪಾತದಲ್ಲಿರುತ್ತದೆ.
H = I2RT

ಉತ್ತರ :
i) ವಿದ್ಯುತ್ ಇಸ್ತ್ರಿಪೆಟ್ಟಿಗೆ
ii) ವಿದ್ಯುತ್ ಒಲೆ
iii) ವಿದ್ಯುತ್ ಹೀಟರ್
iv) ವಿದ್ಯುತ್ ಬಲ್ಬ್ (ಹೆಚ್ಚಿನ ದ್ರವನಬಿಂದು ಹೊಂದಿರುವ ಟಂಗಸ್ಟನ್ ತಂತು)
v) ಫ್ಯೂಸ್ (ಕಡಿಮೆ ದ್ರವನಬಿಂದು ಹೊಂದಿರುವ ಮಿಶ್ರ ಲೋಹದ ತಂತಿ)
vi) ವಿದ್ಯುತ್ ಕೆಟಲ್ ಗಳು.

ಉತ್ತರ : ವಿದ್ಯುತ್ ಮಂಡಲದಲ್ಲಿನ ಶಕ್ತಿ ಬಳಕೆಯಾಗುವ ದರ.
SI ಮಾನ: ವ್ಯಾಟ್ (W)
ವ್ಯಾವಹಾರಿಕ ಏಕಮಾನ: ಕಿಲೋ ವ್ಯಾಟ್ ಗಂಟೆ (KWh)

ಉತ್ತರ: ಒಂದು ವಸ್ತುವಿನ ವಿದ್ಯುತ್ ವಾಹಕ ಸಾಮರ್ಥ್ಯವನ್ನು ರೋಧಶೀಲತೆ ಎನ್ನುವರು. ಅಂತರಾಷ್ಟ್ರೀಯ ಏಕಮಾನ ಓಮ್ ಮೀಟರ್.

ಉತ್ತರ:
: i) V = IR,
ii) I = V/R,
iii) R = V/I.

ಉತ್ತರ : ವಿಭವಾಂತರವನ್ನು ಅಳೆಯಲು ಬಳಸುವ ಉಪಕರಣ: ವೋಲ್ಟ್ ಮೀಟರ್.
ಅದರ SI ಏಕಮಾನ: ವೋಲ್ಟ್.

ಉತ್ತರ : ಟಂಗಸ್ಟನ್ ತಂತಿಯು ದೀರ್ಘಕಾಲ ಬಾಳಿಕೆಗಾಗಿ ಬಲ್ಬ್ ನೊಳಗೆ ನೈಟ್ರೋಜನ್ ಮತ್ತು ಆರ್ಗಾನ್ ನಂತಹ ಕಡಿಮೆ ಕ್ರಿಯಾಶೀಲ ಅನಿಲಗಳನ್ನು ತುಂಬಿರುತ್ತಾರೆ.

ಉತ್ತರ :
ರಚನೆ : ಫ್ಯೂಸ್ ನ ತಂತಿಯು ಲೋಹದ ತುದಿಗಳಿರುವ ಫೋರ್ಸಲಿನ್ ಅಥವಾ ಅದೇ ರೀತಿಯ ವಸ್ತುವಿನ ಅಂತಹ ಕಾರ್ಟ್ರಿಡ್ಜ್ ನಿಂದ ಸುತ್ತುವರಿಯಲ್ಪಟ್ಟಿದೆ. ಫ್ಯೂಸ್ ನ್ನು ವಿದ್ಯುತ್ ಸಾಧನಗಳೊಂದಿಗೆ ಸರಣಿ ಕ್ರಮದಲ್ಲಿ ಜೋಡಿಸಿರುತ್ತಾರೆ. ಇದು ಸೂಕ್ತ ದ್ರವನ ಬಿಂದು ಹೊಂದಿರುವ ಲೋಹ ಅಥವಾ ಮಿಶ್ರಲೋಹದ ತಂತಿಯನ್ನು ಹೊಂದಿರುತ್ತದೆ. ಉದಾಹರಣೆಗೆ ತಾಮ್ರ ಕಬ್ಬಿಣ ಸೀಸ ಇತ್ಯಾದಿ.

ಕಾರ್ಯ: ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಪ್ರವಾಹವು ಮಂಡಲದ ಮೂಲಕ ಪ್ರವಹಿಸಿದಾಗ ಫ್ಯೂಸ್ ನ ತಂತಿಯ ತಾಪವು ಹೆಚ್ಚಾಗುತ್ತದೆ. ಇದರಿಂದಾಗಿ ಫ್ಯೂಸ್ ನ ತಂತಿಯು ಕರಗಿ ಹೋಗುತ್ತದೆ. ಮತ್ತು ಮಂಡಲವನ್ನು ಕಡಿತಗೊಳಿಸುತ್ತದೆ.

ಉತ್ತರ : ರೋಧಕವನ್ನು ಎರಡು ವಿಧಾನಗಳಲ್ಲಿ ಜೋಡಿಸಬಹುದು. ಅವುಗಳೆಂದರೆ
ಸರಣಿ ಜೋಡಣೆ
ಸಮಾಂತರ ಜೋಡಣೆ

ಉತ್ತರ : ಟಂಗಸ್ಟನ್ ಕರಗುವ ಬಿಂದು 34,220o ಸೆಲ್ಸಿಯಸ್ ಮತ್ತು ಕುದಿಯುವ ಬಿಂದು 57,000o ಸೆಲ್ಸಿಯಸ್. ಇದು ಎಲ್ಲಾ ವಸ್ತುಗಳಿಗಿಂತ ಅಧಿಕ ರೋಧವನ್ನು ಹೊಂದಿದೆ.

ಉತ್ತರ : ಯಾವುದೇ ಅನುಕ್ರಮವಾದ ವಿದ್ಯುತ್ ವಾಹಕದ ಎರಡು ಬಿಂದುಗಳ ನಡುವೆ ಒಂದು ಕೂಲಮ್ ಆವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ ಒಂದು ಜೌಲ್ ಕೆಲಸ ಮಾಡಿದರೆ ಎರಡು ಬಿಂದುಗಳ ನಡುವಿನ ವಿಭವಾಂತರ ಒಂದು ವೋಲ್ಟ್ ಆಗಿರುತ್ತದೆ.
1 ವೋಲ್ಟ್= 1 ಜೌಲ್/ಕೂಲಮ್.

ಉತ್ತರ : ಫ್ಯೂಸ್ ತಂತಿಯನ್ನು ಮಿಶ್ರಲೋಹದಿಂದ ಮಾಡಿರುತ್ತಾರೆ. ವಿದ್ಯುತ್ ಮಂಡಲಗಳಲ್ಲಿ ಅನುಚಿತವಾದ ಹೆಚ್ಚಿನ ವಿದ್ಯುತ್ ಪ್ರವಾಹವು ಮಂಡಲದಲ್ಲಿ ಉಪಕರಣಗಳ ಮೂಲಕ ಪ್ರವಹಿಸದ ಹಾಗೆ ಮಾಡಿ ರಕ್ಷಣೆಯನ್ನು ಕೊಡುತ್ತದೆ. ಇದನ್ನು ವಿದ್ಯುತ್ ಸಾಧನಗಳೊಂದಿಗೆ ಸರಣಿ ಕ್ರಮದಲ್ಲಿ ಜೋಡಿಸಿರುತ್ತಾರೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಪ್ರವಾಹವು ಮಂಡಲದ ಮೂಲಕ ಮಂಡಲದ ಮೂಲಕ ಪ್ರವಹಿಸಿದಾಗ ಫ್ಯೂಸನ ತಂತಿಯ ತಾಪವು ಹೆಚ್ಚಾಗಿ ಕರಗಿ ವಿದ್ಯುತ್ ಮಂಡಲವನ್ನು ಕಡಿತಗೊಳಿಸುತ್ತದೆ.

ಉತ್ತರ : ವಿದ್ಯುತ್ ಪ್ರವಾಹದ ನಿರಂತರ ಮತ್ತು ಆವೃತ ಮಾರ್ಗವನ್ನು ವಿದ್ಯತ್ ಮಂಡಲ ಎನ್ನುತ್ತಾರೆ. ವಿದ್ಯುತ್ ಮಂಡಲದಲ್ಲಿ ವಿದ್ಯುತ್ ಕೋಶ, ವಿದ್ಯುತ್ ಬಲ್ಬ್, ಅಮ್ಮೀಟರ್ ಮತ್ತು ಪ್ಲಗ್ ಕೀಗಳಿರುತ್ತವೆ. ಅಥವಾ ವಿದ್ಯುತ್ ಮಂಡಲದಲ್ಲಿ ವಿದ್ಯುತ್ ಉಪಕರಣ, ವಿದ್ಯುತ್ ಆಕರ, ವಿದ್ಯುತ್ ತಂತಿ ಇವೆಲ್ಲವನ್ನು ಸ್ವಿಚ್ ನೊಡನೆ ಸಂಪರ್ಕಿಸಿರುತ್ತಾರೆ.

ಉತ್ತರ : ಒಂದು ಇಲೆಕ್ಟ್ರಾನ್ ನಲ್ಲಿರುವ ಆವೇಶ = 1.6x10-19 C
1 C ಆವೇಶವನ್ನು ರೂಪಿಸಿದ ಇಲೆಕ್ಟ್ರಾನ್ ಗಳ ಸಂಖ್ಯೆ = 1/1.6x10-19 =6.25x1018
ಒಂದು ಕೂಲಮ್ ಆವೇಶದಲ್ಲಿ 6x 1018 ಇಲೆಕ್ಟ್ರಾನ್ ಗಳಿರುತ್ತವೆ.

ಉತ್ತರ : ವಿದ್ಯುತ್ಪ್ರವಾಹವಿರುವ ವಿದ್ಯುತ್ ಮಂಡಲದಲ್ಲಿನ ಎರಡು ಬಿಂದುಗಳ ನಡುವಿನ ಅಂತರದಲ್ಲಿ ಒಂದು ಏಕಮಾನ ಆವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ ಆಗುವ ಕೆಲಸ ಎಂದು ವ್ಯಾಖ್ಯಾನಿಸುತ್ತೇವೆ.

ಉತ್ತರ : ಶುದ್ಧ ಲೋಹಕ್ಕಿಂತಲೂ ಮಿಶ್ರಲೋಹಗಳು ಹೆಚ್ಚಿನ ಕರಗುವ ಬಿಂದುವನ್ನು ಹೊಂದಿವೆ. ಮತ್ತು ಶುದ್ಧ ಲೋಹಗಗಳಿಗಿಂತ ಹೆಚ್ಚಿನ ಪ್ರತಿರೋಧವನ್ನು ಹೊಂದಿರುತ್ತವೆ. ಆದ್ದರಿಂದ ವಿದ್ಯುತ್ ಟೋಸ್ಟರ್ ಮತ್ತು ವಿದ್ಯುತ್ ಇಸ್ತ್ರಿ ಪೆಟ್ಟಿಗೆ ಸುರುಳಿಗಳನ್ನು ಲೋಹಗಳಿಂದ ತಯಾರಿಸುತ್ತಾರೆ.

ಉತ್ತರ : ವಿಭವಾಂತರ = V = 6V
Q = ಆವೇಶ = 1 ಕೂಲಮ್
W = ಕೆಲಸ = ?
V = W/Q
W = VXQ
W = 6X1 = 6J

ಉತ್ತರ : ಸಮಾನಾಂತರವಾಗಿ ಸಂಪರ್ಕಪಡಿಸಲಾದ ಪ್ರತಿರೋಧಕಗಳು ಸಮಾನ ಪ್ರತಿರೋಧವು ಸಮಾನಾಂತರದಲ್ಲಿ ಸಂಪರ್ಕಿಸಲಾಗಿರುವ ಚಿಕ್ಕ ಪ್ರತಿರೋಧಕಗಳಿಗಿಂತ ಕಡಿಮೆ ಇರುತ್ತದೆ ಆದ್ದರಿ&##3202;ದ ಸಂಭಾವ್ಯ ಭಿನ್ನತೆಗಳಿಗೆ ಸರ್ಕ್ಯೂಟ್ ನಲ್ಲಿ ದೊಡ್ಡ ಪ್ರವಾಹವನ್ನು ಪಡೆಯಲಾಗುತ್ತದೆ. ಸಮಾನ ಪ್ರತಿರೋಧವು ಕಡಿಮೆ ಇರುವುದರಿಂದ ವಾಹಕದ ಪ್ರತಿರೋಧದಿಂದಾಗಿ ಶಕ್ತಿಯ ನಷ್ಟ ಕಡಿಮೆಯಾಗುತ್ತದೆ. ಸಮಾನಾಂತರವಾಗಿ ಪ್ರತಿರೋಧವನ್ನು ಸಂಪರ್ಕಿಸುವುದರಿಂದ ಅನುಕೂಲಗಳಾಗುತ್ತವೆ.

ಉತ್ತರ : ತಾಪನ ಘಟಕಗಳು ಅತಿ ಹೆಚ್ಚಿನ ರೋಧವನ್ನು ಹೊಂದಿರುತ್ತವೆ. ಇಲ್ಲಿ ವಿದ್ಯುತ್ ಶಕ್ತಿ ಹರಿದಾಗ ಹೆಚ್ಚು ಶಾಖ ಉತ್ಪತ್ತಿಯಾಗಿ ಹೊಳೆಯುತ್ತದೆ. ಆದರೆ ವಿದ್ಯುತ್ ಹೀಟರನ ಸುರುಳಿಯ ರೋಧವು ತಾಪನ ಘಟಕಗಳಿಗಿಂತ ಕಡಿಮೆ ಇರುವುದರಿಂದ ಇಲ್ಲಿ ವಿದ್ಯುತ್ ಶಕ್ತಿ ಹರಿದಾಗ ಕೆಂಪಗಾಗಿ ಹೊಳೆಯುವುದಿಲ್ಲ.

ಉತ್ತರ : ವಿದ್ಯುತ್ ದೀಪಗಳಲ್ಲಿ ಟಂಗಸ್ಟನ್ ತಂತುವನ್ನು ಬಳಸುತ್ತಾರೆ ಏಕೆಂದರೆ ಟಂಗಸ್ಟನ್ ಕರಗುವ ಬಿಂದು ಅತಿ ಹೆಚ್ಚು ಮತ್ತು ಇದರ ರೋಧವು ಹೆಚ್ಚಿರುವುದರಿಂದ ವಿದ್ಯುತ್ ಪ್ರವಾಹವು ವೇಗವಾಗಿ ಹರಿಯದೆ ಶಾಖವನ್ನು ಉತ್ಪತ್ತಿ ಮಾಡುತ್ತದೆ ಹಾಗೂ ಉರಿಯುತ್ತದೆ. ಅತಿಹೆಚ್ಚಿನ ಉಷ್ಣಾಂಶದಲ್ಲಿ ಇದು ಕರಗುವುದಿಲ್ಲ.

ಉತ್ತರ : ಗೃಹಬಳಕೆಯ ವಿದ್ಯುತ್ ಮಂಡಲಗಳು ಜೋಡಣೆಯಲ್ಲಿ ಸರಣಿಕ್ರಮ ವ್ಯವಸ್ಥೆಯನ್ನು ಬಳಸುವುದಿಲ್ಲ. ಏಕೆಂದರೆ ಉಪಕರಣಗಳನ್ನು ಜೋಡಿಸಿದಾಗ ಅದರ ಸಮಾನ ರೋಧವು ಹೆಚ್ಚಾಗಿರುತ್ತದೆ. ಆದ್ದರಿಂದ ಅತಿ ಹೆಚ್ಚಿನ ಉಷ್ಣವು ಬಿಡುಗಡೆಯಾಗಿ ಬೆಂಕಿ ಆಕಸ್ಮಿಕಗಳು ಆಗುವ ಸಂಭವವಿರುತ್ತದೆ. ಅದೇ ಉಪಕರಣವನ್ನು ಸಮಾನಾಂತರವಾಗಿ ಜೋಡಿಸಿದಾಗ ಸಮಾನವು ಕಡಿಮೆಯಾಗುತ್ತದೆ.

ಉತ್ತರ : ತಾಮ್ರ ಮತ್ತು ಅಲ್ಯೂಮಿನಿಯಂ ಒಳ್ಳೆಯ ವಿದ್ಯುತ್ ವಾಹಕಗಳು ಮತ್ತು ಕಡಿಮೆ ರೋಧವನ್ನು ಹೊಂದಿವೆ. ಆದ್ದರಿಂದ ವಿದ್ಯುತ್ ಪ್ರಸರಣದಲ್ಲಿ ಸಾಮಾನ್ಯವಾಗಿ ಲೋಹಗಳನ್ನು ಬಳಸುತ್ತಾರೆ.

ಉತ್ತರ :
ವಿದ್ಯುತ್ ಪ್ರವಾಹ I = P/V = 40/220 = 2/11 = 0.18A
ರೋಧ R = V/I = 220/0.18 = 1222.22 ಓಮ್.

ಉತ್ತರ : ವಾಹಕದ ಮೂಲಕ ಪ್ರತಿಯೊಂದು ಸೆಕೆಂಡಿಗೆ ಚಲಿಸುವ ಒಂದು ಕೂಲಮ್ ವಿದ್ಯುದಾವೇಶದ ಪ್ರವಾಹವನ್ನು ಒಂದು ಆಂಪಿಯರ್ ಎನ್ನುವರು. ವಿದ್ಯುತ್ ಆವೇಶದ SI ಏಕಮಾನ ಕೂಲಮ್ ಮತ್ತು ಸಮಯದ ಏಕಮಾನ ಸೆಕೆಂಡ್. ಅಲ್ಪ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಮಿಲಿಯನ್ ಅಂಪಿಯರ್ ಅಥವಾ ಮೈಕ್ರೋ ಅಂಪಿಯರ್ ನಿಂದ ವ್ಯಕ್ತಪಡಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ವಿದ್ಯುತ್ ಮಂಡಲದಲ್ಲಿ ವಿದ್ಯುತ್ ಪ್ರವಾಹದ ದಿಕ್ಕನ್ನು ಎಲೆಕ್ಟ್ರಾನ್ ಗಳ ಹರಿವಿನ ದಿಕ್ಕಿಗೆ ವಿರುದ್ಧವಾಗಿ ತೆಗೆದುಕೊಳ್ಳಲಾಗುತ್ತದೆ.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

$ads={2}

ಉತ್ತರ:
ವಿದ್ಯುತ್ ಪ್ರವಾಹ: I = 2.5 A
ಕಾಲ = t = 20x60 = 1200 ಸೆಕೆಂಡ್ ಗಳು
Q = ವಿದ್ಯುದಾವೇಶಗಳ ಪ್ರಮಾಣ = ?
Q = It
Q = 2.5x1200
Q = 3000 C

ಉತ್ತರ : ವಿದ್ಯುತ್ ಆವೇಶ Q = 96000C
ಕಾಲ = t = 1 ಗಂಟೆ = 60 x 60 = 3600 ಸೆಕೆಂಡುಗಳು
ವಿಭವಾಂತರ = V = 50V
H=VIt
V ಮತ್ತು t ಗೊತ್ತಿರುವುದರಿಂದ I ನ್ನು ಕಂಡುಹಿಡಿಯಬೇಕು.
I = Q/t = 96000/3600 = 80/3A
H = VIt
= 50x80/3x3600
= 50x80x1200
= 48,00,000J
H = 4.8x106J

ಉತ್ತರ : ರೋಧ = R = 2 ಓಮ್
ವಿದ್ಯುತ್ ಪ್ರವಾಹ = I = 5A
ಕಾಲ = t = 30 ಸೆಕೆಂಡ್
H = I2Rt
H = 5x5x2x30
= 1500J
H = 1.5x103J
30 ಸೆಕೆಂಡ್ ಗಳಲ್ಲಿ ಉತ್ಪತ್ತಿಯಾದ ಒಟ್ಟು ಶಾಖ ಅಥವಾ ಉಷ್ಣವು 105x103 ಜೌಲ್ ಗಳು.

ಉತ್ತರ :
ವಿದ್ಯುತ್ ಪ್ರವಾಹ=I=5A
ವಿಭವಾಂತರ = V = 220V
ಕಾಲ = t = 2x60x60 = 7200 ಸೆಕೆಂಡುಗಳು
ಮೋಟಾರಿನ ಸಾಮರ್ಥ್ಯ P = VI
= 220x5
= 1100W
ಮೋಟಾರ್ ಬಳಸಿದ ಶಕ್ತಿ = pt
H = 1100x7200 = 7920000 = 7.92x106J

ಉತ್ತರ:
1) ಸರಣಿ ಕ್ರಮದಲ್ಲಿ ಜೋಡಿಸಿದ ಉಪಕರಣಗಳು ಕಾರ್ಯನಿರ್ವಹಿಸಲು ವಿಭಿನ್ನ ಪ್ರಮಾಣದ ವಿದ್ಯುತ್ ಪ್ರವಾಹದ ಅಗತ್ಯತೆ ಇದೆ.
2) ಸರಣಿ ಕ್ರಮ ಜೋಡಣೆಯಲ್ಲಿ ಒಂದು ಘಟಕ ವಿಫಲವಾದರೆ ಸಂಪೂರ್ಣ ವಿದ್ಯುತ್ ಮಂಡಲ ಸಂಪರ್ಕ ಕಡಿತವಾಗುತ್ತದೆ. ಮತ್ತು ಉಳಿದ ಯಾವುದೇ ಘಟಕಗಳು ಕಾರ್ಯ ನಿರ್ವಹಿಸುವುದಿಲ್ಲ.
ಆದರೆ

1) ಸಮಾಂತರ ಕ್ರಮ ಜೋಡಣೆ ವಿದ್ಯುತ್ ಮಂಡಲದಲ್ಲಿ ವಿದ್ಯುತ್ ಉಪಕರಣಗಳ ಮೂಲಕ ವಿದ್ಯುತ್ ಪ್ರವಾಹ ವಿಭಜನೆಯಾಗುತ್ತದೆ.
2) ಸಮಾಂತರ ಕ್ರಮ ಜೋಡಣೆಯಲ್ಲಿ ಪ್ರತಿಯೊಂದು ವಿದ್ಯುತ್ ಉಪಕರಣವನ್ನು ಪ್ರತ್ಯೇಕವಾಗಿ ಉಪಯೋಗಿಸಬಹುದು.
3) ಪ್ರತಿ ವಿದ್ಯುತ್ ಉಪಕರಣವು ವಿಭಿನ್ನ ರೋಧ ಹೊಂದಿರುವುದರಿಂದ ವಿದ್ಯುತ್ ಉಪಕರಣವು ಸೂಕ್ತವಾಗಿ ಕಾರ್ಯನಿರ್ವಹಿಸಲು ಬೇರೆಬೇರೆ ಪ್ರಮಾಣದ ವಿದ್ಯುತ್ ಪ್ರವಾಹ ಬೇಕಾಗುತ್ತದೆ ಸಮಾಂತರ ಕ್ರಮ ಜೋಡಣೆ ಸಹಕಾರಿಯಾಗುತ್ತದೆ.
4) ಸಮಾಂತರ ಕ್ರಮ ಜೋಡಣೆಯಲ್ಲಿ ಒಂದು ಘಟಕ ವಿಫಲವಾದರೆ ಸಂಪೂರ್ಣ ವಿದ್ಯುತ್ ಮಂಡಲ ಸಂಪರ್ಕ ಕಡಿತ ವಾಗುವುದಿಲ್ಲ ಮತ್ತು ಉಳಿದ ಎಲ್ಲಾ ಘಟಕಗಳು ಕಾರ್ಯನಿರ್ವಹಿಸುತ್ತದೆ.

ಉತ್ತರ : 30 ದಿನಗಳಲ್ಲಿ ರೆಫ್ರಿಜರೇಟರ್ ಬಳಸಿದ ಒಟ್ಟು ಶಕ್ತಿ = 400x8x30 = 96000wh = 96kwh
30 ದಿನಗಳಲ್ಲಿ ಇಸ್ತ್ರಿಪೆಟ್ಟಿಗೆ ಬಳಸಿದ ಒಟ್ಟು ಶಕ್ತಿ = 750x2x30 = 45000wh = 45kwh
30 ದಿನಗಳಲ್ಲಿ ರೆಫ್ರಿಜರೇಟರ್ ಮತ್ತು ಇಸ್ತ್ರಿಪೆಟ್ಟಿಗೆ ಬಳಸಿದ ಒಟ್ಟು ಶಕ್ತಿ = 96+45 = 141kwh
1kwh ಗೆ ರೂಪಾಯಿ 3 ರಂತೆ 141 kwh ಗೆ ತಗಲುವ ವೆಚ್ಚ = 141x3 = 423 ರೂಪಾಯಿಗಳು.